Asianet Suvarna News Asianet Suvarna News

ಮಾಧ್ಯಮ, ವಿರೋಧ ಪಕ್ಷಗಳ ಟೀಕೆ ಹೇಗೆ ಎದುರಿಸ್ತೀರಾ? ಮಕ್ಕಳ ಪ್ರಶ್ನೆಗೆ ಮೋದಿ ನೀಡಿದ್ರು ಉತ್ತರ!

ಪ್ರಧಾನಿ ನರೇಂದ್ರ ಮೋದಿ ಅವರು 'ಪರೀಕ್ಷಾ ಪೇ ಚರ್ಚಾ' ಕಾರ್ಯಕ್ರಮದ ಮೂಲಕ ವಿದ್ಯಾರ್ಥಿಗಳು, ಪೋಷಕರು ಮತ್ತು ಶಿಕ್ಷಕರೊಂದಿಗೆ ಸಂವಾದ ನಡೆಸುತ್ತಿದ್ದಾರೆ. ಕಲಾ ಉತ್ಸವ ಸ್ಪರ್ಧೆಯಲ್ಲಿ ಸುಮಾರು 80 ವಿಜೇತರು ಮತ್ತು ದೇಶಾದ್ಯಂತದ 102 ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ.
 

PM Narendra Modi gave this answer How do you deal with criticism from the opposition and the media san
Author
First Published Jan 27, 2023, 12:47 PM IST

ನವದೆಹಲಿ (ಜ.27): ಪ್ರಧಾನಮಂತ್ರಿ ನರೇಂದ್ರ ಮೋದಿ ದೆಹಲಿಯ ಟಾಲ್ಕಟೋರಾ ಸ್ಟೇಡಿಯಂನಲ್ಲಿ ಪರೀಕ್ಷಾ ಪೇ ಚರ್ಚಾ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗೊಂದಿಗೆ ಸಂವಾದ ನಡೆಸಿದರು. ಕಲಾ ಉತ್ಸವ ಸ್ಪರ್ಧೆಯ 80 ವಿಜೇತರು ಹಾಗೂ ದೇಶದ 102 ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಈ ಕಾರ್ಯಕ್ರಮದಲ್ಲಿದ್ದರು. ಇದಲ್ಲದೆ, ದೇಶಾದ್ಯಂತ ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಪೋಷಕರು ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಪ್ರಧಾನಿ ಮೋದಿಯವರ 'ಪರೀಕ್ಷಾ ಪೇ ಚರ್ಚಾ' ವೀಕ್ಷಣೆ ಮಾಡಿದ್ದಾರೆ.  ಪ್ರಧಾನಿ ಮೋದಿಯವರು ಈ ಕಾರ್ಯಕ್ರಮದ ಮೂಲಕ, ಪರೀಕ್ಷೆಗೆ ಮಾಡಬಹುದಾದ ಉತ್ತಮ ತಯಾರಿ ಹಾಗೂ ವಿದ್ಯಾರ್ಥಿಗಳ ಮನಸ್ಸಿನಿಂದ ಬೋರ್ಡ್ ಪರೀಕ್ಷೆಗಳ ಭಯವನ್ನು ಹೋಗಲಾಡಿಸುವ ತಂತ್ರಗಳನ್ನು ಹಂಚಿಕೊಳ್ಳುತ್ತಾರೆ. ಈ ವರ್ಷ ಸುಮಾರು 38.8 ಲಕ್ಷ ವಿದ್ಯಾರ್ಥಿಗಳು ಪರೀಕ್ಷಾ ಪೆ ಚರ್ಚಾ ಕಾರ್ಯಕ್ರಮಕ್ಕೆ ನೋಂದಣಿ ಮಾಡಿಕೊಂಡಿದ್ದಾರೆ. ಕಳೆದ ವರ್ಷಕ್ಕೆ ಹೋಲಿಸಿದರೆ, ಇದು ದುಪ್ಪಟ್ಟು (ಕಳೆದ ವರ್ಷ 15.73 ಲಕ್ಷ) ಎಂದು ಹೇಳಲಾಗಿದೆ. ಕಾರ್ಯಕ್ರಮದಲ್ಲಿ ಮೋದಿ ಹಲವಾರು ವಿಚಾರಗಳ ಬಗ್ಗೆ ವಿದ್ಯಾರ್ಥಿಗಳೊಂದಿಗೆ ತಮ್ಮ ಅಭಿಪ್ರಾಯ ಹಂಚಿಕೊಂಡರು. 

