ಮುಖ್ಯಮಂತ್ರಿ, ಶಾಸಕರು, ರಾಜಕೀಯ ನಾಯಕರು ತಮ್ಮ ಪ್ರಯಾಣಕ್ಕಾಗಿ ಸುರಕ್ಷತೆಯ, ಆರಾಮದಾಯಕ ಕಾರು ಬಳಸುತ್ತಾರೆ. ಆದರೆ ಹಿಮಾಚಲ ಪ್ರದೇಶ ಮುಖ್ಯಮಂತ್ರಿ ಬಜೆಟ್ ಮಂಡನೆಗೆ ತಮ್ಮ 800ಸಿಸಿಯ ಮಾರುತಿ ಅಲ್ಟೋ ಕಾರಿನಲ್ಲಿ ಆಗಮಿಸಿ ಸರಳತೆ ಮೆರೆದಿದ್ದಾರೆ. ತಾವೇ ಡ್ರೈವ್ ಮಾಡಿಕೊಂಡು ವಿಧಾನಸಭೆಗೆ ಆಗಮಿಸಿದ್ದಾರೆ. 

ಶಿಮ್ಲಾ(ಫೆ.25) ಮುಖ್ಯಮಂತ್ರಿಯಾದಾಗ, ಶಾಸಕರಾದಾಗ, ಸಚಿವರಾದಾಗ ಬಹುತೇಕರು ತಮ್ಮ ಕಾರುಗಳನ್ನು ಬದಲಿಸಿ ಹೊಸ, ಐಷಾರಾಮಿ ಕಾರುಗಳನ್ನು ಬಳಸುತ್ತಾರೆ. ಸರ್ಕಾರದ ಕಾರುಗಳು ಕೂಡ ಬದಲಾಗುತ್ತದೆ. ಆದರೆ ಹಿಮಾಚಲ ಪ್ರದೇಶ ಮುಖ್ಯಮಂತ್ರಿ ಸುಖ್ವಿಂದರ್ ಸಿಂಗ್ ಸುಖು ಮುಖ್ಯಮಂತ್ರಿಯಾದರೂ ತಮ್ಮ ಮಾರುತಿ ಅಲ್ಟೋ ಕಾರನ್ನು ಬದಲಿಸಿಲ್ಲ. ಇದೀಗ ಬಜೆಟ್ ಮಂಡಿಸಲು ಹಿಮಾಚಲ ಪ್ರದೇಶ ವಿಧಾನಸಭೆಗೆ ಸುಖ್ವಿಂದರ್ ಸಿಂಗ್ ಸುಖು ಇದೇ ಮಾರುಟಿ ಅಲ್ಟೋ ಕಾರಿನಲ್ಲಿ ಆಗಮಿಸಿದ್ದಾರೆ. ಈ ವಿಡಿಯೋ ಭಾರಿ ವೈರಲ್ ಆಗಿದೆ.

ಶನಿವಾರ ಸುಖ್ವಿಂದರ್ ಸಿಂಗ್ ಸುಖು ಹಿಮಾಚಲ ಪ್ರದೇಶ ಬಜೆಟ್ ಮಂಡಿಸಿದ್ದಾರೆ. ಈ ವೇಳೆ ಸುಖ್ವಿಂದರ್ ಸಿಂಗ್ ಮನೆಯಿಂದ ತಮ್ಮ ಅಲ್ಟೋ ಕಾರಿನಲ್ಲಿ ಆಗಮಿಸಿದ್ದಾರೆ. ಬಿಳಿ ಬಣ್ಣದ ಈ ಅಲ್ಟೋ ಕಾರು ಸುಖ್ವಿಂದರ್ ಸಿಂಗ್ ಸುಖು ಅವರ ನೆಚ್ಚಿನ ಕಾರಾಗಿದೆ. ಹಲವು ಬಾರಿ ಈ ಕಾರನ್ನು ಬಳಸಿದ್ದಾರೆ. 2023ರ ಮಾರ್ಚ್ ತಿಂಗಳಲ್ಲಿ ಸುಖ್ವಿಂದರ್ ಸಿಂಗ್ ಸುಖು ಇದೇ ಕಾರಿನಲ್ಲಿ ವಿಧಾನಸಭೆಗೆ ಆಗಮಿಸಿ ತಮ್ಮ ಸರ್ಕಾರದ ಮೊದಲ ಬಜೆಟ್ ಮಂಡಿಸಿದ್ದರು. 

ಹಿಮಾಚಲದಲ್ಲಿ ಕಾಂಗ್ರೆಸ್‌ 'ಉಚಿತ ಭಾಗ್ಯಗಳ' ಬರೆ, 15 ಸಾವಿರ ಸರ್ಕಾರಿ ನೌಕರರಿಗೆ ಇನ್ನೂ ಆಗಿಲ್ಲ ಸಂಬಳ!

ಇದೀಗ ಎರಡನೇ ಬಜೆಟ್ ಮಂಡನೆ ವೇಳೆಯೂ ಇದೇ ಅಲ್ಟೋ ಕಾರನ್ನು ಸುಖ್ವಿಂದರ್ ಸಿಂಗ್ ಬಳಸಿದ್ದಾರೆ. ಸುಖು ಬಳಿ ಇತರ ಕೆಲ ಐಷಾರಾಮಿ ಕಾರುಗಳಿವೆ. ಪ್ರತಿನಿತ್ಯ ಸುಖು ಮುಖ್ಯಮಂತ್ರಿಗಳ ಕಾರು ಬಳಸುತ್ತಾರೆ. ಆದರೆ ಕೆಲ ವಿಶೇಷ ಸಂದರ್ಭಗಳಲ್ಲಿ ಸುಖು ತಮ್ಮ ಅಲ್ಟೋ ಕಾರುಗಳನ್ನು ಬಳಿಸಿ ಎಲ್ಲರ ಗಮನಸೆಳೆದಿದ್ದಾರೆ.

ಸುಖು ವೈಯುಕ್ತಿಕ ಕಾರ್ಯಕ್ರಮ, ಸಭೆಗಳಿಗೆ ಇದೇ ಕಾರಿನಲ್ಲಿ ಪ್ರಯಾಣಿಸಿ ತಾನೊಬ್ಬ ಕಾಮನ್ ಸಿಎಂ ಅನ್ನೋದನ್ನು ತೋರಿಸಿದ್ದಾರೆ. ಸುಖ್ವಿಂದರ್ ಸುಖು ಅವರ ಬಿಳಿ ಬಣ್ಣದ ಅಲ್ಟೋ ಕಾರು 2627 ನಂಬರ್ ಹೊಂದಿದೆ. ಹಲವು ವರ್ಷಗಳಿಂದ ಸುಖು ಈ ಕಾರನ್ನು ಅಚ್ಚುಕಟ್ಟಾಗಿ ನಿರ್ವಹಣೆ ಮಾಡಿದ್ದಾರೆ. ತಾವೇ ಖುದ್ದು ಡ್ರೈವ್ ಮಾಡುವ ಕಾರಣ ಈ ಕಾರು ಹೊಸ ಕಾರಿನಂತಿದೆ.

Scroll to load tweet…