ಮೂವರು ಮಕ್ಕಳ ಶಾಲಾ ಶುಲ್ಕ ಬಾಕಿ ಉಳಿಸಿ ಆ ಹಣದಲ್ಲಿ ಟಿಕೆಟ್ ಖರೀದಿಸಿದ ಸಿಎಸ್‌ಕೆ ಅಭಿಮಾನಿ ಪಂದ್ಯ ವೀಕ್ಷಿಸಿ ಖುಷಿ ಪಟ್ಟಿದ್ದಾರೆ. ಧೋನಿ ನೋಡಲು ಬ್ಲಾಕ್‌ನಲ್ಲಿ 64,000 ರೂಪಾಯಿ ನೀಡಿ ಟಿಕೆಟ್ ಖರೀದಿಸಿ ಎಂಜಾಯ್ ಮಾಡಿದ್ದಾರೆ. ಈ ಅಭಿಮಾನಿ ಮಾತುಗಳು ವಿಡಿಯೋ ಇದೀಗ ಭಾರಿ ವೈರಲ್ ಆಗಿದೆ.
ಚೆನ್ನೈ(ಏ.12) ಭಾರತದಲ್ಲಿ ಕ್ರಿಕೆಟ್ ಕೇವಲ ಕ್ರೀಡೆಯಲ್ಲಿ ಒಂದು ಧರ್ಮ. ಕ್ರಿಕೆಟ್ ಕ್ರೇಜ್ ಭಾರತೀಯ ನರನಾಡಿಗಳಲ್ಲಿ ತುಂಬಿದೆ. ಪಂದ್ಯ ವೀಕ್ಷಿಸಲು, ತಮ್ಮ ನೆಚ್ಚಿನ ಆಟಗಾರರ ಭೇಟಿಯಾಗಲು ಭಾರಿ ಕಸರತ್ತು ಮಾಡುತ್ತಾರೆ. ಹೀಗೆ ಎಂಎಸ್ ಧೋನಿ ಅಭಿಮಾನಿಯೊಬ್ಬ ಪಂದ್ಯ ವೀಕ್ಷಿಸಲು ಭಾರಿ ಕಸರತ್ತು ಮಾಡಿ ಇದೀಗ ದೇಶಾದ್ಯಂತ ಸಂಚಲನ ಸೃಷ್ಟಿಸಿದ್ದಾನೆ. ಧೋನಿಯನ್ನು ಮೈದಾನದಲ್ಲಿ ಕಣ್ತುಂಬಿಕೊಳ್ಳಬೇಕು ಅನ್ನೋದು ಈ ಅಭಿಮಾನಿ ಹಾಗೂ ಆತನ ಮಕ್ಕಳ ಬಯಕೆ. ಒಂದು ವಾರದಿಂದ ಟಿಕೆಟ್‌ಗಾಗಿ ಎಲ್ಲಾ ಪ್ರಯತ್ನ ಮಾಡಿ ನಿರಾಸೆ ಅನುಭವಿಸಿದ್ದಾರೆ. ಎಲ್ಲೂ ಟಿಕೆಟ್ ಸಿಕ್ಕಿಲ್ಲ. ಮೂವರು ಮಕ್ಕಳ ಜೊತೆಗೆ ಸಿಎಸ್‌ಕೆ ಪಂದ್ಯದ ದಿನ ಕ್ರೀಡಾಂಗಣಕ್ಕೆ ಆಗಮಿಸಿ ಬ್ಲಾಕ್ ಮೂಲಕ ಟಿಕೆಟ್ ಖರೀದಿಸಿದ್ದಾನೆ. ಒಟ್ಟು ನಾಲ್ಕು ಟಿಕೆಟ್‌ಗೆ 64,000 ರೂಪಾಯಿ ನೀಡಿದ್ದಾನೆ. ಬಳಿಕ ಮಕ್ಕಳ ಜೊತೆ ಧೋನಿಯನ್ನು ಕಣ್ತುಂಬಿಕೊಂಡು ಭಾರಿ ಖುಷಿಪಟ್ಟಿದ್ದಾರೆ. ಆದರೆ ಈ ರೋಚಕ ಕ್ರಿಕೆಟ್ ಕತೆ ಇಲ್ಲಿಗೆ ಅಂತ್ಯವಾಗುವುದಿಲ್ಲ. ಕಾರಣ ಈತ ಮಕ್ಕಳ ಶಾಲಾ ಶುಲ್ಕ ಕಟ್ಟಲು ಇಟ್ಟ ಹಣದಲ್ಲಿ ಟಿಕೆಟ್ ಖರೀದಿಸಿ ಎಂಜಾಯ್ ಮಾಡಿದ್ದಾನೆ.