ಮಾಧ್ಯಮ, ವಿರೋಧ ಪಕ್ಷಗಳ ಟೀಕೆ ಹೇಗೆ ಎದುರಿಸ್ತೀರಾ: ಕಾರ್ಯಕ್ರಮದ ವೇಳೆ ವಿದ್ಯಾರ್ಥಿಯೊಬ್ಬರು ಪ್ರಧಾನಿಗೆ ಮಹತ್ವದ ಪ್ರಶ್ನೆ ಕೇಳಿದರು. ಪ್ರಧಾನಿಯಾಗಿರುವ ನೀವು ಮಾಧ್ಯಮಗಳು ಹಾಗೂ ವಿರೋಧಪಕ್ಷಗಳು ಟೀಕೆ ಮಾಡಿದಾಗ ಅದನ್ನು ಹೇಗೆ ಎದುರಿಸುತ್ತೀರಿ ಎಂದು ಕೇಳಲಾಯಿತು. 'ಸಮೃದ್ಧ ಪ್ರಜಾಪ್ರಭುತ್ವಕ್ಕೆ ಟೀಕೆಗಳು ಉತ್ತಮ ಅಭ್ಯಾಸ ಎಂದು ನಾನು ತಾತ್ವಿಕವಾಗಿ ನಂಬುತ್ತೇನೆ' ಎಂದು ಪ್ರಧಾನಿ ಹೇಳಿದರು. ಟೀಕೆ ಮಾಡುವವರ ಕೆಲಸವೇ ಟೀಕೆ ಮಾಡುವುದು ಎದು ಮೋದಿ ಹೇಳಿದ್ದಾರೆ.

ಇನ್ನು ವಿರೋಧ ಪಕ್ಷದವರಿಗೆ ನಮ್ಮ ಸೈಕಾಲಜಿ ಗೊತ್ತಿರುತ್ತದೆ. ನಾವು ನಮ್ಮ ಕೆಲಸವನ್ನು ಬಿಟ್ಟು ಅವರು ಮಾಡುವ ಟೀಕೆಗಳಿಗೆ ಉತ್ತರಿಸಬೇಕು ಎನ್ನುವಂಥ ಸ್ಥಿತಿಯನ್ನು ನಿರ್ಮಾಣ ಮಾಡುತ್ತಾರೆ.  ಆದರೆ, ನಾವು ಅವುಗಳಿಗೆ ಗಮನ ನೀಡದೇ ನಮ್ಮ ಗುರಿಯತ್ತ ಲಕ್ಷ್ಯ ವಹಿಸಬೇಕು. ಟೀಕೆ ಮಾಡುವುದು ಕಷ್ಟದ ಕೆಲಸ. ಅದಕ್ಕಾಗಿ ಜನರು ಆರೋಪಗಳನ್ನು ಮಾಡುವ ಮೂಲಕ ಶಾರ್ಟ್‌ಕಟ್‌ ಕಂಡುಕೊಂಡಿದ್ದಾರೆ. ಟೀಕೆಗಳು ಹಾಗೂ ಆರೋಪಗಳ ನಡುವೆ ದೊಡ್ಡ ಮಟ್ಟದ ವ್ಯತ್ಯಾಸವಿದೆ. ಯಾವುದೇ ಕಾರಣಕ್ಕೂ ಆರೋಪಗಳಿಗೆ ನಾವು ತಲೆಕೆಡಿಸಿಕೊಳ್ಳಬಾರದು. ಆದರೆ, ಟೀಕೆಗಳು ನಮ್ಮ ಬೆಳವಣಿಗೆಗೆ ಅಗತ್ಯ ಎಂದು ಹೇಳಿದರು.

