ವಿದ್ಯಾರ್ಥಿ ಇಂಗ್ಲೀಷ್‌ನಲ್ಲಿ ತಪ್ಪು ಹುಡುಕಲು ಹೋಗಿ ಬೆಪ್ಪಾದ ಶಿಕ್ಷಕ !

ವಿದ್ಯಾರ್ಥಿಯೊಬ್ಬನ ತಪ್ಪನ್ನು ಶಿಕ್ಷಕನೊಬ್ಬ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಆದ್ರೆ ಇದು ನೆಟ್ಟಿಗರಿಗೆ ಇಷ್ಟವಾಗಿಲ್ಲ. ತಪ್ಪು ಹುಡುಕಲು ಹೋದ ಶಿಕ್ಷಕನೇ ಸಿಕ್ಕಾಪಟ್ಟೆ ತಪ್ಪು ಮಾಡಿದ್ದಾನೆ.
 

professor post student grammatically incorrect english assignment roo

ಮಕ್ಕಳ (children) ತಪ್ಪನ್ನು ತಿದ್ದೋದು ಶಿಕ್ಷಕ (teacher)ರ ಕರ್ತವ್ಯ. ತಪ್ಪನ್ನು ಎತ್ತಿ ತೋರಿಸಿ ಅವರಿಗೆ ಅವಮಾನ ಮಾಡುವವರು ಉತ್ತಮ ಶಿಕ್ಷಕರಾಗಲು ಸಾಧ್ಯವಿಲ್ಲ. ಪೆನ್ಸಿಲ್ವೇನಿಯಾ ಸ್ಟೇಟ್ ಯೂನಿವರ್ಸಿಟಿ ಪ್ರಾಧ್ಯಾಪಕ (Pennsylvania State University  Professor )ರೊಬ್ಬರ ಸೋಶಿಯಲ್ ಮೀಡಿಯಾ ಪೋಸ್ಟ್ ಈಗ ಇದೇ ಚರ್ಚೆ ಹುಟ್ಟುಹಾಕಿದೆ. ಪ್ರಾಧ್ಯಾಪಕರು, ತಮ್ಮ ವಿದ್ಯಾರ್ಥಿ ಬರೆದ ಇಂಗ್ಲೀಷ್ ಅಸೈನ್ಮೆಂಟ್ ಒಂದನ್ನು ಪೋಸ್ಟ್ ಮಾಡಿದ್ದಾರೆ. ಅದ್ರಲ್ಲಿ ವಿದ್ಯಾರ್ಥಿ ಇಂಗ್ಲೀಷನ್ನು ತಪ್ಪು ತಪ್ಪಾಗಿ ಬರೆದಿದ್ದಾನೆ ಎಂಬುದನ್ನು  ತೋರಿಸಲಾಗಿದೆ. ಇಡೀ ಪೇಜ್ ಪೂರ್ತಿ ಕೆಂಪು ಬಣ್ಣವನ್ನು ನೀವು ನೋಡ್ಬಹುದು. ತಪ್ಪನ್ನು ತಿದ್ದಿರುವ ಶಿಕ್ಷಕ, ಅದರ ಫೋಟೋ ಪೋಸ್ಟ್ ಮಾಡಿದ್ದಲ್ಲದೆ ಅದಕ್ಕೆ ಶೀರ್ಷಿಕೆ ಹಾಕಿದ್ದಾರೆ. ಆದ್ರೆ ಈಗ ಅವರು ಮಾಡಿರುವ ತಪ್ಪುಗಳನ್ನು ಜನರು ತೋರಿಸಿ, ಬುದ್ಧಿ ಹೇಳಲು ಶುರು ಮಾಡಿದ್ದಾರೆ.

