Asianet Suvarna News Asianet Suvarna News

ಆತ್ಮನಿರ್ಭರ ಭಾರತ: ವಾಯು ಕ್ಷಿಪಣಿ ಪರೀಕ್ಷಾರ್ಥ ಪ್ರಯೋಗ ಯಶಸ್ವಿ

ಭಾರತೀಯ ನೌಕಾಪಡೆಯೂ ವಿಶಾಖಪಟ್ಟಣಂನಲ್ಲಿ ನಡೆಸಿದ ವಾಯು ಕ್ಷಿಪಣಿ ಪರೀಕ್ಷಾರ್ಥ ಪ್ರಯೋಗ ಯಶಸ್ವಿಯಾಗಿದೆ.

Indian Navy Successfully Test Fires Air Missile from INS Visakhapatnam akb
Author
First Published Mar 7, 2023, 1:30 PM IST

ವಿಶಾಖಪಟ್ಟಣ: ಭಾರತೀಯ ನೌಕಾಪಡೆಯೂ ವಿಶಾಖಪಟ್ಟಣಂನಲ್ಲಿ ನಡೆಸಿದ ವಾಯು ಕ್ಷಿಪಣಿ ಪರೀಕ್ಷಾರ್ಥ ಪ್ರಯೋಗ ಯಶಸ್ವಿಯಾಗಿದೆ. ಐಎನ್‌ಎಸ್ ವಿಶಾಖಪಟ್ಟಣಂ ಯುದ್ಧ ನೌಕೆಯಿಂದ ಹಾರಿಸಲ್ಪಟ್ಟ ಈ ವಾಯು ಕ್ಷಿಪಣಿ ಯಶಸ್ವಿಯಾಗಿದೆ. ಇದು ಮಧ್ಯಮ ಶ್ರೇಣಿಯ  ಮೇಲ್ಮೈಯ  ವಾಯು ಕ್ಷಿಪಣಿಯಾಗಿದ್ದು, ಹಡಗು ವಿರೋಧಿ ಕ್ಷಿಪಣಿಗಳ ಸಾಮರ್ಥ್ಯವನ್ನು ಮೌಲ್ಯೀಕರಿಸುತ್ತದೆ.

ಮಧ್ಯಮ ಶ್ರೇಣಿಯ  ಮೇಲ್ಮೈಯ  ವಾಯು ಕ್ಷಿಪಣಿ (MRSAM) ಯನ್ನು ಡಿಆರ್‌ಡಿಒ (Defence Research and Development Organisation) ಹಾಗೂ ಇಸ್ರೇಲಿ ಏರೋಸ್ಪೇಸ್ ಇಂಡಸ್ಟ್ರಿ (IAI) ಭಾರತ್ ಡೈನಾಮಿಕ್ ಲಿಮಿಟೆಡ್ (BDL) ಜಂಟಿಯಾಗಿ ನಿರ್ಮಿಸಿದ್ದು, ಆತ್ಮನಿರ್ಭರ್‌ಗೆ ಭಾರತೀಯ ನೌಕಾಪಡೆಯ ಬದ್ಧತೆಯನ್ನು ತೋರಿಸಿದೆ ಎಂದು ಸೇನೆ ತಿಳಿಸಿದೆ. 

ಇದಕ್ಕೂ ಮೊದಲು ಫೆಬ್ರವರಿಯಲ್ಲಿ ಬಿಡುಗಡೆಯಾದ ಪತ್ರಿಕಾ ಹೇಳಿಕೆಯಲ್ಲಿ ಸೇನೆಯೂ, ಅಭ್ರಾ (Abhra) ಎಂದು ಕರೆಯಲ್ಪಡುವ ಎಂಆರ್‌ಎಸ್‌ಎಂ ಶಸ್ತ್ರಾಸ್ತ್ರ ವ್ಯವಸ್ಥೆಯು ಅತ್ಯಾಧುನಿಕ ಮಧ್ಯಮ-ಶ್ರೇಣಿಯ ವಾಯು ರಕ್ಷಣಾ ಶಸ್ತ್ರಾಸ್ತ್ರ ವ್ಯವಸ್ಥೆಯಾಗಿದೆ. ಇದು ಭಾರತೀಯ ಸಾರ್ವಜನಿಕ ಮತ್ತು ಖಾಸಗಿ ರಕ್ಷಣಾ ಉದ್ಯಮ ಪಾಲುದಾರರಿಂದ ಸಕ್ರಿಯ ಭಾಗವಹಿಸುವಿಕೆಯೊಂದಿಗೆ ಡಿಆರ್‌ಡಿಒ ಹಾಗೂ ಐಎಐನ ಜಂಟಿ ವ್ಯವಹಾರವಾಗಿದೆ ಎಂದು ತಿಳಿಸಿತ್ತು.

