ಈ ದೇಗುಲದ ಬಾಗಿಲು ತೆಗೆವುದು ನಾಗಪಂಚಮಿಗೆ ಮಾತ್ರ, ಭೇಟಿ ಕೊಟ್ರೆ ನಿವಾರಣೆಯಾಗುತ್ತೆ ಕಾಳಸರ್ಪ ದೋಷ!
ನಾಗರ ಪಂಚಮಿಯಂದು ಮಾತ್ರ ಬಾಗಿಲು ತೆಗೆವ ದೇವಾಲಯವೊಂದಿದೆ. ಅಂದು ಇಲ್ಲಿಗೆ ಭೇಟಿ ನೀಡಿದ್ರೆ ಕಾಳ ಸರ್ಪ ದೋಷ ಸಂಪೂರ್ಣ ನಿವಾರಣೆಯಾಗುತ್ತದೆ. ಈ ದೇವಾಲಯ ಯಾವುದು, ಎಲ್ಲಿದೆ, ಹಿನ್ನೆಲೆ ಏನು?
ಹಿಂದೂ ಕ್ಯಾಲೆಂಡರ್ ಪ್ರಕಾರ, ನಾಗರ ಪಂಚಮಿಯನ್ನು ಶ್ರಾವಣ ಮಾಸದ ಶುಕ್ಲದ ಐದನೇ ದಿನದಂದು ಆಚರಿಸಲಾಗುತ್ತದೆ. ಈ ದಿನದಂದು ಶಿವನ ಆಭರಣವಾದ ನಾಗರ ಹಾವನ್ನು ಭಾರತದ ಅನೇಕ ಸ್ಥಳಗಳಲ್ಲಿ ಪೂಜಿಸಲಾಗುತ್ತದೆ. ಈ ಬಾರಿ ನಾಗಪಂಚಮಿ ಹಬ್ಬವನ್ನು ಆಗಸ್ಟ್ 2ರಂದು ಆಚರಿಸಲಾಗುವುದು. ಸನಾತನ ಸಂಪ್ರದಾಯದಲ್ಲಿ ಸರ್ಪಗಳ ಆರಾಧನೆಗೆ ಬಹಳ ಮಹತ್ವವಿದೆ. ನಂಬಿಕೆಗಳ ಪ್ರಕಾರ, ಈ ದಿನ ಸರ್ಪಗಳನ್ನು ಪೂಜಿಸಲಾಗುತ್ತದೆ. ಹಾಲು ಕೂಡ ನೀಡಲಾಗುತ್ತದೆ.
ನಾಗರ ಪಂಚಮಿಯಂದು ದೇವಸ್ಥಾನಗಳಲ್ಲಿ ಜನಜಂಗುಳಿ ಹೆಚ್ಚಿರುತ್ತದೆ. ಆದರೆ ಇಂದು ನಾವು ನಿಮಗೆ ಹೇಳಲು ಹೊರಟಿರುವುದು 24 ಗಂಟೆಗಳ ಕಾಲ ನಿರಂತರವಾಗಿ ಮುಚ್ಚಿರುವ, ನಾಗಪಂಚಮಿಯಂದು ವರ್ಷಕ್ಕೊಮ್ಮೆ ಮಾತ್ರ ಭಕ್ತರಿಗೆ ಬಾಗಿಲು ತೆರೆಯುವ ದೇವಾಲಯದ ಬಗ್ಗೆ.
ಹೌದು, ಈ ದೇವಾಲಯಕ್ಕೆ ಲಕ್ಷಾಂತರ ಭಕ್ತರು ಆಗಮಿಸುತ್ತಾರೆ. ಆದರೆ, ನಾಗಚಂದ್ರೇಶ್ವರನ ದರ್ಶನ ಮಾತ್ರ ನಾಗರಪಂಚಮಿಯಂದು ಬಂದವರಿಗೆ ಮಾತ್ರ ಸಾಧ್ಯ. ಇದೇ ಉಜ್ಜಯಿನಿಯ ನಾಗಚಂದ್ರೇಶ್ವರ ದೇವಾಲಯ.
