ಸುಲ್ತಾನ್ ಆಫ್ ಜೋಹರ್ ಕಪ್ ಅಂಡರ್-21 ಹಾಕಿ ಟೂರ್ನಿಗೆ ಅಧಿಕೃತ ಚಾಲನೆ ಸಿಗಲಿದ್ದು, ಭಾರತಕ್ಕೆ ಮೊದಲ ಪಂದ್ಯದಲ್ಲೇ ಜಪಾನ್ ಸವಾಲು ಎದುರಾಗಲಿದೆ.
ಜೋಹರ್ (ಮಲೇಷ್ಯಾ): 2 ಬಾರಿ ಒಲಿಂಪಿಕ್ ಪದಕ ವಿಜೇತ, ದಿಗ್ಗಜ ಗೋಲ್‌ಕೀಪರ್ ಪಿ.ಆರ್.ಶ್ರೀಜೇಶ್ ಶನಿವಾರದಿಂದ ತಮ್ಮ ಕೋಚಿಂಗ್ ವೃತ್ತಿಬದುಕನ್ನು ಅಧಿಕೃತವಾಗಿ ಆರಂಭಿಸಲಿದ್ದಾರೆ. ಸುಲ್ತಾನ್ ಆಫ್ ಜೋಹರ್ ಕಪ್ ಅಂಡರ್-21 ಹಾಕಿ ಟೂರ್ನಿಗೆ ಶನಿವಾರ ಚಾಲನೆ ಸಿಗಲಿದ್ದು, 4 ಬಾರಿಯ ಚಾಂಪಿಯನ್ ಭಾರತ ತನ್ನ ಮೊದಲ ಪಂದ್ಯದಲ್ಲಿ ಜಪಾನ್ ವಿರುದ್ಧ ಸೆಣಸಲಿದೆ.
ಅಕ್ಟೋಬರ್ 20ರಂದು ಬ್ರಿಟನ್ ವಿರುದ್ಧ ಸೆಣಸಲಿರುವ ಭಾರತ, ಅಕ್ಟೋಬರ್ 22ರಂದು ಮಲೇಷ್ಯಾ, ಅಕ್ಟೋಬರ್ 23ರಂದು ಆಸ್ಟ್ರೇಲಿಯಾ ಹಾಗೂ ಅಕ್ಟೋಬರ್ 25ರಂದು ಗುಂಪು ಹಂತದ ಕೊನೆಯ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ಆಡಲಿದೆ. ಗುಂಪು ಹಂತದ ಮುಕ್ತಾಯಕ್ಕೆ ಅಂಕಪಟ್ಟಿಯಲ್ಲಿ ಅಗ್ರ-2 ಸ್ಥಾನ ಪಡೆಯಲಿರುವ ತಂಡಗಳು ಅಕ್ಟೋಬರ್ 26ರಂದು ಫೈನಲ್‌ನಲ್ಲಿ ಆಡಲಿವೆ.
ಶತಕ ಸಿಡಿಸಿದ ಸರ್ಫರಾಜ್ ಖಾನ್; ಕಿವೀಸ್ ಲೆಕ್ಕ ಚುಕ್ತಾ ಮಾಡಲು ಭಾರತಕ್ಕೆ ಬೇಕಿದೆ ಜಸ್ಟ್ 12 ರನ್!
ಐಎಸ್‌ಎಲ್: ಪಂಜಾಬ್ ವಿರುದ್ಧ ಗೆದ್ದ ಬಿಎಫ್‌ಸಿ
ಬೆಂಗಳೂರು: 11ನೇ ಆವೃತ್ತಿಯ ಇಂಡಿಯನ್ ಸೂಪರ್ ಲೀಗ್ (ಐಎಸ್‌ಎಲ್) ಫುಟ್ಬಾಲ್ ಟೂರ್ನಿಯಲ್ಲಿ ಬೆಂಗಳೂರು ಎಫ್ (ಬಿಎಫ್‌ಸಿ) ಅಜೇಯ ಓಟ ಮುಂದುವರಿಸಿದೆ. ಶುಕ್ರವಾರ ಇಲ್ಲಿನ ಕಂಠೀರವ ಕ್ರೀಡಾಂಗಣದಲ್ಲಿ ನಡೆದ ಪಂಜಾಬ್ ಎಫ್‌ಸಿ ವಿರುದ್ಧದ ಪಂದ್ಯದಲ್ಲಿ ಬಿಎಫ್‌ಸಿ 1-0 ಗೋಲಿನ ಜಯ ದಾಖಲಿಸಿತು.
43ನೇ ನಿಮಿಷದಲ್ಲಿ ರೋಶನ್ ಸಿಂಗ್ ಬಾರಿಸಿದ ಗೋಲು, ಬಿಎಫ್‌ಸಿ ಗೆಲುವಿಗೆ ನೆರವಾಯಿತು. ಈ ಆವೃತ್ತಿಯಲ್ಲಿ ಆಡಿರುವ 5 ಪಂದ್ಯಗಳಲ್ಲಿ 4ರಲ್ಲಿ ಗೆದ್ದು, 1 ಪಂದ್ಯವನ್ನು ಡ್ರಾ ಮಾಡಿಕೊಂಡಿರುವ ಬಿಎಫ್‌ಸಿ, ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲೇ ಮುಂದುವರಿದಿದೆ.
ಮಹಿಳಾ ಟಿ20 ವಿಶ್ವಕಪ್: ವೆಸ್ಟ್ ಇಂಡೀಸ್ ಮಣಿಸಿ ಫೈನಲ್‌ಗೆ ಲಗ್ಗೆಯಿಟ್ಟ ನ್ಯೂಜಿಲೆಂಡ್
ಸಿಂಧು ಕ್ವಾರ್ಟರ್ ಫೈನಲ್‌ಗೆ
ಒಡೆನ್ಸೆ: ಭಾರತದ ತಾರಾ ಶಟ್ಲರ್ ಪಿ.ವಿ.ಸಿಂಧು ಡೆನ್ಮಾರ್ಕ್ ಓಪನ್ ಸೂಪರ್ 750 ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ. ಮಾಜಿ ವಿಶ್ವ ಚಾಂಪಿಯನ್ ಸಿಂಧು ಗುರುವಾರ ಮಹಿಳಾ ಸಿಂಗಲ್ಸ್ ಕ್ವಾರ್ಟರ್ ಫೈನಲ್‌ನಲ್ಲಿ ಚೀನಾದ ಹ್ಯಾನ್ ಯು ವಿರುದ್ಧ 18-21, 21-12, 21-16ರಲ್ಲಿ ಗೆಲುವು ಸಾಧಿಸಿದರು.