ನವದೆಹಲಿ[ಡಿ.17]: ನಿರ್ಭಯಾ ಪ್ರಕರಣದ ನಾಲ್ವರು ದೋಷಿಗಳ ಪೈಕಿ ಒಬ್ಬನಾದ ಅಕ್ಷಯ್‌ ಕುಮಾರ್‌ ಸಿಂಗ್‌, ಗಲ್ಲು ಶಿಕ್ಷೆ ಪ್ರಶ್ನಿಸಿ ಸಲ್ಲಿಸಿರುವ ಪುನರ್‌ ಪರಿಶೀಲನಾ ಅರ್ಜಿಯನ್ನು ವಿಚಾರಣೆಯಿಂದ CJI ಬೋಬ್ಡೆ ಹಿಂದೆ ಸರಿದಿದ್ದಾರೆ. ಅಲ್ಲದೇ ಸುಪ್ರೀಂಕೋರ್ಟ್‌ ತ್ರಿಸದಸ್ಯ ಪೀಠ ಈ ಅರ್ಜಿ ವಿಚಾರಣೆಯನ್ನು ಹೊಸ ಪೀಠಕ್ಕೆ ವರ್ಗಾಯಿಸಿದೆ.

"

ದೆಹಲಿಯಲ್ಲಿ ಈಗಾಗಲೇ ವಾಯು ಮತ್ತು ನೀರಿನ ಮಾಲಿನ್ಯದಿಂದಾಗಿ ಆಯುಷ್ಯ ಕಡಿಮೆಯಾಗಿದೆ. ಹೀಗಿರುವಾಗ ಗಲ್ಲು ಶಿಕ್ಷೆ ಏಕೆ ಎಂಬ ಕ್ಷುಲ್ಲಕ ಕಾರಣ ನೀಡಿ ಅಕ್ಷಯ್‌ಸಿಂಗ್‌ ಅರ್ಜಿ ಸಲ್ಲಿಸಿದ್ದ. ಈ ಪರಿಶೀಲನಾ ಅರ್ಜಿಯ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಎಸ್‌. ಎ.ಬೋಬ್ಡೆ ನೇತೃತ್ವದ ತ್ರಿಸದಸ್ಯ ಪೀಠ ಹೊಸ ಪೀಠಕ್ಕೆ ವರ್ಗಾಯಿಸಿದೆ.

ವೈಯುಕ್ತಿಕ ಕಾರಣಗಳಿಂದ ತಾನು ಈ ವಿಚಾರಣೆಯಿಂದ ಹಿಂದೆ ಸರಿಯುತ್ತಿರುವುದಾಗಿ ಸಿಜೆಐ ಶರತ್ ಅರವಿಂದ್ ಬೋಬ್ಡೆ ತಿಳಿಸಿದ್ದಾರೆ. ನಾಳೆ, ಬುಧವಾರ ಹೊಸ ಪೀಠ ರಚಿಸಿ ಈ ಪ್ರಕರಣವನ್ನು ಹಸ್ತಾಂತರಿಸಲಿದೆ. ಬೋಬ್ಡೆ ಸಂಬಂಧಿ ನಿರ್ಭಯಾ ಪರ ವಾದ ನಡೆಸುತ್ತಿರುದರಿಂದ ಅವರು ಈ ವಿಚಾರಣೆಯಿಂದ ಹಿಂದೆ ಸರಿಯಲು ಕಾರಣ ಎಂಬ ಮಾತುಗಳು ಕೇಳಿ ಬಂದಿವೆ.

ನಿರ್ಭಯಾ ಹತ್ಯಾಚಾರಿಗಳ ಗಲ್ಲು ಮುಂದಕ್ಕೆ: ಡಿ. 18ಕ್ಕೆ ಅರ್ಜಿ ವಿಚಾರಣೆ!

ಮುಂದೇನು?

ಇನ್ನು ಹೊಸ ಪೀಠಕ್ಕೆ ವಿಚಾರಣೆ ಹಸ್ತಾಂತರಿಸಿರುವುದರಿಂದ, ಪ್ರಕರಣದ ನಾಲ್ವರೂ ದೋಷಿಗಳು ನೇಣುಗಂಬ ಏರುವುದು ಇನ್ನಷ್ಟು ವಿಳಂಬವಾಗುವ ಸಾಧ್ಯತೆ ಇದೆ. ಹೊಸ ಪೀಠದಲ್ಲೂ ಅರ್ಜಿ ತಿರಸ್ಕೃತವಾದರೆ ಅಕ್ಷಯ್‌ಗೆ ಕ್ಯುರೇಟಿವ್‌ ಅರ್ಜಿ ಸಲ್ಲಿಸುವ ಅವಕಾಶ ಇದ್ದೇ ಇದೆ. ಒಂದು ವೇಳೆ ಮತ್ತೆ ಸಲ್ಲಿಸಿದ ಕೋರ್ಟ್‌ ತಳ್ಳಿಹಾಕಿದರೆ ಆಗ ಜೈಲು ಅಧಿಕಾರಿಗಳು ಡೆತ್‌ವಾರಂಟ್‌ಗೆ ಅನುಮತಿ ಕೋರಿ ಸ್ಥಳೀಯ ನ್ಯಾಯಾಲಯದ ಮೊರೆ ಹೋಗಲು ಅವಕಾಶ ಸಿಗುತ್ತದೆ.

