ಈಗಾಗಲೇ ಕೋವ್ಯಾಕ್ಸಿನ್‌() ಲಸಿಕೆ ಅಭಿವೃದ್ಧಿಪಡಿಸಿ ಕೊರೋನಾ ವಿರುದ್ಧದ ಹೋರಾಟದಲ್ಲಿ ಮಹತ್ತರ ಪಾತ್ರ ವಹಿಸಿದ್ದ ಹೈದರಾಬಾದ್‌ನ ಭಾರತ್‌ ಬಯೋಟೆಕ್‌ ಅಭಿವೃದ್ಧಿಪಡಿಸಿರುವ ಮೂಗಿನ ಮೂಲಕ ಹಾಕುವ ಕೋವಿಡ್‌ ಲಸಿಕೆಗೆ ಭಾರತೀಯ ಔಷಧ ನಿಯಂತ್ರಣ ಪ್ರಾಧಿಕಾರ ಮಂಗಳವಾರ ಅನುಮೋದನೆ ನೀಡಿದೆ. 

ಪಿಟಿಐ ನವದೆಹಲಿ (ಸೆ.7) : ಈಗಾಗಲೇ ಕೋವ್ಯಾಕ್ಸಿನ್‌() ಲಸಿಕೆ ಅಭಿವೃದ್ಧಿಪಡಿಸಿ ಕೊರೋನಾ ವಿರುದ್ಧದ ಹೋರಾಟದಲ್ಲಿ ಮಹತ್ತರ ಪಾತ್ರ ವಹಿಸಿದ್ದ ಹೈದರಾಬಾದ್‌ನ ಭಾರತ್‌ ಬಯೋಟೆಕ್‌ ಅಭಿವೃದ್ಧಿಪಡಿಸಿರುವ ಮೂಗಿನ ಮೂಲಕ ಹಾಕುವ ಕೋವಿಡ್‌ ಲಸಿಕೆಗೆ ಭಾರತೀಯ ಔಷಧ ನಿಯಂತ್ರಣ ಪ್ರಾಧಿಕಾರ ಮಂಗಳವಾರ ಅನುಮೋದನೆ ನೀಡಿದೆ. ಈ ಮೂಲಕ ಕೊರೋನಾ ವಿರುದ್ಧದ ಹೋರಾಟದಲ್ಲಿ ಮತ್ತೊಂದು ಮಹತ್ವದ ಮೈಲುಗಲ್ಲು ತಲುಪಿದಂತಾಗಿದೆ.

ಉಚಿತ 3ನೇ ಡೋಸ್‌ ನೀಡಿದರೂ ಜನ ಪಡೆಯುತ್ತಿಲ್ಲ: ಸಚಿವ ಸುಧಾಕರ್‌

ಇದು ವಿಶ್ವದಲ್ಲೇ ಮೊದಲ ಇಂಟ್ರಾ ನೇಸಲ್‌ ಲಸಿಕೆಯಾಗಿದೆ. 18 ವರ್ಷ ಮೇಲ್ಪಟ್ಟವರಿಗಾಗಿ ತುರ್ತು ಬಳಕೆಗೆ ಲಸಿಕೆ ಲಭ್ಯ ಇರಲಿದೆ.

ಈ ಬಗ್ಗೆ ಟ್ವೀಟ್‌(Tweet) ಮೂಲಕ ಮಾಹಿತಿ ನೀಡಿರುವ ಕೇಂದ್ರ ಆರೋಗ್ಯ ಸಚಿವ ಮನ್‌ಸುಖ್‌ ಮಾಂಡವೀಯ(Mansukh Mandaviya), ‘ನರೇಂದ್ರ ಮೋದಿ(Narendra Modi) ಅವರ ನೇತೃತ್ವದಲ್ಲಿ ಕೊರೋನಾ ವಿರುದ್ಧದ ಹೋರಾಟಕ್ಕೆ ಮತ್ತಷ್ಟುಬಲ ಬಂದಿದೆ. 18 ವರ್ಷ ಮೇಲ್ಪಟ್ಟವರಿಗೆ ಮೂಗಿನ ಮೂಲಕ ಹಾಕುವ ಲಸಿಕೆಗೆ ಅನುಮೋದನೆ ನೀಡಲಾಗಿದೆ. ಎಲ್ಲರೂ ಒಟ್ಟಾಗಿ ಶ್ರಮಿಸಿ ಕೋವಿಡ್‌-19(Covid-19) ಸೋಲಿಸೋಣ’ ಎಂದು ಹರ್ಷಿಸಿದ್ದಾರೆ.

