UGCಯ ಉದ್ದೇಶಿತ ಹೊಸ ನೀತಿ ವಿರುದ್ಧ ಆನ್‌ಲೈನ್ ಸಹಿ ಕ್ಯಾಂಪೇನ್
ವಿಶ್ವವಿದ್ಯಾಲಯಗಳ ಧನ ಸಹಾಯ ಆಯೋಗ(ಯುಜಿಸಿ)ದ ಹೊಸ ಪ್ರಸ್ತಾವನೆಗೆ ವಿದ್ಯಾರ್ಥಿಗಳಿಂದ ವಿರೋಧ ವ್ಯಕ್ತವಾಗಿದೆ. ಪ್ರಸ್ತಾಪ ವಿರೋಧಿಸಿ ವಿದ್ಯಾರ್ಥಿಗಳು ಆನ್ಲೈನ್ ಸಹಿ ಚಳವಳಿ ಕೈಗೊಂಡಿದ್ದು, ರಾಷ್ಟ್ರಪತಿ ಅವರಿಗೆ ಕಳುಹಿಸಿಕೊಟ್ಟಿದ್ದಾರೆ.
ದೇಶಾದ್ಯಂತ ಕೊರೊನಾ ಅಬ್ಬರದಿಂದಾಗಿ ಈ ವರ್ಷ ಶೈಕ್ಷಣಿಕ ಪ್ರಗತಿ ಏರುಪೇರಾಗಿದೆ. ಎಲ್ಲವೂ ಆನ್ಲೈನ್ ಮೂಲಕವೇ ಎಂಬಂತಾಗಿದೆ. ಸಣ್ಣ ಮಕ್ಕಳಿಂದಾಗಿ ಸ್ನಾತಕೋತರ ಪದವಿವರೆಗೂ ವಿದ್ಯಾರ್ಥಿಗಳು ಆನ್ಲೈನ್ ಅನ್ನೇ ನೆಚ್ಚಿಕೊಳ್ಳುವಂತಗಿದೆ. ಇದೇ ಆನ್ಲೈನ್ ಇದೀಗ ತಮ್ಮ ಪ್ರತಿಭಟನೆಯನ್ನ ವ್ಯಕ್ತಪಡಿಸುವ ವೇದಿಕೆಯಾಗಿ ಮಾರ್ಪಟ್ಟಿದೆ.
ರಾಜಸ್ಥಾನದಲ್ಲಿ ವೈದಿಕ ಶಿಕ್ಷಣ ಮತ್ತು ಸಂಸ್ಕೃತ ಮಂಡಳಿ ಶೀಘ್ರ ಆರಂಭ
ಹೌದು..ಕೋವಿಡ್ -19 ಸಾಂಕ್ರಾಮಿಕ ರೋಗದ ನಡುವೆಯೇ ವಿಶ್ವವಿದ್ಯಾಲಯ ಧನಸಹಾಯ ಆಯೋಗವು ಸಂಯೋಜಿತ ಶಿಕ್ಷಣ ವಿಧಾನವನ್ನು ಪ್ರಸ್ತಾಪಿಸಿದೆ. ಆದ್ರೆ ಇದಕ್ಕೆ ಸಾವಿರಾರು ವಿದ್ಯಾರ್ಥಿಗಳ ಅಸಮಾಧಾನ ಹೊರಹಾಕಿದ್ದಾರೆ. ಯುಜಿಸಿಯ ಈ ಪ್ರಸ್ತಾವನೆಯನ್ನ ಖಂಡಿಸಿ ಸದ್ದಿಲ್ಲದೇ ಆನ್ಲೈನ್ನಲ್ಲೇ ಸಹಿ ಕ್ಯಾಂಪೇನ್ ನಡೆಸಿದ್ದಾರೆ. ದೇಶಾದ್ಯಂತ ಸಾವಿರಾರು ವಿದ್ಯಾರ್ಥಿಗಳು ಯುಜಿಸಿಯ ಹೊಸ ನೀತಿಯನ್ನ ವಿರೋಧಿಸುತ್ತಿದ್ದಾರೆ. ಆನ್ಲೈನ್ ಸಹಿ ಕ್ಯಾಂಪೇನ್ ಮೂಲಕ ವಿವಿಧ ಶಿಕ್ಷಣ ಸಂಸ್ಥೆಗಳ 1800 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಸಂಯೋಜಿತ ಶಿಕ್ಷಣ ಕೈಬಿಡಲು ಮನವಿ ಮಾಡಿದ್ದಾರೆ.
