ಬೆಂಗಳೂರು ಎಫ್‌ಸಿ ತಂಡ 14 ಪಂದ್ಯಗಳಲ್ಲಿ ಕೇವಲ 3ರಲ್ಲಿ ಜಯಗಳಿಸಿ, 5 ಡ್ರಾ, 6 ಸೋಲು ಕಂಡಿದೆ. ಪ್ಲೇ-ಆಫ್‌ಗೇರಬೇಕಿದ್ದರೆ ತಂಡ ಇನ್ನುಳಿದ ಪಂದ್ಯಗಳಲ್ಲಿ ಅತ್ಯುತ್ತಮ ಪ್ರದರ್ಶನ ತೋರಿ ಗೆಲ್ಲಬೇಕಿದೆ.

ಬೆಂಗಳೂರು(ಫೆ.08): ಇಂಡಿಯನ್‌ ಸೂಪರ್ ಲೀಗ್‌(ಐಎಸ್‌ಎಲ್‌) ಫುಟ್ಬಾಲ್‌ ಟೂರ್ನಿಯಲ್ಲಿ ಮಾಜಿ ಚಾಂಪಿಯನ್‌ ಬೆಂಗಳೂರು ಎಫ್‌ಸಿ 3ನೇ ಜಯ ದಾಖಲಿಸಿದೆ. ಬುಧವಾರ ನಗರದ ಕಂಠೀರವ ಕ್ರೀಡಾಂಗಣದಲ್ಲಿ ನಡೆದ ಚೆನ್ನೈಯಿನ್ ಎಫ್‌ಸಿ ವಿರುದ್ಧದ ಪಂದ್ಯದಲ್ಲಿ ಬಿಎಫ್‌ಸಿ 1-0 ಗೋಲಿನಿಂದ ಗೆಲುವು ಸಾಧಿಸಿತು. ಇದರೊಂದಿಗೆ ಸುನಿಲ್‌ ಚೆಟ್ರಿ ಪಡೆ ಅಂಕಪಟ್ಟಿಯಲ್ಲಿ 11ರಿಂದ 6ನೇ ಸ್ಥಾನಕ್ಕೆ ಜಿಗಿದಿದೆ. 

ಬೆಂಗಳೂರು ಎಫ್‌ಸಿ ತಂಡ 14 ಪಂದ್ಯಗಳಲ್ಲಿ ಕೇವಲ 3ರಲ್ಲಿ ಜಯಗಳಿಸಿ, 5 ಡ್ರಾ, 6 ಸೋಲು ಕಂಡಿದೆ. ಪ್ಲೇ-ಆಫ್‌ಗೇರಬೇಕಿದ್ದರೆ ತಂಡ ಇನ್ನುಳಿದ ಪಂದ್ಯಗಳಲ್ಲಿ ಅತ್ಯುತ್ತಮ ಪ್ರದರ್ಶನ ತೋರಿ ಗೆಲ್ಲಬೇಕಿದೆ.

Scroll to load tweet…

ಇನ್ನು ಚೆನ್ನೈಯಿನ್ ಎಫ್‌ಸಿ ಎದುರಿನ ಪಂದ್ಯ ಆರಂಭಕ್ಕೂ ಮುನ್ನ ಖ್ಯಾತ ಟೆನಿಸಿಗ ರೋಹನ್ ಬೋಪಣ್ಣಗೆ ಬಿಎಫ್‌ಸಿ ತಂಡದ ನಾಯಕ ಸುನಿಲ್ ಚೆಟ್ರಿ ಬಿಎಫ್‌ಸಿ ಜೆರ್ಸಿಯನ್ನು ಉಡುಗೊರೆಯಾಗಿ ನೀಡಿದರು.

Scroll to load tweet…

ಫೆ.11ಕ್ಕೆ ಮಣಿಪಾಲ ಮ್ಯಾರಥಾನ್

ಉಡುಪಿ: 6ನೇ ಮಣಿಪಾಲ ಮ್ಯಾರಥಾನ್ ಫೆ.11ರಂದು ನಡೆಯಲಿದ್ದು, 10ಕ್ಕೂ ಹೆಚ್ಚು ದೇಶಗಳಿಂದ 15,000ಕ್ಕೂ ಹೆಚ್ಚು ಓಟಗಾರರು ಭಾಗವಹಿಸುವ ನಿರೀಕ್ಷೆಯಿದೆ. ಇದು ವಿಶ್ವವಿದ್ಯಾನಿಲಯವೊಂದು ನಡೆಸುವ ವಿಶ್ವದ ಏಕೈಕ ಮ್ಯಾರಾಥಾನ್. ಈ ಬಾರಿ ಕೀನ್ಯಾ, ಇಥಿಯೋಪಿಯಾ, ಅಮೆರಿಕಾ, ಜಪಾನ್, ಫ್ರಾನ್ಸ್, ಟರ್ಕಿ, ಜರ್ಮನಿ, ಇಂಗ್ಲೆಂಡ್, ಆಸ್ಟ್ರೇಲಿಯಾ ದೇಶಗಳಿಂದ ಸುಮಾರು 100ಕ್ಕೂ ಹೆಚ್ಚು ವಿದೇಶಿ ಓಟಗಾರರು ಭಾಗವಹಿಸಲಿದ್ದಾರೆ.

