Black Fever: ಎಚ್ಚರ..! ಹರಡುತ್ತಿದೆ ಮಾರಣಾಂತಿಕ ಕಪ್ಪು ಜ್ವರ

ಕೊರೋನಾ ನಂತರದ ವರ್ಷಗಳಲ್ಲಿ ಸೋಂಕು, ಕಾಯಿಲೆಗಳು ವೇಗವಾಗಿ ಹರಡುತ್ತಿವೆ. ಮಂಕಿಪಾಕ್ಸ್‌, ನೋರೋ ವೈರಸ್‌, ಡೆಂಗ್ಯೂ, ಚಿಕುನ್‌ಗುನ್ಯಾ, ಟೈಫಾಯ್ಡ್‌ ಮೊದಲಾದ ಕಾಯಿಲೆಗಳು ಜನರನ್ನು ಕಂಗೆಡಿಸುತ್ತಿವೆ. ಪಶ್ಚಿಮಬಂಗಾಳದಲ್ಲಿ ಕಾಣಿಸಿಕೊಂಡಿರುವ ಕಪ್ಪು ಜ್ವರ ಜನರಲ್ಲಿ ಆತಂಕಕ್ಕೆ ಕಾರಣವಾಗಿದೆ.

Black Fever Everything You Need To Know About This Disease Vin

ಮಳೆಗಾಲ ಆರಂಭವಾದೊಡನೆ ಹಲವು ಕಾಯಿಲೆಗಳು ಹರಡಲು ಶುರುವಾಗುತ್ತದೆ. ಈ ಮಧ್ಯೆ ಪಶ್ಚಿಮಬಂಗಾಳದಲ್ಲಿ ಕಪ್ಪು ಜ್ವರ ವ್ಯಾಪಕವಾಗಿ ಹರಡುತ್ತಿದ್ದು, ಜನರನ್ನು ಕಂಗೆಡಿಸುತ್ತಿದೆ. ಸೋಂಕಿನಿಂದಾಗಿ ಕೈ, ಕಾಲು, ಮುಖ, ಹೊಟ್ಟೆಯ ಮೇಲೆ ಕಪ್ಪು ಬಣ್ಣ ಹರಡುತ್ತದೆ. ಅದಕ್ಕಾಗಿಯೇ ಇದನ್ನು ಕರಿಂಬಾನಿ ಅಥವಾ ಕಾಲಾ ಅಜರ್ ಎಂದು ಕರೆಯಲಾಗುತ್ತದೆ. ಕಪ್ಪು ಜ್ವರಕ್ಕೆ ಕಾರಣ ಕಸ ಶೇಖರಣೆಯಾದಾಗ ಚಿಗಟಗಳು ಹೆಚ್ಚಾಗುವ ಪರಿಸ್ಥಿತಿಯಾಗಿದೆ. ಕಳೆದ ಎರಡು ವಾರಗಳಲ್ಲಿ ಬಂಗಾಳದ ಹನ್ನೊಂದು ಜಿಲ್ಲೆಗಳಲ್ಲಿ ಕಾಲಾ ಅಜರ್ ಅಥವಾ ಕಪ್ಪು ಜ್ವರದ ಸುಮಾರು 65 ಪ್ರಕರಣಗಳು ವರದಿಯಾಗಿವೆ. ರಾಜ್ಯ ಆರೋಗ್ಯ ಇಲಾಖೆಯ ಪ್ರಕಾರ, ಡಾರ್ಜಿಲಿಂಗ್, ಮಾಲ್ಡಾ, ಉತ್ತರ ದಿನಾಜ್‌ಪುರ, ದಕ್ಷಿಣ ದಿನಜ್‌ಪುರ ಮತ್ತು ಕಾಲಿಂಪಾಂಗ್‌ನಲ್ಲಿ ಹೆಚ್ಚು ಕಪ್ಪು ಜ್ವರ ಪ್ರಕರಣಗಳು ಕಂಡುಬರುತ್ತಿವೆ. ಅಲ್ಲದೆ, ಉತ್ತರ ಬಂಗಾಳ ಮತ್ತು ದಕ್ಷಿಣ ಬಂಗಾಳದಲ್ಲಿ ಈ ರೋಗ ವರದಿಯಾಗಿದೆ. ಸೋಂಕಿನಿಂದಾಗಿ ಕೈ, ಕಾಲು, ಮುಖ, ಹೊಟ್ಟೆಯ ಮೇಲೆ ಕಪ್ಪು ಬಣ್ಣ ಹರಡುತ್ತದೆ. 

