ಕುಟುಂಬದ ಆತ್ಮೀಯರು ಮೃತಪಟ್ಟಿದ್ದಾರೆ. ಆದರೆ ವಿಧಿವಿಧಾನಗಳು ಕೊಂಚ ವಿಳಂಬವಾಗಿದೆ. ಅಂತ್ಯಸಂಸ್ಕಾರದ ನಡುವೆ ರೋಚಕ ಫುಟ್ಬಾಲ್ ಪಂದ್ಯ ಆರಂಭಗೊಂಡಿದೆ. ಹೀಗಾಗಿ ಅಂತ್ಯಕ್ರಿಯೆಯನ್ನೇ ಸ್ಥಗಿತಗೊಳಿಸಿ, ಮೃತದೇಹ ಮುಂದಿಟ್ಟು ಸಂಪೂರ್ಣ ಪಂದ್ಯ ವೀಕ್ಷಿಸಿದ್ದಾರೆ. ಬಳಿಕ ಅಂತ್ಯಸಂಸ್ಕಾರ ನೆರವೇರಿಸಿದ ವಿಡಿಯೋಗೆ ವೈರಲ್ ಆಗಿದೆ.

ಚಿಲಿ(ಜು-2) ಕ್ರಿಕೆಟ್, ಫುಟ್ಬಾಲ್ , ಸಿನಿಮಾ, ಅಭಿಮಾನದ ಕ್ರೇಜ್ ಹುಟ್ಟಿಕೊಂಡರೆ ಮತ್ತೆಲ್ಲವು ನಗಣ್ಯವಾಗುತ್ತೆ. ಪಂದ್ಯ ನೋಡಲು ಕುಳಿತರೆ ಊಟ, ತಿಂಡಿಯೂ ಬೇಡ. ಕ್ಲಾಸಿಕ್ ಬಂಕ್, ಕೆಲಸಕ್ಕೆ ಚಕ್ಕರ್ ಹಾಕಿ ಪಂದ್ಯ ನೋಡಿ ಸಂಭ್ರಮಿಸಿದವರ ಸಂಖ್ಯೆ ದೊಡ್ಡದಿದೆ. ಆದರೆ ಪಂದ್ಯಕ್ಕಾಗಿ ಅಂತ್ಯಸಂಸ್ಕಾರವನ್ನೇ ಸ್ಥಗಿತಗೊಳಿಸಿದ ಘಟನೆ ಚಿಲಿಯಲ್ಲಿ ನಡೆದಿದೆ. ಮೃತಪಟ್ಟ ಕುಟುಂಬ ಸದಸ್ಯರ ಅಂತ್ಯಸಂಸ್ಕಾರ ಮಾಡುತ್ತಿದ್ದಂತೆ ಫುಟ್ಬಾಲ್ ರೋಚಕ ಪಂದ್ಯ ಆರಂಭಗೊಂಡಿದೆ. ಹೀಗಾಗಿ ಅಂತ್ಯಸಂಸ್ಕಾರ ಸ್ಥಗಿತಗೊಳಿಸಿ ಮೃತದೇಹ ಮುಂದೆ ಕುಟುಂಬ ಸಂಪೂರ್ಣ ಪಂದ್ಯ ವೀಕ್ಷಿಸಿದೆ.

ಲ್ಯಾಟಿನ್ ಅಮೆರಿಕದ ಚಿಲಿಯಲ್ಲಿ ಈ ಘಟನೆ ನಡೆದಿದೆ. ಕುಟುಂಬದ ಆತ್ಮೀಯರೊಬ್ಬರು ಮೃತಪಟ್ಟಿದ್ದಾರೆ. ಮಾಹಿತಿ ತಿಳಿದು ಕುಟುಂಬಸ್ಥರು, ಆಪ್ತರು, ಸ್ನೇಹಿತರು ಮನೆಗೆ ಆಗಮಿಸಿದ್ದಾರೆ. ಮೃತದೇಹದ ಅಂತಿಮ ದರ್ಶನ ಪಡೆದಿದ್ದಾರೆ. ಬಳಿಕ ಕೆಲ ವಿಧಿವಿಧಾನಗಳು ಆರಂಭಗೊಂಡಿದೆ. ಮೃತದೇಹವನ್ನು ಶವಪೆಟ್ಟಿಗೆಯಲ್ಲಿರಿಸಲಾಗಿದೆ. ಸಮುದಾಯದ ಹಿರಿಯರು, ಪಾದ್ರಿಗಳು ಆಗಮಿಸಿದ್ದಾರೆ. 

