ರಾಮ ಮಂದಿರ ಪ್ರಾಣಪ್ರತಿಷ್ಠೆ ಕುರಿತು ಭಾರಿ ರಾಜಕೀಯ ನಡೆಯುತ್ತಿದೆ. ಬಿಜೆಪಿ ಪೂರ್ಣಗೊಳ್ಳದ ರಾಮ ಮಂದಿರವನ್ನು ಲೋಕಸಭೆ ಚುನಾವಣೆಗಾಗಿ ಉದ್ಘಾಟನೆ ಮಾಡಲಾಗುತ್ತಿದೆ ಅನ್ನೋದು ಕಾಂಗ್ರೆಸ್ ಸೇರಿದಂತೆ ವಿಪಕ್ಷಗಳ ಆರೋಪ. ಆದರೆ ಈ ಆರೋಪಕ್ಕೆ ಆಯೋಧ್ಯೆ ಅರ್ಚಕ ಸೋಮನಾಥ ಮಂದಿರ ಉದ್ಘಾಟನೆ ಇತಿಹಾಸ ಬಿಚ್ಚಿಟ್ಟು ತಿರುಗೇಟು ನೀಡಿದ್ದಾರೆ
ಅಯೋಧ್ಯೆ(ಜ.15) ರಾಮ ಮಂದಿರ ಪ್ರಾಣಪ್ರತಿಷ್ಠೆಗೆ ಇನ್ನೊಂದೇ ವಾರ ಬಾಕಿ. ಜನವರಿ 16ರಿಂದ ರಾಮ ಮಂದಿರದಲ್ಲಿ ಪೂಜಾ ಕೈಂಕರ್ಯಗಳು ಆರಂಭಗೊಳ್ಳುತ್ತಿದೆ. ಆದರೆ ರಾಮ ಮಂದಿರ ಉದ್ಘಾಟನೆ ರಾಜಕೀಯವಾಗಿ ವಿವಾದ ಚರ್ಚೆಗೂ ಗ್ರಾಸವಾಗಿದೆ. ರಾಮ ಮಂದಿರವನ್ನು ಬಿಜೆಪಿ ರಾಜಕೀಯವಾಗಿ ಬಳಸಿಕೊಳ್ಳುತ್ತಿದೆ ಅನ್ನೋದು ವಿಪಕ್ಷಗಳ ಆರೋಪ. ಇಷ್ಟೇ ಅಲ್ಲ ಅಪೂರ್ಣ ಮಂದಿರವನ್ನು ಬಿಜೆಪಿ ತರಾತುರಿಯಲ್ಲಿ ಉದ್ಘಾಟನೆ ಮಾಡುತ್ತಿದೆ. ಲೋಕಸಭೆ ಚುನಾವಣೆ ದೃಷ್ಟಿಯಿಂದ ಪೂರ್ಣಗೊಳ್ಳದ ದೇವಸ್ಥಾನ ಉದ್ಘಾಟನೆ ಮಾಡಲಾಗುತ್ತಿದೆ ಅನ್ನೋದು ಪ್ರಮುಖ ಆರೋಪ. ಆದರೆ ಈ ಆರೋಪಕ್ಕೆ ಆಯೋಧ್ಯೆ ಅರ್ಚಕ, ಸರಯೂ ಮಹಾ ಆರತಿ ಅಧ್ಯಕ್ಷ ಮಹಾಂತ ದಾಸ್ ಮಹರಾಜ್ ತಿರುಗೇಟು ನೀಡಿದ್ದಾರೆ. ಕಾಂಗ್ರೆಸ್ ಆಡಳಿತದಲ್ಲಿ ನವೀಕರಣಗೊಂಡು ಪ್ರಾಣಪ್ರತಿಷ್ಠೆಗೊಂಡ ಸೋಮನಾಥ ಮಂದಿರದ ಇತಿಹಾಸ ಕೆದಕಿ ತಿರುಗೇಟು ನೀಡಿದ್ದಾರೆ.