ಕಪ್ಪು ಜ್ವರದ ರೋಗ ಲಕ್ಷಣಗಳೇನು ?
ಅನೈರ್ಮಲ್ಯದ ವಾತಾವರಣದಲ್ಲಿ ವಾಸಿಸುವವರು ರೋಗಕ್ಕೆ (Disease) ಹೆಚ್ಚು ತುತ್ತಾಗುತ್ತಿದ್ದಾರೆ. ಕಡಿಮೆ ಪೌಷ್ಟಿಕಾಂಶದ ಸ್ಥಿತಿಯನ್ನು ಹೊಂದಿರುವ ಜನರಿಗೆ ಸಹ ರೋಗದ ಅಪಾಯ ಹೆಚ್ಚಿದೆ. ರೋಗಾಣುಗಳು ದೇಹ (Body)ವನ್ನು ಪ್ರವೇಶಿಸಿದರೆ, ಒಂದರಿಂದ ನಾಲ್ಕು ತಿಂಗಳೊಳಗೆ ರೋಗಲಕ್ಷಣಗಳು ಕಾಣಿಸಿಕೊಳ್ಳುತ್ತವೆ ಎಂದು ತಜ್ಞರು ಹೇಳುತ್ತಾರೆ. ಕಪ್ಪು ಜ್ವರದ ಮುಖ್ಯ ಲಕ್ಷಣಗಳು ಅನಿಯಮಿತ ಜ್ವರ, ತೂಕ ನಷ್ಟ ಮತ್ತು ರಕ್ತಹೀನತೆಯ ಸಮಸ್ಯೆ ಕಂಡು ಬರುವುದಾಗಿದೆ.

ಭಾರತಕ್ಕೆ ಮಂಕಿಪಾಕ್ಸ್​ ಎಂಟ್ರಿ, ಕೇರಳದಲ್ಲಿ ಹೈ ಅಲರ್ಟ್: ಈ ವೈರಾಣು​​ ಜನ್ಮರಹಸ್ಯವೇನು ಗೊತ್ತಾ?

ವಿಶ್ವ ಆರೋಗ್ಯ ಸಂಸ್ಥೆ (WHO) ಪ್ರಕಾರ, ಕಾಲಾ ಅಜರ್ ಏಕಾಏಕಿ ಮತ್ತು ಸಾವಿನ ಹೆಚ್ಚಿನ ಅಪಾಯವನ್ನು ಹೊಂದಿರುವ ರೋಗಗಳಲ್ಲಿ ಒಂದಾಗಿದೆ. ಕಪ್ಪು ಜ್ವರ ಮಾರಣಾಂತಿಕ ಕಾಯಿಲೆಯಾಗಿದ್ದು, ಅದರ ಬಗ್ಗೆ ಕಾಳಜಿ ವಹಿಸಬೇಕು. ದೀರ್ಘಕಾಲದ ಜ್ವರದ ಜೊತೆಗೆ ರಕ್ತಹೀನತೆ ಮತ್ತು ಆಯಾಸವು ಕಪ್ಪು ಜ್ವರದ ಮುಖ್ಯ ಲಕ್ಷಣಗಳಾಗಿವೆ. ಸರಿಯಾದ ಸಮಯದಲ್ಲಿ ರೋಗನಿರ್ಣಯ ಮಾಡಿದರೆ ಸಂಪೂರ್ಣವಾಗಿ ಚಿಕಿತ್ಸೆ (Treatment) ನೀಡಬಹುದು ಮತ್ತು ಗುಣಪಡಿಸಬಹುದು.

ಕಪ್ಪು ಜ್ವರ (Black fever)ದಲ್ಲಿ ಮುಖ್ಯವಾಗಿ ಎರಡು ವಿಧವಿದೆ. ಒಂದು ಆಂತರಿಕ ಅಂಗಗಳ ಮೇಲೆ ಪರಿಣಾಮ ಬೀರುತ್ತದೆ. ಹಾಗೆಯೇ ಚರ್ಮದ ಮೇಲೆ ಮಾತ್ರ ಪರಿಣಾಮ ಬೀರುವ ಕಾಲಾ ಅಜರ್ ಕೂಡ ಇದೆ. ಇದು ಮುಖ, ಕೈ ಮತ್ತು ಕಾಲುಗಳ ಮೇಲೆ ವಾಸಿಯಾಗದ ಹುಣ್ಣುಗಳನ್ನು ಉಂಟುಮಾಡಬಹುದು.ಪ್ರೋಟೀನ್, ಕಬ್ಬಿಣ, ವಿಟಮಿನ್ ಎ ಮತ್ತು ಸತುವು ಕೊರತೆಯಿರುವ ಆಹಾರವನ್ನು ತಿನ್ನುವುದು ಕಾಲಾ ಅಜರ್ ಅಥವಾ ಕಪ್ಪು ಜ್ವರದ ಅಪಾಯವನ್ನು ಹೆಚ್ಚಿಸುತ್ತದೆ ಎಂದು ತಜ್ಞರು ಸೂಚಿಸುತ್ತಾರೆ. ದುರ್ಬಲಗೊಂಡ ರೋಗನಿರೋಧಕ ಶಕ್ತಿ ಹೊಂದಿರುವ ಜನರು ಸಹ ಈ ಕಾಯಿಲೆಗೆ ತುತ್ತಾಗುವ ಅಪಾಯವನ್ನು ಹೊಂದಿರುತ್ತಾರೆ.

