ಮಗು ಜನಿಸಿದ ತಕ್ಷಣ ತಾಯಿ ಈ ಕೆಲಸ ಮಾಡಿದ್ರೆ ತುಂಬಾ ಪ್ರಯೋಜನವಿದೆ
ಸ್ಕಿನ್ ಟು ಸ್ಕಿನ್ ಕಾಂಟಾಕ್ಟ್ಈ. ಬಗ್ಗೆ ನೀವು ಕೇಳಿರಬಹುದು ಅಲ್ವಾ? ಸಾಮಾನ್ಯವಾಗಿ ನವಜಾತ ಶಿಶು ಹುಟ್ಟಿದ ಕೂಡಲೇ ಮಗುವನ್ನು ತಾಯಿಯ ಎದೆಯ ಮೇಲೆ ನೇರವಾಗಿ ಇರಿಸಲಾಗುತ್ತೆ, ಇದನ್ನು ಸ್ಕಿನ್ ಟು ಸ್ಕಿನ್ ಕಾಂಟಾಕ್ಟ್ ಅಥವಾ ತಾಯಿ ಜೊತೆ ನೇರ ಸಂಪರ್ಕ ಎನ್ನಲಾಗುತ್ತೆ.. ತಾಯಿ ಮತ್ತು ಮಗು ಇಬ್ಬರನ್ನೂ ಬೆಚ್ಚಗಿನ ಕಂಬಳಿಯಿಂದ ಮುಚ್ಚಲಾಗುತ್ತೆ ಮತ್ತು ಕನಿಷ್ಠ ಒಂದು ಗಂಟೆ ಅಥವಾ ಅವರು ಮೊದಲ ಬಾರಿಗೆ ಹಾಲು ಕುಡಿಯುವವರೆಗೆ ಹೀಗೆ ಮಾಡಲಾಗುತ್ತೆ.
ನವಜಾತ ಶಿಶುವಿಗೆ ಪೋಷಕರ ಜೊತೆಗೆ ಭಾವನಾತ್ಮಕ ಸಂಬಂಧ ಬೆಳೆಸುವುದು ಮುಖ್ಯ. ಅದಕ್ಕಾಗಿ ಹುಟ್ಟಿದ ಕೂಡಲೇ ಮಗುವನ್ನು ತಾಯಿಯ ಎದೆ ಮೇಲೆ ಇರಿಸಲಾಗುತ್ತೆ. ಅಷ್ಟೇ ಅಲ್ಲ ನವಜಾತ ಶಿಶು ತನ್ನ ತಂದೆಯೊಂದಿಗೆ ಸ್ಕಿನ್ ಟು ಸ್ಕಿನ್ ಕಾಂಟಾಕ್ಟ್(Skin to skin contact) ಮಾಡೋದು ಸಹ ಅನೇಕ ಪ್ರಯೋಜನಗಳನ್ನು ಹೊಂದಿದೆ. ಮಗುವು ತಾಯಿಯೊಂದಿಗೆ ಮಾತ್ರವಲ್ಲದೆ ತಂದೆಯೊಂದಿಗೂ ಸ್ಟ್ರಾಂಗ್ ಸಂಪರ್ಕ ಹೊಂದುತ್ತೆ. ಮಗು ಹುಟ್ಟಿದ ನಂತರ ಮಗುವಿನ ಜೊತೆ ಈ ರೀತಿಯಾಗಿ ಸಂಬಂಧ ಹೊಂದುವುದು ಯಾವ ರೀತಿಯ ಪ್ರಯೋಜನ ನೀಡುತ್ತೆ ಎಂದು ಇಲ್ಲಿ ತಿಳಿಯೋಣ.