ಥಾಮಸ್ ಜೌಡ್ರೆ (@TomJoudrey) ಜನವರಿ 7, 2025 ರಂದು ಮೈಕ್ರೋಬ್ಲಾಗಿಂಗ್ ಸೈಟ್ ಎಕ್ಸ್ (X) ನಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ.  ಪದವಿಪೂರ್ವ ಬರವಣಿಗೆ (Writing) ತುಂಬಾ ಕೆಟ್ಟದಾಗಿದೆ. ನನ್ನ ವಿದ್ಯಾರ್ಥಿ ಏನು ಬರೆದಿದ್ದಾರೆ ನೋಡಿ ಎಂದು ಥಾಮಸ್ ಜೌಡ್ರೆ ಶೀರ್ಷಿಕೆ ಹಾಕಿದ್ದಾರೆ. ವ್ಯಾಕರಣದ ತಪ್ಪು ಹಾಗೂ ಸ್ಪೆಲ್ಲಿಂಗ್ ಸೇರಿದಂತೆ ವಿದ್ಯಾರ್ಥಿಯ ಅನೇಕ ತಪ್ಪುಗಳನ್ನು ಇಲ್ಲಿ ಹೇಳಲಾಗಿದೆ. 

ಇಡ್ಲಿ ಚಟ್ನಿ ನೋ ಸಾಂಬಾರ್ ! ವಿಚಿತ್ರವಾಗಿದೆ Gate Exam ಇಮೇಲ್

ಈ ಪೋಸ್ಟ್ ವೇಗವಾಗಿ ವೈರಲ್ ಆಗಿದೆ. ಈವರೆಗೆ 36.8 ಮಿಲಿಯನ್ ಗಿಂತಲೂ ಹೆಚ್ಚು ಬಾರಿ ಪೋಸ್ಟ್ ನೋಡಲಾಗಿದೆ.  2 ಲಕ್ಷ 93 ಸಾವಿರಕ್ಕಿಂತ ಹೆಚ್ಚು ಲೈಕ್ಸ್ ಬಂದಿದ್ದು, 15 ಸಾವಿರ ಬಾರಿ ರಿಪೋಸ್ಟ್‌ ಮಾಡಲಾಗಿದೆ. ಹಾಗೆಯೇ 10 ಸಾವಿರಕ್ಕೂ ಹೆಚ್ಚು ಪ್ರತಿಕ್ರಿಯೆಗಳನ್ನು ನೀವು ಕಾಣ್ಬಹುದು. ಅನೇಕರು ಇದನ್ನು ಗಂಭೀರವಾಗಿ ಪರಿಗಣಿಸಿದ್ದು, ವಿದ್ಯಾರ್ಥಿಯನ್ನು ಹೀಗೆ ಅವಮಾನ ಮಾಡಿದ ಪ್ರಾಧ್ಯಾಪಕನ ವಿರುದ್ಧ ಕೆಂಡಕಾರಿದ್ದಾರೆ. ವಿದ್ಯಾರ್ಥಿ ತಪ್ಪನ್ನು ಪೋಸ್ಟ್ ಮಾಡಿರುವ ಥಾಮಸ್, ತಮ್ಮ ಶೀರ್ಷಿಕೆಯಲ್ಲಿಯೇ ಸಾಕಷ್ಟು ತಪ್ಪು ಮಾಡಿದ್ದಾರೆ. ಬಳಕೆದಾರರೊಬ್ಬರು ಥಾಮಸ್ ಮಾಡಿದ ತಪ್ಪುಗಳನ್ನು ಗುರುತಿಸಿ ರೀ ಪೋಸ್ಟ್ ಮಾಡಿದ್ದಾರೆ. ಇನ್ನೊಬ್ಬರು, ಈ ವಿದ್ಯಾರ್ಥಿ ಕಂಡ್ರೆ ಶಿಕ್ಷಕನಿಗೆ ಇಷ್ಟವಿಲ್ಲ. ಹಾಗಾಗಿಯೇ ಅವನ ತಪ್ಪುಗಳನ್ನು ತೋರಿಸಿ, ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆಂದು ಕಮೆಂಟ್ ಮಾಡಿದ್ದಾರೆ. 

