ಭಾರತೀಯ ಸೇನಾ ಕಾರ್ಯಾಚರಣೆ ಹೇಗಿರುತ್ತೆ?ಫೈರಿಂಗ್ ಮಾಡುತ್ತಾ ಓಡಿದ ಉಗ್ರನ ಹತ್ಯೆ ದೃಶ್ಯ!
ಭಾರತೀಯ ಸೇನೆಯ ಕಾರ್ಯಾಚರಣೆ ಹೇಗಿರುತ್ತೆ ಗೊತ್ತಾ? ಜಮ್ಮು ಕಾಶ್ಮೀರದ ಬಾರಮುಲ್ಲಾದಲ್ಲಿ ನಡೆಸಿದ ಉಗ್ರರ ವಿರುದ್ಧ ಕಾರ್ಯಾಚರಣೆ ಡ್ರೋನ್ ದೃಶ್ಯ ಬಯಲಾಗಿದೆ. ಸೇನೆ ಮೇಲೆ ಫೈರಿಂಗ್ ಮಾಡುತ್ತಾ ಓಡಿದ ಉಗ್ರನ ಹೆಡೆಮುರಿ ಕಟ್ಟಿದ ವಿಡಿಯೋ ಸೇನಾ ಕಾರ್ಯಾಚರಣೆ ವಿವರಿಸುತ್ತಿದೆ.
ಬಾರಮುಲ್ಲಾ(ಸೆ.16) ಜಮ್ಮು ಮತ್ತು ಕಾಶ್ಮೀರದಲ್ಲಿ ಇತ್ತೀಚೆಗೆ ಭಯೋತ್ಪಾದಕರ ದಾಳಿ ಹೆಚ್ಚಾಗುತ್ತಿದೆ. ಆರ್ಟಿಕಲ್ 370 ರದ್ದು ಮಾಡಿದ ಬಳಿಕ ಬಹುತೇಕ ನಿಯಂತ್ರಣಗೊಂಡಿದ್ದ ಉಗ್ರರ ದಾಳಿ ಇದೀಗ ಮತ್ತೆ ಚಿಗುರಿಕೊಂಡಿದೆ. ಭಾರತೀಯ ಸೇನೆ, ಪೊಲೀಸ್, ನಾಗರೀಕರು, ವಲಸಿಗಳು, ಕಾರ್ಮಿಕರು ಸೇರಿದಂತೆ ಹಲವರನ್ನು ಗುರಿಯಾಗಿಸಿ ದಾಳಿ ನಡೆಯುತ್ತಿದೆ. ಬಾರಮುಲ್ಲಾದಲ್ಲಿ ಉಗ್ರರ ವಿರುದ್ಧ ಭಾರತೀಯ ಸೇನೆ ಕಾರ್ಯಾಚರಣೆ ನಡೆಸಿದೆ. ಈ ವೇಳೆ ಮೂವರು ಉಗ್ರರು ಅಡಗಿದ್ದ ಕಟ್ಟಡ ಸುತ್ತುವರೆದ ಭಾರತೀಯ ಸೇನೆ ಪ್ರತಿದಾಳಿ ನಡೆಸಿದೆ. ಈ ವೇಳೆ ಸೇನೆ ಮೇಲೆ ಫೈರಿಂಗ್ ಮಾಡುತ್ತಾ ಓಡಿ ಹೋಗಲು ಯತ್ನಿಸಿದ ಉಗ್ರನನ್ನು ಭಾರತೀಯ ಸೇನೆ ಹೆಡೆಮುರಿ ಕಟ್ಟಿದ ಡ್ರೋನ್ ವಿಡಿಯೋ ಇದೀಗ ವೈರಲ್ ಆಗಿದೆ.
ಬಾರಮುಲ್ಲಾದ ಚಾಕ್ ಟಾಪರ್ ಪ್ರದೇಶದಲ್ಲಿ ಉಗ್ರರ ದಾಳಿ ನಡೆದಿತ್ತು. ಹೀಗಾಗಿ ಭಾರತೀಯ ಸೇನೆ ತಕ್ಷಣವೆ ಕಾರ್ಯಾಚರಣೆಗೆ ಇಳಿದಿದೆ. ಸೇನೆ ಪ್ರತಿದಾಳಿ ನಡೆಸುತ್ತಿದ್ದಂತೆ ಉಗ್ರರು ಕಟ್ಟದೊಳಗೆ ಅಡಗಿ ಕುಳಿತು ಪ್ರತಿದಾಳಿಗೆ ಸಜ್ಜಾಗಿದ್ದಾರೆ. ಹೀಗಾಗಿ ಸೇನೆಯ ರಾಷ್ಟ್ರೀಯ ರೈಫಲ್ಸ್ 10 ವಿಭಾಗ ಇಡೀ ಪ್ರದೇಶ ಸುತ್ತುವರಿದಿತ್ತು. ಮತ್ತೊಂದೆಡೆಯಿಂದ ಡ್ರೋನ್ ಬಳಸಿದ ಸೇನೆ ಉಗ್ರರ ಪತ್ತೆ ಹಚ್ಚುವ ಕಾರ್ಯ ಮಾಡಿತ್ತು.
