ಫೆಲೊಶಿಫ್‌ಗೆ ಕನ್ನಡದಲ್ಲಿ ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿಗಳನ್ನು ಆಯ್ಕೆ ಮಾಡುವಂತೆ ಯುಜಿಸಿಗೆ ನಾಗಾಭರಣ ಪತ್ರ
ಯುಜಿಸಿ ನಡೆಸುವ ಎನ್‌ಇಟಿ ಮತ್ತು ಜೆಆರ್‌ಎಫ್ ಪರೀಕ್ಷೆಗಳ ಕುರಿತು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಟಿ.ಎಸ್.ನಾಗಾಭರಣ ಅವರು ಯುಜಿಸಿಗೆ ಪತ್ರ ಬರೆದಿದ್ದಾರೆ.
ಬೆಂಗಳೂರು: ಯುಜಿಸಿ (University Grants Commission- UGC) ನಡೆಸುವ ಎನ್‌ಇಟಿ (National Eligibility Test -NET) ಮತ್ತು ಜೆಆರ್‌ಎಫ್ (Junior Research Fellowship -JRF) ಪರೀಕ್ಷೆಗಳ ಕುರಿತು ಕನ್ನಡ ಅಭಿವೃದ್ಧಿ ಪ್ರಾಧಿಕಾರದ (Kannada Development Authority) ಅಧ್ಯಕ್ಷರಾದ ಟಿ.ಎಸ್.ನಾಗಾಭರಣ (TS Nagabharana) ಅವರು ಯುಜಿಸಿ ಅಧ್ಯಕ್ಷರಿಗೆ ಪತ್ರ ಬರೆದು ಕನ್ನಡದಲ್ಲಿ ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿಗಳನ್ನು ಫೆಲೊಶಿಫ್‌ಗೆ ಆಯ್ಕೆ ಮಾಡಬೇಕೆಂದು ತಿಳಿಸಿದ್ದಾರೆ.
ಈ ಬಾರಿಯ ಎನ್‌ಇಟಿ/ಜೆಆರ್‌ಎಫ್ ಪರೀಕ್ಷೆಯಲ್ಲಿ ಕನ್ನಡ (Kannada) ಸ್ನಾತಕೋತ್ತರ ಪದವೀಧರರು ಎದುರಿಸಿದ ಸಮಸ್ಯೆಗಳು ತೀವ್ರ ಸ್ವರೂಪದವು. ಕನ್ನಡ ಪ್ರಶ್ನೆಪತ್ರಿಕೆಯಲ್ಲಿ ಹಿಂದಿ ಪ್ರಶ್ನೆಗಳು ಬಂದವು. ಕೆಲವು ಅಭ್ಯರ್ಥಿಗಳಿಗೆ ಕಂಪ್ಯೂಟರ್ ಪರದೆಯಲ್ಲಿ ಪ್ರಶ್ನೆಪತ್ರಿಕೆಯೇ ತೆರೆದುಕೊಳ್ಳಲಿಲ್ಲ. ಯುಜಿಸಿಯು ಹಲವು ಕನ್ನಡದ ವಿದ್ಯಾರ್ಥಿಗಳಿಗೆ ಮರುಪರೀಕ್ಷೆಯ ಅವಕಾಶವನ್ನು ನಿರಾಕರಿಸಿತು, ಕೊನೆಗೆ ಪ್ರಕಟವಾದ ಕೀ ಉತ್ತರಗಳಲ್ಲೂ ಈ ಸಮಸ್ಯೆ ಉಂಟಾಯಿತು.
ಈ ಬಗ್ಗೆ ಕನ್ನಡ ಅಭಿವೃದ್ಧಿ ಪ್ರಾಧಿಕಾರವು ಎರಡು ಮೂರು ಬಾರಿ ಪತ್ರ ಬರೆದು ತಮ್ಮ ಗಮನ ಸೆಳೆದಿತ್ತು. ಈ ಕುರಿತು ರಾಜ್ಯಸಭಾ ಸದಸ್ಯರಾದ ಎಲ್.ಹನುಮಂತಯ್ಯನವರು ಕೂಡ ರಾಜ್ಯಸಭೆಯಲ್ಲಿ ಪ್ರಸ್ತಾಪಿಸಿದರು. ಆದರೆ ಇವೆಲ್ಲವನ್ನು ಕಡೆಗಣಿಸಿದ ಯುಜಿಸಿ ಫೆ.19 ರಂದು ಫಲಿತಾಂಶವನ್ನು ಪ್ರಕಟಿಸಿತು. ಕನ್ನಡದಲ್ಲಿ ೧೦೦ ಅಭ್ಯರ್ಥಿಗಳು ಬೋಧನೆಯ ಅರ್ಹತೆ ಗಳಿಸಿದರೆ, ಕೇವಲ ೧೫ ಅಭ್ಯರ್ಥಿಗಳು ಫೆಲೊಶಿಪ್‌ಗೆ ಆಯ್ಕೆಯಾಗಿದ್ದಾರೆ.
