Asianet Suvarna News Asianet Suvarna News

ಅರಳಿರುವ ಕಮಲ ಮುದಡಲ್ಲ ; ರಾಜೀನಾಮೆ ಬಗ್ಗೆ ಕೇರಳ ಬಿಜೆಪಿ ಸಂಸದನ ಸ್ಪಷ್ಟನೆ

ಪಿಎಂ ನರೇಂದ್ರ ಮೋದಿ ನೇತೃತ್ವದಲ್ಲಿ ನಾವು ಕೇರಳದ ಅಭಿವೃದ್ಧಿಗೆ ಬದ್ಧರಾಗಿದ್ದೇವೆ ಎಂದು ಬರೆದುಕೊಂಡಿದ್ದಾರೆ.  ಸುರೇಶ್ ಗೋಪಿ ಮಾಧ್ಯಮಗಳ ವರದಿ ಸತ್ಯಕ್ಕೆ ದೂರವಾಗಿವೆ ಎಂದು ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ. 

Kerala bjp  mp suresh gopi given rection on resignation  mrq
Author
First Published Jun 10, 2024, 3:37 PM IST | Last Updated Jun 10, 2024, 3:37 PM IST

ತಿರುವನಂತಪುರ: ತಮ್ಮ ರಾಜೀನಾಮೆ ವದಂತಿ ಕುರಿತು ಕೇಂದ್ರ ರಾಜ್ಯ ಸಚಿವ, ತ್ರಿಶೂರ ಕ್ಷೇತ್ರದ ಸಂಸದ ಸುರೇಶ್ ಗೋಪಿ (Kerala MP Suresh Gopi) ಸ್ಪಷ್ಟನೆ ನೀಡಿದ್ದಾರೆ. ಎಕ್ಸ್ ಖಾತೆ ಮೂಲಕ ಸ್ಪಷ್ಟನೆ ನೀಡಿರುವ ಸುರೇಶ್ ಗೋಪಿ, ನಾನು ಮೋದಿ ಸರ್ಕಾರದ (Modi Government) ಸಚಿವ ಸಂಪುಟಕ್ಕೆ ರಾಜೀನಾಮೆ ನೀಡಲಿದ್ದೇನೆ ಎಂದು ಕೆಲವು ಮಾಧ್ಯಮಗಳು ತಪ್ಪು ಸುದ್ದಿಯನ್ನು ಹರಡುತ್ತಿವೆ. ಈ ಸುದ್ದಿ ಸತ್ಯಕ್ಕೆ ದೂರವಾದದ್ದು. ಪಿಎಂ ನರೇಂದ್ರ ಮೋದಿ ನೇತೃತ್ವದಲ್ಲಿ ನಾವು ಕೇರಳದ ಅಭಿವೃದ್ಧಿಗೆ ಬದ್ಧರಾಗಿದ್ದೇವೆ ಎಂದು ಬರೆದುಕೊಂಡಿದ್ದಾರೆ. ಕೇರಳದಲ್ಲಿ ಮೊದಲ ಬಾರಿ ಬಿಜೆಪಿ ಖಾತೆ ತೆರೆದ ಹಿನ್ನೆಲೆ ಸುರೇಶ್ ಗೋಪಿ ಅವರಿಗೆ ಪ್ರಧಾನಿ ಮೋದಿ ಸಂಪುಟದಲ್ಲಿ (Modi Cabinet) ಸ್ಥಾನ ಸಿಕ್ಕಿತ್ತು. ಆದ್ರೆ ಕ್ಯಾಬಿನೆಟ್ ದರ್ಜೆಯ ಸ್ಥಾನಮಾನ ಸಿಕ್ಕಿಲ್ಲ ಎಂಬ ಬೇಸರರಿಂದ ಸುರೇಶ್ ಗೋಪಿ ಸಚಿವ ಸ್ಥಾನಕ್ಕೆ  ರಾಜೀನಾಮೆ ನೀಡಲು ಮುಂದಾಗಿದ್ದಾರೆ ಎಂದು ವರದಿಗಳು ಪ್ರಕಟವಾಗಿದ್ದವು. 

ನಾನು ಪಕ್ಷದಿಂದ ಏನನ್ನೂ ಕೇಳಿಲ್ಲ, ನನಗೆ ಈ ಹುದ್ದೆ ಅಗತ್ಯವಿಲ್ಲ ಎಂದು ನಾನು ಮೊದಲೇ ಹೇಳಿದ್ದೆ. ನಾನು ಶೀಘ್ರದಲ್ಲೇ ಹುದ್ದೆಯಿಂದ ಬಿಡುಗಡೆಗೊಳ್ಳುತ್ತೇನೆ ಎಂದು ನಾನು ಭಾವಿಸಿದ್ದೇನೆ ಎಂದು ಸ್ಪೋಟಕ ಹೇಳಿಕೆಯನ್ನು ಸುರೇಶ್ ಗೋಪಿ ಹೇಳಿದ್ದರು. ಆದರೆ ಈಗ  ಸುರೇಶ್ ಗೋಪಿ ಮಾಧ್ಯಮಗಳ ವರದಿ ಸತ್ಯಕ್ಕೆ ದೂರವಾಗಿವೆ ಎಂದು ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ. 