ಅಧ್ಯಯನಕ್ಕೆ ಯಾವುದೇ ತೊಂದರೆ ಆಗದಂತೆ ಸೋಶಿಯಲ್‌ ಮೀಡಿಯಾ ಬಳಸುವುದು ಹೇಗೆ ಎನ್ನುವ ಪ್ರಶ್ನೆಗೆ ಉತ್ತರಿಸಿದ ಮೋದಿ, ನೀವು ಸ್ಮಾರ್ಟ್‌ ಎಂದು ಭಾವಿಸುತ್ತೀರೋ ಅಥವಾ ನಿಮ್ಮ ಕೈಯಲ್ಲಿರುವ ಗ್ಯಾಜೆಟ್‌ ಸ್ಮಾರ್ಟ್‌ ಎಂದು ಭಾವಿಸುತ್ತೀರೋ? ಗ್ಯಾಜೆಟ್‌ಗಿಂತ ನೀವೇ ಸ್ಮಾರ್ಟ್‌ ಎಂದು ಯಾವಾಗ ಅಂದುಕೊಳ್ಳುತ್ತೀರೋ, ಆಗ ನೀವು ನಿಮ್ಮ ಕೈಯಲ್ಲಿಯ ಗ್ಯಾಜೆಟ್‌ಅನ್ನು ಸರಿಯಾಗಿ ಬಳಕೆ ಮಾಡಲು ಆರಂಭಿಸುತ್ತೀರಿ. ನಾವು ಗ್ಯಾಜೆಟ್‌ಗಳ ಗುಲಾಮರಾಗಬೇಕಾಗಿಲ್ಲ ಎಂಬುದನ್ನು ಅರ್ಥಮಾಡಿಕೊಳ್ಳಬೇಕು. ನಾವು ತಂತ್ರಜ್ಞಾನ ಅಥವಾ ಗ್ಯಾಜೆಟ್‌ಗಳಿಂದ ಓಡಿಹೋಗಬೇಕಾಗಿಲ್ಲ, ಅದನ್ನು ನಮ್ಮ ಅಗತ್ಯಕ್ಕೆ ತಕ್ಕಂತೆ ಬಳಸಬೇಕು ಎಂದರು.

Pariksha Pe Charcha: ಕಾರ್ಯಕ್ರಮ ವೀಕ್ಷಣೆಗೆ ಶಾಲೆಗಳಲ್ಲಿ ಎಲ್‌ಇಡಿ ಸ್ಕ್ರೀನ್ ವ್ಯವಸ್ಥೆ

ಮನೆಯಲ್ಲೇ ನೋ ಟೆಕ್ನಾಲಜಿ ಜೋನ್‌ ಮಾಡಿಕೊಳ್ಳಿ: ನಮ್ಮ ಆರೋಗ್ಯ ಶಾಸ್ತ್ರದಲ್ಲಿ ಉಪವಾಸದ ಮಂತ್ರವಿದೆ ಅನ್ನೋದು ನಿಮಗೆಲ್ಲ ಗೊತ್ತಿರಬಹುದು. ಬದಲಾಗುತ್ತಿರುವ ಕಾಲದಲ್ಲಿ, ಈಗ ನಮಗೆ ಡಿಜಿಟಲ್ ಉಪವಾಸದ (ಡಿಜಿಟಲ್‌ ಫಾಸ್ಟಿಂಗ್‌) ಅಗತ್ಯವಿದೆ. ಈಗ ಒಂದೇ ಮನೆಯಲ್ಲಿ ತಾಯಿ, ತಂದೆ, ಮಗ ಎಲ್ಲರೂ ಮೊಬೈಲ್‌ನಲ್ಲಿ ಬ್ಯುಸಿಯಾಗಿರುವುದನ್ನು ನೋಡುತ್ತಿದ್ದೇವೆ. ಹಿಂದಿನ ಜನರು ಪ್ರಯಾಣ ಮಾಡುವಾಗ ಹರಟೆ ಹೊಡೆಯುತ್ತಿದ್ದರು ಆದರೆ ಈಗ ಮೊಬೈಲ್ ಬಳಸುತ್ತಾರೆ. ಮೊಬೈಲ್‌ ಅಥವಾ ಗ್ಯಾಜೆಟ್‌ಗಳಿಂದ ಅಂತರ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ನಿಮ್ಮ ಮನೆಯಲ್ಲಿಯೇ ನೋ ಟೆಕ್ನಾಲಜಿ ಜೋನ್‌ ಅನ್ನು ನಿರ್ಮಾಣ ಮಾಡಬೇಕು ಎಂದು ಹೇಳಿದರು.

