Video: ಪೊಲೀಸರ ಮುಂದೆಯೇ ಮದ್ಯದ ಬಾಟಲಿ ದೋಚಿದ ಜನರು!

ಗುಂಟೂರಿನಲ್ಲಿ ವಶಪಡಿಸಿಕೊಂಡಿದ್ದ ಅಕ್ರಮ ಮದ್ಯವನ್ನು ನಾಶಪಡಿಸುವ ವೇಳೆ, ಸ್ಥಳೀಯರು ಬಾಟಲಿಗಳನ್ನು ದೋಚಿದ್ದಾರೆ. ಈ ಘಟನೆ ಪೊಲೀಸರ ಸಮ್ಮುಖದಲ್ಲೇ ನಡೆದಿದ್ದು, ಸಾರ್ವಜನಿಕರಲ್ಲಿ ಆಕ್ರೋಶ ವ್ಯಕ್ತವಾಗಿದೆ. ಈ ಹಿಂದೆ ಆಂಧ್ರಪ್ರದೇಶದಲ್ಲಿ ಕೋಟ್ಯಂತರ ರೂಪಾಯಿ ಮೌಲ್ಯದ ಮದ್ಯವನ್ನು ನಾಶಪಡಿಸಲಾಗಿತ್ತು.

Guntur Police Try To Destroy Liquor Bottles With Bulldozer Locals Steal Them mrq

ಗುಂಟೂರು: ವಶಪಡಿಸಿಕೊಂಡಿದ್ದ ಅಕ್ರಮ ಮದ್ಯವನ್ನು ನಾಶಪಡಿಸುತ್ತಿದ್ದ ವೇಳೆ ಪೊಲೀಸರ ಮುಂದೆಯೇ ಮದ್ಯಪ್ರಿಯರು ಮದ್ಯದ ಬಾಟಲಿಗಳನ್ನು ದೋಚಿದ ಪ್ರಸಂಗ ಆಂಧ್ರಪ್ರದೇಶದ ಗುಂಟೂರಿನಲ್ಲಿ ನಡೆದಿದೆ.

ಇಲ್ಲಿನ ಎಟಕೂರು ರಸ್ತೆಯಲ್ಲಿ ಡಂಪಿಂಗ್‌ ಯಾರ್ಡ್‌ನಲ್ಲಿ ಪೊಲೀಸರು ವಿವಿಧ ಪ್ರಕರಣಗಳಲ್ಲಿ ಜಪ್ತಿ ಮಾಡಲಾಗಿದ್ದ 50 ಲಕ್ಷ ರು. ಮೌಲ್ಯದ 24 ಸಾವಿರ ಮದ್ಯದ ಬಾಟಲಿಗಳನ್ನು ನಾಶ ಪಡಿಸಲು ಎಲ್ಲವನ್ನು ಸಾಲಾಗಿ ಜೋಡಿಸಿದ್ದರು. ಇನ್ನೇನು ಬಾಟಲಿಗಳನ್ನು ನಾಶ ಪಡಿಸಬೇಕು ಎನ್ನುವ ವೇಳೆಗೆ ಅಲ್ಲಿಯ ಸುತ್ತಮುತ್ತಲಿನ ಮದ್ಯಪ್ರಿಯರ ಗುಂಪು ಧಾವಿಸಿ ಬಾಟಲಿಗಳನ್ನು ದೋಚಲು ಶುರು ಮಾಡಿದ್ದಾರೆ. ಈ ಎಲ್ಲಾ ಘಟನೆ ಪೊಲೀಸರು ಮತ್ತು ಅಧಿಕಾರಿಗಳ ಮುಂದೇಯೇ ನಡೆದಿದೆ. ಆದರೂ ಪೊಲೀಸರು ಸುಮ್ಮನಿದ್ದರು. ಈ ಸಂಬಂಧ ವಿಡಿಯೋವೊಂದು ವೈರಲ್ ಆಗಿದೆ.

ಈ ಹಿಂದೆ ಆಂಧ್ರ ಪ್ರದೇಶದ ಎನ್‌ಟಿಆರ್ ಜಿಲ್ಲೆಯ ನಂದಿಗ್ರಾಮದಲ್ಲಿ  ಬರೋಬ್ಬರಿ 5.47 ಕೋಟಿ ರೂಪಾಯಿ ಮೌಲ್ಯದ ಮದ್ಯವನ್ನು ನಾಶ ಮಾಡಲಾಗಿತ್ತು. ತೆಲಂಗಾಣದಿಂದ(Telanagana) ಆಂಧ್ರ ಪ್ರದೇಶಕ್ಕೆ(Andhra Pradesh) ಅಕ್ರಮವಾಗಿ ಸಾಗಿಸಲಾಗುತ್ತಿದ್ದ ಮದ್ಯವನ್ನು ನಿರಂತರವಾಗಿ ವಶಪಡಿಸಿಕೊಳ್ಳುತ್ತಾರೆ. ಹೀಗೆ ವಶಪಡಿಸಿಕೊಂಡ ಮದ್ಯ ಬಾಟೆಲ್‌ಗಳ ಸಂಖ್ಯೆ 2.43 ಲಕ್ಷಕ್ಕೆ ಏರಿಕೆಯಾಗಿತ್ತು. ಹಾಗಾಗಿ ಅಧಿಕಾರಿಗಳು  2.43 ಲಕ್ಷ ಬಾಟೆಲ್‌ಗಳ ಮೇಲೆ ರೋಲರ್ ಹರಿಸುವ ಮೂಲಕ ನಾಶಗೊಳಿಸಲಾಗಿತ್ತು. 

Viral Video: ಮದ್ಯದಂಗಡಿ ಗೋಡೆ ಕೊರೆದು ಒಳ ನುಗ್ಗಿದ ಕಳ್ಳರು: ಕಂಠಪೂರ್ತಿ ಕುಡಿದು ಸಿಕ್ಕಿಬಿದ್ದರು 

Latest Videos
Follow Us:
Download App:
  • android
  • ios