ವಲ್ಸಾದ್ ಮತ್ತು ಸೂರತ್ ಮಾರ್ಗವಾಗಿ ಪ್ರಯಾಣಿಸುವ ಪ್ರಯಾಣಿಕರು ತಮ್ಮ ರೈಲಿನ ಬಗ್ಗೆ ಖಚಿತ ಮಾಹಿತಿ ಪಡೆದುಕೊಳ್ಳಬೇಕು ಎಂದು ರೈಲ್ವೆ ಇಲಾಖೆ ಮಾಹಿತಿ ನೀಡಿದೆ.
ಅಹಮದಾಬಾದ್: ಗುಜರಾತಿನ ವಲ್ಸಾದ್ ಮತ್ತು ಸೂರತ್ ನಿಲ್ದಾಣಗಳ ನಡುವೆ ಗೂಡ್ಸ್ ರೈಲಿನ ಬೋಗಿ ಹಳಿ ತಪ್ಪಿದೆ. ಗೂಡ್ಸ್ ರೈಲು ಆಗಿರುವ ಕಾರಣ ಯಾವುದೇ ಸಾವು-ನೋವು ಸಂಭವಿಸಿಲ್ಲ. ಆದ್ರೆ ಈ ಮಾರ್ಗದ ರೈಲುಗಳ ಸಂಚಾರದಲ್ಲಿ ಭಾರಿ ವ್ಯತ್ಯಯ ಉಂಟಾಗಿದೆ ಎಂದು ಪಶ್ಚಿಮ ರೈಲ್ವೆಯ ಹಿರಿಯ ಅಧಿಕಾರಿ ಮಾಹಿತಿ ನೀಡಿದ್ದಾರೆ. ಈ ಗೂಡ್ಸ್ ರೈಲು ಸೂರತ್‌ಗೆ ತೆರಳುತ್ತಿದ್ದ ಸಂದರ್ಭದಲ್ಲಿ ಶುಕ್ರವಾರ (ಜುಲೈ 19) ಮಧ್ಯಾಹ್ನ ಸುಮಾರು 3ರ ವೇಳೆ ಡುಂಗ್ರಿ ನಿಲ್ದಾಣದ ಸಮೀಪ ಹಳಿ ತಪ್ಪಿದೆ. ಈ ಅವಘಡಕ್ಕೆ ನಿಖರ ಕಾರಣ ತಿಳಿದು ಬಂದಿಲ್ಲ. ವಲ್ಸಾದ್ ಮತ್ತು ಸೂರತ್ ಮಾರ್ಗವಾಗಿ ಪ್ರಯಾಣಿಸುವ ಪ್ರಯಾಣಿಕರು ತಮ್ಮ ರೈಲಿನ ಬಗ್ಗೆ ಖಚಿತ ಮಾಹಿತಿ ಪಡೆದುಕೊಳ್ಳಬೇಕು ಎಂದು ರೈಲ್ವೆ ಇಲಾಖೆ ಮಾಹಿತಿ ನೀಡಿದೆ.
ಮತ್ತೊಂದೆಡೆ ಘಟನಾ ಸ್ಥಳಕ್ಕೆ ರೈಲ್ವೆ ಅಧಿಕಾರಿಗಳು ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ. ತುಂತುರು ಮಳೆಯ ನಡುವೆಯೇ ಸಿಬ್ಬಂದಿ ವ್ಯಾಗನ್ ಮೇಲೆಕ್ಕೆತ್ತುವ ಕಾರ್ಯಚರಣೆಯನ್ನು ನಡೆಸುತ್ತಿದ್ದಾರೆ. ಶೀಘ್ರದಲ್ಲಿ ಹಳಿಗಳ ಮರು ಜೋಡಣೆಯಾಗಲಿದ್ದು, ಸಂಚಾರ ಆರಂಭವಾಗಲಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಮುಂಬೈ-ಅಹಮದಾಬಾದ್ ಟ್ರಂಕ್ ಮಾರ್ಗದಲ್ಲಿ ರೈಲೊಂದು ಹಳಿ ತಪ್ಪಿದ್ದು, ಈ ಪ್ರಮುಖ ರೈಲ್ವೇ ಕಾರಿಡಾರ್‌ನಲ್ಲಿ ಸಂಚಾರಕ್ಕೆ ತೊಂದರೆಯಾಗಿದೆ. ಘಟನೆಯಿಂದ ಯಾವುದೇ ಸಾವುನೋವುಗಳ ವರದಿಯಾಗಿಲ್ಲ ಎಂದು ಅಧಿಕಾರಿ ಖಚಿತಪಡಿಸಿದ್ದಾರೆ.
ಒಡಿಶಾ ರೈಲು ದುರಂತದ ಬಳಿಕ ಮತ್ತೊಂದು ಅವಘಡ: 2 ರೈಲುಗಳು ಪರಸ್ಪರ ಡಿಕ್ಕಿ; ಹಳಿ ತಪ್ಪಿದ 12 ಬೋಗಿಗಳು!