ಸೋಶಿಯಲ್ ಮೀಡಿಯಾದಲ್ಲಿ ಕಮೆಂಟ್ ಹೆಚ್ಚಾಗ್ತಿದ್ದಂತೆ ಥಾಮಸ್ ಪ್ರತಿಕ್ರಿಯೆ ನೀಡಿದ್ದಾರೆ. ವಾಹ್! ಟ್ವಿಟರ್‌ನಲ್ಲಿ ಇದರ ಬಗ್ಗೆ ಸಾಕಷ್ಟು ಚರ್ಚೆ ನಡೆಯುತ್ತಿದೆ, ಇದು ಮುಕ್ತ ಸಮಾಜದಲ್ಲಿ ಬದುಕುವವರಿಗೆ ಸಿಗುವ ಬೆಲೆ ಎಂದು ನಾನು ಭಾವಿಸುತ್ತೇನೆ ಎಂಬ ಕಮೆಂಟ್ ಮಾಡಿದ್ದಾರೆ. ಥಾಮಸ್ ಏನೇ ಹೇಳಿದ್ರೂ ಜನರು ಥಾಮಸ್ ಕಾಲೆಳೆಯೋದನ್ನು ಬಿಟ್ಟಿಲ್ಲ. ಸಾರ್ವಜನಿಕ ಪ್ರದೇಶದಲ್ಲಿ ವಿದ್ಯಾರ್ಥಿಯನ್ನು ಮುಜುಗರಕ್ಕೀಡು ಮಾಡಿದ್ದು ಶಿಕ್ಷಕನ ಕರ್ತವ್ಯವಲ್ಲ ಎಂದಿದ್ದಾರೆ. ವಿದ್ಯಾರ್ಥಿ ಬರೆದಿದ್ದು ತಪ್ಪಿರಬಹುದು, ಆದ್ರೆ ನಿಮ್ಮಂತ ಶಿಕ್ಷಕರಿಂದ ಅವರು ಮತ್ತೇನು ಕಲಿಯಲು ಸಾಧ್ಯ ಎಂದು ಮತ್ತೊಬ್ಬರು ಕಮೆಂಟ್ ಮಾಡಿದ್ದಾರೆ. ಪತ್ರಿಕೆಯಲ್ಲಿ ಶಿಕ್ಷಕ ತಿದ್ದಿರುವ ಕೆಲ ಪದಗಳ ಬಗ್ಗೆಯೂ ಎಕ್ಸ್ ನಲ್ಲಿ ಚರ್ಚೆಯಾಗ್ತಿದೆ.

ಬಾಲಿವುಡ್‌ ಸ್ಟಾರ್‌ ಕಿಡ್‌ಗಳು ಓದುವ ಅಂಬಾನಿ ಶಾಲೆಯ ಊಟದ ಮೆನು ಹೇಗಿದೆ?

ಜನರು ಸಂತೋಷವಿರಲಿ, ದುಃಖವಿರಲಿ, ಜೋಕ್ ಇರಲಿ, ಗಂಭಿರ ವಿಷ್ಯವಿರಲಿ ಎಲ್ಲವನ್ನೂ ಸೋಶಿಯಲ್ ಮೀಡಿಯಾದಲ್ಲಿ ತುಂಬುತ್ತಿದ್ದಾರೆ. ಕೆಲವರು ಪ್ರಸಿದ್ಧಿಗೆ ಮತ್ತೊಬ್ಬರನ್ನು ಕೆಳ ಮಟ್ಟಕ್ಕೆ ಇಳಿಸ್ತಿದ್ದಾರೆ. ಯಾವುದು ಸರಿ ಯಾವುದು ತಪ್ಪು ಎಂಬುದನ್ನು ತಿಳಿಯದೆ ಸೋಶಿಯಲ್ ಮೀಡಿಯಾಕ್ಕೆ ಎಲ್ಲವನ್ನು ಡಂಪ್ ಮಾಡೋದು ಸೂಕ್ತವಲ್ಲ. ಪ್ರಾಧ್ಯಾಪಕನ ಈ ವರ್ತನೆ, ವಿದ್ಯಾರ್ಥಿಯ ಗೌಪ್ಯತೆ, ಬೋಧನಾ ಶೈಲಿ, ಬರವಣಿಗೆಯ ಮಾನದಂಡಗಳ ಬಗ್ಗೆ ಗಂಭೀರ ಪ್ರಶ್ನೆ ಏಳುವಂತೆ ಮಾಡಿದೆ.  
 

Latest Videos
Follow Us:
Download App:
  • android
  • ios