ಜಗತ್ತಿನಾದ್ಯಂತ ಮಂಕಿಪಾಕ್ಸ್ ಭೀತಿ; ಕರ್ನಾಟಕದಲ್ಲಿಯೂ ಹೈ ಅಲರ್ಟ್

ಜಗತ್ತಿನ ಹಲವು ದೇಶಗಳಲ್ಲಿ ಈಗಾಗ್ಲೇ ಮಂಕಿಪಾಕ್ಸ್‌ನ (Monkeypox) ಹಲವಾರು ಪ್ರಕರಣಗಳು ಕಾಣಿಸಿಕೊಂಡಿವೆ. ಹೀಗಾಗಿ ಭಾರತದಲ್ಲೂ (India) ಆತಂಕ ಹೆಚ್ಚಾಗ್ತಿದೆ. ಈ ಮಧ್ಯೆ ಕರ್ನಾಟಕ (Karnataka)ದಲ್ಲಿಯೂ ಹೈ ಅಲರ್ಟ್‌ (High alaer) ಘೋಷಿಸಲಾಗಿದ್ದು, ಕೆಲ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಲಾಗಿದೆ. ಆ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.

Monkeypox Cases In All Over World, High Alert In Karnataka Vin

ವಿಶ್ವಾದ್ಯಂತ ದಿನದಿಂದ ದಿನಕ್ಕೆ ಮಂಕಿಪಾಕ್ಸ್ (Monkeypox) ಪ್ರಕರಣಗಳು ಹೆಚ್ಚಾಗುತ್ತಿದೆ. ಇವೆಲ್ಲದರ ಮಧ್ಯೆ ಭಾರತದಲ್ಲಿ 5 ವರ್ಷದ ಬಾಲಕಿಯಲ್ಲಿ ಮಂಕಿಪಾಕ್ಸ್‌ನ ಲಕ್ಷಣಗಳು (Symptoms) ಕಂಡು ಬಂದ ನಂತರ ಎಲ್ಲರಲ್ಲೂ ಭೀತಿ ಹೆಚ್ಚಾಗಿದೆ. ಉತ್ತರ ಪ್ರದೇಶದ ಗಾಜಿಯಾಬಾದ್‌ನಲ್ಲಿ ಬಾಲಕಿಯೊಬ್ಬಳಲ್ಲಿ ಮಂಕಿಪಾಕ್ಸ್‌ನ ಲಕ್ಷಣಗಳು ಕಂಡು ಬಂದಿವೆ. ಬೇರೆ ಯಾವುದೇ ಆರೋಗ್ಯ ಸಮಸ್ಯೆ ಇಲ್ಲ ಎಂದು ವೈದ್ಯರು ತಿಳಿಸಿದ್ದಾರೆ. ಇದರೊಂದಿಗೆ ಕಳೆದ ಒಂದು ತಿಂಗಳಿನಿಂದ ತಾನಾಗಲಿ ಅಥವಾ ತನ್ನ ಹತ್ತಿರದ ಸಂಬಂಧಿಗಳಾಗಲಿ ವಿದೇಶಕ್ಕೆ ಹೋಗಿಲ್ಲ ಎಂದು ತಿಳಿಸಿದ್ದಾರೆ. ವಿದೇಶಗಳಿಂದ ನಿಧಾನವಾಗಿ ಭಾರತಕ್ಕೂ ಹರಡುತ್ತಿರುವ ಮಂಕಿಪಾಕ್ಸ್ ಬಗ್ಗೆ ಜನರಲ್ಲೂ ಭೀತಿ ಹೆಚ್ಚಾಗಿದೆ.

ಅದರಲ್ಲೂ ಕರ್ನಾಟಕದಲ್ಲಿ (Karnataka) ಕೊರೋನಾ ಕೇಸ್‌ (Corona Case) ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಸಕ್ರಿಯ ಪ್ರಕರಣಗಳ ಸಂಖ್ಯೆ ಎರಡು ಸಾವಿರ ಗಡಿ ದಾಟಿದೆ. ಹೊಸ ಕೋವಿಡ್ ತಳಿ ಕಾಣಿಸಿಕೊಂಡರೆ ನಾಲ್ಕನೇ ಅಲೆ ನಿಶ್ಚಿತವಾದರೂ ಆತಂಕಪಡುವ ಅಗತ್ಯವಿಲ್ಲ. ಮುಂದಿನ 2-3 ವಾರಗಳು ನಿರ್ಣಾಯಕವಾಗಿದ್ದು, ಕೋವಿಡ್ ನಿಯಮಾವಳಿಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ತಜ್ಞರು ಎಚ್ಚರಿಸಿದ್ದಾರೆ. ಇದರ ಜೊತೆಗೇ ಮಂಕಿಪಾಕ್ಸ್ ಬಗ್ಗೆಯೂ ಜನರಲ್ಲಿ ಆತಂಕ ಮೂಡುತ್ತಿದೆ.