4000 ಜನರ ಮೇಲೆ ಪ್ರಯೋಗ:

ಇಂಟ್ರಾ ನೇಸಲ್‌ ಲಸಿಕೆಯನ್ನು ಭಾರತ್‌ ಬಯೋಟೆಕ್‌ 4000 ಸ್ವಯಂಸೇವಕರ ಮೇಲೆ ಪ್ರಯೋಗಿಸಿತ್ತು. 2 ಹಂತದಲ್ಲಿ ಪ್ರಯೋಗ ನಡೆದಿತ್ತು. ಮೊದಲ ಹಂತದ ಪ್ರಯೋಗವು ಹೊಸದಾಗಿ ಲಸಿಕೆ ತೆಗೆದುಕೊಳ್ಳುವವರ ಮೇಲೆ ನಡೆದಿತ್ತು. 2ನೇ ಹಂತದ ಪ್ರಯೋಗವು ಈಗಾಗಲೇ 2 ಡೋಸ್‌ ತೆಗೆದುಕೊಂಡವರ ಮೇಲೆ ಬೂಸ್ಟರ್‌ ಡೋಸ್‌ ರೂಪದಲ್ಲಿ ನಡೆದಿತ್ತು. ಆದರೆ ಯಾರ ಮೇಲೂ ದುಷ್ಪರಿಣಾಮ ಹಾಗೂ ಅಡ್ಡಪರಿಣಾಮ ಬೀರಿಲ್ಲ ಎಂದು ಭಾರತ್‌ ಬಯೋಟೆಕ್‌ ಹೇಳಿದೆ.

ಮೂಗಿನ ಲಸಿಕೆಯಿಂದ ಹೆಚ್ಚು ಪ್ರತಿಕಾಯ ಶಕ್ತಿ:

ಕಳೆದ ಆಗಸ್ಟ್‌ನಲ್ಲಿ 3ನೇ ಹಂತದ ಪ್ರಯೋಗವೂ ಮುಗಿದಿತ್ತು. ಆಗ ಇದು ಅತ್ಯಂತ ಸುರಕ್ಷಿತ ಹಾಗೂ ರೋಗನಿರೋಧಕ ಶಕ್ತಿ ಬಲಪಡಿಸುವ ಲಸಿಕೆ ಎಂದು ಸಾಬೀತಾಗಿತ್ತು. ಮೂಗಿನ ಮೂಲಕ ಹಾಕುವ ಲಸಿಕೆ ಆಗಿದ್ದರಿಂದ ಶ್ವಾಸಕೋಶದಲ್ಲಿ ಉತ್ತಮ ಪ್ರತಿಕಾಯ ಶಕ್ತಿಗಳನ್ನು ಅಭಿವೃದ್ಧಿಪಡಿಸಲಿದೆ. ಇದರಿಂದ ಸೋಂಕು ಹರಡುವಿಕೆ ನಿಯಂತ್ರಣಕ್ಕೆ ಬರುತ್ತದೆ ಎಂದು ಕಂಪನಿ ತಿಳಿಸಿದೆ.

Covid-19: ಕೊವಾಕ್ಸಿನ್​, ಕೋವಿಶೀಲ್ಡ್​ ಬೂಸ್ಟರ್​ ಡೋಸ್​ ಜೊತೆಗೆ ಕಾರ್ಬೆವಾಕ್ಸ್​ಗೂ ಅನುಮತಿ

ಈ ಲಸಿಕೆಯ ಲಾಭವೇನು?

ಈ ಲಸಿಕೆಯು 2 ರಿಂದ 8 ಡಿಗ್ರಿ ಸೆಲ್ಸಿಯಸ್‌ನಲ್ಲಿ ಸ್ಥಿರವಾಗಿರುತ್ತದೆ. ಅಲ್ಲದೇ ಈ ಲಸಿಕೆಯನ್ನು ಸುಲಭವಾಗಿ ಸಂಗ್ರಹಿಸಬಹುದು ಮತ್ತು ವಿತರಣೆಯನ್ನು ಮಾಡಬಹುದಾಗಿದೆ. ಅಲ್ಲದೆ, ಚುಚ್ಚುಮದ್ದಿನ ಮೂಲಕ ನೀಡುವ ಲಸಿಕೆಯಿಂದ ಚುಚ್ಚುಮದ್ದಿನ ತ್ಯಾಜ್ಯ ಉತ್ಪತ್ತಿ ಆಗುತ್ತಿತ್ತು. ಆದರೆ ಈಗ ತ್ಯಾಜ್ಯದ ಸಮಸ್ಯೆ ಇಲ್ಲ. ಲಸಿಕೆ ನೀಡಲು ತಜ್ಞರ ಅವಶ್ಯಕತೆ ಇಲ್ಲ. ಮಕ್ಕಳಿಗೆ ಮತ್ತು ಹಿರಿಯರಿಗೆ ಇಬ್ಬರಿಗೂ ನೀಡಬಹುದು. ಜಾಗತಿಕ ಬೇಡಿಕೆ ಪ್ರಮಾಣದ ಸುಲಭವಾಗಿ ಉತ್ಪಾದನೆ ಸಾಧ್ಯ.