Asianet Suvarna News Asianet Suvarna News

Lenovo Laptop: ಇನ್‌ಬಿಲ್ಟ್ ಟ್ಯಾಬ್ ಇರುವ ಹೊಸ ಲೆನೋವೋ ಲ್ಯಾಪ್‌ಟ್ಯಾಪ್?!

*ಟ್ಯಾಬ್‌ ಹೊಂದಿರುವ ಲೆನೋವೋ ಲ್ಯಾಪ್‌ಟ್ಯಾಪ್ ಚಿತ್ರಗಳು ಆನ್‌ಲೈನ್‌ನಲ್ಲಿ ಸೋರಿಕೆ
*ಬಳಕೆದಾರರಿಗೆ ತ್ವರಿತವಾಗಿ ಶಾರ್ಟ್‌ಕಟ್ಸ್ ಮತ್ತು ಆಪ್‌ ಅಕ್ಸೆಸ್ ಪಡೆಯಲು ಸಾಧ್ಯವಾಗಲಿದೆ
*ಟ್ವಿಟರ್‌ನಲ್ಲಿ ಹೊಸ ಮಾದರಿಯ ಟ್ಯಾಬ್ ಸಹಿತ ಲೆನೋವೋ ಲ್ಯಾಪ್‌ಟ್ಯಾಪ್ ಚಿತ್ರಗಳನ್ನು ಷೇರ್ ಮಾಡಲಾಗಿದೆ.

Lenovo plan to unveil laptop with a built in Tablet pictures leaked in social Media
Author
Bengaluru, First Published Dec 28, 2021, 8:05 PM IST

ನವದೆಹಲಿ(ಡಿ.28): ಚೀನಾ (China) ಮೂಲದ ಲೆನೋವೋ(Lenovo) ಲ್ಯಾಪ್‌ಟ್ಯಾಪ್, ಡೆಸ್ಕ್‌ಟಾಪ್ ಮತ್ತು ಅದಕ್ಕ ಸಂಬಂಧಿಸಿದ ಬಿಡಿ ಭಾಗಗಳು, ಇತರ ಎಲೆಕ್ಟ್ರಾನಿಕ್ಸ್ ವಸ್ತುಗಳು ಮತ್ತು ಸ್ಮಾರ್ಟ್‌ಫೋನ್‌(Smartphone)ಗಳ ತಯಾರಿಕೆಯಲ್ಲಿ ಅಗ್ರಗಣ್ಯವಾಗಿರುವ ಕಂಪನಿಯಾಗಿದೆ. ಇದರ ಜೊತಗೆ, ಬಳಕೆದಾರರ ಹೊಸ ಹೊಸ ತಂತ್ರಜ್ಞಾನದ ಸಂಪೂರ್ಣ ಲಾಭವನ್ನ ಕೊಡಿಸಲು ಸದಾ ಪ್ರಯತ್ನಿಸುತ್ತಲೇ ಇರುತ್ತದೆ. ಈ ಹಿನ್ನೆಲೆಯಲ್ಲಿ ಕಂಪನಿಯು ಇದೀಗ ಮತ್ತೊಂದು ಹೊಸ ಆವಿಷ್ಕಾರಕ್ಕೆಮುಂದಾಗಿದೆಯಾ ಎಂಬ ಪ್ರಶ್ನೆ ಮೂಡಲು ಕಾರಣವಿದೆ. ಆನ್‌ಲೈನ್‌ ಟಿಪ್ಸಟರ್ ಒಬ್ಬರು, ಲೆನೋವೋ ಲ್ಯಾಪ್‌ಟ್ಯಾಪ್‌ಕ್ಕೆ ಸಂಬಂಧಿಸಿದ ಫೋಟೋಗಳನ್ನು ಷೇರ್ ಮಾಡಿದ್ದು ಭಾರೀ ಕುತೂಹಲಕ್ಕೆ ಕಾರಣವಾಗಿದೆ. ಏನೆಂದರೆ, ಈ ಫೋಟೋಗಳಲ್ಲಿ ಇನ್‌ಬಿಲ್ಟ್ ಆಗಿ ನೀವು ಟ್ಯಾಬ್ಲೆಟ್ (Tablet) ಇರುವುದನ್ನ ಕಾಣಬಹುದಾಗಿದೆ. ಅಂದರೆ, ಲೆನೋವೋ ಕಂಪನಿಯು ಇನ್‌ಬಿಲ್ಟ್ ಟ್ಯಾಬ್ಲೆಟ್ ಇರುವ ಹೊಸ ಲ್ಯಾಪ್‌ಟ್ಯಾಪ್ ಅಭಿವೃದ್ಧಿಪಡಿಸುತ್ತಿರುವುದು ಇದರಿಂದ ತಿಳಿದುಕೊಳ್ಳಬಹುದಾಗಿದೆ. ಈ ಮೂಲಕ ಬಳೆಕದಾರರಿಗೆ ಟ್ಯಾಬ್ ಹಾಗೂ ಲ್ಯಾಪ್‌ಟ್ಯಾಪ್ ಬಳಕೆಯ ಅನುಭವ ಹಾಗೂ ಅಪಾರ ಲಾಭಗಳನ್ನು ಮಾಡಿಕೊಡುವ ಉದ್ದೇಶವನ್ನು ಹೊಂದಿರುವಂತಿದೆ. ಬಹುಶಃ ಲೆನೋವೋ ಕಂಪನಿಯು ಈ ಹೊಸತನ ಬಳಕೆದಾರರಿಗೆ ಹೆಚ್ಚಿನ ಲಾಭವನ್ನು ತಂದುಕೊಡಬಹುದು ಎಂದು ಹೇಳಬಹುದು.