ನಿರ್ಭಯಾ ರೇಪಿಸ್ಟ್‌ಗಳನ್ನು ನಾನು ಗಲ್ಲೆಗೇರಿಸ್ತೀನಿ: ರಕ್ತದಲ್ಲೇ ಪತ್ರ ಬರೆದ ಅಂತಾರಾಷ್ಟ್ರೀಯ ಶೂಟರ್!

ಈ ನಡುವೆ ದೋಷಿಗಳ ವಿರುದ್ಧ ಡೆತ್‌ ವಾರಂಟ್‌ ಜಾರಿ ಮಾಡಬೇಕು ಎಂದು ಕೋರಿ ನಿರ್ಭಯಾ ಪೋಷಕರು ಸಲ್ಲಿಸಿರುವ ಅರ್ಜಿಯನ್ನು ಸುಪ್ರೀಂಕೋರ್ಟ್‌ ಬುಧವಾರ ವಿಚಾರಣೆ ನಡೆಸಲಿದ್ದು, ಅಂದು ಬರುವ ತೀರ್ಪಿನಿಂದ ಗಲ್ಲು ಶಿಕ್ಷೆಯ ದಿನಾಂಕ ತಿಳಿಯಲಿದೆ. ಆದರೀಗ ಅಕ್ಷಯ್ ಸಲ್ಲಿಸಿರುವ ಪುನರ್ ಪರಿಶೀಲನಾ ಅರ್ಜಿ ವಿಚಾರಣೆ ಹೊಸ ಪೀಠಕ್ಕೆ ವರ್ಗಾವಣೆಯಾಗಿರುವುದರಿಂದ ಈ ತೀರ್ಪು ಬರುವುದೂ ವಿಳಂಬವಾಗಲಿದೆ.

ನಿರ್ಭಯಾ ದೋಷಿಗಳಿಗೆ ಸಾವಿನ ಭೀತೀಲಿ ಖಿನ್ನತೆ, ಆಹಾರ ಸೇವನೆ ಇಳಿಕೆ

ಗಲ್ಲು ಶಿಕ್ಷೆಗೆ ತಿಹಾರ್ ನಲ್ಲಿ ತಯಾರಿ

ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದ್ದ ದೆಹಲಿ ನಿರ್ಭಯಾ ಅತ್ಯಾಚಾರ ಪ್ರಕರಣದ ದೋಷಿಗಳ ಗಲ್ಲುಶಿಕ್ಷೆಗೆ ದಿನಗಣನೆ ಆರಂಭವಾಗಿದೆ. ಹೈದರಾಬಾದ್ ಎನ್ ಕೌಂಟರ್ ಪ್ರಕರಣದ ಬಳಿಕ ನಿರ್ಭಯಾ ಅತ್ಯಾಚಾರಿಗಳಿಗೆ ಗಲ್ಲು ಶಿಕ್ಷೆ ವಿಧಿಸಬೇಕೆಂಬ ಕೂಗು ಮತ್ತೆ ಜೋರಾಗಿತ್ತು. ಹೀಗಿರುವಾಗ ಡಿಸೆಂಬರ್ 16ರಂದು ಅಪರಾಧಿಗಳಿಗೆ ಗಲ್ಲು ಶಿಕ್ಷೆ ಆಗಲಿದೆ ಎಂಬ ಮಾತುಗಳು ಕೇಳಿ ಬಂದಿದ್ದವು. ಹೀಗಿರುವಾಗಲೇ ತಿಹಾರ್ ಜೈಲಿನಲ್ಲಿ ಗಲ್ಲು ಶಿಕ್ಷೆ ನೀಡುವ ಕೊಠಡಿ ಸ್ವಚ್ಛತೆ ಕೆಲಸ ಆರಂಭವಾಗಿದ್ದು, ಗಲ್ಲಿಗೇರಿಸುವ ಹಗ್ಗ ತಯಾರು ಮಾಡುವಂತೆ ತಿಹಾರ್ ಜೈಲು ಸಿಬ್ಬಂದಿ, ಬಕ್ಸಾರ್ ಸಿಬ್ಬಂದಿಗೆ ಮನವಿ ಮಾಡಿದ್ದೂ ಮಾಧ್ಯಮಗಳಲ್ಲಿ ವರದಿಯಾಗಿತ್ತು.

ನಾನು 'ನಿರ್ಭಯ': ಅತ್ಯಾಚಾರಿಗಳ ಕತ್ತಿಗೆ ಹಗ್ಗ ಹಾಕುವೆನೆಂದ ಪೇದೆ!

ಓರ್ವ ಅಪರಾಧಿ ಸಾವು

ನಿರ್ಭಯಾ ಸಾಮೂಹಿಕ ಅತ್ಯಾಚಾರದ 6 ಆರೋಪಿಗಳಲ್ಲಿ ಓರ್ವ 2013ರಲ್ಲೇ ತಿಹಾರ್ ಜೈಲಿನಲ್ಲಿ ಸಾವನ್ನಪ್ಪಿದ್ದಾನೆ. ಮತ್ತೊಬ್ಬ ದೋಷಿ ಈ ಕೃತ್ಯ ನಡೆದ ವೇಳೆ ಅಪ್ತಾಪ್ತನಾಗಿದ್ದರಿಂದ ಮೂರು ವರ್ಷಗಳ ಜೈಲು ಶಿಕ್ಷೆ ಅನುಭವಿಸಿ ಬಿಡುಗಡೆಗೊಂಡಿದ್ದಾನೆ. 

ಡಿಸೆಂಬರ್ 17ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