Asianet Suvarna News Asianet Suvarna News

ರಾಮನಗರ ಜಿಲ್ಲೆಯಲ್ಲಿ ನಿಯಂತ್ರಣಕ್ಕೆ ಬಾರದ ಡೆಂಘೀ..!

ಕೀಟಜನ್ಯ ಕಾಯಿಲೆಯಾಗಿದ್ದರು ಡೆಂಘೀ ಇತ್ತೀಚಿನ ದಿನದಲ್ಲಿ ವ್ಯಾಪಕವಾಗಿ ಹರಡುತ್ತಿದೆ. ಅದರಲ್ಲೂ ಮಳೆಗಾಲ ಮುಕ್ತಾಯದ ಹಂತದಲ್ಲಿರುವ ಸಮಯದಲ್ಲಿಯೇ ಅತೀ ಹೆಚ್ಚು ಕಂಡು ಬರುತ್ತಿರುವುದು ಜಿಲ್ಲಾ ಆರೋಗ್ಯ ಇಲಾಖೆಗೆ ಮತ್ತಷ್ಟು ತಲೆ ಬಿಸಿಯನ್ನುಂಟು ಮಾಡಿದೆ.

Dengue Fever Not Control in Ramanagara District grg
Author
First Published Nov 3, 2023, 11:00 PM IST

ರಾಮನಗರ(ನ.03):  ಜಿಲ್ಲಾ ಆರೋಗ್ಯ ಇಲಾಖೆಯ ಸಾಕಷ್ಟು ಪ್ರಯತ್ನದ ನಡುವೆಯು ಮಹಾಮಾರಿ ಡೆಂಘೀ ನಿಯಂತ್ರಣಕ್ಕೆ ಬರುತ್ತಿಲ್ಲ. ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ, ಪ್ರಕರಣ ಕಡಿಮೆಯಾಗಿದ್ದರು, ತೀವ್ರತೆ ಕಡಿಮೆಯಾಗಿಲ್ಲ.
ಕೀಟಜನ್ಯ ಕಾಯಿಲೆಯಾಗಿದ್ದರು ಡೆಂಘೀ ಇತ್ತೀಚಿನ ದಿನದಲ್ಲಿ ವ್ಯಾಪಕವಾಗಿ ಹರಡುತ್ತಿದೆ. ಅದರಲ್ಲೂ ಮಳೆಗಾಲ ಮುಕ್ತಾಯದ ಹಂತದಲ್ಲಿರುವ ಸಮಯದಲ್ಲಿಯೇ ಅತೀ ಹೆಚ್ಚು ಕಂಡು ಬರುತ್ತಿರುವುದು ಜಿಲ್ಲಾ ಆರೋಗ್ಯ ಇಲಾಖೆಗೆ ಮತ್ತಷ್ಟು ತಲೆ ಬಿಸಿಯನ್ನುಂಟು ಮಾಡಿದೆ.

2022ರ ಜನವರಿಯಿಂದ ಡಿಸೆಂಬರ್ ತನಕ ಜಿಲ್ಲೆಯಲ್ಲಿ ಒಟ್ಟು 185 ಡೆಂಘೀ ಪ್ರಕರಣಗಳು ಪತ್ತೆಯಾಗಿತ್ತು. ಅದರಲ್ಲೂ ಜಿಲ್ಲಾ ಕೇಂದ್ರ ರಾಮನಗರದಲ್ಲಿಯೇ ಇದು ಶತಕ ಬಾರಿಸಿ ಒಟ್ಟು 106 ಪ್ರಕರಣಗಳು ಪತ್ತೆಯಾಗಿದ್ದು ಸಾಕಷ್ಟು ತಲೆಬಿಸಿಗೆ ಕಾರಣವಾಗಿತ್ತು. ಹಾಗಾಗಿ ಉಳಿದ ತಾಲೂಕುಗಳಲ್ಲಿ ಎರಡಂಕಿ ತಲುಪದಿರುವುದು ಸಂತಸದ ವಿಚಾರವಾದರೂ, ಅದರ ತೀವ್ರತೆ ಹೆಚ್ಚಿರುವ ಜಿಲ್ಲಾ ಕೇಂದ್ರದಲ್ಲಿ ಡೆಂಘೀ ಪ್ರಕರಣ ಕಡಿಮೆ ಮಾಡುವ ಸಂಬಂಧ ಆರೋಗ್ಯ ಇಲಾಖೆ ಅಧಿಕಾರಿಗಳು ಸಾಕಷ್ಟು ಪ್ರಯತ್ನ ಪಟ್ಟಿದ್ದಾರೆ. ಆದರೂ, ಸಂಪೂರ್ಣವಾಗಿ ಕಡಿಮೆ ಮಾಡಲು ಸಾಧ್ಯವಾಗಿಲ್ಲ.