ಪರೀಕ್ಷಾ ಪೇ ಚರ್ಚಾ ; ಮಕ್ಕಳಿಗೆ ಮೇಷ್ಟ್ರಾದ ಮೋದಿ.., ಅದ್ಭುತ ಪಾಠ, ವಿಡಿಯೋ

ಅನುಭವಕ್ಕೆ ಹೆಚ್ಚಿನ ಮನ್ನಣೆ: ಇದೇ ವೇಳೆ ಅಭ್ಯಾಸ, ಅನುಭವಗಳು ಜೀವನಕ್ಕೆ ಎಷ್ಟು ಮುಖ್ಯ ಎನ್ನುವುದರ ಕುರಿತಾಗಿ ಪ್ರಧಾನಿ ಮೋದಿ ಕಥೆಯ ಮೂಲಕ ತಿಳಿಸಿಕೊಟ್ಟರು. 'ಒಮ್ಮೆ ಒಬ್ಬ ವ್ಯಕ್ತಿಯ ಕಾರ್ ಸ್ಟಾರ್ಟ್‌ ಆಗಲೇ ಇಲ್ಲ. ಗಂಟೆಗಳ ಕಾಲ ಆತ ಕಾರ್‌ಅನ್ನು ದೂಡಿ ಸ್ಟಾರ್ಟ್‌ ಮಾಡಲು ಆರಂಭಿಸಿದ. ಸಾಧ್ಯವಾಗಲೇ ಇಲ್ಲ. ಕೊನೆಗೆ ಆತ ಒಬ್ಬ ಮೆಕಾನಿಕ್‌ಗೆ ಕರೆ ಮಾಡಿದ. ಆತ ಬಂದು ಕೇವಲ ಎರಡೇ ನಿಮಿಷದಲ್ಲಿ ಕಾರ್‌ಅನ್ನು ಸರಿ ಮಾಡಿಕೊಟ್ಟ. ಹಾಗೂ ವ್ಯಕ್ತಿಯ ಕೈಯಲ್ಲಿ 200 ರೂಪಾಯಿ ಬಿಲ್‌ ನೀಡಿದ. ಆಗ ಕಾರ್‌ನ ಮಾಲೀಕ, ಬರೀ ಎರಡು ನಿಮಿಷದ ಕೆಲಸಕ್ಕೆ 200 ರೂಪಾಯಿಯೇ ಎಂದು ಪ್ರಶ್ನೆ ಮಾಡಿದ. ಅದಕ್ಕೆ ಮೆಕಾನಿಕ್‌. ಬರೀ ಎರಡು ನಿಮಿಷಕ್ಕೆ 200 ರೂಪಾಯಿ ನೀಡ್ತಿರೋದಲ್ಲ. ನನ್ನ 20 ವರ್ಷದ ಅನುಭವಕ್ಕೆ ನೀವು ಆ ಹಣ ನೀಡುತ್ತಿದ್ದೀರಿ ಎಂದ' ಆ ಮೂಲಕ ಮೋದಿ ಬದುಕಿನಲ್ಲಿ ಅನುಭವಗಳು ಅಗತ್ಯ ಎಂದು ಹೇಳಿದರು.

Follow Us:
Download App:
  • android
  • ios