ಪ್ರಸಿದ್ಧ ಮಹಾಕಾಳೇಶ್ವರ ದೇವಾಲಯದ ಮೂರನೇ ಮಹಡಿಯಲ್ಲಿರುವ ನಾಗಚಂದ್ರೇಶ್ವರ ದೇವಾಲಯ ವರ್ಷಕ್ಕೊಮ್ಮೆ ನಾಗರ ಪಂಚಮಿಯಂದು ಮಾತ್ರ ಭಕ್ತರಿಗಾಗಿ ಬಾಗಿಲು ತೆರೆಯುತ್ತದೆ. ಆ ದಿನ ಇಲ್ಲಿ ನಾಗಚಂದ್ರೇಶ್ವರನ ದರ್ಶನ ಮಾಡಿದವರಿಗೆ ಕಾಳಸರ್ಪ ದೋಷದಿಂದ ಮುಕ್ತಿ ಸಿಗುತ್ತದೆ ಎಂಬ ನಂಬಿಕೆ ಇದೆ.
ಜ್ಯೋತಿರ್ಲಿಂಗ ಸರಣಿ: ಸ್ಮಶಾನ ಭೂಮಿಯಲ್ಲಿ ಕೂತ ದಕ್ಷಿಣಮುಖಿ ಮಹಾಕಾಳೇಶ್ವರ, ಇಲ್ಲಿ ರಾತ್ರಿ ಕಳೆದೋರ ಅಧಿಕಾರ ಪತನ!
ಈ ದೇವಾಲಯದಲ್ಲಿ ಶಿವ, ಪಾರ್ವತಿ ಮತ್ತು ಆಕೆಯ ಮಕ್ಕಳಾದ ಗಣೇಶ ಮತ್ತು ನಾಗ ಎಲ್ಲರೂ ಕುಳಿತಿದ್ದಾರೆ. ಜಗತ್ತಿನಲ್ಲಿ ಬೇರೆಲ್ಲೂ ಇಂತಹ ದೇವಾಲಯವಿಲ್ಲ ಎಂದು ನಂಬಲಾಗಿದೆ. ಈ ದೇವಾಲಯಕ್ಕೆ ತನ್ನದೇ ಆದ ಐತಿಹ್ಯವಿದೆ. ಈ ದೇವಾಲಯದ ಪೌರಾಣಿಕ ಕಥೆ ಮತ್ತು ಅದರ ಖ್ಯಾತಿಯ ಬಗ್ಗೆ ತಿಳಿಯೋಣ.
ಪುರಾಣ(Mythology)
ಪುರಾಣಗಳ ಪ್ರಕಾರ, ಹಾವುಗಳ ರಾಜನಾದ ತಕ್ಷಕನು ಶಿವನಿಗೆ ತಪಸ್ಸು ಮಾಡುವ ಮೂಲಕ ಅಮರತ್ವದ ವರವನ್ನು ಪಡೆದನು. ನಂಬಿಕೆಯ ಪ್ರಕಾರ, ಅಂದಿನಿಂದ ತಕ್ಷಕ ರಾಜನು ಭೋಲೆನಾಥನ ಸಹವಾಸದಲ್ಲಿ ಇಲ್ಲಿಯೇ ವಾಸಿಸಲು ಪ್ರಾರಂಭಿಸಿದನು. ಅಂದಿನಿಂದ ಈ ದೇವಾಲಯದಲ್ಲಿ ತಕ್ಷಕ ನಾಗ ಕುಳಿತಿದ್ದಾನೆ ಎಂದು ನಂಬಲಾಗಿದೆ. ಅವನು ಸರ್ಪ ರೂಪದಲ್ಲಿ ಶಿವನ ಕುತ್ತಿಗೆ, ಕೈ ಮತ್ತು ಪಾದಗಳನ್ನು ಸುತ್ತಿಕೊಂಡಿದ್ದಾನೆ. ಅದರ ಮೇಲೆ ಶಿವ ಮತ್ತು ಅವನ ಕುಟುಂಬದವರು ಕುಳಿತಿದ್ದಾರೆ. ರಾಜ ತಕ್ಷಕನು ತನ್ನ ಏಕಾಂತದಲ್ಲಿ ಯಾವುದೇ ತೊಂದರೆಯಾಗಬಾರದು ಎಂದು ಬಯಸಿದನು. ಹಾಗಾಗಿ, ನಾಗಪಂಚಮಿಯ ದಿನ ಮಾತ್ರ ಭಕ್ತರಿಗೆ ದರ್ಶನ ನೀಡುವುದು ವರ್ಷಗಳಿಂದ ನಡೆದುಕೊಂಡು ಬಂದಿರುವ ಪದ್ಧತಿ.