'ಐದು ವರ್ಷ ನಾನೇ ಸಿಎಂ' ಸಿದ್ದರಾಮಯ್ಯ ಹೇಳಿಕೆ ಬೆನ್ನಲ್ಲೇ ಡಿಕೆಶಿ ಸಿಎಂ ಆಗಲೇಬೇಕು ಎಂದ ರಾಮನಗರ ಶಾಸಕ ಇಕ್ಬಾಲ್!

ರಾಮನಗರ, ಕನಕಪುರ:

ಈ ವರ್ಷದ ಜನವರಿಯಿಂದ ಸೆಪ್ಟೆಂಬರ್ ತನಕ ಜಿಲ್ಲೆಯಲ್ಲಿ ಒಟ್ಟು 68 ಡೆಂಘೀ ಪ್ರಕರಣಗಳು ಕಂಡು ಬಂದಿವೆ. ಅದರಲ್ಲಿ ಮತ್ತೆ ಜಿಲ್ಲಾ ಕೇಂದ್ರ ರಾಮನಗರ ಅಗ್ರಸ್ಥಾನ ಪಡೆದುಕೊಂಡಿದ್ದು ಒಟ್ಟು 28 ಪ್ರಕರಣಗಳು ಪತ್ತೆಯಾಗಿದೆ. ಎರಡನೇ ಸ್ಥಾನದಲ್ಲಿ ಕನಕಪುರ ಇದ್ದು ಒಟ್ಟು 20 ಪ್ರಕರಣಗಳು ಪತ್ತೆಯಾಗಿದೆ.

ನಿಯಂತ್ರಣಾ ಕ್ರಮಗಳು:

ಜಿಲ್ಲಾ ಆರೋಗ್ಯ ಇಲಾಖೆ ಕೀಟಜನ್ಯ ಕಾಯಿಲೆಗಳಾದ ಡೆಂಘೀ, ಚಿಕೂನ್ ಗುನ್ಯ,ಮಲೇರಿಯಾದಂತಹ ಮಾರಣಾಂತಿಕ ಕಾಯಿಲೆಗಳ ನಿಯಂತ್ರಣಕ್ಕಾಗಿ ಸಾಕಷ್ಟು ಶ್ರಮ ಹಿಸುತ್ತಿದೆ. ಆದರೂ, ಸಂಪೂರ್ಣ ನಿರ್ಮೂಲನೆ ಸಾಧ್ಯವಾಗಿಲ್ಲ. ಈಡೀಸ್ ಲಾರ್ವ ಸಮೀಕ್ಷೆ, ವಿಜ್ಞಾನ ಶಿಕ್ಷಕರಿಗೆ ತರಬೇತಿ, ಶಂಕಿತ ಪ್ರಕರಣಗಳ ಪತ್ತೆ ಕಾರ್‍ಯ, ಆರೋಗ್ಯ ಶಿಕ್ಷಣ ಚಟುವಟಿಕೆಗಳು ಸೇರಿದಂತೆ ಸಾಕಷ್ಟು ಕೆಲಸ ಮಾಡಲಾಗುತ್ತಿದೆ.

ಲಾರ್ವ ಹಾರಿ ಮೀನು ಸಾಕಾಣಿಕೆ:

ಜಿಲ್ಲೆಯ ಒಟ್ಟು 73 ಆರೋಗ್ಯ ಸಂಸ್ಥೆಗಳಲ್ಲಿ ಸಿಮೆಂಟ್ ತೊಟ್ಟಿ ನಿರ್ಮಿಸಿ, ಮೀನುಗಾರಿಕೆ ಇಲಾಖೆ ಸಹಕಾರಿಯೊಂದಿಗೆ ಗಪ್ಪಿ ಮತ್ತು ಗ್ಯಾಂಬೋಜಿಯಾ ಮೀನುಗಳನ್ನು ಆರೋಗ್ಯ ಇಲಾಖೆ ಸಾಕಾಣಿಕೆ ಮಾಡುತ್ತಿದೆ. ಇದನ್ನು ಕನಿಷ್ಠ 6 ತಿಂಗಳ ಕಾಲ ನೀರು ನಿಲ್ಲುವ ಕೆರೆ, ಕುಂಟೆ, ಕಲ್ಯಾಣಿಗಳಲ್ಲಿ ಈ ಮೀನುಗಳನ್ನು ಬಿಡಲಾಗುತ್ತದೆ. ಆ ಮೂಲಕ ಸೊಳ್ಳೆ ಉತ್ಪತ್ತಿಯನ್ನು ಕಡಿಮೆ ಮಾಡಲಾಗುತ್ತಿದೆ.

