Ugadiಯಿಂದ ಗುಡಿ ಪಾಡ್ವಾವರೆಗೆ; ಎಲ್ಲೆಲ್ಲಿ ಹೇಗಿದೆ ಆಚರಣೆ?
ಈ ದಿನವನ್ನು ಯುಗಾದಿ ಎಂದು ಕರ್ನಾಟಕ, ತೆಲಂಗಾಣ, ಆಂಧ್ರಪ್ರದೇಶದಲ್ಲಿ ಆಚರಿಸಿದರೆ, ಮಹಾರಾಷ್ಟ್ರ ಮತ್ತು ಗೋವಾದಲ್ಲಿ ಜನರು 'ಗುಡಿ ಪಾಡ್ವಾ' ಎಂದು ಆಚರಿಸುತ್ತಾರೆ. ಉತ್ತರದಲ್ಲಿ ಚೈತ್ರ ನವರಾತ್ರಿಯ ಸಂಭ್ರಮ ಕಾಲ.
ಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ..
ಹೌದು, ಮತ್ತೆ ಯುಗಾದಿ ಹೊಸ್ತಿಲಲ್ಲಿದೆ. ಮಾರ್ಚ್ 22ರಂದು ಒಳಬರಲು ಕಾದು ನಿಂತಿದೆ. ಯುಗಾದಿಯ ಸಂಭ್ರಮ ಈಗಾಗಲೇ ಕರ್ನಾಟಕ, ತೆಲಂಗಾಣ, ಆಂಧ್ರಪ್ರದೇಶದ ಮನೆ ಮನೆಯಲ್ಲಿ ತುಂಬಿಕೊಳ್ಳುತ್ತಿರುವ ಹೊತ್ತಿಗಾಗಲೇ ಮಹಾರಾಷ್ಟ್ರ, ಗೋವಾದಲ್ಲಿ ಗುಡಿ ಪಾಡ್ವಾ ಸಿದ್ಧತೆಗಳು ಜೋರಾಗಿವೆ. ಉತ್ತರ ಭಾರತದಲ್ಲಿ ಚೈತ್ರ ನವರಾತ್ರಿಗಾಗಿ ಜನತೆ ಸಜ್ಜಾಗುತ್ತಿದ್ದಾರೆ.
ವರ್ಷದ ಒಂದೇ ದಿನ ಬೇರೆ ಬೇರೆ ಹಬ್ಬಗಳ ಹೆಸರಲ್ಲಿ ಭಾರತದಾದ್ಯಂತ ಹಬ್ಬದ ಸಂಭ್ರಮ ಮನೆ ಮಾಡಿದೆ. ಭಾರತವು ವೈವಿಧ್ಯಮಯ ಸಂಸ್ಕೃತಿ ಮತ್ತು ಸಂಪ್ರದಾಯಗಳ ನಾಡು. ಭಾರತದ ವಿವಿಧ ರಾಜ್ಯಗಳಲ್ಲಿ ಒಂದು ಹಬ್ಬವನ್ನು ವಿಶಿಷ್ಟ ಮತ್ತು ವಿಭಿನ್ನ ರೀತಿಯಲ್ಲಿ ಆಚರಿಸುವುದು ಸಾಮಾನ್ಯವಾಗಿದೆ. ಅಂತೆಯೇ ಯುಗಾದಿ ಕೂಡಾ ಒಂದೊಂದು ಕಡೆ ಒಂದು ರೀತಿ ಆಚರಣೆಗೆ ಒಳಪಡುತ್ತದೆ.
ಯುಗಾದಿ: ದಕ್ಷಿಣ ಭಾರತದ ಕೆಲವು ಭಾಗಗಳಲ್ಲಿ ಈ ಹಬ್ಬವು ಹೊಸ ವರ್ಷದ ಆರಂಭವನ್ನು ಸೂಚಿಸುತ್ತದೆ. ಆಂಧ್ರಪ್ರದೇಶ, ತೆಲಂಗಾಣ ಮತ್ತು ಕರ್ನಾಟಕದಲ್ಲಿ ಯುಗಾದಿಗೆ ವಿಶೇಷ ಮಹತ್ವವಿದೆ. ಅದರ ವ್ಯುತ್ಪತ್ತಿಯನ್ನು ಪತ್ತೆ ಹಚ್ಚಿ, ಎರಡು ಸಂಸ್ಕೃತ ಪದಗಳಿಂದ ಬೇರುಗಳನ್ನು ಕಂಡುಹಿಡಿಯಬಹುದು - 'ಯುಗ' ಮತ್ತು 'ಆದಿ' ಅಂದರೆ ಹೊಸ ಯುಗದ ಆರಂಭ. ಬ್ರಹ್ಮ ಜಗತ್ತನ್ನು ಸೃಷ್ಟಿಸಿದ ದಿನವಾಗಿ ಈ ದಿನವನ್ನು ಆಚರಿಸಲಾಗುತ್ತದೆ. ಈ ಹಬ್ಬದ ಸಮಯದಲ್ಲಿ ಜನರು ಜೀವನದಲ್ಲಿ ಒಳ್ಳೆಯತನವನ್ನು ಬಹಳ ಉತ್ಸಾಹದಿಂದ ಆಚರಿಸುತ್ತಾರೆ. ಇದು ಶೀತ-ಕಠಿಣ ಚಳಿಗಾಲದಿಂದ ಪರಿಹಾರ ನೀಡಿ ಬೆಚ್ಚಗಿನ ದಿನಗಳ ಆರಂಭವನ್ನು ತರುತ್ತದೆ. ಈ ಸಂಭ್ರಮಕ್ಕಾಗಿ ಮರಗಿಡಗಳು ಹೂವು, ಕಾಯಿ, ಹಣ್ಣುಗಳನ್ನು ತುಂಬಿಕೊಂಡು, ಹಳೆ ಎಲೆಗಳನ್ನು ಉದುರಿಸಿ, ಹೊಸ ಚಿಗುರನ್ನು ತುಂಬಿಕೊಂಡು ಸಂಭ್ರಮಿಸುತ್ತವೆ. ಆಚರಣೆಯ ಭಾಗವಾಗಿ, ಜನರು ಒಟ್ಟಿಗೆ ಸೇರುತ್ತಾರೆ, ಬೇವು ಬೆಲ್ಲ ಹಂಚಿಕೊಂಡು- ಜೀವನವೆಂದರೆ ಕಹಿಸಿಹಿಗಳ ಮಿಶ್ರಣವೆಂಬ ಸಂದೇಶವನ್ನು ನೆನಪು ಮಾಡಿತೊಳ್ಳುತ್ತಾರೆ. ಭೂರಿ ಭೋಜನ ತಯಾರಿಸಿ ಸ್ವೀಕರಿಸುತ್ತಾರೆ. ಉಡುಗೊರೆಗಳನ್ನು ವಿನಿಮಯ ಮಾಡಿಕೊಳ್ಳುತ್ತಾರೆ ಮತ್ತು ಹೊಸ ಉಡುಪುಗಳನ್ನು ಧರಿಸುತ್ತಾರೆ.
