ಮಕರ ಸಂಕ್ರಾಂತಿ ದಿನ ಖಿಚಡಿ ಮಹತ್ವವೇನು? ತಿನ್ನಲು ವೈಜ್ಞಾನಿಕ ಕಾರಣವೇನು?
ಮಕರ ಸಂಕ್ರಾಂತಿ ಹಬ್ಬ ಹತ್ತಿರ ಬರ್ತಿದೆ. ಜನವರಿ ಹದಿನೈದರಂದು ಹಬ್ಬ ಆಚರಣೆಗೆ ತಯಾರಿ ನಡೆದಿದೆ. ಈ ಸಮಯದಲ್ಲಿ ಎಲ್ಲರ ಮನೆಯಲ್ಲೂ ಖಿಚಡಿ ಸಿದ್ಧವಾಗುತ್ತೆ. ಈ ದಿನ ಖಿಚಡಿ ಯಾಕೆ ಮಾಡ್ತಾರೆ ಗೊತ್ತಾ?
ಹೊಸ ವರ್ಷದಲ್ಲಿ ಮೊದಲು ಬರುವ ಹಬ್ಬ ಸಂಕ್ರಾಂತಿ. ಹಿಂದೂ ಧರ್ಮದಲ್ಲಿ ಮಕರ ಸಂಕ್ರಾಂತಿ ಸಾಕಷ್ಟು ವಿಶೇಷತೆಯನ್ನು ಹೊಂದಿದೆ. ಮಕರ ಸಂಕ್ರಾಂತಿ ನಂತ್ರ ಶುಭ ಕಾರ್ಯಗಳು ಶುರುವಾಗುತ್ತವೆ. ಮಕರ ಸಂಕ್ರಾಂತಿನ್ನು ಉತ್ತರಾಯಣ ಕಾಲ ಎಂದೂ ಕರೆಯುತ್ತಾರೆ. ಸೂರ್ಯ ಧನು ರಾಶಿಯಿಂದ ಹೊರಬಂದು ಮಕರ ರಾಶಿಯನ್ನು ಈ ಸಮಯದಲ್ಲಿ ಪ್ರವೇಶಿಸುತ್ತಾನೆ. ಸೂರ್ಯ ಮಕರ ರಾಶಿಗೆ ಪ್ರವೇಶ ಮಾಡುವುದರಿಂದಲೇ ಅದನ್ನು ಮಕರ ಸಂಕ್ರಾಂತಿ ಎಂದು ಕರೆಯಲಾಗುತ್ತದೆ. ಮಕರ ಸಂಕ್ರಾಂತಿ ಸೂರ್ಯನಿಗೆ ಮೀಸಲಿಡಲಾಗಿದೆ. ಈ ದಿನ ಸೂರ್ಯದೇವರ ಪೂಜೆ, ಆರಾಧನೆ ನಡೆಯುತ್ತದೆ. ಪವಿತ್ರ ನದಿಯಲ್ಲಿ ಸ್ನಾನ, ಸೂರ್ಯನಿಗೆ ಅರ್ಘ್ಯ ಹಾಗೂ ದಾನ ಮಕರ ಸಂಕ್ರಾಂತಿಯ ವಿಶೇಷ. ಮಕರ ಸಂಕ್ರಾಂತಿಯನ್ನು ಬೇರೆ ಬೇರೆ ಹೆಸರುಗಳಿಂದ ಮತ್ತು ಪದ್ಧತಿಯಿಂದ ಆಚರಿಸಲಾಗುತ್ತದೆ.
ಮಕರ ಸಂಕ್ರಾಂತಿ (Makar Sankranti) ಹಬ್ಬದಲ್ಲಿ ಎಳ್ಳು, ಬೆಲ್ಲದ ಜೊತೆ ಖಿಚಡಿ ಬೇಯಿಸುವ ಪದ್ಧತಿ ಇದೆ. ಬಹುತೇಕ ಎಲ್ಲ ಭಾಗಗಳಲ್ಲಿ ಖಿಚಡಿ (Khichdi) ತಯಾರಿಸಿ, ಅದನ್ನು ತಿನ್ನುವುದಲ್ಲದೆ ದಾನ (Donation) ಮಾಡುತ್ತಾರೆ. ನಾವಿಂದು ಸಂಕ್ರಾಂತಿ ದಿನ ಏಕೆ ಖಿಚಡಿ ತಯಾರಿಸಬೇಕು ಎನ್ನುವ ಬಗ್ಗೆ ನಿಮಗೆ ಮಾಹಿತಿ ನೀಡ್ತೇವೆ.