ಮಗು ಗರ್ಭದಲ್ಲಿದ್ದಾಗ, ಭ್ರೂಣದ ಜೀವನವು ತಾಯಿಯ ದೇಹದಿಂದ ನಿಯಂತ್ರಿಸಲ್ಪಡುತ್ತೆ. ಆದರೆ, ಜನನದ ನಂತರ, ಮಗು ಮೊದಲ ಬಾರಿಗೆ ಹೊರಗೆ ಬಂದು ಹೊರಗಿನ ಗಾಳಿಯನ್ನು ಉಸಿರಾಡುತ್ತೆ ಮತ್ತು ಅದರ ಹೃದಯ ಬಡಿತ(Heart beat ) ಮತ್ತು ತಾಪಮಾನವನ್ನು ನಿಯಂತ್ರಿಸುತ್ತೆ. ಅಮೇರಿಕನ್ ಅಕಾಡೆಮಿ ಆಫ್ ಪೀಡಿಯಾಟ್ರಿಕ್ಸ್ ಹುಟ್ಟಿದ ತಕ್ಷಣ ತಾಯಿ ಮತ್ತು ಮಗುವಿನ ನಡುವೆ ಸ್ಕಿನ್ ಟು ಸ್ಕಿನ್ ಕಾಂಟಾಕ್ಟ್ ಇರಬೇಕು ಎಂದು ಶಿಫಾರಸು ಮಾಡುತ್ತೆ. ಹೆರಿಗೆಯ ನಂತರ ತಾಯಿಗೆ ಪ್ರಜ್ಞೆ ಮರಳಿದಾಗ ಮತ್ತು ಸಮತೋಲನದಲ್ಲಿದ್ದಾಗ, ಸ್ಕಿನ್ ಟು ಸ್ಕಿನ್ ಕಾಂಟಾಕ್ಟ್ ಮಾಡಬೇಕು. ಇದು ಕನಿಷ್ಠ ಒಂದು ಗಂಟೆ ದೀರ್ಘವಾಗಿರಬೇಕು ಮತ್ತು ಎಲ್ಲಾ ಅಗತ್ಯ ಟೆಸ್ಟ್ ಗಳನ್ನು ಈ ಸ್ಥಿತಿಯಲ್ಲಿ ಮಾಡಬೇಕು ಎಂದು ಅವರು ಹೇಳುತ್ತಾರೆ.
ಇದು ಯಾಕೆ ಅತ್ಯುತ್ತಮ?
ತಾಯಿ(Mother) ಮತ್ತು ಮಗುವನ್ನು ಬೇರ್ಪಡಿಸುವ ಯಾವುದೇ ಟೆಸ್ಟ್ಸ್ ಸ್ಕಿನ್ ಟು ಸ್ಕಿನ್ ಕಾಂಟಾಕ್ಟ್ ಮಾಡೋವರೆಗೆ ಮತ್ತು ಮೊದಲ ಸ್ತನ್ಯಪಾನದ ವರೆಗೆ ಒಂದು ಗಂಟೆಗಳ ಕಾಲ ನಿಲ್ಲಿಸಬೇಕು. 100 ಶಿಶುಗಳ ಒಂದು ಟೆಸ್ಟ್‌ನಲ್ಲಿ ಹುಟ್ಟಿದ ತಕ್ಷಣ ಚರ್ಮವನ್ನು ಚರ್ಮಕ್ಕೆ ಸಂಪರ್ಕಿಸಿದವರು ಹೈಪೋಥರ್ಮಿಯಾವನ್ನು ಹೊಂದುವ ಸಾಧ್ಯತೆ ಎಂಟು ಪಟ್ಟು ಕಡಿಮೆ ಎಂದು ಕಂಡುಬಂದಿದೆ. ಈ ಟೆಸ್ಟ್ ಬಿಸಿ ಪ್ರದೇಶದಲ್ಲಿ ಕ್ಲೀನ್ ಮಾಡಿ ಮತ್ತು ಬಟ್ಟೆ ಧರಿಸಿದ ಮಕ್ಕಳ ಸಂಖ್ಯೆಗೆ ಹೋಲಿಸಲಾಯಿತು.
ಹೈಪೋಥರ್ಮಿಯಾ(Hypothermia) ಎಂಬುದು ಒಂದು ವೈದ್ಯಕೀಯ ಎಮರ್ಜೆನ್ಸಿ ಯಾಗಿದ್ದು, ಇದರಲ್ಲಿ ದೇಹವು ಶಾಖವನ್ನು ಉತ್ಪಾದಿಸುವುದಕ್ಕಿಂತ ವೇಗವಾಗಿ ಶಾಖವನ್ನು ಕಳೆದುಕೊಳ್ಳುತ್ತೆ, ಇದರಿಂದಾಗಿ ದೇಹದ ತಾಪಮಾನವು ಅಪಾಯಕಾರಿಯಾಗಿ ಕಡಿಮೆಯಾಗುತ್ತೆ. ಇದನ್ನು ತಡೆಯಲು ಮಗುವನ್ನು ತಾಯಿಯ ಬಳಿ ಬಿಡುವುದು ಉತ್ತಮ ಎಂದು ಹೇಳಲಾಗುತ್ತೆ.
