ನನ್ನ ಸಂಪೂರ್ಣ ಶಿಕ್ಷಣಕ್ಕಿಂತ ಡಬಲ್, 4.3 ಲಕ್ಷ ರೂ ಪ್ಲೇ ಸ್ಕೂಲ್ ಫೀಸ್ ಹಂಚಿಕೊಂಡ ತಂದೆ!
ನಗರ, ಗ್ರಾಮೀಣ ಪ್ರದೇಶ ಸೇರಿದಂತೆ ಎಲ್ಲೆಡೆ ಪ್ಲೇ ಸ್ಕೂಲ್ ಅಬ್ಬರಗಳೇ ಹೆಚ್ಚು. ಪ್ಲೇಸ್ಕೂಲ್ ಅರ್ಥಾತ್ ಅಂಗನವಾಡಿ. ಈ ಪ್ಲೇ ಸ್ಕೂಲ್ ಫೀಸ್ ಇದೀಗ ಭಾರಿ ಚರ್ಚೆಗೆ ಗ್ರಾಸವಾಗಿದೆ. ವ್ಯಕ್ತಿಯೊಬ್ಬರು ಮಗನ ಒಂದು ವರ್ಷದ ಪ್ಲೇಸ್ಕೂಲ್ ಫೀಸ್ ಹಂಚಿಕೊಂಡಿದ್ದಾರೆ. ಈ ಮೊತ್ತ ಬರೋಬ್ಬರಿ 4.3 ಲಕ್ಷ ರೂಪಾಯಿ.
ದೆಹಲಿ(ಏ.12) ಭಾರತದಲ್ಲಿ ಶಿಕ್ಷಣದ ಸ್ವರೂಪ ಬದಲಾಗಿದೆ. ಶಿಕ್ಷಣ ಕೂಡ ಅತೀ ದೊಡ್ಡ ಉದ್ಯಮ ಕ್ಷೇತ್ರವಾಗಿದೆ. ಹೀಗಾಗಿ ಪ್ಲೇ ಸ್ಕೂಲ್, ಪ್ರಿ ಕೆಜಿ, ಸೇರಿದಂತೆ ಶಾಲಾ ಪೀಸು ಲಕ್ಷ ಲಕ್ಷ ರೂಪಾಯಿಗೆ ಏರಿಕೆಯಾಗಿದೆ. ಪ್ರೀ ಸ್ಕೂಲ್, ಪ್ರೀ ಕೆಜಿ ಶುಲ್ಕದಲ್ಲಿ ನಮ್ಮ ಸಂಪೂರ್ಣ ಶಿಕ್ಷಣವೇ ಮುಗಿದು ಹೋಗಿತ್ತು ಅನ್ನೋ ಮಾತುಗಳು ಕೇಳತ್ತಲೇ ಇದ್ದೇವೆ. ಇದೀಗ ದೆಹಲಿಯ ವ್ಯಕ್ತಿಯೊಬ್ಬರು ತನ್ನ ಮಗನ ಪ್ಲೇ ಸ್ಕೂಲ್ ಫೀಸನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಒಂದು ವರ್ಷದ ಫೀಸ್ ಬರೋಬ್ಬರಿ 4.3 ಲಕ್ಷ ರೂಪಾಯಿ. ನನ್ನ ಸಂಪೂರ್ಣ ಶಿಕ್ಷಣಕ್ಕಿಂತ ದುಪ್ಪಟ್ಟು ಎಂದು ಹೇಳಿದ್ದಾರೆ. ಈ ಪೋಸ್ಟ್ ಇದೀಗ ಭಾರಿ ವೈರಲ್ ಆಗಿದೆ.
ವೃತ್ತಿಯಲ್ಲಿ ಚಾರ್ಟೆಂಡ್ ಅಕೌಂಟೆಂಟ್ ಆಗಿರುವ ಅಕಾಶ್ ಕುಮಾರ್ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ಈ ಪೋಸ್ಟ್ ಹಂಚಿಕೊಂಡಿದ್ದಾರೆ. ಪ್ಲೇಸ್ಕೂಲ್ ಫೀಸ್ ಸ್ಕ್ರೀನ್‌ಶಾಟ್ ಹಂಚಿಕೊಂಡಿರುವ ಅಕಾಶ್ ಕುಮಾರ್, ಈ ಮೊತ್ತ ನನ್ನ ಸಂಪೂರ್ಣ ಶಿಕ್ಷಣಕ್ಕಿಂತ ಹೆಚ್ಚಾಗಿದೆ. ಈ ಶಾಲೆಯಲ್ಲಿ ನನ್ನ ಮಗ ಉತ್ತಮವಾಗಿ ಆಡಲು ಕಲಿಯುತ್ತಾನೆ ಎಂದು ಭಾವಿಸಿದ್ದೇನೆ ಎಂದು ಪೋಸ್ಟ್ ಮಾಡಿದ್ದಾರೆ.
ಮಕ್ಕಳ ಶಾಲಾ ಫೀಸ್ ಬಾಕಿ ಉಳಿಸಿ ಧೋನಿ ನೋಡಲು 64,000 ರೂಪಾಯಿ ಟಿಕೆಟ್ ಖರೀದಿಸಿದ ಅಭಿಮಾನಿ!
