ವೃತ್ತಿಗಾಗಿ ಈ ವಿಚಾರಗಳೊಂದಿಗೆ ರಾಜಿ ಮಾಡಿಕೊಳ್ಳಲೇ ಬೇಡಿ, ದುಬಾರಿ ಬೆಲೆ ತೆರಬೇಕಾಗುತ್ತೆ
ಹೊಟ್ಟೆಪಾಡಿಗಾಗಿ ಮಾಡುವ ವೃತ್ತಿಯೇ ಬಹಳಷ್ಟು ಜನರ ಸಂಕಷ್ಟಕ್ಕೂ ಮೂಲವಾಗಿಬಿಡುತ್ತದೆ. ಇಲ್ಲಿ ಮನುಷ್ಯನ ಸ್ವಭಾವ ಮುಖ್ಯವಾಗುತ್ತದೆಯಾದರೂ, ಉದ್ಯೋಗಕ್ಕಾಗಿ ಕೆಲವು ವಿಚಾರಗಳಲ್ಲಿ ರಾಜಿ ಮಾಡಿಕೊಳ್ಳಬಾರದು. ಜೀವನದಲ್ಲಿ ಸಂಘರ್ಷ, ಏರುಪೇರು ಇರುವಂಥದ್ದೇ. ಅವುಗಳಿಗೆ ಹೆದರಿ ರಾಜಿ ಮಾಡಿಕೊಳ್ಳುತ್ತ ಸಾಗಿದರೆ ಜೀವನ ನಿರರ್ಥಕವೆನಿಸುತ್ತದೆ.
ಜೀವನ ನಿರ್ವಹಣೆಗೆ ಉದ್ಯೋಗ ಅಗತ್ಯ. ಹಣಕಾಸಿನ ದೃಷ್ಟಿಯಿಂದ ಯಾವುದೇ ಕೊರತೆಗಳಿರದ ಜೀವನ ನಡೆಸಬೇಕು ಎನ್ನುವುದು ಎಲ್ಲರ ಬಯಕೆ. ಅದೇ ಉದ್ದೇಶದಿಂದ ಚೆನ್ನಾಗಿ ಓದಿ, ಉತ್ತಮ ಉದ್ಯೋಗ ಮಾಡುವುದು ಬಹಳಷ್ಟು ಸಾಮಾನ್ಯರ ಬಯಕೆ. ಹೀಗಾಗಿ, ಅದೇ ಮಾರ್ಗದಲ್ಲಿ ಎಲ್ಲರೂ ಸಾಗುತ್ತಾರೆ. ಆದರೆ, ಕೆಲವರಿಗೆ ಉತ್ತಮ ಶಿಕ್ಷಣವೂ ಸಾಧ್ಯವಾಗುವುದಿಲ್ಲ. ಆದರೂ ಅವರಲ್ಲಿ ಕೆಲವರು ಉತ್ತಮ ಉದ್ಯೋಗವೋ, ಉದ್ದಿಮೆಯನ್ನೋ ಮಾಡುತ್ತ ಜೀವನ ನಿರ್ವಹಣೆ ಮಾಡುತ್ತಾರೆ. ಕೆಲವರು ಓದಿನ ಮಟ್ಟಕ್ಕೆ ತಕ್ಕಂತೆ ಏನೋ ಕೆಲಸ ಮಾಡುತ್ತಾರೆ. ಕೆಲವರ ಆಸಕ್ತಿ ವಿಭಿನ್ನವಾಗಿರುವುದರಿಂದ ತಮಗಿಷ್ಟವಾದ ಕೆಲಸದಲ್ಲಿ ತೊಡಗುತ್ತಾರೆ. ಒಟ್ಟಿನಲ್ಲಿ ಕಾರ್ಮಿಕ ವರ್ಗದಿಂದ ಹಿಡಿದು ಕಂಪೆನಿಯ ಮಾಲೀಕನವರೆಗೂ ಅವರದ್ದೇ ಆದ ವೃತ್ತಿ ಇದ್ದೇ ಇರುತ್ತದೆ. ಆದರೆ, ಮಾಲೀಕನಾಗಲಿ, ಕಾರ್ಮಿಕನಾಗಲಿ ಕೆಲವು ಅಂಶಗಳಿಗೆ ಆದ್ಯತೆ ನೀಡಲೇ ಬೇಕಾಗುತ್ತದೆ. ಈ ವಿಚಾರಗಳನ್ನು ಯಾರೂ ಸಹ ಉದಾಸೀನ ಮಾಡಬಾರದು. ಏಕೆಂದರೆ, ಇವುಗಳಿಲ್ಲದೆ ಕೆಲವೊಮ್ಮೆ ಜೀವನಕ್ಕೆ ಉದ್ದೇಶವೇ ಇಲ್ಲ ಎನ್ನುವ ಭಾವನೆ ಮೂಡಬಹುದು. ಉದ್ಯೋಗವೂ ಬೇಕು, ಸಂತೋಷವೂ ಬೇಕು, ಜೀವನದ ಸೌಂದರ್ಯವನ್ನೂ ಆಸ್ವಾದಿಸಬೇಕು ಎಂದಾದರೆ ಈ ವಿಚಾರಗಲ್ಲಿ ರಾಜಿ ಮಾಡಿಕೊಳ್ಳಬೇಡಿ.
