Bengaluru: ಎಂಟು ವರ್ಷದ ಬಾಲಕಿಯ ಹೊಟ್ಟೆಯಿಂದ ಕ್ರಿಕೆಟ್ ಚೆಂಡಿನ ಗಾತ್ರದ ಕೂದಲ ಬಾಲ್ ಹೊರತೆಗೆದ ವೈದ್ಯರು!
ಬೆಂಗಳೂರಿನಲ್ಲಿ ಅಪರೂಪದ ಪ್ರಕರಣವೊಂದರಲ್ಲಿ, 8 ವರ್ಷದ ಬಾಲಕಿಯ ಹೊಟ್ಟೆಯಿಂದ ಕ್ರಿಕೆಟ್ ಚೆಂಡಿನಷ್ಟು ದೊಡ್ಡದಾದ ಕೂದಲಿನ ಬಾಲ್ ಅನ್ನು ವೈದ್ಯರು ಹೊರತೆಗೆದಿದ್ದಾರೆ. ಟ್ರೈಕೋಫೇಜಿಯಾ ಎಂಬ ಸ್ಥಿತಿಯಿಂದ ಬಳಲುತ್ತಿದ್ದ ಬಾಲಕಿ ಕೂದಲನ್ನು ತಿನ್ನುವ ಅಭ್ಯಾಸವನ್ನು ಹೊಂದಿದ್ದಳು.
ಬೆಂಗಳೂರು (ಆ.30): ಅತ್ಯಂತ ಅಪರೂಪದ ಪ್ರಕರಣದಲ್ಲಿ ಬೆಂಗಳೂರಿನ ವೈದ್ಯರು 8 ವರ್ಷದ ಬಾಲಕಿಯ ಹೊಟ್ಟೆಯಿಂದ ಕ್ರಿಕೆಟ್ ಚೆಂಡಿನಷ್ಟು ದೊಡ್ಡದಾದ ಕೂದಲಿನ ಬಾಲ್‌ಅನ್ನು ಹೊರತೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ. ಈ ಕುರಿತಾಗಿ ಸ್ವತಃ ಆಸ್ಪತ್ರೆಯೇ ಬುಧವಾರ ಮಾಹಿತಿ ನೀಡಿದೆ. ಅದಿತಿ (ಹೆಸರು ಬದಲಾಯಿಸಲಾಗಿದೆ) ಟ್ರೈಕೊಫೇಜಿಯಾ ಎನ್ನುವ ಅಪರೂಪದ ಕಾಯಿಲೆಯನ್ನು ಹೊಂದಿದ್ದಳು. ಇದರಲ್ಲಿ ಆಕೆಗೆ ಕೂದಲು ತಿನ್ನುವ ಅಭ್ಯಾಸವಿತ್ತು. ಇದನ್ನು ರಾಪುಂಜೆಲ್ ಸಿಂಡ್ರೋಮ್ ಎಂದೂ ಕರೆಯುತ್ತಾರೆ. ಕಳೆದ ಎರಡು ವರ್ಷಗಳಿಂದ ಆಕೆಗೆ ಹಸಿವು ಆಗುತ್ತಿರಲಿಲ್ಲ. ಆಗ್ಗಾಗ ವಾಂತಿ ಕೂಡ ಮಾಡುತ್ತಿದ್ದ ಕಾರಣಕ್ಕೆ ಪೋಷಕರು ಆತಂಕ ವ್ಯಕ್ತಪಡಿಸಿದ್ದರು. ಈ ವೇಳೆ ಆಕೆಯನ್ನು ಸಾಮಾನ್ಯ ವೈದ್ಯರು, ಮಕ್ಕಳ ತಜ್ಞರು ಹಾಗೂ ಇಎನ್‌ಟಿ ತಜ್ಞರು ಸೇರಿದಂತೆ ಅನೇಕ ಸ್ಪೆಷಲಿಸ್ಟ್‌ಗಳ ಬಳಿಕ ಕರೆದುಕೊಂಡು ಹೋಗಲಾಗಿತ್ತು. ಆಕೆಯ ಸಮಸ್ಯೆಗೆ ಏನಾದರೂ ಪರಿಹಾರ ಇರಬಹುದು ಎನ್ನುವ ಆಶಯದಲ್ಲಿ ಪೋಷಕರು ಇಷ್ಟೆಲ್ಲಾ ತಿರುಗಾಟ ಮಾಡಿದ್ದರು.
ಹೆಚ್ಚಿನವರು ಆದಿತಿಯ ಸಮಸ್ಯೆಯು ಗ್ಯಾಸ್ಟ್ರಿಕ್ ಆಗಿರಬಹುದು ಎಂದು ಊಹಿಸಿ ಅದಕ್ಕೆ ಅನುಗುಣವಾಗಿ ಮಾತ್ರೆಗಳನ್ನು ನೀಡಿದ್ದರು. ಆದರೆ, ಬೆಂಗಳೂರಿನ ಆಸ್ಟರ್ಸ್ ಚಿಲ್ಡ್ರನ್ ಮತ್ತು ವುಮೆನ್ ಆಸ್ಪತ್ರೆಯ ವೈದ್ಯರು ಆಕೆಗೆ ಬಹುಶಃ ಟ್ರೈಕೋಬೆಜೋರ್ ಕಾಯಿಲೆ ಇರಬಹುದು ಎಂದು ಪತ್ತೆ ಮಾಡಿದ್ದರಯ. ಈ ಪದವು ಅವಳ ಜಠರಗರುಳಿನ ಪ್ರದೇಶದಲ್ಲಿ ಸಂಗ್ರಹವಾದ ಎಲ್ಲಾ ಕೂದಲಿನ ರಾಶಿಯ ಬಗ್ಗೆ ಗಮನ ನೀಡಿದ್ದರು.