Gemology: ವೃತ್ತಿ, ವ್ಯವಹಾರದಲ್ಲಿ ಪ್ರಗತಿ ಕೊರತೆನಾ? ಪಚ್ಚೆ ಮಾಡ್ಬಹುದು ಮ್ಯಾಜಿಕ್!
ಗುಡಿ ಪಾಡ್ವಾ: ಮಹಾರಾಷ್ಟ್ರ ಮತ್ತು ಗೋವಾ ರಾಜ್ಯಗಳು ಯುಗಾದಿಯ ದಿನವನ್ನು ಗುಡಿ ಪಾಡ್ವಾ ಎಂದು ಆಚರಿಸುತ್ತವೆ. ಇದು ಮರಾಠಿ ಹೊಸ ವರ್ಷವಾಗಿದ್ದು, ಜನರು ಹೊಸ ಬಟ್ಟೆಗಳನ್ನು ಧರಿಸುತ್ತಾರೆ ಮತ್ತು ವಿಶೇಷ ಭಕ್ಷ್ಯಗಳನ್ನು ಮಾಡುವ ಮೂಲಕ ಹಬ್ಬವನ್ನು ಸಂಭ್ರಮದಿಂದ ಆಚರಿಸುತ್ತಾರೆ.
ಚೈತ್ರ ನವರಾತ್ರಿ 2023: ಹಿಂದೂ ಕ್ಯಾಲೆಂಡರ್ ಪ್ರಕಾರ ವಸಂತ ಋತುವಿನ ಆರಂಭವನ್ನು ಸೂಚಿಸುವ ಚೈತ್ರವನ್ನು ಚೈತ್ರ ನವರಾತ್ರಿ ಎಂದು 9 ದಿನಗಳ ಕಾಲ ಆಚರಿಸಲಾಗುತ್ತದೆ. ಇದು ಭಾರತದಾದ್ಯಂತ, ವಿಶೇಷವಾಗಿ ಉತ್ತರ ಭಾರತದಲ್ಲಿ ಆಚರಿಸಲಾಗುವ ಅತ್ಯಂತ ಮಂಗಳಕರವಾದ ಹಿಂದೂ ಹಬ್ಬಗಳಲ್ಲಿ ಒಂದಾಗಿದೆ. ಚೈತ್ರ ನವರಾತ್ರಿಯ ಹಬ್ಬವು ದುರ್ಗೆಯ ಒಂಬತ್ತು ಅವತಾರಗಳನ್ನು ಪೂಜಿಸಲು ಮೀಸಲಾಗಿರುತ್ತದೆ, ಪ್ರತಿ ದಿನವೂ ಒಂದೊಂದು ಅವತಾರಗಳ ಪೂಜೆಗೆ ಮೀಸಲಾಗಿರುತ್ತದೆ. ಶೈಲ ಪುತ್ರಿ, ಬ್ರಹ್ಮಚಾರಿಣಿ, ಚಂದ್ರಘಂಟಾ, ಕೂಷ್ಮಾಂಡಾ, ಸ್ಕಂದ ಮಾತಾ, ಕಾತ್ಯಾಯನಿ, ಕಾಳರಾತ್ರಿ, ಮಹಾಗೌರಿ ಮತ್ತು ಸಿದ್ಧಿದಾತ್ರಿ ಸೇರಿದಂತೆ ಎಲ್ಲಾ 9 ಅವತಾರಗಳನ್ನು ಪೂಜಿಸಲಾಗುತ್ತದೆ. ಏತನ್ಮಧ್ಯೆ, ಕೆಲವರು ಇದನ್ನು ಭಗವಾನ್ ರಾಮನ ಜನ್ಮ ವಾರ್ಷಿಕೋತ್ಸವದೊಂದಿಗೆ ಸಂಯೋಜಿಸುತ್ತಾರೆ.
Ugadi 2023: ಹಿಂದೂ ಹೊಸ ವರ್ಷದಂದೇ ಗಜಕೇಸರಿ ರಾಜಯೋಗ, 3 ರಾಶಿಗಳಿಗೆ ವರ್ಷಪೂರ್ತಿ ಶುಭ ಫಲ
ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳು, ಅವುಗಳ ವೈಜ್ಞಾನಿಕ ಹಿನ್ನೆಲೆ, ಪುರಾಣ ಪುಣ್ಯ ಕತೆಗಳು, ವಾಸ್ತು ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣ ನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.