ಜಮ್ಮು ಕಾಶ್ಮೀರ ಚುನಾವಣೆ: ಸಂಸತ್ ಮೇಲಿನ ದಾಳಿಕೋರ ಅಫ್ಜಲ್ ಗುರು ಸೋದರನಿಂದ ನಾಮಪತ್ರ
ಉಗ್ರರು ಫೈರಿಂಗ್ ನಡೆಸುತ್ತಿದ್ದಂತೆ ಭಾರತೀಯ ಸೇನೆ ಏಕಾಏಕಿ ದಾಳಿ ನಡೆಸಿದೆ. ಈ ವೇಳೆ ದಿಕ್ಕಾಪಾಲಾದ ಉಗ್ರರು ಮತ್ತಷ್ಟು ಫೈರಿಂಗ್ ನಡೆಸಿದ್ದಾರೆ. ಈ ವೇಳೆ ಒರ್ವ ಉಗ್ರ ಸೇನೆ ವಿರುದ್ಧ ಫೈರಿಂಗ್ ನಡೆಸುತ್ತಾ ಓಡಿ ಹೋಗಲು ಯತ್ನಿಸಿದ್ದಾನೆ. ಆದರೆ ಸೇನೆಯ ಕಾರ್ಯಾಚರಣೆಯಲ್ಲಿ ಓಡಿ ಹೋಗಲು ಯತ್ನಿಸಿದ ಉಗ್ರ ಅಲ್ಲೆ ಹತನಾಗಿದ್ದಾನೆ. ಬಿದ್ದ ಮೇಲೂ ಸೇನೆ ಮೇಲೆ ಪ್ರತಿ ದಾಳಿ ನಡೆಸಿದ ಉಗ್ರನಿಗೆ ತಕ್ಕ ಶಾಸ್ತ್ರಿ ಮಾಡಲಾಗಿದೆ.
ಸೇನೆಯ ಗುಂಡು ಬೀಳುತ್ತಿದ್ದಂತೆ ಉಗ್ರ ಬಿದ್ದಿದ್ದಾನೆ. ತೆವಳುತ್ತಾ ಸಾಗಲು ಯತ್ನಿಸಿದ್ದಾನೆ. ಆದರೆ ಒಂದೇ ಸಮನೆ ಸೇನೆಯ ದಾಳಿಯಿಂದ ಉಗ್ರರ ದೇಹಕ್ಕೆ ಹಲವು ಗುಂಡುಗಳು ಹೊಕ್ಕಿದೆ. ಇನ್ನು ಕಟ್ಟಡದೊಳಗಿದ್ದ ಇಬ್ಬರೂ ಉಗ್ರರನ್ನು ಹತ ಮಾಡಲಾಗಿದೆ. ಈ ಡ್ರೋನ್ ವಿಡಿಯೋವನ್ನು ಭಾರತೀಯ ಸೇನೆ ಬಿಡುಗಡೆ ಮಾಡಿದೆ.
ಶುಕ್ರವಾರ ತಡರಾತ್ರಿಯಿಂದ ಆರಂಭಗೊಂಡ ಕಾರ್ಯಾಚರಣೆಯಲ್ಲಿ ಭಾರತೀಯ ಸೇನೆ ಉಗ್ರರ ಹೆಡೆಮುರಿ ಕಟ್ಟಿದೆ. ಶುಕ್ರವಾರದಿಂದ ಶನಿವಾರ ಬೆಳಗಿನವರೆಗೂ ದಾಳಿ ಪ್ರತಿ ದಾಳಿ ನಡೆದಿದೆ. ಇದೇ ವೇಳೆ ಕಾಶ್ಮೀರದ ಕಠುವಾ ಬಳಿಯೂ ಭಾರತೀಯ ಸೇನೆ ಉಗ್ರರ ವಿರುದ್ಧ ಕಾರ್ಯಾಚರಣೆ ನಡೆಸಿದೆ. ಜಮ್ಮು ಕಾಶ್ಮೀರ ಪೊಲೀಸರು ಹಾಗೂ ಸೇನೆ ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಮೂವರು ಉಗ್ರರು ಹತರಾಗಿದ್ದಾರೆ. ಸೇನೆಯ 22 ಗಢವಾಲ್ ರೈಫಲ್ಸ್ ಹಾಗೂ ಕಾಶ್ಮೀರ ಪೊಲೀಸರು ಕಾರ್ಯಾಚರಣೆ ನಡೆಸಿ ಮೂವರು ಉಗ್ರರನ್ನು ಹತ್ಯೆ ಮಾಡಿದೆ.
ಜೈಲಿನಲ್ಲಿದ್ದುಕೊಂಡೇ ಲೋಕಸಭಾ ಚುನಾವಣೆಯಲ್ಲಿ ಗೆದ್ದಿದ್ದ ಕಾಶ್ಮೀರದ ಸಂಸದನಿಗೆ ಜಾಮೀನು