ರಾಮ ಮಂದಿರ ಉದ್ಘಾಟನೆಗೆ ಕೆಲ ದಿನ ಮಾತ್ರ ಬಾಕಿ. ಕಾಮಗಾರಿಗಳು ಬಿರುಸಿನಿಂದ ನಡೆಯುತ್ತಿದೆ. ಇದೀಗ ರಾಮ ಜನ್ಮಭೂಮಿ ಟ್ರಸ್ಟ್ ರಾಮ ಮಂದಿರದ ವಿಡಿಯೋ ಬಿಡುಗಡೆ ಮಾಡಿದೆ. ದೀಪಾಲಂಕಾರದಿಂದ ಕಂಗೊಳಿಸುತ್ತಿರುವ ವಿಡಿಯೋ ಭವ್ಯ ರಾಮ ಮಂದಿರ ಮೆರೆಗನ್ನು ಮತ್ತಷ್ಟು ಹೆಚ್ಚಿಸಿದೆ

ಆಯೋಧ್ಯೆ(ಜ.08) ಶ್ರೀರಾಮ ಮಂದಿರ ಉದ್ಘಾಟನೆ ಜನವರಿ 22ರಂದು ನಡೆಯಲಿದೆ. ಶ್ರೀರಾಮಲಲ್ಲಾ ಪ್ರಾಣಪ್ರತಿಷ್ಠೆ ಮೂಲಕ ಭವ್ಯ ಮಂದಿರ ಲೋಕಾರ್ಪಣೆಗೊಳ್ಳಲಿದೆ. ರಾಮ ಮಂದಿರ ಕಾಮಗಾರಿಗಳು ಅಂತಿಮ ಹಂತದಲ್ಲಿದೆ. ಇದೀಗ ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್, ಶ್ರೀರಾಮ ಮಂದಿರದ ವಿಡಿಯೋ ರಿಲೀಸ್ ಮಾಡಿದೆ. ದೀಪಾಲಂಕಾರಗಳಿಂದ ಕಂಗೊಳಿಸುತ್ತಿರುವ ಭವ್ಯಮಂದಿರದ ಸುಂದರ ವಿಡಿಯೋ ಭಾರಿ ವೈರಲ್ ಆಗಿದೆ.

ರಾಮ ಮಂದಿರದ ಪ್ರವೇಶದ ದ್ವಾರದಲ್ಲಿರುವ ಗರುಡ, ಹನುಮಾನ್, ಆನೆ ಸೇರಿದಂತೆ ಮೂರ್ತಿಗಳು, ರಾಮ ಮಂದಿರದ ಒಳಭಾಗ, ಹೊರಾಂಗಣ, ರಾಮ ಮಂದಿರ ತಳ ಮಹಡಿಯ ಮೆಲ್ಛಾವಣೆ, ಸುಂದರ ಕೆತ್ತನೆಗಳು, ಮಂದಿರದ ನೆಲ ಸೇರಿದಂತೆ ಸಂಪೂರ್ಣ ಮಂದಿರ ರಾತ್ರಿ ವೇಳೆ ದೀಪಾಲಂಕಾರದಿಂದ ಕಂಗೊಳಿಸುತ್ತಿರುವ ವಿಡಿಯೋವನ್ನು ಟ್ರಸ್ಟ್ ಬಿಡುಗಡೆ ಮಾಡಿದೆ.

212 ಪಿಲ್ಲರ್, 161 ಅಡಿ ಎತ್ತರ; ಕಬ್ಬಿಣ ಬಳಸದೆ ನಾಗರಶೈಲಿಯಲ್ಲಿ ರಾಮ ಮಂದಿರ ನಿರ್ಮಾಣ!

