ಅತಿಯಾಗಿ ಯೋಚನೆ ಮಾಡೋ ಅಭ್ಯಾಸ ಆರೋಗ್ಯಕ್ಕೆ ಒಳ್ಳೇದಲ್ಲ, ಕಡಿಮೆ ಮಾಡೋದು ಹೇಗೆ ?
ಯಾವುದೇ ವಿಚಾರವಾಗಿ ಯೋಚನೆ (Thinking) ಮಾಡುವುದು ಸರಿ. ಆದರೆ ಅತಿಯಾಗಿ ಯೋಚನೆ ಮಾಡಲು ತೊಡಗಿದರೆ. ಇದು ಒಬ್ಬಿಬ್ಬರ ಸಮಸ್ಯೆಯಲ್ಲ. ಹಲವಾರು ಈ ಅಭ್ಯಾಸ (Habit)ವನ್ನು ಹೊಂದಿರುತ್ತಾರೆ. ಅದರೆ ಅತಿಯಾಗಿ ಆಲೋಚನೆ ಮಾಡೋ ಕೆಟ್ಟ ಅಭ್ಯಾಸದಿಂದ ಆರೋಗ್ಯ (Health) ಹದಗೆಡುತ್ತೆ ಅನ್ನೋದು ನಿಮ್ಗೆ ಗೊತ್ತಾ ?
ಯಾವುದು ಕೂಡಾ ಅತಿಯಾದರೆ ಆರೋಗ್ಯ (Health)ಕ್ಕೆ ಒಳ್ಳೆಯದಲ್ಲ. ಮನುಷ್ಯನ ಯೋಚನೆಗಳ ವಿಚಾರದಲ್ಲೂ ಇದೇ ವಿಷಯ ಅನ್ವಯಿಸುತ್ತದೆ. ನಮ್ಮಲ್ಲಿ ಬಹುತೇಕರು ಅತಿಯಾಗಿ ಯೋಚನೆ (Thinking) ಮಾಡುವ ಗೀಳು ಬೆಳಸಿಕೊಂಡಿರುತ್ತಾರೆ. ಅನಾವಶ್ಯಕವಾಗಿ ಚಿಂತೆ (Tension) ಮಾಡುವುದು, ಏನೇನೂ ಊಹಿಸಿಕೊಂಡು ಆತಂಕ ಪಡುವುದು, ಖಿನ್ನತೆಗೆ ಒಳಗಾಗುವುದು ಹೀಗೆ ಅನೇಕ ರೀತಿಯ ಸಮಸ್ಯೆಗಳನ್ನು ಹೊಂದಿರುತ್ತಾರೆ. ಅತಿಯಾಗಿ ಯೋಚಿಸುವ ಸ್ವಭಾವ ನಿಮ್ಮದಾಗಿದ್ದರೆ ಈಗಲೇ ಬಿಟ್ಟುಬಿಡಿ. ಯಾಕೆಂದರೆ ಇದು ಹಲವು ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತೆ ಎಂಬುದು ಅಧ್ಯಯನ (Study)ದಿಂದ ತಿಳಿದುಬಂದಿದೆ.
ಹೆಚ್ಚಾಗಿ ಯೋಚನೆ ಮಾಡುವುದರಿಂದ ಏನಾಗುತ್ತದೆ ?
ನೀವು ಸಮಸ್ಯೆಯನ್ನು ಪರಿಹರಿಸುವ ಯಾವುದೇ ನೈಜ ಉದ್ದೇಶವಿಲ್ಲದೆ ಸಾಧ್ಯತೆಗಳು ಮತ್ತು ಅಪಾಯಗಳ ಮೇಲೆ ಅತಿಯಾಗಿ ಯೋಚಿಸುವುದು ನಿಜವಾದ ಸಮಸ್ಯೆಯಾಗಿ ಪರಿಣಮಿಸಬಹುದು ಎಂದು ಡಾ.ಫೌಲರ್ ಹೇಳುತ್ತಾರೆ. ಅತಿಯಾಗಿ ಯೋಚಿಸುವುದು ಕೆಲವೊಮ್ಮೆ ಆತ್ಮಾವಲೋಕನದಂತೆ ಭಾಸವಾಗುತ್ತದೆ. ಆದರೆ ಇನ್ನು ಕೆಲವೊಮ್ಮೆ ಇದು ಆಂತರಿಕವಾಗಿ ಜಿಜ್ಞಾಸೆ ಮೂಡಿಸುವ ಪ್ರಕ್ರಿಯೆಯಾಗಿದೆ. ಅತಿಯಾದ ಗಾಢ ಯೋಚನೆ ಮೆದುಳನ್ನು ಹಾಳು ಮಾಡುತ್ತದೆ. ಆರೋಗ್ಯವನ್ನು ಹದಗೆಡಿಸುತ್ತದೆ ಎಂದವರು ತಿಳಿಸಿದ್ದಾರೆ.