ಇವಾನ್ ಬ್ಲಾಸ್ (Evan Blass) ಎಂಬುವವರು ಟ್ಯಾಬ್ ಇನ್‌ಬಿಲ್ಟ್ ಆಗಿರುವ ಲೆನೋವೋ ಲ್ಯಾಪ್‌ಟ್ಯಾಪಿನ ಚಿತ್ರಗಳನ್ನು ಷೇರ್ ಮಾಡಿಕೊಂಡಿದ್ದಾರೆ. ತಮ್ಮ ಈ ಟ್ವೀಟ್‌ನಲ್ಲಿ Have you guys seen this yet? 17-inch ThinkBook Plus from Lenovo... ಎಂದು ಬರೆದುಕೊಂಡಿದ್ದಾರೆ. ಹಾಗಾಗಿ, ಬಳಕೆದಾರರಲ್ಲಿ ಕುತೂಹಲ ಹೆಚ್ಚಾಗಿದೆ. 

Vivo S12, Vivo S12 Pro ಲಾಂಚ್: ಏನೆಲ್ಲ ವಿಶೇಷತೆಗಳಿವೆ, ಬೆಲೆ ಎಷ್ಟು?    

ಟ್ವೀಟ್‌ನಲ್ಲಿ ಹೇಳಿರುವಂತೆ  ಬಹುಶಃ ಇದು 17 ಇಂಚ್ ಲೆನೋವೋ ಲ್ಯಾಟ್‌ಟಾಪ್ ಆಗಿದೆ ಮತ್ತು ಲ್ಯಾಪ್‌ಟ್ಯಾಪ್‌ನ ಬಲ ಬದಿಯಲ್ಲಿ ಟ್ಯಾಬ್ಲೆಟ್ ಸೇರಿಸಿರುವುದನ್ನು ಕಾಣಬಹುದಾಗಿದೆ. ಇದಕ್ಕಾಗಿ ಕೀಬೋರ್ಡ್ ಅನ್ನು ಕಂಪನಿ ಚಿಕ್ಕದಾಗಿ ಮಾಡಿದೆ. ಈ ಚಿತ್ರದಲ್ಲಿ ಕಾಣುಸುತ್ತಿರುವ ವಿವಗಳ ಪೈಕಿ, ಈ ಹೊಸ ಲ್ಯಾಪ್‌ಟ್ಯಾಪ್ ವಿಂಡೋಸ್ 11 ಒಎಸ್ ಆಧರಿತವಾಗಿರುವುದು ಗೊತ್ತಾಗುತ್ತದೆ. ಗಮನಿಸಬೇಕಾದ ಸಂಗತಿ ಏನಂದರೆ, ಟ್ಯಾಬ್ಲೆಟ್ ಲ್ಯಾಪ್‌ಟ್ಯಾಪಿನ ಭಾಗವಾಗಿಲ್ಲ ಮತ್ತು ಅದು ಚಾಸೀಸ್ ಹೊರಗಡೆ ಇದೆ. ಜೊತೆಗೆ, ಟ್ಯಾಬ್ ಅಳವಡಿಕೆಯಿಂದಾಗಿ ಕೀಬೋರ್ಡ್ ಅನ್ನು ಪೂರ್ಣವಾಗಿ ಮೇಲ್ಭಾಗಕ್ಕೆ ಎಳೆದು ಕೂರಿಸಿರುವಂತ ಕಾಣುತ್ತದೆ ಮತ್ತು ಅದರ ಕೆಳಗೆ ವಿಶಾಲವಾದ ಟಚ್‌ಪ್ಯಾಡ್ ಇರುವುದನ್ನು ಕಾಣಬಹುದಾಗಿದೆ. ಆದರೆ, ಈ ಬಗ್ಗೆ ಲೆನೋವೋ ಕಂಪನಿಯಿಂದ ಯಾವುದೇ ಅಧಿಕೃತ ಮಾಹಿತಿ ಇಲ್ಲ.