ರಾಮ ಮಂದಿರದಲ್ಲಿ ರಾಮಲಲ್ಲಾ ಪ್ರಾಣಪ್ರತಿಷ್ಠೆ ಜನವರಿ 22ರಂದು ನಡೆಯಲಿದೆ. ಆದರೆ ‘ಪ್ರತಿಷ್ಠಾಪನೆಯ ಪೂಜಾ ವಿಧಿವಿಧಾನಗಳು ಜ.16ರಿಂದ ಪ್ರಾರಂಭವಾಗಲಿವೆ ಮತ್ತು ಜ.18 ರಂದು ಗರ್ಭಗುಡಿಯಲ್ಲಿ ವಿಗ್ರಹ ಇರಿಸಲಾಗುವುದು. ಭಾರತದ ಪ್ರಖ್ಯಾತ ಬಾಹ್ಯಾಕಾಶ ವಿಜ್ಞಾನಿಗಳ ಸಲಹೆಯ ಮೇರೆಗೆ ಭಗವಾನ್ ಶ್ರೀರಾಮನ ವಿಗ್ರಹದ ಉದ್ದ ಮತ್ತು ಅದರ ಸ್ಥಾಪನೆಯ ಎತ್ತರವನ್ನು ವಿನ್ಯಾಸಗೊಳಿಸಲಾಗಿದೆ. ಪ್ರತಿ ವರ್ಷ ರಾಮ ನವಮಿಯಂದು, ಚೈತ್ರ ಮಾಸದ ಶುಕ್ಲ ಪಕ್ಷದ 9ನೇ ತಾರೀಖು, ಭಗವಾನ್ ಸೂರ್ಯ ಸ್ವತಃ ಮಧ್ಯಾಹ್ನ 12 ಗಂಟೆಗೆ ತನ್ನ ಕಿರಣಗಳ ಮೂಲಕ ಶ್ರೀರಾಮನ ಹಣೆಯನ್ನು ಸ್ಪರ್ಶಿಸಿ ಕಂಗೊಳಿಸಲಿದ್ದಾನೆ ಎಂದು ರಾಮಮಂದಿರ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್‌ ಹೇಳಿದ್ದಾರೆ.

Scroll to load tweet…

ರಾಮ ಮಂದಿರ ಉದ್ಘಾಟನೆಗೆ ಈಗಾಗಲೇ ಗಣ್ಯರನ್ನು ಆಹ್ವಾನಿಸಲಾಗಿದೆ. ಈ ಪೈಕಿ ಬಾಬ್ರಿ ಮಸೀದಿ ಪರ ದಾವೆ ಹೂಡಿದ್ದ ಇಕ್ಬಾಲ್‌ ಅನ್ಸಾರಿ ಅವರಿಗೆ ಆಹ್ವಾನ ನೀಡಲಾಗಿದೆ. ಈ ಆಹ್ವಾನವನ್ನು ಖುದ್ದು ರಾಮ ಜನ್ಮಭೂಮಿ ಟ್ರಸ್‌ನ ಕಾರ್ಯಕರ್ತರು ತೆರಳಿ ಆಹ್ವಾನವಿತ್ತಿದ್ದಾರೆ ಎಂದು ಇಕ್ಬಾಲ್‌ ಪುತ್ರಿ ಶಾಮಾ ಪರ್ವೀನ್‌ ಹೇಳಿದ್ದಾರೆ. ಇಕ್ಬಾಲ್‌ ಅನ್ಸಾರಿ ಅವರು ಡಿ.30ರಂದು ಅಯೋಧ್ಯೆಯಲ್ಲಿ ನಡೆದ ಪ್ರಧಾನಿ ನರೇಂದ್ರ ಮೋದಿ ಅವರ ರೋಡ್‌ ಶೋ ವೇಳೆ ಪುಷ್ಪ ಎರಚಿ ಸ್ವಾಗತಿಸಿದ್ದರು. ಈ ನಡೆ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿತ್ತು. ರಾಮ ಮಂದಿರ ನಿರ್ಮಾಣದಿಂದ ಅಯೋಧ್ಯೆ ಅಭಿವೃದ್ಧಿ ಕಾಣುತ್ತಿದೆ ಎಂದು ಸಹ ಅನ್ಸಾರಿ ಪ್ರಧಾನಿ ಮೋದಿಯನ್ನು ಬಣ್ಣಿಸಿದ್ದರು.

ರಾಮನಗರಿಯಲ್ಲಿ ಕನ್ನಡದ ಕಂಪು..! ಭವ್ಯ ಮಂದಿರದ ಹಿಂದೆ ಕನ್ನಡಿಗರ ರಾಮಸೇವೆ..!