Asianet Suvarna News Asianet Suvarna News

ಮೇ 26ಕ್ಕೆ Realme Pad X ಟ್ಯಾಬ್ಲೆಟ್ ಲಾಂಚ್, ಏನಿದರ ಹೊಸ ಫೀಚರ್‌?

*ರಿಯಲ್‌ಮಿ ಪ್ಯಾಟ್ ಎಕ್ಸ್ ಮೊದಲಿಗೆ ಚೀನಾದಲ್ಲಿ ಲಾಂಚ್ ಆಗಿ, ಆನಂತ ಎಲ್ಲೆಡೆ ಸಿಗಲಿದೆ
*ಭಾರತದಲ್ಲಿ ಯಾವಾಗ ಬಿಡುಗಡೆಯಾಗಲಿದೆ ಎಂಬ ಬಗ್ಗೆ ಖಚಿತವಾದ ಮಾಹಿತಿಗಳಿಲ್ಲ
*ರಿಯಲ್‌ಮಿ ಪ್ಯಾಡ್ ಎಕ್ಸ್ ಟ್ಯಾಬ್ಲೆಟ್ ಸಾಕಷ್ಟು ಹೊಸ ಫೀಚರ್‌ಗಳನ್ನು ಒಳಗೊಂಡಿದೆ

Realme Pad X will be launch on May 26th in China, says reports
Author
Bengaluru, First Published May 23, 2022, 3:18 PM IST

ಚೀನಾ (China) ಮೂಲದ ಸ್ಮಾರ್ಟ್‌ಫೋನ್ (Smartphone) ತಯಾರಿಕಾ ಕಂಪನಿಗಳ ಪೈಕಿ ರಿಯಲ್‌ಮಿ (Realme) ಕೂಡ ಪ್ರಮುಖ ಕಂಪನಿಯಾಗಿದೆ. ಭಾರತವು ಸೇರಿದಂತೆ ವಿಶ್ವದಾದ್ಯಂತ ರಿಯಲ್ ಮಿ ತನ್ನದೇ ಆದ ಮಾರುಕಟ್ಟೆ ಪಾಲ ಪಡೆದುಕೊಂಡಿದೆ. ಗ್ರಾಹಕ ವಲಯವನ್ನು ಸೃಷ್ಟಿಸಿಕೊಂಡಿದೆ. ಪ್ರೀಮಿಯಂ (Premium) ಮತ್ತು ಬಜೆಟ್ (Budge) ಸ್ಮಾರ್ಟ್‌ಫೋನ್‌‍‍ಗಳ ಮೂಲಕ ಹೆಸರುವಾಸಿಯಾಗಿರುವ ರಿಯಲ್‌ಮಿ ಇದೀಗ, ರಿಯಲ್ ಮಿ ಪ್ಯಾಡ್ ಎಕ್ಸ್ (Realme Pad X) ಎಂಬ ಹೊಸ ಟ್ಯಾಬ್ಲೆಟ್ ಲಾಂಚ್ ಮಾಡಲಿದೆ. ಈಗ ಗೊತ್ತಾಗಿರುವ ಮಾಹಿತಿಗಳು ಪ್ರಕಾರ ಕಂಪನಿಯು ಈ ಟ್ಯಾಬ್ಲೆಟ್ ಅನ್ನು ಮೇ 26ರಂದು ಬಿಡುಗಡೆ ಮಾಡುವ ಸಾಧ್ಯತೆ ಇದೆ. ಈ ರಿಯಲ್‌ಮಿ ಪ್ಯಾಡ್ ಎಕ್ಸ್ (Realme Pad X)  ಟ್ಯಾಬ್ಲೆಟ್ ಅನ್ನು ಮೊದಲು ಚೀನಾದಲ್ಲಿ ಬಿಡುಗಡೆ ಮಾಡಲಾಗುವುದು, ಆ ನಂತರ ಜಾಗತಿಕ ಮಾರುಕಟ್ಟೆಗೆ ತೆರೆದುಕೊಳ್ಳಲಿದೆ.  Realme Pad ಮತ್ತು Realme Pad Mini ಅನ್ನು ಮೊದಲು ಭಾರತದಲ್ಲಿ ಮಾರಾಟ ಮಾಡಬಹುದು ಎಂದು ನಿರೀಕ್ಷಿಸಲಾಗಿತ್ತು. ಆದರೆ, ಈಗ ಚೀನಾದಲ್ಲಿ ಬಿಡುಗಡೆ  ಸಮಾರಂಭವು ಮೇ 26 ರಂದು ಸ್ಥಳೀಯ ಕಾಲಮಾನ ಮಧ್ಯಾಹ್ನ 2 ಗಂಟೆಗೆ ನಡೆಯಲಿದೆ. Xiaomi Pad 5 ಟ್ಯಾಬ್ಲೆಟ್ ಅನ್ನು ಹೋಲುವ ಸಾಧನದ ಅಧಿಕೃತ ರೆಂಡರಿಂಗ್‌ಗಳನ್ನುಈ ಟ್ಯಾಬ್ಲೆಟ್ ಕೂಡ ಹೊಂದಿದೆ ಎಂಬ ಮಾಹಿತಿಯನ್ನು ಬಹಿರಂಗಪಡಿಸಲಾಗಿದೆ.