 

 

ಲ್ಯಾಪ್‌ಟ್ಯಾಪ್‌ನಲ್ಲೇ  ಟ್ಯಾಬ್ಲೆಟ್ ನೀಡುವುದರಿಂದ ಬಳಕೆದಾರರಿಗೆ ಯಾವ ರೀತಿಯ ಉಪಯೋಗವಾಗಲಿದೆ ಎಂಬ ಪ್ರಶ್ನೆ ಮೂಡುವುದು ಸಹಜ. ಬಹುಶಃ, ಲ್ಯಾಪ್‌ಟ್ಯಾಪ್ ಬಳಸುವಾಗ ತ್ವರಿತವಾಗಿ ಆಪ್ ಅಕ್ಸೆಸ್ ಮಾಡಲು ಈ ಟ್ಯಾಬ್ಲೆಟ್‌ನಿಂದ ಸಾಧ್ಯವಾಗಬಹುದು. ಯಾವುದೇ ಆಪ್‌ಗಳನ್ನು ಮತ್ತು ಶಾರ್ಟ್‌ಕಟ್‌ಗಳನ್ನು ಬೇಗನೆ ಅಕ್ಸೆಲ್ ಪಡೆಯಲು ಸಾಧ್ಯವಾಗಲಿದೆ. ಹಂಚಿಕೊಳ್ಳಲಾಗಿರುವ ಇಮೇಜ್‌ಗಳನ್ನು ಗಮನಿಸಿದರೆ, ಬಹುಶಃ ಲೆನೋವೋ ಈ ಲ್ಯಾಪ್ stylusನೊಂದಿಗೆ ಬರಬಹುದು. 17 ಇಂಚಿನ  ಲ್ಯಾಪ್‌ಟ್ಯಾಪ್ ಆಗಿರುವುದರಿಂದ ಲೆನೋವೋ, ಚಾಸೀಸ್ ಮೇಲೆ 8ರಿಂದ 10 ಇಂಚಿನ ಎರಡನೇ ಡಿಸ್‌ಪ್ಲೇಯನ್ನು ಅಳವಡಿಸಲು ಸಾಧ್ಯವಾಗಲಿದೆ ಎಂದು ಹೇಳಬಹುದು. ಈಗ ಸೋರಿಕೆಯಾಗಿರುವ ಚಿತ್ರಗಳಿಗಿಂತಲೂ ವಾಸ್ತವದಲ್ಲಿ ಬಿಡುಗಡಾಯದ ಲ್ಯಾಪ್‌ಟ್ಯಾಪ್ ಭಿನ್ನವಾಗಿರುವ ಸಾಧ್ಯತೆಗಳಿರುತ್ತವೆ.

ಭಾರತೀಯ ಮಾರುಕಟ್ಟೆಯಲ್ಲಿ ಚೀನಾ ಮೂಲದ ಈ ಲೆನೋವೋ ತನ್ನ ಉತ್ಕೃಷ್ಟ ಉತ್ಪನ್ನಗಳಿಂದಾಗಿ ಹೆಚ್ಚು ಜನಪ್ರಿಯತೆಯನ್ನು ಗಳಿಸಿದೆ. ವಿಶೇಷವಾಗಿ ಲ್ಯಾಪ್‌ಟ್ಯಾಪ್‌ಗಳಿಗೆ ಹೆಚ್ಚು ಮಾನ್ಯತೆಯನ್ನು ಪಡೆದುಕೊಂಡಿದೆ ಎಂದು ಹೇಳಬಹುದು. ಅತ್ಯಾಧುನಿಕ ತಂತ್ರಜ್ಞಾನ ಹಾಗೂ ಬಳೆಕದಾರರ ಸ್ನೇಹಿ ಸಾಧನಗಳಿಂದಾಗಿ ಲೆನೋವೋ ಕಂಪನಿಯ ಮೇಲೆ ಜನರ ವಿಶ್ವಾಸರ್ಹತೆಯೂ ಹೆಚ್ಚಾಗುತ್ತಿದೆ ಎಂದು ಹೇಳಬಹುದು. ಈಗಾಗಲೇ ಕಂಪನಿಯು ಭಾರತೀಯ ಮಾರುಕಟ್ಟೆಯಲ್ಲಿ ಸಾಕಷ್ಟು ಲ್ಯಾಪ್‌ಟ್ಯಾಪ್ ಮತ್ತು ಸ್ಮಾರ್ಟ್‌ಫೋನುಗಳನ್ನು ಲಾಂಚ್ ಮಾಡಿದೆ.

OnePlus Smart TV: ಭಾರತದಲ್ಲಿ ಒನ್‌ಪ್ಲಸ್‌ನಿಂದ 32, 43 ಇಂಚ್ ಸ್ಮಾರ್ಟ್‌ಟಿವಿ ಲಾಂಚ್ ಸಾಧ್ಯತೆ!

Follow Us:
Download App:
  • android
  • ios