ಚಿಕ್ಕ ವಯಸ್ಸಿನಲ್ಲಿಯೇ ದುರಂತ ಅಂತ್ಯ ಕಂಡ ಈ ನಟ ಯಾರು ಗೊತ್ತಾ?
ಸುಶಾಂತ್ ಸಿಂಗ್ ರಜಪೂತ್ ಸಿಕ್ಕ ಅವಕಾಶಗಳನ್ನು ಸದುಪಯೋಗಿಸಿಕೊಂಡು ತನ್ನ ಅಭಿನಯಿಂದಲೇ ಅಪಾರ ಅಭಿಮಾನಿಗಳನ್ನು ಹೊಂದಿದ್ರು. ಜೂನ್ 14, 2020ರಂದು ಸುಶಾಂತ್ ಸಿಂಗ್ ರಜಪೂತ್ ಶವ ನೇಣು ಬಿಗಿದ ಸ್ಥಿತಿಯಲ್ಲಿ ಮುಂಬೈನ ನಿವಾಸದಲ್ಲಿ ಪತ್ತೆಯಾಗಿತ್ತು.
ಮುಂಬೈ: ಇಂದಿಗೆ ಬಾಲಿವುಡ್ ಸ್ಪುರದ್ರೂಪಿ ನಟ ಸುಶಾಂತ್ ಸಿಂಗ್ ರಜಪೂತ್ (Bollywood Actor Sushant Singh Rajput) ಮರೆಯಾಗಿ ನಾಲ್ಕು ವರ್ಷ ಆಗಿದೆ. ಸುಶಾಂತ್ ಅಭಿಮಾನಿಗಳು ತಮ್ಮ ನೆಟ್ಟಿನ ಫೋಟೋ ಹಂಚಿಕೊಳ್ಳುವ ಮೂಲಕ ಸ್ಮರಿಸಿಕೊಳ್ಳುತ್ತಿದ್ದಾರೆ. ಇಂಜಿನೀಯರ್ ಪದವೀಧರನಾಗಿದ್ದ ಸುಶಾಂತ್ ಅವರನ್ನು ಬಣ್ಣದ ಲೋಕ ಕೈಬೀಸಿ ಕರೆದಿತ್ತು. ಕೈ ಪೋಚೇ ರೊಮ್ಯಾನ್ಸ್ ಸಿನಿಮಾ ಮೂಲಕ ಬಿಟೌನ್ ಪ್ರವೇಶಿಸಿದ ಸುಶಾಂತ್ ಸಿಂಗ್ ರಜಪೂತ್ ಸಿಕ್ಕ ಅವಕಾಶಗಳನ್ನು ಸದುಪಯೋಗಿಸಿಕೊಂಡು ತನ್ನ ಅಭಿನಯಿಂದಲೇ ಅಪಾರ ಅಭಿಮಾನಿಗಳನ್ನು ಹೊಂದಿದ್ರು. ಜೂನ್ 14, 2020ರಂದು ಸುಶಾಂತ್ ಸಿಂಗ್ ರಜಪೂತ್ ಶವ ನೇಣು ಬಿಗಿದ ಸ್ಥಿತಿಯಲ್ಲಿ ಮುಂಬೈನ ನಿವಾಸದಲ್ಲಿ ಪತ್ತೆಯಾಗಿತ್ತು.
ಸುಶಾಂತ್ ಸಿಂಗ್ ರಜಪೂತ್ ಸಾವಿನ ಬಳಿಕ ಬಾಲಿವುಡ್ ಅಂಗಳದಲ್ಲಿ ದೊಡ್ಡ ಸಂಚಲನವೇ ಸೃಷ್ಟಿಯಾಯ್ತು. ಇಲ್ಲಿ ಕೇವಲ ಸ್ಟಾರ್ ಮಕ್ಕಳಿಗೆ ಮಾತ್ರ ಸಿನಿಮಾಗಳ ಅವಕಾಶ ನೀಡಲಾಗುತ್ತದೆ. ಹೊಸಬರನ್ನು ತುಳಿಯುವ ಕೆಲಸ ನಡೆಯುತ್ತದೆ ಎಂದು ನಟಿ ಕಂಗನಾ ರಣಾವತ್ ಸೇರಿದಂತೆ ಹಲವರು ಗಂಭೀರ ಆರೋಪ ಮಾಡಿದ್ದರು. ನಂತರ ಇದೇ ಪ್ರಕರಣ ಡ್ರಗ್ಸ್ ಆಯಾಮವನ್ನು ಪಡೆದುಕೊಂಡಿತ್ತು.