ಜನರು ಸುಳ್ಳು ಮಾಹಿತಿಗಳನ್ನು ಹರಡುತ್ತಿದ್ದಾರೆ. ಪ್ರಾಣಪ್ರತಿಷ್ಠೆ ಕುರಿತು ಅಪಪ್ರಚಾರ ಮಾಡಲಾಗುತ್ತಿದೆ. ರಾಮ ಮಂದಿರ ಪ್ರಾಣಪ್ರತಿಷ್ಠೆಗೆ ರಾಮ ಮಂದಿರದ ಗರ್ಭಗುಡಿ, ಶಿಖರ ಸಂಪೂರ್ಣ ನಿರ್ಮಾಣಗೊಂಡಿದೆ. ರಾಮ ಮಂದಿರದ ನೆಲಮಹಡಿ ಸಂಪೂರ್ಣ ಪೂರ್ಣಗೊಂಡಿದೆ. ಮೂರ್ತಿ ಪ್ರಾಣಪ್ರತಿಷ್ಠೆಗೆ ಗರ್ಭಗುಡಿ ಹಾಗೂ ಗರ್ಭಗುಡಿ ಶಿಖರ್ ಪ್ರಮುಖ. ಈ ಎಲ್ಲಾ ಕೆಲಸಗಳು ಪೂರ್ಣಗೊಂಡಿದೆ. ಸೋಮನಾಥ ಮಂದಿರವನ್ನು ಅಂದಿನ ಗೃಹ ಸಚಿವ ಸರ್ದಾರ್ ವಲ್ಲಬಾಯ್ ಪಟೇಲ್ ನವೀಕರಣ ಮಾಡಿದ್ದರು. ಸೋಮನಾಥ ದೇವಸ್ಥಾನದ ಪ್ರಾಣಪ್ರತಿಷ್ಠ ವೇಳೆ ಗರ್ಭಗುಡಿ, ಶಿಖರ್ ಯಾವುದೂ ಪೂರ್ಣಗೊಂಡಿರಲಿಲ್ಲ ಎಂದು ಮಹಾಂತ ದಾಸ್ ಮಹರಾಜ್ ಹೇಳಿದ್ದಾರೆ.
ರಾಮ ಮಂದಿರ ಆವರಣದಲ್ಲಿ ಕಾಂಗ್ರೆಸ್ ಧ್ವಜ ಹಾರಿಸುವ ಯತ್ನ, ಕಿತ್ತೆಸೆದ ಜನರ ಗುಂಪು!
ಶ್ರೀರಾಮ ಮಂದಿರ ನಿರ್ಮಾಣದಲ್ಲಿ ಕರಸೇವಕರು, ಸಾಧು ಸಂತರು, ಅಸಂಖ್ಯಾತ ರಾಮ ಭಕ್ತರ ಕೊಡುಗೆ ಅಪಾರ. ಪ್ರಧಾನಿ ನರೇಂದ್ರ ಮೋದಿ ಇಲ್ಲದಿದ್ದರೆ, ಶ್ರೀರಾಮ ಮಂದಿರ ನಿರ್ಮಾಣವಾಗುತ್ತಿರಲಿಲ್ಲ ಎಂದು ಮಹಾಂತ ದಾಸ್ ಮಹರಾಜ್ ಹೇಳಿದ್ದಾರೆ. ಅಪೂರ್ಣ ಮಂದಿರ ಇದಲ್ಲ, ಪ್ರಾಣಪ್ರತಿಷ್ಠೆಗೆ ಗರ್ಭಗಡಿ ಮುಖ್ಯ ಎಂದಿದ್ದಾರೆ.
ವಿಪಕ್ಷ ಸೇರಿದಂತೆ ಶಂಕರಾಚಾರ್ಯ ಪೀಠದ ಸ್ವಾಮೀಜಿಗಳು ಅಪೂರ್ಣ ಮಂದಿರ ಆರೋಪ ಬಾರಿ ಕೋಲಾಹಲಕ್ಕೆ ಕಾರಣವಾಗಿತ್ತು. ಇದೇ ವಿಚಾರವನ್ನು ಕಾಂಗ್ರೆಸ್ ಸೇರಿದಂತೆ ವಿಪಕ್ಷಗಳು ಹಿಡಿದು ಬಿಜೆಪಿಯನ್ನು ತೀವ್ರವಾಗಿ ವಿರೋಧಿಸಿದೆ.
ಭವ್ಯ ರಾಮಮಂದಿರಕ್ಕೆ ಕನ್ನಡಿಗ ಅರುಣ್ ಯೋಗಿರಾಜ್ ಕೆತ್ತನೆಯ ಬಾಲರಾಮನ ಮೂರ್ತಿ ಅಧಿಕೃತ ಆಯ್ಕೆ!
