ಆಯೋಧ್ಯೆಯಲ್ಲಿ ಲ್ಯಾಂಡಿಂಗ್ ಬೆನ್ನಲ್ಲೇ ಶ್ರೀರಾಮನಿಗೆ ನಮಿಸಿದ ಗಗನಸಖಿ, ವಿವಾದ ಶುರು!
ಆಯೋಧ್ಯೆ ವಿಮಾನ ನಿಲ್ದಾಣದಲ್ಲಿ ಇಂಡಿಗೋ ವಿಮಾನ ಲ್ಯಾಂಡ್ ಆದ ಬೆನ್ನಲ್ಲೇ ಗಗನಸಖಿ ಕೆಳಗಿಳಿದು ಶ್ರೀರಾಮನಿಗೆ ಭಕ್ತಿಯಿಂದ ನಮಿಸಿದ ವಿಡಿಯೋ ವೈರಲ್ ಆಗಿದೆ. ಹಲವರು ಈ ನಡೆಗೆ ಜೈ ಶ್ರೀರಾಮ್ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದರ ಬೆನ್ನಲ್ಲೇ ವಿವಾದ ಒಂದು ಸೃಷ್ಟಿಯಾಗಿದೆ.
ಆಯೋಧ್ಯೆ(ಆ.03) ಬರೋಬ್ಬರಿ 500 ವರ್ಷಗಳ ಬಳಿಕ ಆಯೋಧ್ಯೆಯಲ್ಲಿ ಶ್ರೀರಾಮ ಮಂದಿರ ಭಕ್ತರಿಗೆ ದರ್ಶನ ನೀಡುತ್ತಿದೆ. ಆದರೆ ರಾಮ ಮಂದಿರ ನಿರ್ಮಾಣ, ಪ್ರಾಣ ಪ್ರತಿಷ್ಠೆ, ದರ್ಶನದಿಂದ ಹಿಡಿದು ಒಂದಲ್ಲ ಒಂದು ವಿವಾದ ಮೆತ್ತಿಕೊಳ್ಳುತಲೇ ಬಂದಿದೆ.ಇದೀಗ ಗಗನಸಖಿಯ ವಿಡಿಯೋ ಒಂದು ಪರ ವಿರೋಧಕ್ಕೆ ಕಾರಣವಾಗಿದೆ. ಆಯೋಧ್ಯೆಯಲ್ಲಿ ವಿಮಾನ ಲ್ಯಾಂಡ್ ಆದ ಬೆನ್ನಲ್ಲೇ ಇಂಡಿಗೋ ಗಗನಸಖಿ ಕೆಳಗಿಳಿದು ನೆಲಕ್ಕೆ ಶಿರ ಬಾಗಿ ಶ್ರೀರಾಮನಿಗೆ ನಮಿಸಿದ್ದಾಳೆ. ಈ ವಿಡಿಯೋ ಭಾರಿ ವೈರಲ್ ಆಗಿದೆ.
ಅಕಾಂಕ್ಷಾ ಪಾರ್ಮರ್ ಈ ವಿಡಿಯೋ ಹಂಚಿಕೊಂಡಿದ್ದಾರೆ. ಆಯೋಧ್ಯೆಯ ವಾಲ್ಮೀಕಿ ಮಹರ್ಷಿ ವಿಮಾನ ನಿಲ್ದಾಣದಲ್ಲಿ ಇಂಡಿಗೋ ವಿಮಾನ ಲ್ಯಾಂಡ್ ಆಗಿದೆ. ಪ್ರಯಾಣಿಕರು ಇಳಿದ ಬೆನ್ನಲ್ಲೇ ಗಗನಸಖಿಯೂ ಕೆಳಗಿಳಿದಿದ್ದಾಳೆ. ಕೆಳಗಿಳಿದು ಬಂದ ಗಗನಸಖಿ, ಆಯೋಧ್ಯೆ ಶ್ರೀರಾಮ ಮಂದಿರದತ್ತ ಮುಖ ಮಾಡಿ ಭಕ್ತಿಯಿಂದ ನಮಿಸಿದ್ದಾಳೆ. ಶಿರಭಾಗಿ ನಮಿಸಿದ ಈಕೆಯ ವಿಡಿಯೋ ಭಾರಿ ವೈರಲ್ ಆಗಿದೆ.
ಆಯೋಧ್ಯೆ ರಾಮ ಮಂದಿರ ಮಾಳಿಗೆ ಸೋರಿಯಾಗಿಲ್ಲ, ನೃಪೇಂದ್ರ ಮಿಶ್ರಾ ಸ್ಪಷ್ಟನೆ!
