ಕನಸಲ್ಲಿ ನೀರು ನೋಡಿದರೆ ಶುಭವೇ..? ಏನು ಹೇಳುತ್ತೆ ಸ್ವಪ್ನಶಾಸ್ತ್ರ ?
ಕನಸುಗಳು ಭವಿಷ್ಯದಲ್ಲಿ ನಡೆಯುವ ವಿಚಾರಗಳನ್ನು ತಿಳಿಸುವ ಸಂಕೇತವಾಗಿರುತ್ತವೆ. ಹಾಗಾಗಿ ಸ್ವಪ್ನ ಶಾಸ್ತ್ರವು ಭವಿಷ್ಯದ ವಿಚಾರಗಳನ್ನು ತಿಳಿಯುವಲ್ಲಿ ಅತೀ ಮಹತ್ವದ ಪಾತ್ರವನ್ನು ವಹಿಸುತ್ತದೆ. ಕನಸಿನಲ್ಲಿ ಕಂಡ ವಸ್ತು ಅಥವಾ ವಿಚಾರಗಳಿಗೆ ಅದರದ್ದೇ ಆದ ಅರ್ಥವಿರುತ್ತದೆ. ಭವಿಷ್ಯದ ವಿಚಾರಗಳನ್ನು ತಿಳಿಸುವಲ್ಲಿ ಕನಸು ಬಹು ಮುಖ್ಯ ಪಾತ್ರ ವಹಿಸುತ್ತದೆ. ಹಾಗಾದರೆ ಕನಸಿನಲ್ಲಿ ನೀರು ಕಾಣಿಸಿದರೆ ಏನರ್ಥ? ಎಂಬುದನ್ನು ತಿಳಿಯೋಣ..
ಸ್ವಪ್ನ ಶಾಸ್ತ್ರದಲ್ಲಿ ಭವಿಷ್ಯದ ಸಂಕೇತಗಳನ್ನು ತಿಳಿಯಬಹುದಾಗಿದೆ. ಹಲವಾರು ರೀತಿಯ ಕನಸು ಬೀಳುತ್ತವೆ. ಕೆಲವು ನೆನಪಿನಲ್ಲಿ ಉಳಿದರೆ ಮತ್ತೆ ಕೆಲವು ಮರೆತೇ ಹೋಗಿರುತ್ತದೆ. ಹೀಗೆ ಬೀಳುವ ಕನಸಿಗೆ ಅನೇಕ ಅರ್ಥವಿರುತ್ತದೆ.
ಕನಸುಗಳು ಭವಿಷ್ಯದಲ್ಲಿ ನಡೆಯುವ ವಿಚಾರಗಳನ್ನು ತಿಳಿಸುವ ಸಂಕೇತವಾಗಿರುತ್ತವೆ. ಹಾಗಾಗಿ ಸ್ವಪ್ನ ಶಾಸ್ತ್ರವು ಭವಿಷ್ಯದ ವಿಚಾರಗಳನ್ನು ತಿಳಿಯುವಲ್ಲಿ ಅತೀ ಮಹತ್ವದ ಪಾತ್ರವನ್ನು ವಹಿಸುತ್ತದೆ. ಕನಸಿನಲ್ಲಿ ಕಂಡ ವಸ್ತು ಅಥವಾ ವಿಚಾರಗಳಿಗ ಅರ್ಥವನ್ನು ತಿಳಿದುಕೊಳ್ಳುವುದು ಮುಖ್ಯವಾಗಿರುತ್ತದೆ. ಇವು ಭವಿಷ್ಯದಲ್ಲಿ ನಿಜವಾಗಿ ನಡೆಯಬಹುದಾದ ಸಂಗತಿಗಳಾಗಿರುತ್ತವೆ.
ಇದನ್ನು ಓದಿ: ಕಾಮಧೇನು ಶಂಖ ಮನೆಯಲ್ಲಿಟ್ಟರೆ ಇಷ್ಟಾರ್ಥ ಸಿದ್ಧಿ...
ಕನಸಿನಲ್ಲಿ ಪ್ರಾಣಿ, ಪಕ್ಷಿ, ಹಣ್ಣು, ಹೂವು,ನೀರು ಹೀಗೆ ಅನೇಕ ವಸ್ತುಗಳು ಕಾಣಿಸಿಕೊಳ್ಳುತ್ತವೆ. ಅದು ಏನನ್ನು ಸೂಚಿಸುತ್ತದೆ ಎಂಬುದನ್ನು ತಿಳಿಯುವುದು ಕಷ್ಟದ ಕೆಲಸವಾಗಿರುತ್ತದೆ. ಸ್ವಪ್ನ ಶಾಸ್ತ್ರದ ಮೂಲಕ ಉತ್ತರ ತಿಳಿಯಬಹುದಾಗಿದೆ. ಹಾಗಾದರೆ ಕನಸಿನಲ್ಲಿ ನೀರು ಕಂಡರೆ ಏನರ್ಥ? ಎಂದು ತಿಳಿಯೋಣ...