ಕಾಯಿಲೆ ಯಾವ ರೀತಿ ಹರಡುತ್ತದೆ ?
1) ಜಿಗಣೆ ಕಚ್ಚುವುದು
2) ಸೋಂಕಿತ ತಾಯಿಯಿಂದ ಮಗುವಿಗೆ
3) ಬಳಸಿದ ಸಿರಿಂಜ್ ಮತ್ತು ಸೂಜಿಗಳ ಮೂಲಕ

ಮಂಕಿಪಾಕ್ಸ್ ಭೀತಿ: ಕರ್ನಾಟಕದಲ್ಲಿ ಮುನ್ನೆಚ್ಚರಿಕಾ ಕ್ರಮಗಳು ಜಾರಿ

ಕಾಯಿಲೆ ಹರಡದಂತೆ ಏನು ಮಾಡಬಹುದು ?
ಕಪ್ಪು ಜ್ವರ ಹರಡದಂತೆ ನಿಯಂತ್ರಿಸಲು ಚಿಗಟ ನಿಯಂತ್ರಣದಿಂದ ರೋಗವನ್ನು ತಡೆಗಟ್ಟಬೇಕು. ಇದಕ್ಕಾಗಿ ಕೀಟನಾಶಕಗಳನ್ನು ಸಿಂಪಡಿಸಬಹುದು. ಸಾಮಾನ್ಯ ನೈರ್ಮಲ್ಯವನ್ನು ಕಾಪಾಡಿಕೊಳ್ಳುವುದು ಸಹ ಮುಖ್ಯವಾಗಿದೆ. ಮನೆ ಮತ್ತು ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು. ಹೊರಾಂಗಣದಲ್ಲಿ ಮಲಗುವುದನ್ನು ತಪ್ಪಿಸಬೇಕು. ಹಾಗೆಯೇ ಪ್ರಾಣಿಗಳೊಂದಿಗೆ ಸಂವಹನ ನಡೆಸುವಾಗ ವೈಯಕ್ತಿಕ ನೈರ್ಮಲ್ಯವನ್ನು ಕಾಪಾಡಿಕೊಳ್ಳಿ.

ಮರಳು ಜಿಗಣೆಗಳು ಸೂರ್ಯೋದಯದ ನಂತರ ಮತ್ತು ಸೂರ್ಯಾಸ್ತದ ಮೊದಲು ಕಚ್ಚುವ ಸಾಧ್ಯತೆಯಿದೆ. ಹೀಗಾಗಿ ಜಿಗಣೆ ಉತ್ಪತ್ತಿಯಾಗುವುದನ್ನು ತಪ್ಪಿಸಿ. ಮರಳು ಜಿಗಣೆಗಳ ಆವಾಸಸ್ಥಾನಗಳನ್ನು ನಿವಾರಿಸಿ. ಕೀಟನಾಶಕವನ್ನು ಬಳಸಿ. ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛಗೊಳಿಸಿ. ತ್ಯಾಜ್ಯವನ್ನು ಸಮಯಕ್ಕೆ ಸರಿಯಾಗಿ ವಿಲೇವಾರಿ ಮಾಡಿ. ಇಡೀ ದೇಹವನ್ನು ಆವರಿಸುವ ಬಟ್ಟೆಯನ್ನು ಧರಿಸಿ. ಇದು ಸಾಂಕ್ರಾಮಿಕ ರೋಗವಲ್ಲ. ಆದ್ದರಿಂದ ಇದನ್ನು ತ್ವರಿತವಾಗಿ ನಿಯಂತ್ರಿಸಬಹುದು. ಮರಳು ಜಿಗಣೆಗಳ ಕಾಟವನ್ನು ತಪ್ಪಿಸುವ ಮೂಲಕ ಈ ರೋಗವನ್ನು ತಡೆಯಬಹುದು.

Latest Videos
Follow Us:
Download App:
  • android
  • ios