Asianet Suvarna News Asianet Suvarna News

ಜಗನ್ ಮರ್ಯಾದೆ ಉಳಿಸಿದ ಆಂಧ್ರ ಸಿಎಂ ಚಂದ್ರಬಾಬು ನಾಯ್ಡು

ಅಧಿವೇಶನದಲ್ಲಿ ಮಾಜಿ ಸಿಎಂ, ವೈಎಸ್‌ಆರ್‌ಸಿಪಿ (Yuvajana Sramika Rythu Congress Party) ನಾಯಕ ಜಗನ್‌ಮೋಹನ್ ರೆಡ್ಡಿ (YS Jagan Mohan Reddy) ಅವರ ಮರ್ಯಾದೆಯನ್ನು ಕಾಪಾಡಿದರು ಎಂದು ಟಿಡಿಪಿ ನಾಯಕ ಪೈಯಾವುಲ ಕೇಶವ್ ಹೇಳಿದ್ದಾರೆ. 

andhra pradesh cm chandrababu naidu gave respect ysrcp chief ys jagan Mohan Reddy mrq
Author
First Published Jun 22, 2024, 7:41 PM IST | Last Updated Jun 22, 2024, 7:41 PM IST

ಅಮರಾವತಿ:ಆಂಧ್ರಪ್ರದೇಶದಲ್ಲಿ ಎನ್‌ ಚಂದ್ರಬಾಬು ನಾಯ್ಡು ನೇತೃತ್ವದ ಸರ್ಕಾರ ಕಾರ್ಯರೂಪಕ್ಕೆ ಬಂದಿದ್ದು, ತನ್ನ ಕೆಲಸವನ್ನು ಆರಂಭಿಸಿದೆ. ಅಧಿವೇಶನದ ಮೊದಲ ದಿನ ಸ್ಪೀಕರ್ ಗೋರಂಟ್ಲ ಬುಚ್ಚಯ್ಯ ಚೌಧರಿ  ಅವರು ಎಲ್ಲಾ ನೂತನ ಶಾಸಕರಿಗೆ ಪ್ರಮಾಣವಚನ ಬೋಧಿಸಿದರು. ಶಾಸಕರ ಪ್ರದಗ್ರಹಣ ವೇಳೆ ಆಂಧ್ರಪ್ರದೇಶದ ನೂತನ ಸಿಎಂ ಚಂದ್ರಬಾಬು ನಾಯ್ಡು (CM Chandrababu Naidu) ಅವರು ಅಧಿವೇಶನದಲ್ಲಿ ಮಾಜಿ ಸಿಎಂ, ವೈಎಸ್‌ಆರ್‌ಸಿಪಿ (Yuvajana Sramika Rythu Congress Party) ನಾಯಕ ಜಗನ್‌ಮೋಹನ್ ರೆಡ್ಡಿ (YS Jagan Mohan Reddy) ಅವರ ಮರ್ಯಾದೆಯನ್ನು ಕಾಪಾಡಿದರು ಎಂದು ಟಿಡಿಪಿ ನಾಯಕ ಪೈಯಾವುಲ ಕೇಶವ್ ಹೇಳಿದ್ದಾರೆ. 