ಮೋದಿ ಪದಗ್ರಹಣ ಬಳಿಕ ಶೇರು ಮಾರುಕಟ್ಟೆಯಲ್ಲಿ ಹಲ್ ಚಲ್; ಏರಿಕೆನಾ? ಇಳಿಕೆನಾ?

ನನ್ನ ರಾಜೀನಾಮೆಯಿಂದ ತ್ರಿಶೂರ್ ಮತದಾರರಿಗೆ ಯಾವುದೇ ತೊಂದರೆ ಇಲ್ಲ. ಅದು ಅವರಿಗೆ ಗೊತ್ತಿದೆ ಮತ್ತು ಸಂಸದನಾಗಿ ನಾನು ಅವರಿಗಾಗಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತೇನೆ. ನಾನು ಯಾವುದೇ ಬೆಲೆ ತೆತ್ತಾದರೂ ನನ್ನ ಸಿನಿಮಾ ಮಾಡಲೇಬೇಕು. ಈಗಾಗಲೇ ಹಲವು ಸಿನಿಮಾ ಒಪ್ಪಂದಗಳಿಗೆ ನಾನು ಸಹಿ ಹಾಕಿದ್ದರಿಂದ ಚಿತ್ರೀಕರಣದಲ್ಲಿ ಭಾಗಿಯಾಗಬೇಕಾಗುತ್ತದೆ. ಸಂಸದನಾಗಿ ಕೆಲಸ ಮಾಡೋದರಲ್ಲಿಯೇ ನಾನು ತೃಪ್ತಿ ಹೊಂದಿದ್ದೇನೆ ಎಂದು ರಾಜಕೀಯ ಬೆಳವಣಿಗೆ ಕುರಿತು ಪ್ರತಿಕ್ರಿಯೆ ನೀಡಿದ್ದರು.74 ಸಾವಿರ ಮತಗಳಿಂದ ಸುರೇಶ್ ಗೋಪಿಗೆ ಗೆಲುವು

39 ವರ್ಷ ಸಿನಿಮಾ ರಂಗದಲ್ಲಿ ಗುರುತಿಸಿಕೊಂಡಿದ್ದ ಸುರೇಶ್ ಗೋಪಿ ತಮ್ಮ ಡೈಲಾಗ್‌ಗಳಿಂದಲೇ ಕೇರಳದಲ್ಲಿ ಫೇಮಸ್. ರಾಜಕೀಯ ಜೀವನದಲ್ಲಿ ಹಲವು ಏರಿಳಿತವನ್ನು ಸುರೇಶ್ ಗೋಪಿ ಕಂಡಿದ್ದಾರೆ. ಕಳೆದ ಎಂಟು ವರ್ಷಗಳಿಂದ ಬಿಜೆಪಿಯಲ್ಲಿ ಗುರುತಿಸಿಕೊಂಡಿರುವ ಸುರೇಶ್ ಗೋಪಿ ತಮ್ಮ ಸಮೀಪದ ಸ್ಪರ್ಧಿ ಸಿಪಿಐನ ವಿಎಸ್ ಸುನಿಲ್ ಕುಮಾರ್ ಅವರನ್ನು 74 ಸಾವಿರ ಮತಗಳಿಂದ ಸೋಲಿಸಿದ್ದಾರೆ.

ಕೇರಳದಲ್ಲಿ ಅರಳಿದ ಒಂದೇ ಒಂದು ಕಮಲ ಮತ್ತೆ ಮುದುಡುತ್ತಾ: ಸುರೇಶ್ ಗೋಪಿ ಅಭಿಮಾನಿಗಳು ಹೇಳ್ತಿರೋದೇನು?

ಚುನಾವಣೆಯಲ್ಲಿ ಗೆದ್ದ ನಂತರ ಪ್ರತಿಕ್ರಿಯಿಸಿದ್ದ ಸುರೇಶ್ ಗೋಪಿ, ನನ್ನ ಕಠಿಣ ಪರಿಶ್ರಮ ಹಾಗೂ ಕೆಲಸಗಳಿಂದ ಜಯ ಸಿಕ್ಕಿದೆ. ತನ್ನ ಪರವಾಗಿ ನಿಂತ ಕ್ಯಾಥೋಲಿಕ್ ಸಮುದಾಯದ ಜನತೆಗೂ ಸುರೇಶ್ ಗೋಪಿ ಧನ್ಯವಾದಗಳನ್ನು ಸಲ್ಲಿಸಿದ್ದರು. ಸಂಸದನಾಗಿ ಕೆಲಸ ಮಾಡಲು ಅವಕಾಶ ನೀಡಿದ ತ್ರಿಶೂರ್ ಜನತೆಗೆ ಧನ್ಯವಾದ ಸಲ್ಲಿಸಿದ್ದರು.

Latest Videos
Follow Us:
Download App:
  • android
  • ios