KEA ASSISTANT PROFESSOR EXAM: ಸಹಾಯಕ ಪ್ರಾಧ್ಯಾಪಕರ ಹುದ್ದೆ ಪರೀಕ್ಷಾ ಕೇಂದ್ರಕ್ಕೆ ಅಶ್ವತ್ಥನಾರಾಯಣ ಭೇಟಿ
ವರ್ಷದಿಂದ ವರ್ಷಕ್ಕೆ ಹಿಂದಿ ಮತ್ತು ಸಂಸ್ಕೃತ ಅಭ್ಯರ್ಥಿಗಳ ಆಯ್ಕೆಯಲ್ಲಿ ಗಣನೀಯ ಏರಿಕೆ ಕಂಡುಬಂದರೆ ಕನ್ನಡದ ಅಭ್ಯರ್ಥಿಗಳ ಆಯ್ಕೆಯಲ್ಲಿ ಆಶ್ಚರ್ಯಕರ ಇಳಿಕೆ ಇದೆ. ಅಲ್ಲದೆ, ಪ್ರಸಕ್ತ ಸಾಲಿನಲ್ಲಿ ಹಿಂದಿ ಭಾಷೆಗೆ ಅಂದಾಜು 182 ಕೋಟಿ ರೂ. ಹಾಗೂ ಸಂಸ್ಕೃತ ಭಾಷೆಗೆ ಅಂದಾಜು 47 ಕೋಟಿ ರೂ. ಅನ್ನು ಮೀಸಲಿಡಲಾಗಿದೆ. ಕನ್ನಡ ಭಾಷೆಗೆ ಕೇವಲ 3.3 ಕೋಟಿಯನ್ನು ಮೀಸಲಿಟ್ಟಿದೆ. ಎನ್‌ಇಟಿ ಕಟ್ ಆಫ್ ಅನ್ನು ದಾಟಿದ ಸಾಮಾನ್ಯ ವರ್ಗದ ಹಿಂದಿ ಅಭ್ಯರ್ಥಿಗಳಲ್ಲಿ ಶೇ.14.96 ಜನರನ್ನೂ ಸಂಸ್ಕೃತ ಅಭ್ಯರ್ಥಿಗಳಲ್ಲಿ ಶೇ.13.24ರಷ್ಟು ಜನರನ್ನೂ ಫೆಲೋಶಿಫ್‌ಗೆ ಆಯ್ಕೆ ಮಾಡಿದ್ದರೆ ಕನ್ನಡದಲ್ಲಿ ಶೇ.7.14ರಷ್ಟು ಮಂದಿಯನ್ನಷ್ಟೇ ಆಯ್ಕೆ ಮಾಡಲಾಗಿದೆ. ಕನ್ನಡವೂ ಸೇರಿದಂತೆ ಇತರ ದೇಶಭಾಷೆಗಳ ಅಧ್ಯಯನಗಳ ಅವಕಾಶಗಳನ್ನು ಹೀಗೆ ಮುಚ್ಚುತ್ತಾ ಬರುತ್ತಿರುವುದು ಒಕ್ಕೂಟ ವ್ಯವಸ್ಥೆಗೆ ಮಾಡುತ್ತಿರುವ ಹಾನಿಯೇ ಆಗಿದೆ.
Karnataka Teachers Recruitment: 10 ದಿನದಲ್ಲಿ 15000 ಶಿಕ್ಷಕರ ನೇಮಕಾತಿಗೆ ನೋಟಿಫಿಕೇಶ್ ಬಿಡುಗಡೆ
ಯುಜಿಸಿಯಿಂದ ಕನ್ನಡ ಸಂಶೋಧನೆಗೆ ಪ್ರೋತ್ಸಾಹವೇ ಇಲ್ಲವಾದಲ್ಲಿ ಸಹಜವಾಗಿಯೇ ಕರ್ನಾಟಕದ ವಿಶ್ವವಿದ್ಯಾಲಯಗಳ ಮೌಲ್ಯಾಂಕನವೂ ಕುಸಿದು, ಯುಜಿಸಿಯಿಂದ ಬರುವ ಧನಸಹಾಯವೂ ಕಡಿಮೆಯಾಗಿ ವಿಶ್ವವಿದ್ಯಾಲಯಗಳು ದುರ್ಬಲಗೊಳ್ಳುತ್ತವೆ. ಈ ಬಗ್ಗೆ ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳುವಂತೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರು ಮನವಿ ಮಾಡಿದ್ದಾರೆ.