ಈ ಶಾಲಾ ಶುಲ್ಕ ಪೋಸ್ಟ್ ಭಾರಿ ಚರ್ಚೆಗೆ ಗ್ರಾಸವಾಗಿದೆ. ಕಾರಣ ಒಟ್ಟು ಮೊತ್ತ 4.3 ಲಕ್ಷ ರೂಪಾಯಿಯಲ್ಲಿ ರಿಜಿಸ್ಟ್ರೇಶನ್ ಫೀಸ್, ವಾರ್ಷಿಕ ಮೊತ್ತ ಎಂದು ಹಲವು ವರ್ಗೀಕರಣ ಮಾಡಲಾಗಿದೆ. 10 ಸಾವಿರ ರೂಪಾಯಿ ನಾನ್ ರಿಫಂಡೇಬಲ್ ರಿಜಿಸ್ಟ್ರೇಶನ್ ಮೊತ್ತವಾಗಿದೆ. ವಾರ್ಷಿಕ ಮೊತ್ತ 25,000 ರೂಪಾಯಿ. ಇನ್ನು ಎಪ್ರಿಲ್‌ನಿಂದ ಜೂನ್ ತಿಂಗಳ ವರೆಗಿನ ಶುಲ್ಕ 98,750 ರೂಪಾಯಿ. ಜುಲೈನಿಂದ ಸೆಪ್ಟೆಂಬರ್ ವರೆಗಿನ ಶುಲ್ಕ 98,750 ರೂಪಾಯಿ. ಅಕ್ಟೋಬರ್‌ನಿಂದ ಡಿಸೆಂಬರ್ ವರೆಗೆ 98,750 ರೂಪಾಯಿ ಹಾಗೂ ಜನವರಿಯಿಂದ ಮಾರ್ಚ್ ವರೆಗೆ 98,750 ರೂಪಾಯಿ ಶುಲ್ಕ. ಒಟ್ಟು 4,30,000 ರೂಪಾಯಿ.
ಇದು ಒಂದು ಶೈಕ್ಷಣಿಕ ವರ್ಷ ಅಂದರ 2024-25ರ ಪ್ಲೇಸ್ಕೂಲ್ ಶುಲ್ಕವಾಗಿದೆ. ಪ್ಲೇಸ್ಕೂಲ್ ಎಂದರೆ ಸರಳವಾಗಿ ಹೇಳುವುದಾದರೆ ಅಂಗನವಾಡಿ. ಖಾಸಗಿ ಶಿಕ್ಷಣ ಸಂಸ್ಥೆಗಳು ಪ್ಲೇ ಸ್ಕೂಲ್, ಪ್ರಿ ಕೆಜಿ ಸೇರಿದಂತೆ ಹಲವು ವಿಭಾಗಗಳಲ್ಲಿ ಮಕ್ಕಳನ್ನು ಅಡ್ಮಿಷನ್ ಮಾಡಿಸಿಕೊಳ್ಳುತ್ತದೆ. ಇದು ಯಾವ ರೀತಿಯ ಶುಲ್ಕ, ಶಿಕ್ಷಣಕ್ಕೂ ಅಥವಾ ಆ ಸಂಸ್ಥೆಯಲ್ಲಿರುವ ಸೌಲಭ್ಯಕ್ಕೋ ಎಂದು ಕೆಲವರು ಪ್ರಶ್ನಿಸಿದ್ದಾರೆ.
LKG ಅಡ್ಮಿಷನ್‌ಗೆ 4 ಲಕ್ಷ..! ಮಕ್ಕಳು ಬ್ಯಾಗ್‌ನಲ್ಲಿ ದುಡ್ಡು ಹೊತ್ಕೊಂಡು ಹೋಗೋ ದಿನ ಬಂದ್ರೂ ಅಚ್ಚರಿಯಿಲ್ಲ..!
ಹಲವು ಎಂಎನ್‌ಸಿ ಕಂಪನಿಗಳ ವಾರ್ಷಿಕ ವೇತನ ಕೂಡ ಇಷ್ಟಿಲ್ಲ. ಹೀಗಿದ್ದರೆ ಮಕ್ಕಳ ವಿಧ್ಯಾಭ್ಯಾಸ ಹೇಗೆ ಎಂದು ಕೆಲವರು ಪ್ರಶ್ನಿಸಿದ್ದಾರೆ. ಹೆಚ್ಚಿನ ಮೊತ್ತದ ಶಿಕ್ಷಣ ಸಂಸ್ಥೆ ಟ್ರೆಂಡ್‌ಗೆ ಮರುಳಾಗಬೇಡಿ, ಜೀವನ ಮೌಲ್ಯಗಳು, ಸವಾಲು ಎದುರಿಸುವ ಪಾಠಗಳು ಸಿಗುವುದು ಸರ್ಕಾರಿ ಶಾಲೆಯಲ್ಲಿ. ಲಕ್ಷ ಲಕ್ಷ ರೂಪಾಯಿ ಫೀಸ್ ಕೊಟ್ಟ ಮಕ್ಕಳನ್ನು ಈ ರೀತಿಯ ಶಾಲೆಗೆ ಕಳುಹಿಸಿದರೆ ನಿಜವಾದ ಬದುಕಿನ ಸವಾಲು ಎದುರಿಸಲು ತಡಕಾಡುತ್ತಾರೆ ಎಂದು ಕೆಲವರು ಸಹಲೆ ನೀಡಿದ್ದಾರೆ.