ಕೇಂದ್ರ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ಸಭೆ
ಕಳೆದ ಕೆಲ ದಿನಗಳಿಂದ ದೇಶದಲ್ಲಿ ವಿವಿಧ ಭಾಗದಲ್ಲಿ ರೈಲು ಅವಘಡಗಳು ಸಂಭವಿಸುತ್ತಿವೆ. ಈ ಹಿನ್ನೆಲೆ ಕೇಂದ್ರ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ , ರೈಲ್ವೆ ಪ್ರಧಾನ ಕಚೇರಿಯಲ್ಲಿ ಹಿರಿಯ ಅಧಿಕಾರಿಗಳು ಹಾಗೂ ತಂತ್ರಜ್ಞರ ಜೊತೆ ಶುಕ್ರವಾರ ಸುದೀರ್ಘವಾದ ಸಭೆ ನಡೆಸಿದ್ದಾರೆ. ಸಭೆ ನಡೆಯುತ್ತಿರುವ ಸಂದರ್ಭದಲ್ಲಿಯೇ ವಾಲ್ಸದ್ ಬಳಿ ಗೂಡ್ಸ್ ರೈಲು ಹಳಿ ತಪ್ಪಿದೆ. ಸಾಲು ಸಾಲು ಅಪಘಾತಗಳನ್ನು ಗಮನಿಸುತ್ತಿದ್ದರೆ, ರೈಲ್ವೇ ಮೂಲಸೌಕರ್ಯ ಮತ್ತು ಸುರಕ್ಷತಾ ಕ್ರಮಗಳ ಬಗ್ಗೆ ಕ್ರಮ ತೆಗೆದುಕೊಳ್ಳಬೇಕು ಎಂದು ಪ್ರಯಾಣಿಕರು ಆಗ್ರಹಿಸಿದ್ದಾರೆ.
ಭಾರತದಲ್ಲಿ ರೈಲು ಪ್ರಯಾಣದ ಮೇಲೆ ಹೆಚ್ಚಿನ ಜನರು ಅವಲಂಬಿತರಾಗಿದ್ದಾರೆ. ಅದರಲ್ಲಿಯೂ ದೂರದ ಪ್ರಯಾಣಕ್ಕೆ ಬಹುತೇಕರ ಮೊದಲ ಆಯ್ಕೆ ಭಾರತೀಯ ರೈಲ್ವೆಯಾಗಿದೆ. ಹಾಗಾಗಿ ರೈಲುಗಳ ಸಂಚಾರ ಸುಗಮವಾಗಿರಬೇಕು. ರೈಲ್ವೆ ಸುರಕ್ಷತೆ ಮತ್ತು ಮೂಲಸೌಕರ್ಯದಲ್ಲಿ ನಿರಂತರ ಜಾಗರೂಕತೆ ಮತ್ತು ಸುಧಾರಣೆಯ ಅಗತ್ಯವಿದೆ ಎಂದು ಪ್ರಯಾಣಿಕರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
ಹಲವು ರೈಲುಗಳ ಸಂಚಾರ ರದ್ದು
ನಗರದ ದಂಡು-ಕೆಎಸ್ಆರ್ ಬೆಂಗಳೂರು ಭಾಗದ ಮಧ್ಯದಲ್ಲಿರುವ ಸೇತುವೆಯ ವಿವಿಧ ಕಾಮಗಾರಿ ಹಿನ್ನೆಲೆಯಲ್ಲಿ ಹಲವು ರೈಲುಗಳ ಸಂಚಾರ ರದ್ದು ಮಾಡಿರುವುದಾಗಿ ನೈಋತ್ಯ ರೈಲ್ವೆ ತಿಳಿಸಿದೆ.
10 ಜನರ ಬಲಿ ಪಡೆದ ರೈಲು ಅವಘಡ ನಡೆದು ಸರಿಯಾಗಿ ಒಂದು ತಿಂಗಳಿಗೆ ಮತ್ತೊಂದು ರೈಲು ದುರಂತ
ಜುಲೈ 30, ಆಗಸ್ಟ್ 6 ಮತ್ತು 13ರಂದು ಕೆಎಸ್ಆರ್ ಬೆಂಗಳೂರು-ಡಾ। ಎಂಜಿಆರ್ ಚೆನ್ನೈ ಸೆಂಟ್ರಲ್ ಡೈಲಿ ಸೂಪರ್ ಫಾಸ್ಟ್ ಎಕ್ಸ್‌ಪ್ರೆಸ್ (12658) ಮತ್ತು ಜುಲೈ 31, ಆಗಸ್ಟ್ 7 ಮತ್ತು 14 ರಂದು ಡಾ। ಎಂಜಿಆರ್ ಚೆನ್ನೈ ಸೆಂಟ್ರಲ್-ಕೆಎಸ್ಆರ್ ಬೆಂಗಳೂರು ಡೈಲಿ ಸೂಪರ್ ಫಾಸ್ಟ್ ಎಕ್ಸ್‌ಪ್ರೆಸ್ (12657) ರೈಲುಗಳ ಸಂಚಾರ ರದ್ದಾಗಲಿದೆ.