ನಾಗಪಂಚಮಿಯ ದಿನದಂದು ದೇವಸ್ಥಾನದ ಬಾಗಿಲು ತೆರೆದಾಗ ಭಕ್ತರ ಉದ್ದನೆಯ ಸರತಿ ಸಾಲು ಇರುತ್ತದೆ. ನಾಗಪಂಚಮಿಯಂದು ನಾಗಚಂದ್ರೇಶ್ವರ ದೇವರ ದರ್ಶನಕ್ಕಾಗಿ ಶನಿವಾರ ರಾತ್ರಿ 12 ಗಂಟೆಗೆ ದೇವಸ್ಥಾನದ ಬಾಗಿಲು ತೆರೆಯಲಾಗುತ್ತದೆ. ಇದಾದ ನಂತರ ಭಾನುವಾರ ನಾಗಪಂಚಮಿಯಂದು 12 ಗಂಟೆಗೆ ದೇವಸ್ಥಾನದಲ್ಲಿ ಆರತಿ ನಡೆದು ನಂತರ ಬಾಗಿಲು ಮುಚ್ಚಲಾಗುತ್ತದೆ. ಇಲ್ಲಿ ನಡೆಯುವ ಪೂಜೆ ಮತ್ತು ಸಂಪೂರ್ಣ ವ್ಯವಸ್ಥೆಯನ್ನು ಮಹಾನಿರ್ವಾಣಿ ಅಖಾರದ ಯತಿಗಳು ಮಾಡುತ್ತಾರೆ.
Nag Panchmi 2022: ಶ್ರಾವಣ ಸೋಮವಾರದಂದೇ ನಾಗರಪಂಚಮಿ! ಹಬ್ಬದ ದಿನಾಂಕ ಏನು?
ಕಾಳ ಸರ್ಪ ದೋಷ ನಿವಾರಣೆ
ನಾಗಪಂಚಮಿಯ ದಿನದಂದು ಜನರು ನಾಗಚಂದ್ರೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಲು ಉದ್ದನೆಯ ಸರತಿ ಸಾಲಿನಲ್ಲಿ ನಿಲ್ಲುತ್ತಾರೆ. ನಂಬಿಕೆಗಳ ಪ್ರಕಾರ, ಈ ದಿನದಂದು, ನಾಗ ತಕ್ಷಕ ಸ್ವತಃ ದೇವಾಲಯಕ್ಕೆ ಬಂದು ಸಂದರ್ಶಕರ ಕಾಳ ಸರ್ಪ ದೋಷವನ್ನು ತೆಗೆದು ಹಾಕುತ್ತಾನೆ. ಪಂಚಕ್ರೋಶಿ ಪ್ರಯಾಣಿಕರು ತೆಂಗಿನಕಾಯಿಯನ್ನು ಅರ್ಪಿಸುವ ಮೂಲಕ ದೇವರಿಂದ ಶಕ್ತಿಯನ್ನು ಪಡೆಯುತ್ತಾರೆ ಮತ್ತು ಪ್ರಯಾಣ ಮುಗಿದ ನಂತರ ಮಣ್ಣಿನಿಂದ ಮಾಡಿದ ಕುದುರೆಗಳನ್ನು ಇಲ್ಲಿ ಅರ್ಪಿಸಲಾಗುತ್ತದೆ.