ಡೆಂಘೀ ರಥಕ್ಕೆ ಚಾಲನೆ:

ಮರಣಾಂತಿಕ ಕಾಯಿಲೆಯಾಗಿರುವ ಕಾರಣ ಸರಕಾರ ಡೆಂಘಿ ರಥದ ಮೂಲಕ ಸಾರ್ವಜನಿಕರಿಗೆ ಮಾಹಿತಿ ನೀಡುವಂತೆ ಸೂಚಿಸಿದೆ. ಹಾಗಾಗಿ ಸರಕಾರದ ಮಾರ್ಗ ಸೂಚಿಯನ್ವಯ ಜಿಲ್ಲಾ ಆರೋಗ್ಯ ಇಲಾಖೆ ಅಕಾರಿಗಳು ಡೆಂಘೀ ರಥಕ್ಕೆ ಚಾಲನೆ ನೀಡಿದೆ. ಇದು ಎರಡು ತಿಂಗಳ ಕಾಲ ಗ್ರಾಮೀಣ, ನಗರ, ಕೈಗಾರಿಕಾ ಪ್ರದೇಶಗಳಲ್ಲಿ ಸಂಚರಿಸಿ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದೆ.

ರಾಮನಗರದಲ್ಲಿ ಮಂಗಗಳ ಮಾರಣಹೋಮ; ವಿಷವುಣಿಸಿ ಸಾಯಿಸಿದ  ದುಷ್ಕರ್ಮಿಗಳು!

ಡೆಂಘೀಯಷ್ಟೆ ಪ್ರಬಲವಾಗಿ ಜಿಲ್ಲೆಯಲ್ಲಿ ಚಿಕೂನ್ ಗುನ್ಯ ಹಾವಳಿ ಹೆಚ್ಚಾಗುತ್ತಿದೆ. ರಾಮನಗರ ಮತ್ತು ಕನಕಪುರ ತಾಲೂಕಿನಲ್ಲಿ ತಲಾ ಎರಡು ಪ್ರಕರಣ ಪತ್ತೆಯಾದರೆ, ಚನ್ನಪಟ್ಟಣ ತಾಲೂಕಿನಲ್ಲಿ 1 ಪ್ರಕರಣ ಪತ್ತೆಯಾಗಿದ್ದು, ಮಾಗಡಿ ಶೂನ್ಯವಾಗಿದೆ. ಅದೇ ರೀತಿ ಜಿಲ್ಲೆಯಲ್ಲಿ ಆನೆಕಾಲು ರೋಗದ ನಾಲ್ಕು ಪ್ರಕರಣಗಳು ಪತ್ತೆಯಾಗಿದ್ದು ಮೂರು ಜಿಲ್ಲಾ ಕೇಂದ್ರ ರಾಮನಗರದಲ್ಲಿಯೇ ಇದ್ದು, ಕನಕಪುರದಲ್ಲಿ ಒಂದು ಪ್ರಕರಣ ಪತ್ತೆಯಾಗಿದೆ.
ಡೆಂಘೀ ಪ್ರಕರಣಗಳು:

ತಾಲೂಕು 2023(ಸೆ.ಅಂತ್ಯಕ್ಕೆ) 2022

1 13
ಕನಕಪುರ 2 28
ಮಾಗಡ 0 11
ರಾಮನಗರ 2 106
ಒಟ್ಟ 68 158

ರಾಮನಗರ ಜಿಲ್ಲೆಯಲ್ಲಿ ಆರೋಗ್ಯ ಇಲಾಖೆ ವತಿಯಿಂದ ಕೀಟಜನ್ಯ ಕಾಯಿಲೆ ನಿಯಂತ್ರಣಾ ಸಂಬಂಧ ಸಾಕಷ್ಟು ಮುಂಜಾಗ್ರತ ಕ್ರಮ ಕೈಗೊಲಾಗುತ್ತಿದೆ. ಈಡೀಸ್ ಲಾರ್ವ ಸಮೀಕ್ಷೆ, ವಿಜ್ಞಾನ ಶಿಕ್ಷಕರಿಗೆ ತರಬೇತಿ, ಶಂಕಿತ ಪ್ರಕರಣಗಳ ಪತ್ತೆ ಕಾರ್‍ಯ, ಆರೋಗ್ಯ ಶಿಕ್ಷಣ ಚಟುವಟಿಕೆ ಮಾಡಲಾಗಿದೆ ಎಂದು ರಾಮನಗರ ಜಿಲ್ಲಾ ಕೀಟಶಾಸ್ತ್ರಜ್ಞೆ ಸೌಮ್ಯ ತಿಳಿಸಿದ್ದಾರೆ. 

Follow Us:
Download App:
  • android
  • ios