ಪ್ರೊ ಕಬಡ್ಡಿ ಲೀಗ್: ಬೆಂಗಳೂರು ಬುಲ್ಸ್‌ನ 8ನೇ ಜಯದಾಸೆಗೆ ಪುಣೆ ತಣ್ಣೀರು, ಪ್ಲೇ ಆಫ್ ಹಾದಿ ಕಠಿಣ

42.19 ಕಿ.ಮೀ. ಫುಲ್ ಮ್ಯಾರಾಥಾನ್, 21.09 ಕಿ.ಮೀ. ಹಾಫ್ ಮ್ಯಾರಾಥಾನ್, 10 ಕಿ.ಮೀ., 5 ಕಿ.ಮೀ., 3 ಕಿ.ಮೀ. ಮ್ಯಾರಾಥಾನ್ ಸ್ಪರ್ಧೆಗಳು ನಡೆಯಲಿದ್ದು, ಒಟ್ಟು 21 ಲಕ್ಷ ರು. ನಗದು ಬಹುಮಾನವಿದೆ. ಮ್ಯಾರಥಾನ್‌ ದಿನ ವಿಶೇಷ ಕಾರ್ನಿವಲ್ ಕೂಡ ಆಯೋಜಿಸಲಾಗಿದೆ.

ಈ ಬಗ್ಗೆ ಮಾಹೆಯ ಸಹಕುಲಾಧಿಪತಿ ಡಾ.ಎಚ್.ಎಸ್.ಬಲ್ಲಾಳ್ ವಿವರಗಳನ್ನು ನೀಡಿದರು. ಮಣಿಪಾಲ ಮ್ಯಾರಥಾನ್ ಈಗ ಐಎಎಎಫ್ (ಇಂಟರ್ ನ್ಯಾಷನಲ್ ಅಮೆಚೂರ್ ಅಥ್ಲೆಟಿಕ್ ಫೆಡರೇಶನ್) ಮತ್ತು ಎಐಎಂಎಸ್ (ಅಸೋಸಿಯೇಶನ್ ಆಫ್ ಇಂಟರ್ ನ್ಯಾಷನಲ್ ಮ್ಯಾರಥಾನ್ ಆ್ಯಂಡ್ ಡಿಸ್ಟೆನ್ಸ್ ರೇಸಸ್)ನಿಂದ ಅಂತಾರಾಷ್ಟ್ರೀಯ ಮಾನ್ಯತೆ ಪಡೆದಿದ್ದು, ವಿಶ್ವದ ಪ್ರತಿಷ್ಠಿತ ಕ್ರೀಡಾ ಸ್ಪರ್ಧೆಯಲ್ಲಿ ಒಂದಾಗಿದೆ ಎಂದರು.

ರಾಷ್ಟ್ರೀಯ ಕಿರಿಯರ ಕುಸ್ತಿಕೂಟ ಮುಂದೂಡಿಕೆ..!

ನವದೆಹಲಿ: ಭಾರತೀಯ ಕುಸ್ತಿ ಫೆಡರೇಷನ್‌ನ ನಿಯಂತ್ರಿಸುವ ಸ್ವತಂತ್ರ ಸಮಿತಿ ನಿಗದಿಪಡಿಸಿದ್ದ ರಾಷ್ಟ್ರೀಯ ಅಂಡರ್-15, ಅಂಡರ್-20 ಕುಸ್ತಿ ಚಾಂಪಿಯನ್‌ಶಿಪ್‌ ಮುಂದೂಡಿಕೆಯಾಗಿದೆ. ಫೆಬ್ರವರಿ 11ರಿಂದ 17ರ ವರೆಗೆ ಗ್ವಾಲಿಯರ್‍‌ನಲ್ಲಿ ಈ ಕ್ರೀಡಾಕೂಟ ನಡೆಯಬೇಕಿತ್ತು.

ಯಾರು ಈ ಸಫಾ ಬೇಗ್? ಇಲ್ಲಿದೆ ಇರ್ಫಾನ್ ಪಠಾಣ್ ಮುದ್ದಾದ ಮಡದಿಯ ಇಂಟ್ರೆಸ್ಟಿಂಗ್ ಮಾಹಿತಿ

ಆದರೆ ಕೆಲವು ರಾಜ್ಯ ಕುಸ್ತಿ ಸಂಸ್ಥೆಗಳು ಆಯ್ಕೆ ಟ್ರಯಲ್ಸ್ ಕಾರಣಕ್ಕೆ ಸಮಯಾವಕಾಶ ಕೇಳಿದ ಹಿನ್ನೆಲೆಯಲ್ಲಿ ಈ ರಾಷ್ಟ್ರೀಯ ಕಿರಿಯರ ಕುಸ್ತಿಕೂಟವನ್ನು ಮುಂದೂಡಲಾಗಿದೆ ಎಂದು ಆಯೋಜಕರು ತಿಳಿಸಿದ್ದಾರೆ.

ಮಾ.4ರಿಂದ ಮಾತ್ರು ಕಪ್‌ ಬಾಸ್ಕೆಟ್‌ಬಾಲ್‌

ಬೆಂಗಳೂರು: ಕರ್ನಾಟಕ ರಾಜ್ಯ ಬಾಸ್ಕೆಟ್‌ಬಾಲ್‌ ಸಂಸ್ಥೆ ಮಹಿಳೆಯರಿಗಾಗಿ ಆಯೋಜಿಸುವ ಮಾತ್ರು ಕಪ್‌ ಬಾಸ್ಕೆಟ್‌ಬಾಲ್‌ ಚಾಂಪಿಯನ್‌ಶಿಪ್‌ ಮಾ.4ರಿಂದ 8ರ ವರೆಗೆ ನಡೆಯಲಿದೆ. ನಗರದ ಕಂಠೀರವ ಕ್ರೀಡಾಂಗಣದಲ್ಲಿ ಪಂದ್ಯಗಳು ನಡೆಯಲಿವೆ ಎಂದು ಸಂಸ್ಥೆ ತಿಳಿಸಿದೆ.