ವಾಟ್ಸಾಪ್‌ನಲ್ಲಿ ಬಿಸಿನೆಸ್ ಇನ್ನಷ್ಟು ಸುಲಭ, ಕ್ಲೌಡ್ ಬೇಸ್ಡ್ ಎಪಿಐ ಫೀಚರ ಲಭ್ಯ

ರಿಯಲ್‌ಮಿ ಪ್ಯಾಡ್ (Realme Pad X) ಚೆಕ್ಡ್ ವಿನ್ಯಾಸಗಳೊಂದಿಗೆ ಹಸಿರು ಬಣ್ಣದಲ್ಲಿ ಲಭ್ಯವಿರುತ್ತದೆ. ಕಪ್ಪು ಬಣ್ಣದ ಆವೃತ್ತಿಯೂ ಸಾಧ್ಯ. ರಿಯಲ್‌ಮಿ ಸ್ಟೈಲಸ್ ಅನ್ನು ಅಧಿಕೃತ ಚಿತ್ರದಲ್ಲಿ ವೈಟ್ ಫಿನಿಶ್‌ನಲ್ಲಿಯೂ ಕಾಣಬಹುದು. ಟ್ಯಾಬ್ಲೆಟ್ ಹಿಂಭಾಗದಲ್ಲಿ ಒಂದೇ ಕ್ಯಾಮೆರಾವನ್ನು ಮತ್ತು ಮೇಲಿನ ತುದಿಯಲ್ಲಿ ಪವರ್ ಬಟನ್ ಒಳಗೊಂಡಿರುವುದನ್ನು ವಿನ್ಯಾಸದಲ್ಲಿ ಕಾಣಬಹುದಾಗಿದೆ. ಸಾಕಷ್ಟು ಹೊಸ ಹೊಸ ಫೀಚರ್‌ಗಳನ್ನು ಕೂಡ ಈ ರಿಯಲ್‌ಮಿ ಪ್ಯಾಡ್ ಎಕ್ಸ್ ಟ್ಯಾಬ್ಲೆಟ್‌ನಲ್ಲಿ ನಿರೀಕ್ಷಿಸಬಹುದಾಗಿದೆ. ಈ ಟ್ಯಾಬ್ ಬಿಡುಗಡೆ ಮುನ್ನವೇ ಸಾಕಷ್ಟು ಮಾಹಿತಿಗಳು ಸೋರಿಕೆಯಾಗುವ ಮೂಲಕ ಕುತೂಹಲಕ್ಕೆ ಕಾರಣವಾಗಿತ್ತು.