ಈ ಹಿಂದಿನ ಅಧಿವೇಶನ ವೈಎಸ್‌ಆರ್‌ಸಿಪಿ ಶಾಸಕರಿಂದ ತುಂಬಿತ್ತು. ರಾಜಕೀಯ ಸನ್ನಿವೇಶ ಸಂಪೂರ್ಣ ಬದಲಾಗಿದ್ದು, ಟಿಡಿಪಿ ಶಾಸಕರ ಸಂಖ್ಯೆ ಹೆಚ್ಚಾಗಿತ್ತು. ಟಿಡಿಪಿ ಎಲ್ಲಾ ಶಾಸಕರು ಹಳದಿ ಶಾಲು ಧರಿಸಿದ್ದ ಕಾರಣ ಇಡೀ ಸದನ ಹಳದಿಮಯವಾಗಿತ್ತು. ಈ ಬಾರಿ ಚುನಾವಣೆಯಲ್ಲಿ ಟಿಡಿಪಿ ಅಭೂತಪೂರ್ವ ಗೆಲುವನ್ನು ದಾಖಲಿಸಿದ್ದು, 175ರಲ್ಲಿ 135 ಕ್ಷೇತ್ರಗಳನ್ನು ಗೆದ್ದುಕೊಂಡಿದೆ. ಜಗನ್ಮೋಹನ್ ರೆಡ್ಡಿ ನೇತೃತ್ವವದ ವೈಎಸ್‌ಆರ್‌ಸಿಪಿ ಕೇವಲ 11ರಲ್ಲಿ ಮಾತ್ರ ಜಯ ಸಾಧಿಸಿದೆ. ಹಾಗಾಗಿ ವಿರೋಧ ಪಕ್ಷದ ನಾಯಕನ ಸ್ಥಾನಕ್ಕೂ ವೈಎಸ್‌ಆರ್‌ಸಿಪಿಗೆ ಸಿಕ್ಕಿಲ್ಲ. ಕಳೆದ ಅಧಿವೇಶನ ನೋಡಿದ್ದ ಜನರು ಈ ಬಾರಿ ಪದಗ್ರಹಣ ಸಮಯದಲ್ಲಿ ಟಿಡಿಪಿ ನಾಯಕರು ಜಗನ್‌ಮೋಹನ್ ರೆಡ್ಡಿ ಅವರನ್ನು ಅವಮಾನಿಸಬಹುದು ಅಥವಾ ಪರೋಕ್ಷವಾಗಿ ಕಾಲೆಳೆಯಬಹುದು ಎಂದು ಅಂದುಕೊಂಡಿದ್ದರು. 

ಬಿಹಾರದಲ್ಲಿ ಮತ್ತೊಂದು ಸೇತುವೆ ಕುಸಿತ; ಇನ್ಮುಂದೆ ವಾರಕ್ಕೊಂದು ಬ್ರಿಡ್ಜ್ ಬೀಳುತ್ತಾ ಅಂತ ಕೇಳಿದ ಆರ್‌ಜೆಡಿ

ಆದ್ರೆ ಅಧಿವೇಶನದ ಪದಗ್ರಹಣ ಸಮಯದಲ್ಲಿ ಇದ್ಯಾವುದೂ ಆಗಿಲ್ಲ. ಅಧಿವೇಶನಕ್ಕೆ ಆಗಮಿಸಿದ್ದ ಜಗನ್‌ಮೋಹನ್ ರೆಡ್ಡಿ ಬಂದು ಪದಗ್ರಹಣ ಸ್ವೀಕರಿಸಿ ಅಲ್ಲಿಂದ ತೆರಳಿದರು. ಅಧಿವೇಶನದ ನಿಯಮಗಳನ್ನು ಎಲ್ಲಾ ಜನಪ್ರತಿನಿಧಿಗಳು ಅನುಸರಿಸಬೇಕು. ಆದ್ರೆ ಜಗನ್‌ಮೋಹನ್ ರೆಡ್ಡಿಗಾಗಿ ಕೆಲ ನಿಯಮಗಳನ್ನು ಸಿಎಂ ಚಂದ್ರಬಾಬು ನಾಯ್ಡು ಉಲ್ಲಂಘಿಸಿದರಂತೆ. ಇದರಿಂದ ಜಗನ್‌ಮೋಹನ್ ರೆಡ್ಡಿ ಮುಜಗರಕ್ಕೊಳಗಾಗೋದು ತಪ್ಪಿೆ ಎಂದು ಟಿಡಿಪಿ ನಾಯಕರು ಹೇಳುತ್ತಾರೆ.

ಯಾವ ನಿಯಮ ಉಲ್ಲಂಘನೆ? 