ಈ ಜನರನ್ನು ಎಂದಿಗೂ ಮನೆಯಿಂದ ಖಾಲಿ ಕೈಯಲ್ಲಿ ಕಳುಹಿಸಬಾರದು!
ಮಕರ ಸಂಕ್ರಾಂತಿಯಂದು ಖಿಚಡಿ ಏಕೆ? : ಮಕರ ಸಂಕ್ರಾಂತಿ ಹಬ್ಬದಂದು ಖಿಚಡಿ ಮಾಡುವ ಕಾರಣ ಅದನ್ನು ಕೆಲವು ಕಡೆ ಖಿಚಡಿ ಹಬ್ಬ ಎಂದೇ ಕರೆಯುತ್ತಾರೆ. ಖಿಚಡಿ ಸಾಮಾನ್ಯ ಆಹಾರವಲ್ಲ. ಇದು ಗ್ರಹಗಳ ಜೊತೆ ಸಂಬಂಧವನ್ನು ಹೊಂದಿದೆ. ಬೇಳೆಕಾಳುಗಳು, ಅಕ್ಕಿ, ತುಪ್ಪ, ಅರಿಶಿನ, ಮಸಾಲೆಗಳು ಮತ್ತು ಹಸಿರು ತರಕಾರಿಗಳ ಮಿಶ್ರಣದಿಂದ ಖಿಚಡಿ ಮಾಡಲಾಗುತ್ತದೆ. ಎಲ್ಲವೂ ಒಂಬತ್ತು ಗ್ರಹಗಳಿಗೆ ಸಂಬಂಧಿಸಿದೆ ಎಂದು ನಂಬಲಾಗಿದೆ. ಸಂಕ್ರಾಂತಿ ದಿನ ಖಿಚಡಿ ಸೇವನೆ ಶುಭ ಫಲಿತಾಂಶ ನೀಡುತ್ತದೆ ಎಂಬ ನಂಬಿಕೆಯೂ ಇದೆ.
ಖಿಚಡಿಯಲ್ಲಿನ ಬಳಸುವ ಅಕ್ಕಿಯನ್ನು ಚಂದ್ರನಿಗೆ, ಉಪ್ಪು ಶುಕ್ರನಿಗೆ, ಅರಿಶಿನವನ್ನು ಗುರುವಿಗೆ, ಹಸಿರು ತರಕಾರಿಗಳನ್ನು ಬುಧನಿಗೆ ಮತ್ತು ಖಿಚಡಿಯ ಶಾಖವನು ಮಂಗಳನಿಗೆ ಹೋಲಿಸಲಾಗುತ್ತದೆ. ಖಿಚಡಿಯಲ್ಲಿ ಕಪ್ಪು ಉದ್ದಿನಬೇಳೆ ಮತ್ತು ಎಳ್ಳನ್ನು ಬಳಸಲಾಗುತ್ತದೆ. ಇದು ಸೂರ್ಯ ಮತ್ತು ಶನಿ ಜೊತೆ ಸಂಬಂಧ ಹೊಂದಿದೆ.