ಕರ್ನಾಟಕದಲ್ಲಿ ಕೊರೋನಾ ಮತ್ತೆ ಹೆಚ್ಚಳ, ಜನರಿಗೆ ಕೆಲ ಸಲಹೆಗಳೊಂದಿಗೆ ಎಚ್ಚರಿಕೆ ಕೊಟ್ಟ ತಜ್ಞರು

ರಾಜ್ಯದಲ್ಲಿ, ಕಾಯಿಲೆಯ (Disease) ಮುನ್ಸೂಚನೆ ಕಂಡ ಕೂಡಲೇ ಸ್ಕ್ರೀನಿಂಗ್, ಎಲ್ಲ ಜಿಲ್ಲೆಗಳಲ್ಲಿ ಆಸ್ಪತ್ರೆ ಬೆಡ್‌ಗಳನ್ನು ಕಾಯ್ದಿರಿಸುವುದು, ವಿಮಾನ ನಿಲ್ದಾಣಗಳಲ್ಲಿ ಸ್ಕ್ರೀನಿಂಗ್, ಸೇರಿದಂತೆ ಹಲವು ಮುನ್ನೆಚ್ಚರಿಕೆಯ ಕ್ರಮಗಳನ್ನು ಕೈಗೊಂಡಿದ್ದೇವೆ ಎಂದು ಆರೋಗ್ಯ ಸಚಿವ ಕೆ.ಸುಧಾಕರ್ ತಿಳಿಸಿದ್ದಾರೆ. ಶಂಕಿತ ಪ್ರಕರಣಗಳ ಮಾದರಿಗಳನ್ನು ಸಂಗ್ರಹಿಸಿ ನ್ಯಾಷನಲ್ ಇನ್ಸಿಟ್ಯೂಟ್ ಆಫ್‌ ವೈರಾಲಜಿ ಪುಣೆ ಇಲ್ಲಿಗೆ ನೇರವಾಗಿ ಅಥವಾ ಎನ್‌.ಐ.ವಿ  ಬೆಂಗಳೂರಿನ ಮೂಲಕ ಕಳುಹಿಸಲು ಸೂಚಿಸಲಾಗಿದೆ. 

ಮಂಕಿಪಾಕ್ಸ್ ಕಾಯಿಲೆ ಎಂದರೇನು ?
ಯುನೈಟೆಡ್ ಸ್ಟೇಟ್ಸ್‌ನ ಸೆಂಟರ್ಸ್ ಫಾರ್ ಡಿಸೀಸ್ ಕಂಟ್ರೋಲ್ (ಸಿಡಿಸಿ) ಪ್ರಕಾರ, ಮಂಕಿಪಾಕ್ಸ್ ವೈರಸ್ ಸೋಂಕಿನಿಂದ ಉಂಟಾಗುವ ಅಪರೂಪದ ಕಾಯಿಲೆಯಾಗಿದೆ. ಮಂಕಿಪಾಕ್ಸ್ ವೈರಸ್ ಪಾಕ್ಸ್‌ವಿರಿಡೆ ಕುಟುಂಬದಲ್ಲಿ ಆರ್ಥೋಪಾಕ್ಸ್‌ವೈರಸ್ ಕುಲಕ್ಕೆ ಸೇರಿದೆ ಎಂದು ಅದು ಹೇಳಿದೆ. ವಿಶ್ವ ಆರೋಗ್ಯ ಸಂಸ್ಥೆ (WHO) ಪ್ರಕಾರ, ಝೂನೋಟಿಕ್ ಕಾಯಿಲೆಯು ಪ್ರಾಥಮಿಕವಾಗಿ ಮಧ್ಯ ಮತ್ತು ಪಶ್ಚಿಮ ಆಫ್ರಿಕಾದ ಉಷ್ಣವಲಯದ ಮಳೆಕಾಡು ಪ್ರದೇಶಗಳಲ್ಲಿ ಕಂಡುಬರುತ್ತದೆ ಮತ್ತು ಸಾಂದರ್ಭಿಕವಾಗಿ ಇತರ ಪ್ರದೇಶಗಳಿಗೆ ರಫ್ತು ಮಾಡಲಾಗುತ್ತದೆ.

ದೇಶದಲ್ಲಿ ಕೊರೋನಾ ಮಧ್ಯೆನೇ ನೊರೋ ವೈರಸ್ ಆತಂಕ, ಇದು ಕೋವಿಡ್‌ನಂತೆಯೇ ಮಾರಣಾಂತಿಕವೇ ?

