ಬೇಬಿ ಡಾಲ್ ಖ್ಯಾತಿಯ ಕನಿಕಾ ಕಪೂರ್‌ಗೆ ನಾಲ್ಕನೇ ಬಾರಿಯೂ ಕೊರೋನಾ ಟೆಸ್ಟ್‌ನಲ್ಲಿ ಪಾಸಿಟೀವ್ ಬಂದಿದ್ದು, ಈ ಬಗ್ಗೆ ಇನ್ಸ್ಟಾಗ್ರಾಮ್‌ನಲ್ಲಿ ಎಮೋಶನಲ್ ಪೋಸ್ಟೊಂದನ್ನು ಹಾಕಿದ್ದಾರೆ. 
ತಮ್ಮ ನೆಚ್ಚಿನ ಗಾಯಕಿಯ ಸ್ಥಿತಿ ಕಂಡು ಅಭಿಮಾನಿಗಳು ಕಾಳಜಿ ತೋರಿಸುತ್ತಿದ್ದು, ಸದ್ಯಕ್ಕೆ ನಾನು ಐಸಿಯು ನಲ್ಲಿಲ್ಲ. ನನ್ನ ಮಕ್ಕಳು, ಕುಟುಂಬವನ್ನು ನೋಡಲು ಕಾತರದಿಂದ ಕಾಯುತ್ತಿದ್ದೇನೆ' ಎಂದಿದ್ದಾರೆ. 

ಕನ್ನಿಕಾ ಕಪೂರ್ ಇದ್ದ ಹೋಟೆಲ್‌ನಲ್ಲೇ ಉಳಿದುಕೊಂಡಿದ್ದರು ಆಫ್ರಿಕಾ ಕ್ರಿಕೆಟಿಗರು..!

ಸಮಯವನ್ನು ಹೇಗೆ ಸದುಪಯೋಗಪಡಿಸಿಕೊಳ್ಳಬೇಕು ಎಂಬುದನ್ನು ಜೀವನ ಕಲಿಸಿದೆ.  ಜೊತೆಗೆ ಜೀವನದ ಮಹತ್ವವನ್ನು ಹೇಳಿಕೊಟ್ಟಿದೆ' ಎಂದು ಭಾವುಕರಾಗಿದ್ದಾರೆ. 

ನಿಮ್ಮೆಲ್ಲರ ಕಾಳಜಿ, ಪ್ರೀತಿಗೆ ಧನ್ಯವಾದಗಳು. ನಾನು ಐಸಿಯುನಲ್ಲಿಲ್ಲ. ಚೆನ್ನಾಗಿದ್ದೇನೆ. ಮುಂದಿನ ಟೆಸ್ಟ್‌ನಲ್ಲಿ ನೆಗೆಟಿವ್ ಬಂದೇ ಬರುತ್ತದೆಂಬ ವಿಶ್ವಾಸವಿದೆ. ಮನೆ, ಮಕ್ಕಳನ್ನು ಮಿಸ್ ಮಾಡಿಕೊಳ್ಳುತ್ತಿದ್ದೇನೆ. ಅವರನ್ನು ನೋಡಲು ಕಾಯುತ್ತಿದ್ದೇನೆ' ಎಂದಿದ್ದಾರೆ. 

 

ಕನ್ನಿಕಾ ಕಪೂರ್ ಲಂಡನ್‌ನಿಂದ ವಾಪಸ್ಸಾದ ಬಳಿಕ ಪಾರ್ಟಿಗಳಲ್ಲಿ ಭಾಗವಹಿಸಿದ್ದರು. ಇದಕ್ಕೆ ಸೋಷಿಯಲ್ ತೀವ್ರ ಅಕ್ಷೇಪ ವ್ಯಕ್ತವಾಗಿದ್ದು ನೆಟ್ಟಗರು ಹಿಗ್ಗಾಮುಗ್ಗ ಬೈದಿದ್ದರು.   ನಿರ್ಲಕ್ಷ್ಯದಿಂದ ಪಾರ್ಟಿಗಳಲ್ಲಿ, ಸೋಷಿಯಲ್ ಈವೆಂಟ್‌ಗಳಲ್ಲಿ ಭಾಗವಹಿಸಿದ್ದಕ್ಕೆ  ಲಕ್ನೋ ಪೊಲೀಸರು ಕನಿಕಾ ಕಪೂರ್ ಮೇಲೆ ಎಫ್‌ಐಆರ್‌ನ್ನು ಹಾಕಿದ್ದಾರೆ.