Viral New : ಗಂಡ ಸತ್ತ ಮೇಲೆ ಪಾರ್ಟಿ ಮಾಡಿದ ಮಹಿಳೆ… ಸಂಬಂಧಿಕರಿಗೆ ಸಿಕ್ತು ಗಿಫ್ಟ್ !?

ವಿಧಿವಿಧಾನಗಳು ಆರಂಭಗೊಂಡಿದೆ. ಆದರೆ ಹಲವರ ಆಗಮನ, ವಿಧಿವಿಧಾನ ಪ್ರಕ್ರಿಯೆ ಕೊಂಚ ವಿಳಂಬವಾಗಿದೆ. ಕುಟುಂಬಸ್ಥರು ಪಂದ್ಯ ಆರಂಭವಾಗುವುದರೊಳಗೆ ಅಂತ್ಯಸಂಸ್ಕಾರ ಮುಗಿಸಲು ಪ್ಲಾನ್ ಮಾಡಿದ್ದರು. ಆದರೆ ಸಾಧ್ಯವಾಗಿಲ್ಲ. ಅದು ಕೂಡ ಕೋಪಾ ಅಮೆರಿಕಾ ಕಪ್ ಟೂರ್ನಿಯಲ್ಲಿ ಚಿಲಿ ಹಾಗೂ ಪೆರು ತಂಡಗಳ ಫುಟ್ಬಾಲ್ ಮುಖಾಮುಖಿ.

ಈ ರೋಚಕ ಪಂದ್ಯ ಆರಂಭಗೊಂಡಿದೆ. ಅಂತ್ಯಸಂಸ್ಕಾರ ಇದೆ ಅನ್ನೋ ಕಾರಣಕ್ಕೆ ಪಂದ್ಯ ಕೆಲಕಾಲ ಮುಂದೂಡಲು ಸಾಧ್ಯವಿಲ್ಲ. ಹೀಗಾಗಿ ಕುಟುಂಬಸ್ಥರು ಅಂತ್ಯಸಂಸ್ಕಾರವನ್ನೇ ಕೆಲಕಾಲ ಸ್ಥಗಿತಗೊಳಿಸಿದ್ದಾರೆ. ಪಂದ್ಯ ಮುಗಿದ ಬಳಿಕ ಅಂತ್ಯಸಂಸ್ಕಾರ ಮುಂದುವರಿಸಲು ನಿರ್ಧರಿಸಿದ್ದಾರೆ. ಶವಪೆಟ್ಟಿಗೆ ಮುಂದೆ ದೊಡ್ಡದಾದ ಟಿವಿ ಸ್ಕ್ರೀನ್ ಹಾಕಿ ಪಂದ್ಯ ವೀಕ್ಷಿಸಿದ್ದಾರೆ. ಒಂದೆಡೆ ಶವಪೆಟ್ಟಿಗೆ, ಮತ್ತೊಂದೆಡೆ ದರ್ಶನಕ್ಕೆ ಆಗಮಿಸಿದವರು ತಂದ ಹೂಗುಚ್ಚಗಳು ಪಕ್ಕದಲ್ಲೇ ಇಡಲಾಗಿದೆ. 

Scroll to load tweet…

ಕುಟುಂಬಸ್ಥರೆಲ್ಲಾ ಚಿಲಿ ಹಾಗೂ ಪೆರು ನಡುವಿನ ರೋಚಕ ಫುಟ್ಬಾಲ್ ಪಂದ್ಯ ವೀಕ್ಷಿಸಿದ್ದಾರೆ. ಈ ಪಂಜ್ಯ ಗೋಲುಗಳಿಲ್ಲದೆ ಡ್ರಾ ಗೊಂಡಿದೆ. ಇದು ಕುಟಂಬಸ್ಥರಿಗೆ ನಿರಾಸೆ ತಂದಿದೆ. ಒಂದು ಗೋಲು ಸಿಡಿಸಿ ಗೆಲ್ಲಬೇಕಿತ್ತು ಎಂದು ಅಭಿಪ್ರಾಯಪಟ್ಟಿದ್ದಾರೆ. ಪಂದ್ಯ ಮುಗಿದ ಬಳಿಕ ಅಂತ್ಯಸಂಸ್ಕಾರ ಮುಂದುವರಿಸಿದ್ದಾರೆ. 

ಅಂತ್ಯಸಂಸ್ಕಾರಕ್ಕೆ ಹಣವಿಲ್ಲದೇ ಶವವನ್ನು ರಸ್ತೆಗೆ ಎಸೆದ ಪ್ರಿಯಕರ