1958ರಲ್ಲಿ ಸಂಶೋಧನೆಯ ಸಂದರ್ಭ ಮಂಗಗಳಲ್ಲಿ ಪಾಕ್ಸ್ ತರಹದ ಕಾಯಿಲೆಯ ಎರಡು ಏಕಾಏಕಿ ಸಂಭವಿಸಿದಾಗ ಈ ಅನಾರೋಗ್ಯವನ್ನು ವಿಜ್ಞಾನಿಗಳು ಮೊದಲು ಗುರುತಿಸಿದರು. ಹೀಗಾಗಿ ಇದಕ್ಕೆ ಮಂಕಿಪಾಕ್ಸ್ ಎಂದು ಹೆಸರಿಡಲಾಯಿತು. ಮೊದಲ ಮಾನವ ಸೋಂಕು 1970ರಲ್ಲಿ ಕಾಂಗೋದ ದೂರದ ಭಾಗದಲ್ಲಿ ಚಿಕ್ಕ ಹುಡುಗನಲ್ಲಿ ಕಾಣಿಸಿಕೊಂಡಿತ್ತು. 

ಮಂಕಿಪಾಕ್ಸ್ ಕಾಯಿಲೆಯ ರೋಗಲಕ್ಷಣಗಳೇನು ? 
ಮಂಕಿಪಾಕ್ಸ್ ಸಿಡುಬಿನ ಅದೇ ವೈರಸ್ ಕುಟುಂಬಕ್ಕೆ ಸೇರಿದೆ ಆದರೆ ಸೌಮ್ಯ ರೋಗಲಕ್ಷಣಗಳನ್ನು ಉಂಟುಮಾಡುತ್ತದೆ. ಹೆಚ್ಚಿನ ರೋಗಿಗಳು ಜ್ವರ, ದೇಹದ ನೋವು, ಶೀತ ಮತ್ತು ಆಯಾಸವನ್ನು ಮಾತ್ರ ಅನುಭವಿಸುತ್ತಾರೆ. ಹೆಚ್ಚು ಗಂಭೀರವಾದ ಕಾಯಿಲೆಗಳನ್ನು ಹೊಂದಿರುವ ಜನರಿಗೆ ಮುಖ ಮತ್ತು ಕೈಗಳ ಮೇಲೆ ದದ್ದು ಮತ್ತು ಗಾಯಗಳು ಉಂಟಾಗಬಹುದು. ಅದು ದೇಹದ ಇತರ ಭಾಗಗಳಿಗೆ ಹರಡಬಹುದು. ಆದರೆ ಮಂಕಿಪಾಕ್ಸ್ ಸೋಂಕಿನ ಪರಿಣಾಮ ಹೆಚ್ಚು ದಿನಗಳ ಕಾಲ ಇರುವುದಿಲ್ಲ.

ರಾಜ್ಯದಲ್ಲಿ ಕೋವಿಡ್ ಪ್ರಕರಣಗಳಲ್ಲಿ ಏರಿಕೆ, ಬೆಂಗಳೂರಿನಲ್ಲಿ ಮಾಸ್ಕ್ ಕಡ್ಡಾಯ!

ಮಂಕಿಪಾಕ್ಸ್ ಸೋಂಕು ಹರಡುವುದನ್ನು ತಡೆಗಟ್ಟಲು ಏನು ಮಾಡಬೇಕು ?

* ಯಾವಾಗಲೂ ಕೈಗಳನ್ನು ಶುಚಿಯಾಗಿಟ್ಟುಕೊಳ್ಳುವುದು. ಸಾಬೂನು ಮತ್ತು ನೀರು ಅಥವಾ ಅಲ್ಕೋಹಾಲ್ ಆಧಾರಿತ ಸ್ಯಾನಿಟೈಸರ್‌ನಿಂದ ಕೈಗಳನ್ನು ತೊಳೆಯುತ್ತಿರುವುದು

* ಪ್ರಾಣಿಗಳಿಂದ ಮನುಷ್ಯರಿಗೆ ಹರಡುವುದನ್ನು ತಡೆಗಟ್ಟಬೇಕು.

* ಮಾಂಸವನ್ನು ಚೆನ್ನಾಗಿ ಬೇಯಿಸಿ ತಿನ್ನಬೇಕು

* ರಾಶಸ್‌ ಹೊಂದಿರುವವರೊಂದಿಗೆ ಯಾವುದೇ ಸಂಪರ್ಕ ಇಟ್ಟುಕೊಳ್ಳಬಾರದು

* ಅನಾರೋಗ್ಯದ ರೋಗಿಯ ಯಾವುದೇ ದ್ರವ ಅಥವಾ ವಸ್ತುವಿನ ಸಂಪರ್ಕ ಮಾಡಬಾರದು.

Latest Videos
Follow Us:
Download App:
  • android
  • ios