ಶುದ್ಧವಾದ ನೀರು
ಸ್ವಪ್ನ ಶಾಸ್ತ್ರದ ಪ್ರಕಾರ ಕನಸಿನಲ್ಲಿ ಶುದ್ಧವಾದ ನೀರು ಕಾಣಿಸಿದರೆ ಶುಭವೆಂದು ಹೇಳಲಾಗುತ್ತದೆ. ಹಾಗಾಗಿ ಕನಸಿನಲ್ಲಿ ಶುದ್ಧವಾದ ನೀರು ಕಾಣಿಸಿದರೆ ಚಿಂತೆ ಮಾಡುವ ಅಗತ್ಯವಿಲ್ಲ. ಈ ರೀತಿಯ ಕನಸು ಬಿದ್ದರೆ ಅದು ಸಫಲತೆಯು ವೃದ್ಧಿಸುವುದೆಂದು ಸ್ವಪ್ನ ಶಾಸ್ತ್ರದಲ್ಲಿ ಹೇಳಲಾಗುತ್ತದೆ. ಅಷ್ಟೇ ಅಲ್ಲದೇ ಸುಖ-ಸಮೃದ್ಧಿ ಮತ್ತು ಸಕಾರಾತ್ಮಕತೆಯನ್ನು ಹೆಚ್ಚಿಸುತ್ತದೆ ಎಂದು ಸಹ ಹೇಳಲಾಗುತ್ತದೆ.
ಅಶುದ್ಧ ನೀರು
ಕನಸಿನಲ್ಲಿ ಅಶುದ್ಧವಾದ ನೀರು ಕಂಡರೆ ಅದು ಅಶುಭದ ಸಂಕೇತವೆಂದು ಹೇಳಲಾಗುತ್ತದೆ. ಮುಂಬರುವ ದಿನಗಳಲ್ಲಿ ಸಮಸ್ಯೆಗಳನ್ನು ಎದುರಿಸಬೇಕಾಗಬಹುದೆಂಬ ಸೂಚನೆಯನ್ನು ಈ ಕನಸು ನೀಡುತ್ತದೆ ಎಂದು ಹೇಳಲಾಗುತ್ತದೆ. ಉತ್ತಮ ಕೆಲಸ ಅಥವಾ ಶುಭ ಕಾರ್ಯಗಳನ್ನು ನಡೆಸುವ ಯೋಜನೆ ಹಾಕಿಕೊಂಡ ಸಂದರ್ಭದಲ್ಲಿ ಇಂಥ ಕನಸು ಬಿದ್ದರೆ, ಸ್ವಲ್ಪ ದಿನಗಳ ಮಟ್ಟಿಗೆ ಶುಭ ಕಾರ್ಯಗಳನ್ನು ನಡೆಸದಿದ್ದರೆ ಒಳ್ಳೆಯದೆಂದು ಸ್ವಪ್ನ ಶಾಸ್ತ್ರದಲ್ಲಿ ಹೇಳಲಾಗುತ್ತದೆ.
ಬಾವಿಯ ನೀರು
ಬಾವಿಯ ನೀರು ಕನಸಿನಲ್ಲಿ ಕಂಡರೆ ಅತ್ಯಂತ ಶುಭವೆಂದು ಹೇಳಲಾಗುತ್ತದೆ. ಮುಂಬರುವ ದಿನಗಳಲ್ಲಿ ಧನ ಲಾಭವಾಗುವ ಸಂಕೇತವನ್ನು ಈ ಕನಸು ಸೂಚಿಸುತ್ತದೆ ಎಂದು ಹೇಳಲಾಗುತ್ತದೆ. ಅಷ್ಟೇ ಅಲ್ಲದೇ ಬಾವಿಯ ನೀರಿನ ಕನಸು ಎಲ್ಲ ಕೆಲಸಗಳಲ್ಲಿ ಯಶಸ್ಸು ಸಿಗಲಿದೆ ಎಂಬುದರ ಸಂಕೇತವೆಂದು ಸ್ವಪ್ನ ಶಾಸ್ತ್ರದಲ್ಲಿ ಉಲ್ಲೇಖಿಸಲಾಗಿದೆ.