ದೇಹದ ತಾಪಮಾನವು(Temperature) ಸಮತೋಲನದಲ್ಲಿರಲು ಸ್ಕಿನ್ ಟು ಸ್ಕಿನ್ ಕಾಂಟಾಕ್ಟ್ ಮುಖ್ಯ. ಚರ್ಮದಿಂದ ಚರ್ಮದ ಸಂಪರ್ಕವು ಶಿಶುಗಳಿಗೆ ತಮ್ಮ ದೇಹದ ತಾಪಮಾನ ಸ್ಥಿರಗೊಳಿಸಲು ಸಹಾಯ ಮಾಡುತ್ತೆ. ಮಗುವಿನ ಜನನದ ನಂತರ, ಮಗುವಿನ ದೇಹದ ತಾಪಮಾನ ಮೊದಲ ಬಾರಿಗೆ ಗಾಳಿಗೆ ಒಡ್ಡಿಕೊಳ್ಳೋದರಿಂದ ಸರಾಸರಿ 2 ರಿಂದ 4 ಡಿಗ್ರಿ ಸೆಲ್ಸಿಯಸ್ ನಷ್ಟು ಕಡಿಮೆಯಾಗುತ್ತೆ. ಸಾಮಾನ್ಯವಾಗಿ ಹೆರಿಗೆ ಕೋಣೆಯಲ್ಲಿ ತಾಯಿಯ ಎದೆಯೊಂದಿಗೆ ಸಂಪರ್ಕದಿಂದಾಗಿ ತಂಪಾದ ವಾತಾವರಣದಲ್ಲಿ ಮಗುವನ್ನು ಬೆಚ್ಚಗಿಡಲು ಸಹಾಯ ಮಾಡುತ್ತೆ.
ಸ್ತನ್ಯಪಾನ (Breast feeding) ಸುಲಭವಾಗುತ್ತೆ
ಈ ವಿಷಯದ ಮೇಲೆ ಅನೇಕ ಅಧ್ಯಯನಗಳನ್ನು ಮಾಡಲಾಗಿದೆ, ಅದರ ಪ್ರಕಾರ,ಮಗುವಿನ ಜೊತೆ ಚರ್ಮದ ಸಂಪರ್ಕ ಹೊಂದುವುದು ಹೆರಿಗೆಯ ನಂತರ ನಾಲ್ಕು ತಿಂಗಳುಗಳವರೆಗೆ ಹೆಚ್ಚಿನ ಸ್ತನ್ಯಪಾನದೊಂದಿಗೆ ಸಂಬಂಧ ಹೊಂದಿದೆ. ಅಧ್ಯಯನಗಳ ಪ್ರಕಾರ, ಹೆರಿಗೆಯ ನಂತರ ಸ್ಕಿನ್ ಟು ಸ್ಕಿನ್ ಕಾಂಟಾಕ್ಟ್ ಮಾಡಿದ ಹೊಸ ತಾಯಂದಿರು, ಹಾಲುಣಿಸದ ತಾಯಂದಿರಿಗಿಂತ ಸುಮಾರು ಆರು ವಾರಗಳ ಕಾಲ ಹೆಚ್ಚು ಸ್ತನ್ಯಪಾನ ಮಾಡುತ್ತಾರೆ.
ಸ್ಕಿನ್ ಟು ಸ್ಕಿನ್ ಕಾಂಟಾಕ್ಟ್ ಮಗುವಿನ ವಾಸನೆ(Smell) ನೋಡೋ ಸಾಮರ್ಥ್ಯವನ್ನು ಹೆಚ್ಚಿಸುತ್ತೆ ಎಂದು ಸಂಶೋಧಕರು ನಂಬುತ್ತಾರೆ. ಆದ್ದರಿಂದ ಸ್ತನ್ಯಪಾನದ ಸಮಯವಾದಾಗ, ತಾಯಿಯ ಮೊಲೆತೊಟ್ಟುಗಳ ಪರಿಚಿತ ವಾಸನೆ ಶಿಶುಗಳು ಅದನ್ನು ಹುಡುಕಲು ಪ್ರೇರೇಪಿಸುತ್ತೆ. ಇದರಿಂದಾಗಿ ಮಗುವಿಗೆ ಹಾಲುಣಿಸಲು ತಾಯಿ ಕಷ್ಟಪಡಬೇಕಾಗಿಲ್ಲ ಎಂದು ನಂಬಲಾಗಿದೆ.