ಬರೀ negative thoughts ಬರುತ್ತಾ? ತಪ್ಪಿಸಿಕೊಳ್ಳೋದ್ ಹೀಗೆ..
ತಲೆನೋವು, ಕಡಿಮೆ ಹಸಿವು, ಅನಿಯಮಿತ ನಿದ್ರೆ, ಅಧಿಕ ರಕ್ತದೊತ್ತಡ ಸೇರಿದಂತೆ ಅನೇಕ ತೊಂದರೆಗಳನ್ನು ಅತಿಯಾಗಿ ಯೋಚಿಸುವುದರಿಂದ ಉಂಟಾಗುತ್ತದೆ. ಮಾತ್ರವಲ್ಲ ಸಾಮಾನ್ಯವಾಗಿ ದೀರ್ಘಕಾಲದ ಚಿಂತೆಯು ನಿಮ್ಮ ದೈನಂದಿನ ಜೀವನದ ಮೇಲೆ ಬಹಳ ಪರಿಣಾಮವನ್ನು ಬೀರುತ್ತದೆ. ಕೆಲವೊಮ್ಮೆ ಇದನ್ನು ಕಡಿಮೆ ಮಾಡಲು ಸಿಗರೇಟ್, ಮದ್ಯಪಾನಕ್ಕೆ ದಾಸರಾಗಬಹುದು. ಅತಿಯಾಗಿ ಯೋಚನೆ ಮಾಡುವ ಅಭ್ಯಾಸ ನಿಮ್ಮದಾಗಿದ್ದರೆ ಕೆಲವೊಂದು ಕ್ರಮಗಳನ್ನು ಅನುಸರಿಸುವ ಮೂಲಕ ಇದನ್ನು ತಪ್ಪಿಸಬಹುದು.
ಸ್ನಾಯು ನೋವು, ಸ್ನಾಯುವಿನ ಒತ್ತಡ, ಉಸಿರಾಟದ ತೊಂದರೆ, ನಡುಕ ಮತ್ತು ಸೆಳೆತ, ಸಿಡುಕುತನ, ಆಯಾಸ, ವೇಗದ ಹೃದಯ ಬಡಿತ, ಅಕಾಲಿಕ ಪರಿಧಮನಿಯ ಕಾಯಿಲೆ, ಹೃದಯಾಘಾತ ಮೊದಲಾದ ಆರೋಗ್ಯ ಸಮಸ್ಯೆಗಳು ಸಹ ಕಾಣಿಸಿಕೊಳ್ಳಬಹುದು.
ಅತಿಯಾಗಿ ಯೋಚನೆ ಮಾಡುವುದನ್ನು ತಪ್ಪಿಸುವುದು ಹೇಗೆ ?
ಸಣ್ಣ ವಸ್ತುಗಳನ್ನು ದೊಡ್ಡದು ಮಾಡಬೇಡಿ
ನಿಮಗೆ ಇದು ಈಗಾಗಲೇ ತಿಳಿದಿದೆ. ಆದರೂ ನೀವು ಅದೇ ತಪ್ಪನ್ನು ಮಾಡುತ್ತೀರಿ. ಕೆಲವೊಂದು ವಿಷಯಗಳು ಅಷ್ಟೊಂದು ಯೋಚನೆ ಮಾಡಲು ಯೋಗ್ಯವಾಗಿಲ್ಲ ಎಂದು ನಿಮಗೆ ತಿಳಿದಿದೆ. ಹೀಗಿದ್ದೂ ನೀವು ಅತಿಯಾಗಿ ಚಿಂತಿಸುತ್ತೀರಿ. ಅದನ್ನು ಬಿಟ್ಟುಬಿಡಿ. ಏನಾಗುತ್ತದೋ ಅದೇ ಆಗಲಿ. ಆ ಬಗ್ಗೆ ಹೆಚ್ಚು ಯೋಚನೆ ಮಾಡುವುದರಿಂದ ಅದು ಬದಲಾಗುವುದಿಲ್ಲ.
Happiness and Life: ನೀವು ನಿಜವಾಗಲೂ ಖುಷಿಯಾಗಿದ್ದೀರಾ?