ಜಪಾನ್‌ ಬಳಿ ಉತ್ತರ ಕೊರಿಯಾ ಕ್ಷಿಪಣಿ ಪತನ: ತೀವ್ರ ಆತಂಕ

ಫೆಬ್ರವರಿಯಲ್ಲಿ, ಸುದ್ದಿ ಸಂಸ್ಥೆ ಎಎನ್‌ಐ ಉಲ್ಲೇಖಿಸಿದಂತೆ, ಈಸ್ಟರ್ನ್ ಕಮಾಂಡ್‌ನ GOC-in-C ಲೆಫ್ಟಿನೆಂಟ್ ಜನರಲ್ ಆರ್‌ಪಿ ಕಲಿತಾ ಅವರು,  MRSAM ರೆಜಿಮೆಂಟ್‌ಗೆ ತಮ್ಮ ಆರಂಭಿಕ ಭೇಟಿಯ ಸಂದರ್ಭದಲ್ಲಿ ಭಾರತದ ರಕ್ಷಣಾ ಉದ್ಯಮವು ಸ್ವದೇಶೀಕರಣದತ್ತ ಮಹತ್ವದ ಹೆಜ್ಜೆ ಇಟ್ಟಿದೆ ಎಂದು ಒತ್ತಿ ಹೇಳಿದರು. ಇದರ ಪರಿಣಾಮವಾಗಿ ರಕ್ಷಣಾ ಉತ್ಪಾದನೆಯಲ್ಲಿ ದೇಶವು ಶೀಘ್ರದಲ್ಲೇ ಸ್ವಾವಲಂಬನೆ ಸಾಧಿಸಲಿದೆ ಎಂದಿದ್ದರು.

ಇದಕ್ಕೂ ಮೊದಲು ಡಿಸೆಂಬರ್‌ನಲ್ಲಿ ಕಲ್ಯಾಣಿ ರಾಫೆಲ್ ಅಡ್ವಾನ್ಸ್ಡ್ ಸಿಸ್ಟಮ್ಸ್ ಪ್ರೈವೇಟ್ ಲಿಮಿಟೆಡ್ (KRAS) ಭಾರತೀಯ ಸಶಸ್ತ್ರ ಪಡೆಗಳಿಗಾಗಿ 100 ನೇ ಮಧ್ಯಮ ಶ್ರೇಣಿಯ ಮೇಲ್ಮೈಯ ವಾಯು ಕ್ಷಿಪಣಿ (MRSAM) ಕಿಟ್ ಅನ್ನು ತಯಾರಿಸಿ ಬಿಡುಗಡೆ ಮಾಡಿತು.

ಮಧ್ಯಮ ಶ್ರೇಣಿಯ ಮೇಲ್ಮೈಯ ವಾಯು ಕ್ಷಿಪಣಿ (MRSAM) ಒಂದು ಸೂಪರ್‌ಸಾನಿಕ್ ಕ್ಷಿಪಣಿಯಾಗಿದ್ದು, ಇದು ಕ್ಷಿಪ್ರ ಪ್ರತಿಕ್ರಿಯೆಯ ಸಮಯದೊಂದಿಗೆ ಇದು ನೇರವಾಗಿ ಉಡಾವಣೆಯಾಗುವುದು. ಹಾಗೂ ಬಾಂಬ್, , ಕ್ಷಿಪಣಿಗಳು ಮತ್ತು ಹೆಲಿಕಾಪ್ಟರ್‌ ಮುಂತಾದ  ವಾಯುಯಾನದ ಮೂಲಕ ಬರಬಲ್ಲ ಬೆದರಿಕೆಗಳನ್ನು ಪ್ರತಿಬಂಧಿಸುವ ಸಾಮರ್ಥ್ಯವನ್ನು ಹೊಂದಿದೆ.  ಅಲ್ಲದೇ ಇದನ್ನು ಸೇನೆ, ನೌಕಾಪಡೆ ಮತ್ತು ವಾಯುಪಡೆಯಲ್ಲಿ ವಿಭಿನ್ನ ರೀತಿಯಲ್ಲಿದೆ. 