ಇದನ್ನು ಓದಿ: ಗುರು ಗ್ರಹದ ರಾಶಿ ಪರಿವರ್ತನೆ; ಅಶುಭ ಪ್ರಭಾವದಿಂದ ಪಾರಾಗಲು ಇಲ್ಲಿದೆ ಪರಿಹಾರ...
ನದಿಯ ನೀರು
ಕನಸಿನಲ್ಲಿ ನದಿಯ ನೀರು ಕಾಣಿಸಿದರೆ ಅದೂ ಶುಭವೆಂದು ಹೇಳಲಾಗಿದೆ. ಮುಂಬರುವ ದಿನಗಳಲ್ಲಿ ಇಷ್ಟಾರ್ಥಗಳು ಬೇಗ ಸಿದ್ಧಿಸುವುದಲ್ಲದೇ, ಸುಖ-ಶಾಂತಿ ಮತ್ತು ನೆಮ್ಮದಿ ಸಿಗಲಿದೆ ಎಂಬುದನ್ನು ಸೂಚಿಸುವ ಕನಸು ಇದಾಗಿರುತ್ತದೆ ಎಂದು ಸ್ವಪ್ನ ಶಾಸ್ತ್ರ ಹೇಳುತ್ತದೆ. ಯಶಸ್ಸು ಮತ್ತು ಗೌರವದೊಂದಿಗೆ ಸಾಮಾಜಿಕ ಪ್ರತಿಷ್ಠೆ ಹೆಚ್ಚುತ್ತದೆ ಎಂದು ಸಹ ಹೇಳಲಾಗುತ್ತದೆ.
ಜಲಪಾತ
ಜಲಪಾತಗಳ ಕನಸು ಕಂಡರೆ ಸಕಾರಾತ್ಮಕ ಶಕ್ತಿಯನ್ನು ಸೂಚಿಸುತ್ತದೆ. ಹೊಸ ಉತ್ಸಾಹ ಮತ್ತು ಶಕ್ತಿಯನ್ನು ಪಡೆಯಲಿದ್ದೀರಿ ಎಂಬ ಸಂಕೇತವನ್ನು ಇದು ಕೊಡುತ್ತದೆ. ಸಂತೋಷವನ್ನು ನೀಡುತ್ತದೆ ಎಂಬ ಅರ್ಥವನ್ನು ನೀಡುತ್ತದೆ. ಜಲಪಾತದಿಂದ ಬೀಳುತ್ತೀರುವಂತೆ ಕನಸು ಬಿದ್ದರೆ ಅದು ಅಪಾಯದ ಮುನ್ಸೂಚನೆ ಎಂದೇ ಹೇಳಬಹುದಾಗಿದೆ. ಅಷ್ಟೇ ಅಲ್ಲದೇ ಸಮಸ್ಯೆಯ ಬಗ್ಗೆ ಇರುವ ಭಯವನ್ನು ಸಹ ಇದು ತೋರಿಸುತ್ತದೆ.
ಇದನ್ನು ಓದಿ: ಮಕರ ರಾಶಿಗೆ ಗುರು ಪ್ರವೇಶ; ಯಾವ ಯಾವ ರಾಶಿಯವರಿಗೆ ಲಕ್..?
ಮಳೆ ನೀರು
ಮಳೆ ನೀರು ಶುಭ ಮತ್ತು ಅಶುಭ ಎರಡನ್ನೂ ಹೇಳುತ್ತದೆ. ಮಳೆಯ ನೀರಿಗೆ ಸಂಬಂಧ ಪಟ್ಟಂತೆ ಖುಷಿಯ ಕನಸು ಕಂಡಿದ್ದರೆ ಅದು ಶುಭವೆಂದು ಹೇಳಿದರೆ, ಅದೇ ಮಳೆಯ ನೀರಿನೊಂದಿಗೆ ದುಃಖಿಸುತ್ತಿರುವ ಅಥವಾ ಅಳುತ್ತಿರುವ ಕನಸು ಕಂಡರೆ ನಕಾರಾತ್ಮಕತೆಯನ್ನು ಸೂಚಿಸುತ್ತದೆ. ಇದು ಭಾವನೆಗಳ ಮೇಲೆ ಆಧಾರಿತವಾಗಿರುತ್ತದೆ. ಯಾವ ರೀತಿಯಲ್ಲಿ ಕನಸು ಬಿದ್ದಿದೆ ಎಂಬುದರ ಮೇಲೆ ಶುಭ ಮತ್ತು ಅಶುಭವೆಂದು ಹೇಳಬಹುದಾಗಿರುತ್ತದೆ.