ಈ ವಿಡಿಯೋವನ್ನು ಹಲವರು ಹಂಚಿಕೊಂಡಿದ್ದಾರೆ. ಮಾಜಿ ಸಿಎಫ್ಒ ಮೋಹನ್ ದಾಸ್ ಪೈ ಕೂಡ ಈ ವಿಡಿಯೋ ಹಂಚಿಕೊಂಡು, ಇಂತಹ ಗಗನಸಖಿಯನ್ನು ಪಡೆದಿರುವ ಇಂಡಿಗೋ ಏರ್‌ಲೈನ್ಸ್ ಹೆಮ್ಮೆಪಡಬೇಕು. ಇದು 500 ವರ್ಷಗಳ ಬಳಿಕ ಆಯೋಧ್ಯೆಗೆ ಮರಳಿದ ಶ್ರೀರಾಮನಿಗೆ ಗಗನಸಖಿ ನೀಡಿದ ಭಕ್ತಿಯ ನಮನ ಎಂದು ಬರೆದುಕೊಂಡಿದ್ದಾರೆ. ಇನ್ನು ಹಲವರು ಈ ವಿಡಿಯೋಗೆ ಕಮೆಂಟ್ ಮಾಡಿದ್ದಾರೆ.
Touching down in Ayodhya ignites a deep sense of pride.
— Akanksha Parmar (@iAkankshaP) August 2, 2024
Proud to be a Hindu. Jai Shri Ram! 🚩 pic.twitter.com/yF3Sosf1KH
ಜೈ ಶ್ರೀರಾಮ್, ಆಯೋಧ್ಯೆ ಎಂದರೆ ಶ್ರೀರಾಮನ ಭಕ್ತಿ. ಶ್ರೀರಾಮನ ಜೊತೆ ಈ ದೇಶ ಬೆಸೆದುಕೊಂಡಿದೆ ಎಂದು ಹಲವರು ಪ್ರತಿಕ್ರಿಯಿಸಿದ್ದಾರೆ. ಆದರೆ ಮತ್ತೆ ಕೆಲವರು ಈ ವಿಡಿಯೋಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಈ ಪೈಕಿ ಬೆಂಗಳೂರು ವೋಕಲ್ ಅನ್ನೋ ಎಕ್ಸ್ ಖಾತೆ ಇದು ವಿಡಿಯೋಗಾಗಿ ಮಾಡಿದ ನಾಟಕ ಎಂದಿದೆ. ಇಲ್ಲಿ ಕ್ಯಾಮಾರಮ್ಯಾನ್ ಆಕೆ ಬಂದು ನಮಿಸಲು ಕಾಯುತ್ತಿದ್ದಾನೆ. ಈ ರೀತಿಯ ವಿಡಿಯೋ ಹಂಚಿಕೊಳ್ಳುವಾಗ ಎಚ್ಚರವಹಿಸಬೇಕು. ನಾಗರೀಕರ ವಿಮಾನಯಾನ ಇಲಾಖೆ ಈ ಕುರಿತು ಗಮನಹರಿಸಬೇಕು, ವಿಡಿಯೋ ರೆಕಾರ್ಡ್, ಫೋಟೋ ನಿಷೇಧವಿದ್ದರೂ ಚಿತ್ರೀಕರಿಸಿದ್ದಾರೆ. ನಿಯಮ ಉಲ್ಲಂಘಿಸಲಾಗಿದೆ ಎಂದು ಟ್ವೀಟ್ ಮಾಡಲಾಗಿದೆ.
ಇದು ರೀಲ್ ದುನಿಯಾ, ಹೀಗಾಗಿ ಎಲ್ಲವೂ ರೀಲ್, ಯಾವುದು ರಿಯಲ್ ಅಲ್ಲ ಎಂದು ಕಮೆಂಟ್ ಮಾಡಿದ್ದಾರೆ. ಈ ವಿಡಿಯೋಗೆ ಪರ ವಿರೋಧ ಕಮೆಂಟ್ ಜೊತೆಗೆ ಮೆಚ್ಚುಗೆ , ಆಕ್ರೋಶಗಳು ಜೋರಾಗಿದೆ.
ರಾಮ ಮಂದಿರ ಸ್ಫೋಟಿಸುವ ಬೆದರಿಕೆ, ಜೈಶ್ ಇ ಮೊಹಮ್ಮದ್ ಉಗ್ರರ ಆಡಿಯೋ ಬೆನಲ್ಲೇ ಹೈ ಅಲರ್ಟ್!
ಆಯೋಧ್ಯೆಗೆ ವಿಮಾನ ಸೇವೆ ಆರಂಭಗೊಂಡ ಬೆನ್ನಲ್ಲೇ ಭಾರಿ ಸಂಚಲನ ಸೃಷ್ಟಿಸಿತ್ತು. ಆಯೋಧ್ಯೆಗೆ ತೆರಳುವ ಪ್ರಯಾಣಿಕರು ವಿಮಾನದಲ್ಲಿ ಜೈಶ್ರೀರಾಮ್ ಘೋಷಣೆ, ಭಜನೆ ಹಾಡಿದ ವಿಡಿಯೋಗಳು ವೈರಲ್ ಆಗಿತ್ತು.