ಸಿಎಂ ಯೋಗಿ ಸರ್ಕಾರ, ಭಕ್ತರಲ್ಲಿ ಗೊಂದಲ ನಿವಾರಣೆಗೆ ಇಂಥದ್ದೊಂದು ಆದೇಶ ಹೊರಡಿಸಿದೆ. ಇದನ್ನು ವಿಪಕ್ಷ ಮತ್ತು ಎನ್‌ಡಿಎದ ಕೆಲ ಪಕ್ಷಗಳು ಕೂಡಾ ವಿರೋಧ ಮಾಡಿವೆ.

ಲಖನೌ: ಕಾವಡಿ ಯಾತ್ರಿಕರು ಸಾಗುವ ರಸ್ತೆಗಳಲ್ಲಿ ಹೋಟೆಲ್‌ ಮಾಲೀಕರು ತಮ್ಮ ಹೆಸರು ಪ್ರದರ್ಶನ ಮಾಡುವುದನ್ನು ಕಡ್ಡಾಯ ಮಾಡಿದ ಉತ್ತರಪ್ರದೇಶ ಸರ್ಕಾರದ ಆದೇಶ ಪ್ರಶ್ನಿಸಿ ಸುಪ್ರೀಂಕೋರ್ಟ್‌ನಲ್ಲಿ ಅರ್ಜಿಯೊಂದನ್ನು ಸಲ್ಲಿಸಲಾಗಿದೆ. ಸೋಮವಾರ ಈ ಅರ್ಜಿ ವಿಚಾರಣೆಗೆ ಬರಲಿದೆ.

ಕೆಲ ಹೋಟೆಲ್‌ಗಳಲ್ಲಿ ಸಸ್ಯಹಾರದ ಬದಲಾಗಿ ಮಾಂಸಾಹಾರ ವಿತರಣೆ ಮಾಡಲಾಗುತ್ತಿದ್ದು, ಇದು ಕಾವಾಡಿಗಳ ನಂಬಿಕೆಗೆ ಧಕ್ಕೆ ತರುತ್ತದೆ ಎಂಬ ಕಾರಣ ನೀಡಿ, ಸಿಎಂ ಯೋಗಿ ಸರ್ಕಾರ, ಭಕ್ತರಲ್ಲಿ ಗೊಂದಲ ನಿವಾರಣೆಗೆ ಇಂಥದ್ದೊಂದು ಆದೇಶ ಹೊರಡಿಸಿದೆ. ಇದನ್ನು ವಿಪಕ್ಷ ಮತ್ತು ಎನ್‌ಡಿಎದ ಕೆಲ ಪಕ್ಷಗಳು ಕೂಡಾ ವಿರೋಧ ಮಾಡಿವೆ. ಅದರ ನಡುವೆಯೇ ಸೋಸಿಯೇನ್ ಆಫ್ ಪ್ರೊಟೆಕ್ಷನ್ ಆಫ್ ಸಿವಿಲ್ ರೈಟ್ಸ್ ಎಂಬ ಸರ್ಕಾರೇತರ ಸಂಸ್ಥೆ ಭಾನುವಾರ ಸುಪ್ರೀಂಕೋರ್ಟ್‌ನಲ್ಲಿ ಅರ್ಜಿ ಸಲ್ಲಿಕೆ ಮಾಡಿದೆ.

ಮುಸ್ಲಿಮರು ತಮ್ಮ ಅಂಗಡಿಗಳಿಗೆ ಹಿಂದೂ ದೇವತೆಗಳ ಹೆಸರಿಡಬೇಡಿ ಎಂದ ಬಿಜೆಪಿ ಸಚಿವ

ಮಧ್ಯಪ್ರದೇಶದ ಉಜ್ಜಯಿನಿಯಲ್ಲಿಯೂ ಇದೇ ನೀತಿ ಜಾರಿ

ಕಾವಾಡಿಗರ ಯಾತ್ರೆ ಮಾರ್ಗದಲ್ಲಿ ಹೋಟೆಲ್ ಮಾಲೀಕರು ತಮ್ಮ ಹೆಸರಿನ ನಾಮಫಲಕ ಪ್ರದರ್ಶಿಸಬೇಕೆಂದು ಉತ್ತರ ಪ್ರದೇಶ ಮತ್ತು ಉತ್ತರಾಖಂಡ್ ಸರ್ಕಾರ ಆದೇಶಿಸಿದ ಬೆನ್ನಲ್ಲೇ, ಮಧ್ಯಪ್ರದೇಶದ ಉಜ್ಜಯಿನಿಯಲ್ಲೂ ಇದೇ ನೀತಿ ಜಾರಿ ಮಾಡಲಾಗಿದೆ. ಬಿಜೆಪಿ ಆಡಳಿತದ ಉಜ್ಜಯಿನಿ ಮುನ್ಸಿಪಲ್ ಕಾರ್ಪೋರೆಷನ್ ಮೇಯರ್, ‘ಪವಿತ್ರ ನಗರ ಉಜ್ಜಯಿನಿ ಅಂಗಡಿ ಮಾಲೀಕರಿಗೆ ತಮ್ಮ ಅಂಗಡಿಗಳ ಮುಂದೆ ಮಾಲೀಕರ ಹೆಸರು ಹಾಗೂ ಸಂಪರ್ಕ ಸಂಖ್ಯೆಯನ್ನು ಪ್ರದರ್ಶಿಸುವಂತೆ’ ಆದೇಶಿಸಿದ್ದಾರೆ.

ಒಂದು ವೇಳೆ ನಿಯಮ ಪಾಲನೆ ಮಾಡದೇ ಇದ್ದಲ್ಲಿ, ಮೊದಲ ಸಲ 2000 ರು., ಎರಡನೇ ಬಾರಿಗೆ 5000 ರು ದಂಡ ವಿಧಿಸಲಾಗುವುದು ಎಂದು ಮೇಯರ್ ಮುಕೇಶ್‌ ತತ್ವಾಲ್ ಹೇಳಿದ್ದಾರೆ. ‘ರಕ್ಷಣೆ ಮತ್ತು ಪಾರದರ್ಶಕತೆಯ ಕಾರಣಕ್ಕೆ ಈ ನಿಯಮವನ್ನು ಜಾರಿಗೆ ತರಲಾಗಿದೆ. ಇದರಲ್ಲಿ ಮುಸ್ಲಿಂ ಮಾಲೀಕರನ್ನು ಗುರಿ ಮಾಡುವ ಉದ್ದೇಶವಿಲ್ಲ’ ಎಂದಿದ್ದಾರೆ.

ರಾಮ್‌ದೇವ್‌ಗೆ ಗುರುತು ಹೇಳಲು ಸಮಸ್ಯೆ ಇಲ್ಲವೆಂದರೆ ರೆಹಮಾನ್‌ಗೆ ಏಕೆ ಸಮಸ್ಯೆ: ಬಾಬಾ ರಾಮ್‌ದೇವ್

Scroll to load tweet…