ಮೊದಲಿಗೆ ಮುಖ್ಯಮಂತ್ರಿಗಳು ನಂತರ ಉಪ ಮುಖ್ಯಮಂತ್ರಿಗಳು ಪ್ರಮಾಣವಚನ ಸ್ವೀಕರಿಸುತ್ತಾರೆ. ಆನಂತರ ಚುನಾಯಿತ ಶಾಸಕರ ಹೆಸರಿನ ಇಂಗ್ಲಿಷ್ ಮೊದಲ ಲೆಟರ್‌ ನಿಂದ (A ನಿಂದ Z) ಕರೆಯಲಾಗುತ್ತದೆ. ಎ ನಿಂದ ಪ್ರಾರಂಭವಾಗಿ ಝಡ್‌ಗೆ ಅಂತ್ಯವಾಗುತ್ತದೆ. ಹೀಗಾಗಿದ್ರೆ ಜಗನ್‌ಮೋಹನ್ ರೆಡ್ಡಿ ಅವರ ಹೆಸರು ಕೊನೆಗೆ ಬರಬೇಕಿತ್ತು. ಅಂದ್ರೆ ಜಗನ್‌ಮೋಹನ್ ರೆಡ್ಡಿ ಅವರ ಹೆಸರಿನ ಮೊದಲು 'ವೈ' ಲೆಟರ್ ಬರುತ್ತದೆ. ಆದರೆ ಶಿಷ್ಠಾಚಾರವನ್ನು ಬದಿಗೊತ್ತಿ ಚಂದ್ರಬಾಬು ನಾಯ್ಡು ಮಾಜಿ ಮುಖ್ಯಮಂತ್ರಿಗಳ ಜೊತೆ ಸಮಯೋಚಿತವಾಗಿ ವರ್ತಿಸಿದ್ದಾರೆ ಎಂದು ಪೈಯಾವುಲ ಕೇಶವ್ ಹೇಳಿದ್ದಾರೆ.

ಆಂಧ್ರದಲ್ಲಿ ಜಗನ್ ಪಕ್ಷಕ್ಕೆ ಶಾಕ್‌: ಬೆಳ್ಳಂಬೆಳಗ್ಗೆ ವೈಎಸ್ಆರ್‌ಸಿಪಿ ಪಕ್ಷದ ಕಚೇರಿ ಧ್ವಂಸಗೊಳಿಸಿದ ಸ್ಥಳೀಯಾಡಳಿತ

ಸಿಎಂ ಚಂದ್ರಬಾಬು ನಾಯ್ಡು ಸೂಚನೆ

ಮೊದಲು ಸಿಎಂ ಚಂದ್ರಬಾಬು ನಾಯ್ಡು, ನಂತರ ಪವನ್ ಕಲ್ಯಾಣ್ ಪ್ರಮಾಣವಚನ ಸ್ವೀಕರಿಸಿದರು. ಮೂರನೇಯವದರಾಗಿ ಜಗನ್‌ಮೋಹನ್ ರೆಡ್ಡಿ ಆಗಮಿಸಿ ಶಾಸಕರ ಪ್ರಮಾಣವಚನ ಸ್ವೀಕರಿಸಿದರು. ಜಗನ್‌ಮೋಹನ್ ರೆಡ್ಡಿ ಅವರಿಗಾಗಿ ವಿಧಾನಸಭೆಯ ನಿಯಮಗಳನ್ನು ಸಡಿಸಲಾಗಿತ್ತು. ಚಿಕ್ಕ ಚಿಕ್ಕ ವಿಷಯಗಳಿಗೆ ಗಮನ ಕೊಡಬೇಡಿ. ಮಾಜಿ ಸಿಎಂಗೆ ಕೊಡಬೇಕಾದ ಗೌರವ ಕೊಡಿ ಎಂದು ಸಿಎಂ ಚಂದ್ರಬಾಬು ನಾಯ್ಡು ಸೂಚಿಸಿದ್ರು ಎಂದು ಪೈಯಾವು ಕೇಶವ್ ಹೇಳುತ್ತಾರೆ.

Latest Videos
Follow Us:
Download App:
  • android
  • ios