ವಿಮರ್ಶಾತ್ಮಕವಾಗಿ ಚಿಂತನೆ ಮಾಡಿ
ಯಾವುದೇ ಸಮಸ್ಯೆ ಬಂದಾಗ ಏನೇನೋ ಯೋಚಿಸುವುದನ್ನು ಬಿಟ್ಟು ವಿಮರ್ಶಾತ್ಮಕವಾಗಿ ಚಿಂತನೆ ಮಾಡಿ. ಇದು ಸಮಸ್ಯೆಗೆ ಶೀಘ್ರ ಪರಿಹಾರ ಒದಗಿಸುತ್ತದೆ. ಅತಿಯಾಗಿ ಯೋಚನೆ ಮಾಡುವುದರಿಂದ ಸಮಸ್ಯೆ ಇನ್ನಷ್ಟು ಜಟಿಲವಾಗುತ್ತಾ ಹೋಗುತ್ತದೆ. ತಾರ್ಕಿಕ ಸಮಸ್ಯೆ ಪರಿಹಾರಕ್ಕೆ ಅತಿಯಾಗಿ ಚಿಂತಿಸುವುದು ಪರಿಹಾರವಲ್ಲವೆಂದು ತಿಳಿದುಕೊಳ್ಳಿ.
ನಿರ್ಧಾರ ಮಾಡಲು ಗಡುವನ್ನು ಹೊಂದಿಸಿ
ನಿರ್ಧಾರದ ಮೂಲಕ ಯೋಚಿಸಲು ನೀವು ಹೆಚ್ಚು ಸಮಯವನ್ನು ತೆಗೆದುಕೊಳ್ಳುತ್ತಿದ್ದರೆ ಅದನ್ನು ತಪ್ಪಿಸಲು ನಿರ್ಧಾರ ಮಾಡಲು ಗಡುವನ್ನು ಹೊಂದಿಸಿ . ಸಮಸ್ಯೆಯನ್ನು ಪರಿಹರಿಸುವ ಸಮಯ ಬಂದಾಗ, ನಿಮ್ಮ ಅಂತಿಮ ನಿರ್ಧಾರವನ್ನು ಮಾಡಲು ಇಂತಿಷ್ಟು ಸಮಯವನ್ನು ನಿಗದಿಪಡಿಸಿ. ದೊಡ್ಡ ನಿರ್ಧಾರಗಳಿಗೆ ಹೆಚ್ಚಿನ ಸಮಯ ಬೇಕಾಗುತ್ತದೆ, ಆದ್ದರಿಂದ ನಿರ್ಧಾರ ತೆಗೆದುಕೊಳ್ಳುವ ಪ್ರಕ್ರಿಯೆಯು ಅಗಾಧವಾದಾಗ ಅಥವಾ ನಿಮ್ಮ ಗಮನವನ್ನು ಬೇರೆಡೆಗೆ ಸೆಳೆಯಲು ವಿರಾಮಗಳನ್ನು ತೆಗೆದುಕೊಳ್ಳುವುದನ್ನು ಪರಿಗಣಿಸಿ.
ಸಾಧ್ಯವಾಗದ ವಿಷಯಗಳನ್ನು ಬಿಟ್ಟುಬಿಡಿ
ನೀವು ನಿಯಂತ್ರಿಸಬಹುದಾದ ವಿಷಯಗಳ ಮೇಲೆ ಕ್ರಮ ತೆಗೆದುಕೊಳ್ಳಿ ಮತ್ತು ನಿಮಗೆ ಸಾಧ್ಯವಾಗದ ವಿಷಯಗಳನ್ನು ಬಿಟ್ಟುಬಿಡಿ
ನೀವು ಯಾವುದನ್ನಾದರೂ ವಿಚಾರವನ್ನು ಗಮನಿಸಿದ ತಕ್ಷಣ, ನಿಮ್ಮ ಆಲೋಚನೆಗಳನ್ನು ಹೆಚ್ಚು ರಚನಾತ್ಮಕವಾಗಿ ಮಾಡಬಹುದೇ ಎಂದು ನಿಮ್ಮನ್ನು ಕೇಳಿಕೊಳ್ಳಿ. ಅದು ನಿಮ್ಮಿಂದ ಸಾಧ್ಯವಾಗುವುದಾದರೆ ಮಾತ್ರ ತಲೆಕೆಡಿಸಿಕೊಳ್ಳಿ. ಉಳಿದ ವಿಚಾರವನ್ನು ಬಿಟ್ಟುಬಿಡಿ.