Aero india 2023: ಸುಖೋಯ್‌ ರಕ್ಷಿಸುವ ಸಾಧನ ಬೆಂಗಳೂರು ಕಂಪನಿಯಿಂದ ಪೂರೈಕೆ

ಈ ಎಂಆರ್‌ಎಸ್‌ಎಂ ಕ್ಷಿಪಣಿ 275 ಕೆಜಿ ತೂಗುತ್ತಿದ್ದು, 70 ಕಿ.ಮೀ. ವ್ಯಾಪ್ತಿಯನ್ನು ಹೊಂದಿದೆ, 4500 ಎಂಎಂ ಉದ್ದ, ಡ್ಯುಯಲ್ ಗೈಡೆನ್ಸ್ (ಕಮಾಂಡ್ ಮತ್ತು ಆಕ್ಟಿವ್ ರೇಡಾರ್ ಸೀಕರ್), TVC ಮತ್ತು ಏರೋಡೈನಾಮಿಕ್ ನಿಯಂತ್ರಣ, ಮತ್ತು ಘನ ಮೋಟಾರಿನೊಂದಿಗೆ ಡ್ಯುಯಲ್ ಪಲ್ಸ್ ಪ್ರೊಪಲ್ಷನ್ ಹೊಂದಿದೆ. 

ಸಂಶೋಧನಾ ವೆಬ್‌ಸೈಟ್‌ವೊಂದರ ಪ್ರಕಾರ,  ಏರ್‌ಫೋರ್ಸ್ ಟೆಕ್ನಾಲಜಿ ಫೆಬ್ರವರಿ 2009 ರಲ್ಲಿ ಈ ಎಂಆರ್‌ಎಸ್‌ಎಎಂ ಕಾರ್ಯಕ್ರಮಕ್ಕಾಗಿ ಒಪ್ಪಂದಕ್ಕೆ ಸಹಿ ಹಾಕಿತ್ತು.  ಭಾರತೀಯ ವಾಯುಪಡೆ (IAF) 450 MRSAM ಗಳನ್ನು ಮತ್ತು 18 ಫೈರಿಂಗ್ ಘಟಕಗಳನ್ನು 2 ಬಿಲಿಯನ್ ಡಾಲರ್‌ಗೆ ಖರೀದಿಸಲು ಒಪ್ಪಿಕೊಂಡಿತು.

ಇದಕ್ಕೂ ಮೊದಲು IAI ಮತ್ತು DRDO ಜುಲೈ 2016 ರಲ್ಲಿ ಭಾರತದ ಒಡಿಶಾ ಕರಾವಳಿಯ ಇಂಟಿಗ್ರೇಟೆಡ್ ಟೆಸ್ಟ್ ರೇಂಜ್‌ನಲ್ಲಿ ಎಲ್ಲಾ ಕ್ಷಿಪಣಿ ಘಟಕಗಳನ್ನು ತಪಾಸಣೆ ಹಾಗೂ ಸಾಮರ್ಥ್ಯ ಪರಿಶೀಲಿಸಲು  MRSAM ಶಸ್ತ್ರಾಸ್ತ್ರ ವ್ಯವಸ್ಥೆಯ ಮೂರು ಹಾರಾಟ ಪರೀಕ್ಷೆಗಳನ್ನು ನಡೆಸಿತ್ತು. 

ಹೆಚ್ಚುವರಿಯಾಗಿ, ಜನವರಿ 2019 ರಲ್ಲಿ, ಐಎಐ ವಿವಿಧ MRSAM ಉಪ ವ್ಯವಸ್ಥೆಗಳಿಗೆ ನಿರ್ವಹಣೆ ಮತ್ತು ಇತರ ಸೇವೆಗಳನ್ನು ಒದಗಿಸಲು ಭಾರತೀಯ ನೌಕಾಪಡೆ ಮತ್ತು ಕೊಚ್ಚಿನ್ ಶಿಪ್‌ಯಾರ್ಡ್‌ನೊಂದಿಗೆ (Cochin Shipyard)  93 ಮಿಲಿಯನ್ ಡಾಲರ್‌ ಒಪ್ಪಂದಕ್ಕೆ ಒಪ್ಪಿಕೊಂಡಿತು, ಭಾರತೀಯ ನೌಕಾಪಡೆಯು ಜನವರಿ 2019 ರಲ್ಲಿ ಐಎನ್‌ಎಸ್‌ ಚೆನ್ನೈನಿಂದ ಎಲ್‌ಆರ್‌ಎಸ್‌ಎಎಂ ಅನ್ನು ಯಶಸ್ವಿಯಾಗಿ ಪರೀಕ್ಷಿಸಿತು.

Follow Us:
Download App:
  • android
  • ios