ಕೊರೋನಾ ತಡೆಯಲು ನಿಮ್ಮ ಮನಸ್ಸು ಮೊದಲು ದೃಢವಾಗಿರಲಿ
ಕೊರೋನಾ ವೈರಸ್ ಹರಡುವಿಕೆ ಬಗ್ಗೆ ಆಗಾಗ ಚೆಕ್ ಮಾಡುವುದು, ಅದರ ಬಗ್ಗೆಯೇ ಚಿಂತಿಸುವುದು ನಿಮ್ಮ ಸ್ಟ್ರೆಸ್ ಹೆಚ್ಚಿಸುತ್ತದೆ. ಮಾನಸಿಕ ಒತ್ತಡ ಕಾಯಿಲೆಗೆ ದಾರಿ. ಆದ್ದರಿಂದ ಕೊರೊನಾ ಸಮಯದಲ್ಲೇ ನೀವು ಮಾನಸಿಕ ಆರೋಗ್ಯದ ಬಗ್ಗೆ ಅಲರ್ಟ್ ಆಗಿರುವ ಅಗತ್ಯವಿದೆ.
- ಕೊರೋನಾ ಸುದ್ದಿಗಳನ್ನು ನೋಡಬೇಡಿ. ಟಿವಿಯಲ್ಲಿ, ಪೇಪರ್‌ನಲ್ಲಿ ಈ ಬಗ್ಗೆ ಹೆದರಿಕೆ ಹುಟ್ಟಿಸುವಂಥ ಸುದ್ದಿಗಳು ಬರುತ್ತಲೇ ಇರುತ್ತವೆ. ಆದರೆ ಅದರಿಂಧ ನಿಮ್ಮ ಆರೋಗ್ಯವೇನೂ ಸುಧಾರಿಸುವುದಿಲ್ಲ. ಬದಲಾಗ ಮಾನಸಿಕ ಒತ್ತಡ ಮತ್ತಷ್ಟು ಹೆಚ್ಚಾಗುತ್ತದೆ. ಮನೆಯಲ್ಲಿ, ಆರೋಗ್ಯವಾಗಿರಿ. ಅನಗತ್ಯ ಹೊರಗೆ ಸಂಚರಿಸಬೇಡಿ.
- ಸಾಕಷ್ಟು ನಿದ್ರೆ ಮಾಡುವುದು ಮಾನಸಿಕ ಆರೋಗ್ಯವನ್ನು ಕಾಪಾಡುವ ಮೊದಲ ಅಂಶ. ನಿದ್ರೆ ಎಂದರೆ ಮೆದುಳಿನ ಜೀವಕೋಶಗಳು ರಿಚಾರ್ಜ್ ಆಗುವ ಸಮಯ. ಆಗ ಮೆದುಳಿನ ಜೀವಕೋಶಗಳ ಚಟುವಟಿಕೆ ನಿಧಾನವಾಗುತ್ತದೆ; ಅವೂ ವಿಶ್ರಾಂತಿ ಪಡೆಯುತ್ತವೆ. ಆದರೆ ಅಪ್ರಜ್ಞಾವಸ್ಥೆಯಲ್ಲಿ ಕ್ರಿಯೆ ನಡೆಯುತ್ತಲೇ ಇರುತ್ತದೆ. ಅದು ನಿಮ್ಮ ದಿನನಿತ್ಯದ ಚಟುವಟಿಕೆಗಳಿಗೆ ಅಗತ್ಯವಾದ ಕಲ್ಪನೆ, ಚಿಂತನೆಯ ಶಕ್ತಿಯನ್ನು ಹೆಚ್ಚು ಮಾಡುತ್ತದೆ. ನಿದ್ರೆ ಕಡಿಮೆಯಾದಷ್ಟೂ ಮೆದುಳು ನಿಷ್ಕ್ರಿಯವಾಗುತ್ತದೆ. ನಿದ್ರೆ ಹೆಚ್ಚಾದಂತೆ, ಮೆದುಳಿನ ಜೀವಕೋಶಗಳು ಇನ್ನಷ್ಟು ಹುರುಪು ಪಡೆಯುತ್ತವೆ.
- ಸರಳವಾದ ಧ್ಯಾನದ ಕೆಲವು ತಂತ್ರಗಳನ್ನು ಕಲಿತುಕೊಂಡು, ಪ್ರತಿದಿನ ಅದರಲ್ಲಿ ಅರ್ಧ ಗಂಟೆ ತೊಡಗಿಕೊಳ್ಳುವುದು ತುಂಬಾ ಸಹಾಯಕಾರಿ. ಆತಂಕ ಮತ್ತು ಒತ್ತಡದ ಕಾಯಿಲೆಗಳನ್ನು ಇದು ಕಡಿಮೆ ಮಾಡುತ್ತದೆ ಎಂದು ಅಮೆರಿಕದ ಮಸಾಚುಸೆಟ್ಸ್ ಜನರಲ್ ಹಾಸ್ಪಿಟಲ್ ಅಧ್ಯಯನದಿಂದ ಕಂಡುಕೊಂಡಿದೆ. ಮಾರಕ ಕಾಯಿಲೆಗಳಿಂದ ಬಳಲಿದವರು, ಆಪರೇಶನ್‌ಗೆ ಒಳಗಾದವರು ಕೂಡ ಧ್ಯಾನದ ಮೂಲಕ ಮನಸ್ಸನ್ನು ಹೀಲ್ ಮಾಡಿಕೊಂಡು ಉದಾಹರಣೆಗಳು ಕಂಡುಬಂದಿವೆ.
ಕೊರೋನಾದ 5 ಹೊಸ ಲಕ್ಷಣಗಳಿವು; ನಿರ್ಲಕ್ಷಿಸಬೇಡಿ!