ಹಲವು ಆಯಾಮಗಳನ್ನು ಪಡೆದುಕೊಂಡಿದ್ದ ಪ್ರಕರಣ
ಡ್ರಗ್ಸ್ ಪ್ರಕರಣದಲ್ಲಿ ಸುಶಾಂತ್ ಗೆಳತಿ ರಿಯಾ ಚಕ್ರವರ್ತಿ ಜೈಲುವಾಸ ಅನುಭವಿಸಿ ಹೊರ ಬಂದರು. ಡ್ರಗ್ಸ್ ಸೇವನೆ ಪ್ರಕರಣದಲ್ಲಿ ಶ್ರದ್ಧಾ ಕಪೂರ್, ದೀಪಿಕಾ ಪಡುಕೋಣೆ ಸೇರಿದಂತೆ ಸ್ಟಾರ್ ಕಲಾವಿದರು ಪೊಲೀಸ್ ವಿಚಾರಣೆ ಎದುರಿಸಿದರು. ಸುಶಾಂತ್ ಸಿಂಗ್ ರಜಪೂತ್ ಸಾವು ಆತ್ಮಹತ್ಯೆನಾ ಅಥವಾ ಕೊಲೆಯಾ ಎಂಬುದರ ಬಗ್ಗೆ ಇನ್ನು ಸ್ಪಷ್ಟತೆ ಸಿಕ್ಕಿಲ್ಲ. ಇದೇ ವರ್ಷ ಮಾರ್ಚ್‌ನಲ್ಲಿ ಸುಶಾಂತ್ ಸೋದರಿ ಶ್ವೇತಾ ಸಿಂಗ್, ಸಿಬಿಐಗೆ ಪತ್ರ ಬರೆದಿದ್ದರು. ಸಿಬಿಐ ತನಿಖೆಯನ್ನು ಚುರುಕುಗೊಳಿಬೇಕು ಮತ್ತು ಸತ್ಯವನ್ನು ಬಹಿರಂಗಪಡಿಸಬೇಕು ಎಂದು ಆಗ್ರಹಿಸಿದ್ದರು.
ಸಾಯುವ ಮೊದಲು ಅದೆಂಥಾ ಲೈಪ್ ಲೆಸನ್ ಟಿಪ್ಸ್ ಕೊಟ್ಟು ಹೋಗಿದ್ದಾರೆ ನೋಡಿ ಸುಶಾಂತ್ ಸಿಂಗ್ ರಜಪೂತ್!
ಸಿಬಿಐಗೆ ಸುಶಾಂತ್ ಸೋದರಿಯ ಪತ್ರ
ಸುಶಾಂತ್ ಶವ ಸಿಕ್ಕ ಸ್ಥಳದಲ್ಲಿ ಬೆಡ್ ಮತ್ತು ಫ್ಯಾನ್ ನಡುವೆ ನೇಣು ಹಾಕಿಕೊಳ್ಳಲು ಅವಕಾಶ ಇರಲಿಲ್ಲ. ಶವ ಬೆಡ್ ಮೇಲೆ ಇರೋದನ್ನು ಮಾತ್ರ ಎಲ್ಲರೂ ನೋಡಿದ್ದಾರೆ. ನಿಜವಾಗಿಯೂ ಎಲ್ಲಿ ಏನಾಗಿದೆ ಎಂಬುವುದು ಯಾರಿಗೂ ಗೊತ್ತಿಲ್ಲ. ಪೊಲೀಸರು ಆದಷ್ಟು ಬೇಗ ತನಿಖೆಯನ್ನು ಪೂರ್ಣಗೊಳಿಸಬೇಕು. ಅಭಿಮಾನಿಗಳು ಮತ್ತು ಕುಟುಂಬಸ್ಥರಿಗೆ ಸಾವು ಹೇಗಾಯ್ತು ಎಂಬುದನ್ನು ತಿಳಿಸಬೇಕು ಎಂದು ಶ್ವೇತಾ ಸಿಂಗ್ ಸಂದರ್ಶನವೊಂದರಲ್ಲಿ ತಿಳಿಸಿದ್ದಾರೆ.
ಸುಶಾಂತ್ ಮನೆಯಲ್ಲಿ ಅದಾ ವಾಸ
ಕಳೆದ ಮೂರು ವರ್ಷಗಳಿಂದ ಸುಶಾಂತ್ ವಾಸವಿದ್ದ ಫ್ಲ್ಯಾಟ್ ಖಾಲಿಯಾಗತ್ತು. ಸುಶಾಂತ್ ಸಾವಿನ ಹಿನ್ನೆಲೆ ಫ್ಲ್ಯಾಟ್‌ಗೆ ಬರಲು ಜನರು ಹಿಂದೇಟು ಹಾಕುತ್ತಿದ್ದರು. ಇದೀಗ ಈ ಮನೆಗೆ ನಟಿ ಅದಾ ಶರ್ಮಾ ಶಿಫ್ಟ್ ಆಗಿದ್ದಾರೆ. ಜನರು ಅಪಾರ್ಟ್‌ಮೆಂಟ್ ಖರೀದಿಸಲು ಹಿಂದೇಟು ಹಾಕುತ್ತಿದ್ದರು. ಯಾಕೆ ಎಂಬ ಕಾರಣ ಎಲ್ಲರಿಗೂ ಗೊತ್ತಿದೆ. ನಾನು ನನ್ನ ಮನಸ್ಸಿನ ಮಾತು ಕೇಳಿ ಅಪಾರ್ಟ್‌ಮೆಂಟ್ ಖರೀದಿಸಿದ್ದು, ಇಲ್ಲಿ ಸಂತೋಷವಾಗಿ ಜೀವನ ನಡೆಸುತ್ತಿದ್ದೇನೆ ಎಂದು ಅದಾ ಶರ್ಮಾ ಹೇಳಿಕೊಂಡಿದ್ದಾರೆ.
ಟೀಂ ಇಂಡಿಯಾದ ಮಾಜಿ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿ ಜೀವನಾಧರಿತ ಚಿತ್ರದಲ್ಲಿ ಸುಶಾಂತ್ ಸಿಂಗ್ ನಟಿಸಿದ್ದರು. ಈ ಚಿತ್ರ ಸುಶಾಂತ್ ಸಿಂಗ್ ರಜಪೂತ್‌ಗೆ ದೊಡ್ಡಮಟ್ಟದ ಯಶಸ್ಸು ತಂದುಕೊಟ್ಟಿತ್ತು.