• ಆರೋಗ್ಯ (Health)
ಆರೋಗ್ಯವನ್ನು ಟೇಕನ್ ಫಾರ್ ಗ್ರ್ಯಾಂಟೆಡ್ (Taken for Granted) ರೀತಿಯಲ್ಲಿ ನೋಡುವವರು ಹೆಚ್ಚು. ಹೊಟ್ಟೆಪಾಡಿಗಾಗಿ ಮಾಡುವ ಉದ್ಯೋಗದಿಂದಲೇ (Profession) ಬಹಳಷ್ಟು ಮಂದಿ ಆರೋಗ್ಯವನ್ನು ಹಾಳುಮಾಡಿಕೊಳ್ಳುವುದು ವಿಚಿತ್ರ. ಏನಾದರೂ ಸಮಸ್ಯೆ ಆದಾಗಲೇ ಆರೋಗ್ಯದ ಬಗ್ಗೆ ಕಾಳಜಿ ಮೂಡಬೇಕು ಎಂದೇನಿಲ್ಲ. ಹೀಗಾಗಿ ಸಮತೋಲಿತ ಆಹಾರ (Balanced Food) ಸೇವನೆಗೆ ಆದ್ಯತೆ ನೀಡಬೇಕು. ಯಾವುದೇ ರೀತಿಯ ವ್ಯಸನಕ್ಕೆ (Addiction) ತುತ್ತಾಗದಂತೆ ಕಾಳಜಿ ವಹಿಸಬೇಕು. ಕಚೇರಿಗೆ ಬೇಗ ಹೋಗಬೇಕೆಂದು ಬೆಳಗ್ಗಿನ ತಿಂಡಿ ತಿನ್ನದಿದ್ದರೆ ದೇಹದ ಮೇಲೆ ಅಗಾಧ ಪರಿಣಾಮವುಂಟಾಗುತ್ತದೆ. ಇಂತಹ ಅನಾರೋಗ್ಯಕರ ಅಭ್ಯಾಸ (Unhealthy Habits) ತೊರೆಯಬೇಕು. ಬೆಳಗ್ಗೆ ಅಥವಾ ಸಂಜೆ ವ್ಯಾಯಾಮ (Exercise) ಮಾಡಬೇಕು.
Health Tips: ಡ್ರಿಂಕ್ಸ್ ಮಾಡೋದು ತಪ್ಪು, ಹೆಚ್ಚು ತೊಂದ್ರೆ ಆಗದಂತೆ ಮೊದಲು ಈ ಫುಡ್ ತಿನ್ನಿ
• ಮಾನಸಿಕ ಆರೋಗ್ಯ
ದೈಹಿಕ ಆರೋಗ್ಯದಷ್ಟೇ ಮನಸ್ಸಿನ ಆರೋಗ್ಯವೂ ಮುಖ್ಯ. ಮನಸ್ಸಿನ ಶಾಂತಿ (Peace) ಕಾಪಾಡಿಕೊಳ್ಳುವುದು ಸುಲಭವಲ್ಲ. ಒತ್ತಡ (Stress), ಉದ್ವೇಗ, ವೃತ್ತಿ ಸಂಬಂಧಿತ ಭಾರಗಳನ್ನು ಅತಿಯಾಗಿ ಮನಸ್ಸಿಗೆ ತೆಗೆದುಕೊಳ್ಳಬಾರದು. ದೀರ್ಘ ಸಮಯ ಒಂದೇ ಕೆಲಸ ಮಾಡುತ್ತಿದ್ದರೆ ಮಧ್ಯೆ ಐದು ನಿಮಿಷಗಳ ಕಾಲವಾದರೂ ಬ್ರೇಕ್ ತೆಗೆದುಕೊಳ್ಳಬೇಕು. ಹೊರೆ (Burden) ಎನಿಸುವ ಕೆಲಸಗಳನ್ನು ಒಪ್ಪಿಕೊಳ್ಳಬಾರದು. ಒಪ್ಪಿಕೊಂಡ ಮೇಲೆ ಅದರ ಬಗ್ಗೆಯೇ ಚಿಂತಿಸಿ ಒತ್ತಡಕ್ಕೆ ತುತ್ತಾಗಬಾರದು.