ತಮಿಳುನಾಡಿನ ಖಾಸಗಿ ವಾಹಿನಿ ಸಿಎಸ್‌ಕೆ ಅಭಿಮಾನಿಗಳ ಪ್ರತಿಕ್ರಿಯೆ ಕೇಳಿತ್ತು. ಈ ವೇಳೆ ಅಚಾನಕ್ಕಾಗಿ ಕ್ಯಾಮೆರಾ ಕಣ್ಮಿಗೆ ಬಿದ್ದಿದ್ದಾರೆ. ಈತನ ಮಾತನಾಡಿಸಿದಾಗ ಅಚ್ಚರಿಯ ಮಾಹಿತಿ ಹೊರಬಂದಿದೆ. ಮೈದಾನದಲ್ಲಿ ಧೋನಿ ನನ್ನ ನೆಚ್ಚಿನ ಕ್ರಿಕೆಟಿಗ. ಧೋನಿ ನೋಡಬೇಕು ಅನ್ನೋದು ನನ್ನ ಹಾಗೂ ನನ್ನ ಮಕ್ಕಳ ಬಯಕೆಯಾಗಿದೆ.. ಇದಕ್ಕಾಗಿ ಭಾರಿ ಪ್ರಯತ್ನ ಪಟ್ಟಿದ್ದೇನೆ. ಇಂದು ಕೈಗೂಡಿದೆ. ಇದಕ್ಕಿಂತ ಖುಷಿ ಇನ್ನೇನಿದೆ ಎಂದು ಪ್ರತಿಕ್ರಿಯೆ ನೀಡಿದ್ದಾನೆ.
ಪ್ರೀತಿಯ ಮಡದಿಗಾಗಿ ದಿಢೀರ್ ನಿವೃತ್ತಿ ತಗೊಂಡ್ರಾ ಧೋನಿ..? ಇಲ್ಲಿದೆ ಇಂಟ್ರೆಸ್ಟಿಂಗ್ ಮಾಹಿತಿ
ಮಾತು ಮುಂದುವರಿಸಿದ ಅಭಿಮಾನಿ, ಧೋನಿಯನ್ನು ಮೈದಾನದಲ್ಲಿ ನೋಡಲು ಬಂದಿದ್ದೇನೆ.ಮಕ್ಕಳ ಜೊತೆಗೆ ಬಂದ ನನಗೆ ಟಿಕೆಟ್ ಸಿಗಲಿಲ್ಲ. ಬ್ಲಾಕ್‌ನಲ್ಲಿ ಟಿಕೆಟ್ ಖರೀದಿಸಿದ್ದೇನೆ. ನಾಲ್ಕು ಟಿಕೆಟ್ ಬೆಲೆ 64,000 ರೂಪಾಯಿ ಆಗಿದೆ. ಮಕ್ಕಳ ಶಾಲಾ ಫೀಸ್ ಕಟ್ಟಿಲ್ಲ. ಮೊದಲು ಧೋನಿ ನೋಡಬೇಕು. ಅಮೇಲೆ ಮಕ್ಕಳ ಫೀಸ್ ಹೇಗೋ ಕಟ್ಟುತ್ತೇನೆ ಎಂದು ಅಭಿಮಾನಿ ಹೇಳಿದ್ದಾನೆ. ನನ್ನ ಮೂವರು ಹೆಣ್ಣುಮಕ್ಕಳು ಕೂಡ ಧೋನಿ ಅಭಿಮಾನಿ, ಮೈದಾನದಲ್ಲಿ ನೋಡಿ ನೋಡುವುದೆ ನಮ್ಮ ಗುರಿ ಎಂದು ಈ ಅಭಿಮಾನಿ ಹೇಳಿದ್ದಾನೆ.
ತಮಿಳುನಾಡಿನ ಸ್ಪೋರ್ಟ್ಸ್ ವಾಕ್ ಮಾಹಿನಿಯ ಈ ವಿಡಿಯೋ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗಿದೆ. ಮಕ್ಕಳ ಫೀಸ್ ಧೋನಿ ಕಟ್ಟಲ್ಲ. ಮೊದಲು ಸ್ಕೂಲ್ ಫೀಸ್ ಕಟ್ಟಬೇಕು. ಬಳಿಕ ಈ ರೀತಿಯ ಅಭಿಮಾನ ಒಕೆ ಎಂದು ಸಲಹೆ ನೀಡಿದ್ದಾರೆ. ಮತ್ತೆ ಕೆಲವರು ಧೋನಿ ಅಭಿಮಾನಿಗಳು ಹೀಗೆ, ಧೋನಿಯ ದರ್ಶನವಾದರೆ ಸಾಕು, ಇನ್ನುಳಿದ ಎಲ್ಲಾ ಕಲಸ ದೇವರ ಇಚ್ಚೆಯಂತೆ ಯಾವುದೇ ಕಂದು ಕೊರತೆಯಲ್ಲದೆ ಸಾಗಲಿದೆ ಎಂದಿದ್ದಾರೆ.
IPL 2024: ಚೆನ್ನೈ ಚೆಪಾಕ್ ಮೈದಾನದಲ್ಲೇ ಧೋನಿ ಫ್ಯಾನ್ಸ್ ಕಾಲೆಳೆದ ಜಡೇಜಾ..! ವಿಡಿಯೋ ವೈರಲ್