ತಂದೆ ಮತ್ತು ಮಕ್ಕಳ ಬಂಧ(Father child relationship) ಹೆಚ್ಚಿಸುತ್ತೆ
2017 ರ ಪ್ರಯೋಗವು ಮಗುವಿನ ಜನನದ ದಿನದಂದು ಕನಿಷ್ಠ 15 ನಿಮಿಷಗಳ ಕಾಲ ಸ್ಕಿನ್ ಟು ಸ್ಕಿನ್ ಕಾಂಟಾಕ್ಟ್ ಮಾಡಿದ ಮತ್ತು ಮುಂದಿನ ಮೂರು ದಿನಗಳವರೆಗೆ ಅದನ್ನು ಅನುಸರಿಸುವ ಅಪ್ಪಂದಿರು ತಮ್ಮ ಮಕ್ಕಳೊಂದಿಗೆ ಹೆಚ್ಚು ಅಟ್ಯಾಚ್ ಮೆಂಟ್ ಬೆಳೆಸಿಕೊಳ್ಳುತ್ತಾರೆ ಎಂದು ಕಂಡುಹಿಡಿದಿದೆ. ಮಗುವಿನೊಂದಿಗೆ ಚರ್ಮದ ಸಂಪರ್ಕವನ್ನು ಇಟ್ಟುಕೊಳ್ಳೋದು ಸಹ ತಂದೆಗೆ ತನ್ನ ಮಗುವಿನ ಅಗತ್ಯಗಳನ್ನು ಅರ್ಥಮಾಡಿಕೊಳ್ಳಲು ಸಹಾಯ ಮಾಡುತ್ತೆ. ಸ್ಕಿನ್ ಟು ಸ್ಕಿನ್ ಕಾಂಟಾಕ್ಟ್ ಆಕ್ಸಿಟೋಸಿನ್ (ಪ್ರೀತಿಯ ಹಾರ್ಮೋನ್) ಅನ್ನು ಬಿಡುಗಡೆ ಮಾಡುತ್ತೆ, ಇದು ಪೋಷಕರು ವಿಶ್ರಾಂತಿ ಪಡೆಯಲು ಮತ್ತು ಅವರ ಒತ್ತಡದ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತೆ.
ಮಗು ಅಳುವುದು(Child crying) ಕಡಿಮೆ ಮಾಡಲು
ಪೋಷಕರ ಜೊತೆ ಚರ್ಮದ ನಿಕಟತೆ ಹೊಂದಿರುವ ಮಕ್ಕಳು ಹೆಚ್ಚು ಶಾಂತವಾಗಿರುತ್ತಾರೆ. 30-ಮಕ್ಕಳ ಪ್ರಯೋಗದಲ್ಲಿ, ಶಿಶುಗಳಿಗೆ ಹುಟ್ಟಿದ ತಕ್ಷಣ ಸ್ಕಿನ್ ಟು ಸ್ಕಿನ್ ಕಾಂಟಾಕ್ಟ್ ನೀಡಿದಾಗ, ಅವರ ಜೀವನದ ಮೊದಲ 90 ನಿಮಿಷಗಳಲ್ಲಿ ಕೇವಲ 14% ಜನರು ಮಾತ್ರ ಒಂದು ನಿಮಿಷಕ್ಕಿಂತ ಹೆಚ್ಚು ಅತ್ತರು ಎಂದು ಕಂಡುಹಿಡಿದಿದೆ. ಅದೇ ಸಮಯದಲ್ಲಿ, 93 ಪ್ರತಿಶತದಷ್ಟು ಇತರ ಮಕ್ಕಳು ಒಂದು ನಿಮಿಷಕ್ಕಿಂತ ಹೆಚ್ಚು ಅತ್ತಿಲ್ಲ. ಹಾಗಾಗಿ ಸ್ಕಿನ್ ಟು ಸ್ಕಿನ್ ಕಾಂಟಾಕ್ಟ್ ಪೋಷಕರು ಮತ್ತು ಮಗುವಿನ ನಡುವಿನ ಬಂಧವನ್ನು ಹೆಚ್ಚಿಸಲು ಅತ್ಯಗತ್ಯ.