ಏತನ್ಮಧ್ಯೆ, Realme ಯ CMO  (GSMArena ಮೂಲಕ) Realme Pad X ಅನ್ನು Snapdragon 870 ಪ್ರೊಸೆಸರ್ ಮೂಲಕ ನಡೆಸಲಾಗುವುದು, ಇದು Xiaomi ಪ್ಯಾಡ್ 5 ನಲ್ಲಿಯೂ ಕಂಡುಬರುತ್ತದೆ ಎಂಬ ಮಾಹಿತಿಯನ್ನು ದೃಢಪಡಿಸಿದೆ. ಮತ್ತೊಂದೆಡೆ, ಮುಂದಿನ Realme ಪ್ಯಾಡ್ 5G ಸಂಪರ್ಕವನ್ನು ಒಳಗೊಂಡಿರುತ್ತದೆ. ಆದರೆ ಭಾರತದಲ್ಲಿ ಬಿಡುಗಡೆಯಾಗಿರುವ Xiaomi ಪ್ಯಾಡ್ 5 ಟ್ಯಾಬ್ಲೆಟ್‌ನಲ್ಲಿ ಈ ಸೌಲಭ್ಯ ಇರದೇ ಇರುವುದನ್ನು ತಾವು ಗಮನಿಸಬಹುದು. ಅಧಿಕೃತ ಛಾಯಾಚಿತ್ರಗಳಲ್ಲಿ ಕ್ವಾಡ್-ಸ್ಪೀಕರ್ ಚೇಂಬರ್‌ಗಳು ಮತ್ತು ವಾಲ್ಯೂಮ್ ರಾಕರ್‌ಗಳ ಬಗ್ಗೆಯೂ ಸುಳಿವು ನೀಡಲಾಗಿದೆ. ಟ್ಯಾಬ್ಲೆಟ್ 120Hz ಡಿಸ್ಪ್ಲೇ ಮತ್ತು ದೊಡ್ಡ ಬ್ಯಾಟರಿಯನ್ನು ಒಳಗೊಂಡಿದೆ ಎಂದು ಹೇಳಲಾಗುತ್ತದೆ.

ಆಪಲ್ ಫೋಲ್ಡಬಲ್ ಫೋನ್‌ಗೆ ಇ-ಇಂಕ್ ಡಿಸ್‌ಪ್ಲೇ, ಟ್ಯಾಬ್ಲೆಟ್‌ ರೀತಿ ಅಪ್ಲಿಕೇಶನ್‌?

Realme Pad X ರೂ. 30,000 ಕ್ಕಿಂತ ಕಡಿಮೆ ಬೆಲೆ ಇರಬಹುದು. ಮಾರುಕಟ್ಟೆಯಲ್ಲಿ ರಿಯಲ್‌ಮಿ ಬ್ಯಾಟ್ ಎಕ್ಸ್ ಖಂಡಿತವಾಗಿಯೂ Xiaomi ಮತ್ತು Huawei ಟ್ಯಾಬ್ಲೆಟ್‌ಗಳೊಂದಿಗೆ ತೀವ್ರ ಪೈಪೋಟಿ ನಡೆಸಲಿದೆ ಎಂದು ಹೇಳಬಹುದು. Realme Pad ಭಾರತದಲ್ಲಿ 13,999 ರೂ.ಗಳಿಂದ ಪ್ರಾರಂಭವಾಗುತ್ತದೆ ಮತ್ತು 17,999 ರೂ.ವರೆಗೂ ದೊರೆಯಲಿದೆ ಎಂದು ಹೇಳಲಾಗುತ್ತಿದೆ. Realme Pad Mini ಬೆಲೆ 10,999 ಮತ್ತು 14,999 ರೂ. ವರೆಗೂ ಇರಬಹುದು. Xiaomi Pad 5 ಆರಂಭಿಕ ಬೆಲೆ 26,999 ಮತ್ತು ಗರಿಷ್ಠ 28,999 ರೂ. ಇದೆ ಎಂಬುದನ್ನು ತಾವಿಲ್ಲಿ ಸ್ಮರಿಸಿಕೊಳ್ಳಬಹುದು. Realme Pad X ಭಾರತದಲ್ಲಿ ಮಾರಾಟಕ್ಕೆ ಬಂದರೆ, ಇದು ರಾಷ್ಟ್ರದಲ್ಲಿ ಹಲವಾರು ಜನಪ್ರಿಯ ಆಂಡ್ರಾಯ್ಡ್ ಟ್ಯಾಬ್ಲೆಟ್‌ಗಳನ್ನು ನೀಡುವ Samsung ನೊಂದಿಗೆ ಸ್ಪರ್ಧಿಸುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ.

Follow Us:
Download App:
  • android
  • ios