- ರೋಚೆಸ್ಟರ್ ಮೆಡಿಕಲ್ ಸೆಂಟರ್ ಯೂನಿವರ್ಸಿಟಿ ನಡೆಸಿದ ಒಂದು ಅಧ್ಯಯನದ ಪ್ರಕಾರ, ನಿಮ್ಮ ಮನಸ್ಸಿನ ಭಾವನೆಗಳನ್ನು ದಿನವೂ ಬರೆದಿಡುವುದು ಹಗುರಾಗುವ ಒಂದು ಕ್ರಮದಂತೆ ಕೆಲಸ ಮಾಡುತ್ತದೆ. ದಿನಾ ಒಂದು ಡೈರಿ ಮೇಂಟೇನ್ ಮಾಡಬಹುದು, ಅಥವಾ ಅದು ಲೇಖನ, ಬರಹದ ರೂಪದಲ್ಲಿರಬಹುದು. ಅಥವಾ ತನಗೆ ತಾನೇ ಹೇಳಿಕೊಂಡು ಸ್ವಗತದ ರೂಪದಲ್ಲೂ ಇರಬಹುದು. ಅದೇನೇ ಇದ್ದರೂ ನಿಮ್ಮ ಮನಸ್ಸಿನ ಭಾವನೆಗಳನ್ನು ನಿಮಗೇ ಅದು ಸ್ಪಷ್ಟಪಡಿಸುತ್ತದೆ.
- ವಾಕಿಂಗ್ ಕೂಡ ಮಾನಸಿಕ ಆರೋಗ್ಯ ಸಮತೋಲನದಲ್ಲಿಡುವ ಒಂದು ಉಪಾಯ. ದಿನಕ್ಕೆ ಅರ್ಧ ಗಂಟೆ ಕಾಲ ವಾಕಿಂಗ್ ಮಾಡುವುದರಿಂದ, ಚೆನ್ನಾಗಿ ನಿದ್ರೆ ಬರುತ್ತದೆ. ನಿದ್ರೆ ಮನಸ್ಸಿನ ಆರೋಗ್ಯಕ್ಕೆ ಸಹಕಾರಿ, ವಾಕಿಂಗ್ ನಿಮ್ಮ ಆತ್ಮವಿಶ್ವಾಸವನ್ನೂ ಹೆಚ್ಚಿಸುತ್ತದೆ. ದೇಹವನ್ನು ಚುರುಕಾಗಿಡುತ್ತದೆ; ಒತ್ತಡವನ್ನು ಇಳಿಸುತ್ತದೆ. ಆದರೆ ತುಂಬಾ ಜನಸಂದಣಿ ಇರುವ ಪಾರ್ಕಿಗೆ ಹೋಗುವುದನ್ನು ಅವಾಯ್ಡ್ ಮಾಡಿ.
ಮಲಗೋ ಮೊದಲು ಈ 3 ಯೋಗಾಸನ ಮಾಡಿದ್ರೆ ಗಾಢ ನಿದ್ದೆ ಗ್ಯಾರಂಟಿ!
- ಮೊಬೈಲ್ ಅಥವಾ ಕಂಪ್ಯೂಟೆರ್ ಸಮಯವನ್ನು ಮಿತಿಗೊಳಿಸುವುದು ನಿಮ್ಮ ಮಾನಸಿಕ ಆರೋಗ್ಯಕ್ಕೆ ಪೂರಕ. ಪ್ರತಿದಿನ ಗಂಟೆಗಟ್ಟಲೆ ಸ್ಕ್ರೀನ್ ನೋಡುತ್ತಿದ್ದ ಯುವಕರ ಸೋಶಿಯಲ್ ತಾಣಗಳ ಓಡಾಟವನ್ನು ವಾರಕ್ಕೆ ಒಂದು ಗಂಟೆಗೆ ಇಳಿಸಿದಾಗ ಸಿಕ್ಕಿದ ಧನಾತ್ಮಕ ಫಲಿತಾಂಶ ಅವರನ್ನೇ ಚಕಿತಗೊಳಿಸಿದೆ. ಈ ಯುವಜನ ಮೊದಲಿನ ಒಂಟಿತನ, ಖಿನ್ನತೆಯನ್ನು ಈಗ ಅನುಭವಿಸುತ್ತಿಲ್ಲವಂತೆ. ಇದು ವೈದ್ಯರಿಗೂ ಅಚ್ಚರಿ ನೀಡಿದ ಒಂದು ಪ್ರಯೋಗ.
ಬಿ ಕೇರ್ಫುಲ್, ಟಾಯ್ಲೆಟ್‍ನಲ್ಲೂ ಅಟ್ಯಾಕ್ ಮಾಡುತ್ತೆ ಕೊರೋನಾ!
-ಮೈ ಹಾಗೂ ಮನೆ ಸ್ವಚ್ಛವಾಗಿದ್ದರೆ ಸುರಕ್ಷತೆಯ ಭಾವನೆ ಮೂಡುತ್ತದೆ. ಗಲೀಜಾಗಿದ್ದರೆ , ಧೂಳು ತುಂಬಿದ್ದರೆ ಅನಾರೋಗ್ಯದ ಭಾವನೆ ಮೂಡುತ್ತದೆ. ಆರೋಗ್ಯವಾಗಿರಲು ಸ್ವಚ್ಛತೆ ಕಾಪಾಡಿಕೊಳ್ಳಿ.
ಕೊರೋನಾದ 5 ಹೊಸ ಲಕ್ಷಣಗಳಿವು; ನಿರ್ಲಕ್ಷಿಸಬೇಡಿ!