ಖಿಚಡಿ ಹಾಗೂ ಅದ್ರ ಹಿಂದಿರುವ ಕಥೆ : ಮಕರ ಸಂಕ್ರಾಂತಿಯಂದು ಖಿಚಡಿ ತಯಾರಿಸುವ ಪದ್ಧತಿ ಈಗಿನದ್ದಲ್ಲ. ಅನೇಕಾನೇಕ ವರ್ಷಗಳಿಂದಲೂ ಇದು ರೂಢಿಯಲ್ಲಿದೆ. ಬಾಬಾ ಗೋರಖನಾಥ್ ಮತ್ತು ಅಲಾವುದ್ದೀನ್ ಖಿಲ್ಜಿಯೊಂದಿಗೆ ಖಿಚಡಿ ಕಥೆ ಥಳುಕು ಹಾಕಿಕೊಂಡಿದೆ. ಬಾಬಾ ಗೋರಖನಾಥ್ ಮತ್ತು ಅವರ ಶಿಷ್ಯರು ಅಲಾವುದ್ದೀನ್ ಖಿಲ್ಜಿ ಮತ್ತು ಅವನ ಸೈನ್ಯದ ವಿರುದ್ಧ ಸಾಕಷ್ಟು ಹೋರಾಡಿದರು. ಹೋರಾಟ ಮಾಡಿ ಬಾಬಾ ಗೋರಖನಾಥ್ ಹಾಗೂ ಅವರ ಸೈನಿಕರು ಶಕ್ತಿ ಕಳೆದುಕೊಂಡಿದ್ದರು. ಅವರಿಗೆ ಅಡುಗೆ ಮಾಡಲು ಹೆಚ್ಚಿನ ಸಮಯ ಸಿಗುತ್ತಿರಲಿಲ್ಲ. ಶಕ್ತಿ ನೀಡುವ ಹಾಗೂ ಬೇಗ ಆಹಾರ ತಯಾರಿಸುವಂತಹ ಅಡುಗೆಯನ್ನು ಅವರು ಆವಿಷ್ಕರಿಸಿದರು.
ಬಾಬಾ ಗೋರಖನಾಥ್ ಬೇಳೆಕಾಳುಗಳು, ಅಕ್ಕಿ ಮತ್ತು ತರಕಾರಿಗಳನ್ನು ಬೆರೆಸಿ ಖಾದ್ಯವನ್ನು ತಯಾರಿಸಿದರು. ಅದಕ್ಕೆ ಖಿಚಡಿ ಎಂದು ಹೆಸರಿಸಲಾಯಿತು. ಕಡಿಮೆ ಸಮಯದಲ್ಲಿ ಸೀಮಿತ ಪದಾರ್ಥಗಳು ಮತ್ತು ಕಡಿಮೆ ಶ್ರಮದಲ್ಲಿ ತಯಾರಿಸಬಹುದಾದ ಭಕ್ಷ್ಯವಾಗಿತ್ತು. ಇದು ಯೋಧರಿಗೆ ದೈಹಿಕ ಶಕ್ತಿಯನ್ನು ನೀಡಿತ್ತು.
ನೀವು ಬಹಳ ಕ್ರಿಯೇಟಿವ್, ಎಲ್ಲರನ್ನೂ ಆಕರ್ಷಿಸುತ್ತೀರಿ ಅಂದ್ರೆ ಇದೇ ದಿನ ಹುಟ್ಟಿರುತ್ತೀರಿ!
ಖಿಲ್ಜಿ ಭಾರತ ಬಿಟ್ಟಾಗ ಗೋರಖನಾಥ್, ಪ್ರಸಾದದ ರೂಪದಲ್ಲಿ ಖಿಲ್ಜಿಯನ್ನು ನೀಡಿದ್ದರು. ಇದರ ನಂತರ ಪ್ರತಿ ವರ್ಷ ಮಕರ ಸಂಕ್ರಾಂತಿಯಂದು ಖಿಚಡಿಯನ್ನು ತಯಾರಿಸುತ್ತ ಬರಲಾಗಿದೆ. ಅಈ ಖಿಚಡಿಯನ್ನೇ ಬಾಬಾ ಗೋರಖನಾಥನಿಗೆ ಅರ್ಪಿಸಲಾಗುತ್ತದೆ. ನಂತ್ರ ಅದನ್ನು ಪ್ರಸಾದದ ರೀತಿಯಲ್ಲಿ ಅರ್ಪಿಸಲಾಗುತ್ತದೆ ಮತ್ತು ದಾನದ ರೂಪದಲ್ಲಿ ನೀಡಲಾಗುತ್ತದೆ.