"ಟ್ರೈಕೋಬೆಜೋರ್ ಅತ್ಯಂತ ಅಪರೂಪದ ಸ್ಥಿತಿಯಾಗಿದೆ ಮತ್ತು ವಿಶೇಷವಾಗಿ ಅದಿತಿಯಂಥ ಚಿಕ್ಕ ಮಗುವಿನಲ್ಲಿ ಬಹಳ ಅಪರೂಪ. ಇದು ಸಾಮಾನ್ಯವಾಗಿ ಟ್ರೈಕೊಫೇಜಿಯಾದೊಂದಿಗೆ ಸಂಬಂಧಿಸಿದೆ, ವ್ಯಕ್ತಿಗಳು ಕೂದಲು ತಿನ್ನುವ ಮಾನಸಿಕ ಅಸ್ವಸ್ಥತೆ ಸಮಸ್ಯೆ ಇದೆ. ಸಾಮಾನ್ಯವಾಗಿ ಹದಿಹರೆಯದ ಹುಡುಗಿಯರಲ್ಲಿ ಕಂಡುಬರುತ್ತದೆ, ಆದರೆ ಹೆಚ್ಚು ಕಿರಿಯ ಮಗುವಿನಲ್ಲಿ ಇದನ್ನು ಪತ್ತೆ ಮಾಡಿರುವುದೇ ಅಚ್ಚರಿಯ ಸಂಗತಿ' ಎಂದು ಆಸ್ಪತ್ರೆಯ ಪೀಡಿಯಾಟ್ರಿಕ್ ಸರ್ಜರಿಯ ಲೀಡ್ ಮತ್ತು ಹಿರಿಯ ಸಲಹೆಗಾರ ಡಾ. ಮಂಜಿರಿ ಸೋಮಶೇಖರ್ ತಿಳಿಸಿದ್ದಾರೆ.
Kolkata Rape Case : ಅದ್ಯಾರಪ್ಪು ಕೊಲ್ಕತ್ತಾ ಅತ್ಯಾಚಾರಿ ಪರ ವಾದಿಸಲು ಮುಂದಾದ ಲಾಯರ್? ಈ ಕೆಲಸಕ್ಕೆ ಒಪ್ಪಿದ್ಹೇಗೆ?
ಲ್ಯಾಪರೊಟಮಿ ಎಂದೂ ಕರೆಯಲ್ಪಡುವ ತೆರೆದ ಹೊಟ್ಟೆಯ ಶಸ್ತ್ರಚಿಕಿತ್ಸೆಯನ್ನು ಅದಿತಿಗೆ ಮಾಡಬೇಕಾಗಿತ್ತು ಏಕೆಂದರೆ ಹೇರ್‌ಬಾಲ್ ತುಂಬಾ ದೊಡ್ಡದಾಗಿದ್ದಲ್ಲದೆ, ಹೊಟ್ಟೆಗೆ ಅಂಟಿಕೊಂಡಿತ್ತು. ಎಂಡೋಸ್ಕೋಪಿ ಮಾಡಲು ಪರಿಸ್ಥಿತಿ ತುಂಬಾ ಕಠಿಣವಾಗಿತ್ತು ಎಂದಿದ್ದಾರೆ. ಒಟ್ಟು ಎರಡೂವರೆ ಗಂಟೆಗಳಲ್ಲಿ ಮಾಡಿದ ಈ ವಿಧಾನವು ಫಲಪ್ರದವಾಗಿದೆ ಏಕೆಂದರೆ ಇದು ಪೆರಿಟೋನಿಯಲ್ ಕುಹರದೊಳಗೆ ಯಾವುದೇ ಸೋರಿಕೆಯನ್ನು ತಡೆಯುತ್ತದೆ ಎಂದು ವೈದ್ಯರು ಹೇಳಿದರು. ರೋಗನಿರ್ಣಯ ಮಾಡದೆ ಬಿಟ್ಟರೆ, ಆಕೆಯ ಸ್ಥಿತಿಯು ತೀವ್ರವಾದ ಅಪೌಷ್ಟಿಕತೆ, ರಕ್ತಹೀನತೆ ಮತ್ತು ಹೊಟ್ಟೆಯಿಂದ ಗಮನಾರ್ಹ ರಕ್ತಸ್ರಾವಕ್ಕೆ ಕಾರಣವಾಗುತ್ತಿತ್ತು ಎಂದು ವೈದ್ಯರು ತಿಳಿಸಿದ್ದಾರೆ. ಶಸ್ತ್ರಚಿಕಿತ್ಸೆಯ ನಂತರ, ಆಕೆಯನ್ನು ವಿಶೇಷ ಆಹಾರಕ್ರಮದಲ್ಲಿ ಇರಿಸಲಾಯಿತು ಮತ್ತು ಸಮಾಲೋಚನೆ ಮತ್ತು ನಿಯಮಿತ ಮೇಲ್ವಿಚಾರಣೆಯನ್ನು ಪಡೆಯುತ್ತಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.
ಸುಳ್ಳು ಪತ್ತೆ ಹಚ್ಚುವ ಯಂತ್ರಕ್ಕೆ ಪ್ರೈಸ್ ಎಷ್ಟು, ಮನೇಲೂ ತಂದಿಟ್ಟುಕೊಳ್ಳಬಹುದಾ?