• ನೋ ಎನ್ನಲು ಒತ್ತಡ ಬೇಡ
ಕೊಟ್ಟ ಕೆಲಸಗಳನ್ನೆಲ್ಲ ಮಾಡುವುದು ಯಾರಿಗೂ ಸಾಧ್ಯವಿಲ್ಲ. ಹೀಗಾಗಿ, ಮಿತಿ (Boundary) ಹಾಕಿಕೊಳ್ಳಿ. ಯಾವುದಾದರೂ ಕೆಲಸಕ್ಕೆ “ಈಗ ಸಾಧ್ಯವಾಗದು’ ಎಂದು ಹೇಳುವ ಧೈರ್ಯ ಬೆಳೆಸಿಕೊಳ್ಳಿ. ನಿಮಗೆ ಸಂಬಳ (Salary) ನೀಡುತ್ತಾರೆ ಎಂದ ಮಾತ್ರಕ್ಕೆ ನಿಮ್ಮ ಮಿತಿ ಮಿರುವಷ್ಟು ಕೆಲಸ ಮಾಡಬೇಕು ಎಂದೇನಿಲ್ಲ. ಕಾರ್ಯದ ಸಮಯಕ್ಕೆ ಬದ್ಧವಾಗಿರಿ. ನಿಮ್ಮ ಖಾಸಗಿ ಸಮಯದಲ್ಲಿ (Own Time) ಕಚೇರಿ ಕೆಲಸ ಬೇಡ. ಇತರರ ಕೆಲಸ ಸ್ವೀಕರಿಸುವುದು ಅನಗತ್ಯ.
• ಘನತೆ (Respect) ಕಾಪಾಡಿಕೊಳ್ಳಿ
ನಿಮಗೆ ಎಲ್ಲಿ ಗೌರವ ಇಲ್ಲವೆನಿಸುತ್ತದೆಯೋ, ನಿಮ್ಮನ್ನು ಟೇಕನ್ ಫಾರ್ ಗ್ರ್ಯಾಂಟೆಡ್ ಎನ್ನುವ ರೀತಿ ನಡೆಸಿಕೊಳ್ಳಲಾಗುತ್ತದೆಯೋ, ಪದೇ ಪದೆ ಮನಸ್ಸಿಗೆ ಚುಚ್ಚುವಂತಹ ಘಟನೆ ಎದುರಾಗುತ್ತದೆಯೋ, ಕೀಳರಿಮೆ ಬೆಳೆಸುವ ವಾತಾವರಣವಿದೆಯೋ ಅಂತಹ ಸ್ಥಳಗಳಲ್ಲಿ ಕೆಲಸ ಮಾಡಬೇಡಿ. ನಿಮ್ಮಲ್ಲಿ ಕೌಶಲವಿದ್ದರೆ (Skill) ಉತ್ತಮ ಬೇರೆ ಉದ್ಯೋಗ ದೊರೆತೇ ದೊರೆಯುತ್ತದೆ. ಇಂಥವುಗಳನ್ನು ಸ್ವೀಕರಿಸುತ್ತ ಸಾಗಿದರೆ ಕೊನೆಗೊಂದು ದಿನ ನಿಮ್ಮ ಮೇಲೆ ನಿಮಗೇ ತೀವ್ರ ಬೇಸರ ಬರುತ್ತದೆ, ಜೀವನ ವ್ಯರ್ಥ ಎನಿಸುತ್ತದೆ.ವ್ಯಾಯಾ
ಎಷ್ಟು ಪ್ರಯತ್ನಿಸಿದ್ರೂ ಕೆಲಸ ಸಿಗುತ್ತಿಲ್ಲವೇ?: ಇಲ್ಲಿದೆ ಸರಳ ಪರಿಹಾರ..!
• ಮೌಲ್ಯ-ನೈತಿಕತೆ
ಜೀವನದಲ್ಲಿ ದುಡ್ಡೇ ಎಲ್ಲವೂ ಅಲ್ಲ, ನಿಮ್ಮತನವನ್ನು ಕಳೆದುಕೊಳ್ಳಲು ಸಿದ್ಧರಾದರೆ ಅದಕ್ಕೆ ಭಾರೀ ಬೆಲೆ ತೆರಬೇಕಾಗುತ್ತದೆ. ಹೀಗಾಗಿ, ನಿಮ್ಮ ಸಮಗ್ರತೆ, ಮಾನವೀಯ ಮೌಲ್ಯ (Values), ನೈತಿಕತೆ ಉಳಿಸಿಕೊಳ್ಳುವ ಜವಾಬ್ದಾರಿ ನಿಮ್ಮದೇ.