ಸಾರ್ವಜನಿಕ ಶಿಕ್ಷಣವನ್ನು ಉಳಿಸಲು ಆಲ್ ಇಂಡಿಯಾ ಫೋರಂನ ಡಿಜಿಟಲ್ ಅಭಿಯಾನದ ಕರೆಗೆ ಮುಂಬೈನ ಸಂಸ್ಥೆಗಳ ವಿದ್ಯಾರ್ಥಿಗಳು ಪ್ರತಿಕ್ರಿಯಿಸಿದ್ದಾರೆ. ಸಾಂಕ್ರಾಮಿಕ ರೋಗದ ಸಮಯದಲ್ಲಿ ವಿದ್ಯಾರ್ಥಿಗಳ ಸಮಸ್ಯೆಗಳನ್ನು ಎತ್ತಿ ಹಿಡಿಯಲು ರಚಿಸಲಾದ ಪ್ಯಾನ್-ಇಂಡಿಯಾ ವಿದ್ಯಾರ್ಥಿಗಳು ಮತ್ತು ವಿದ್ಯಾರ್ಥಿ ಸಂಘಗಳು ಈ ಅಭಿಯಾನಕ್ಕೆ ಕೈಜೋಡಿಸಿವೆ.
ಆನ್ಲೈನ್ಮೂಲಕ 1800 ವಿದ್ಯಾರ್ಥಿಗಳು ಸಹಿ ಮಾಡಿರುವ ಪತ್ರವನ್ನು ಭಾರತದ ರಾಷ್ಟ್ರಪತಿಗೆ ತಲುಪಿಸಲಾಗಿದೆ. ಸಹಿ ಅಭಿಯಾನದ ಮೂಲಕ ವಿದ್ಯಾರ್ಥಿಗಳು ಆರು ಬೇಡಿಕೆಗಳನ್ನು ರಾಷ್ಟ್ರಪತಿಗಳ ಮುಂದಿಟ್ಟಿದ್ದಾರೆ. ಸಂಯೋಜಿತ ಶಿಕ್ಷಣ ವಿಧಾನವನ್ನು ಅಳವಡಿಸಿಕೊಳ್ಳದೆ ಉನ್ನತ ಶಿಕ್ಷಣವನ್ನು ಒಳಗೊಳ್ಳುವಂತೆ ಮಾಡುವುದು, ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಅಕಾಡೆಮಿಕ್ ಸಿಬ್ಬಂದಿ ಸೇರಿದಂತೆ ಎಲ್ಲಾ ಮಧ್ಯಸ್ಥಗಾರರಿಗೆ ಸಾರ್ವತ್ರಿಕ ವ್ಯಾಕ್ಸಿನೇಷನ್, ಪ್ರಬಂಧವನ್ನು ಪೂರ್ಣಗೊಳಿಸಲು ಫೆಲೋಶಿಪ್‌ಗಳನ್ನು ತಕ್ಷಣವೇ ವಿತರಿಸುವುದು. ಇನ್ನು ಬೋರ್ಡ್ ಪರೀಕ್ಷೆಗಳ ಭೇದಾತ್ಮಕ ನೀತಿಗಳು ವಿದ್ಯಾರ್ಥಿಗಳ ಭವಿಷ್ಯದ ಮೇಲೆ ಪರಿಣಾಮ ಬೀರುವುದಿಲ್ಲ, ಶೈಕ್ಷಣಿಕ ಚಟುವಟಿಕೆಗಳ ಬಗ್ಗೆ ಉದ್ದೇಶಪೂರ್ವಕವಾಗಿ ಕಾರ್ಯಪಡೆಗಳಲ್ಲಿ ವಿದ್ಯಾರ್ಥಿ ಪ್ರತಿನಿಧಿಗಳನ್ನು ಸೇರ್ಪಡೆಗೊಳಿಸುವುದು ಮತ್ತು ಅಂಚಿನಲ್ಲಿರುವ ಸಮುದಾಯಗಳ ವಿದ್ಯಾರ್ಥಿಗಳ ಕುಟುಂಬಗಳಿಗೆ ವಿಶೇಷ ಆರ್ಥಿಕ ಸಹಾಯ ಒದಗಿಸುವುದು. ಹೀಗೆ 6 ಪ್ರಮುಖ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ವಿದ್ಯಾರ್ಥಿಗಳು ಆನ್ಲೈನ್ ಸಹಿ ಅಭಿಯಾನ ನಡೆಸಿದ್ದಾರೆ.
ಆ್ಯಪ್ಸ್ ಸಹಾಯದಿಂದ ಹೋಮ್‌ವರ್ಕ್, ಸಮೀಕ್ಷೆಯಲ್ಲಿ ಬಹಿರಂಗವಾಯ್ತು ಮಾಹಿತಿ!
ಲಾಕ್‌ಡೌನ್ ಮತ್ತು ವಿದ್ಯಾರ್ಥಿಗಳು ಆನ್‌ಲೈನ್ ತರಗತಿಗಳಲ್ಲಿ ನಿರತರಾಗಿರುವುದರಿಂದ ಇದೀಗ ವಿದ್ಯಾರ್ಥಿಗಳಿಗೆ ದೈಹಿಕ ಪ್ರತಿಭಟನೆಯಲ್ಲಿ ಭಾಗವಹಿಸಲು ಸಾಧ್ಯವಾಗುತ್ತಿಲ್ಲ. ಈ ಸಹಿ ಅಭಿಯಾನವು ದೇಶಾದ್ಯಂತ ವಿದ್ಯಾರ್ಥಿ ಸಮುದಾಯವನ್ನು ಒಗ್ಗೂಡಿಸಿ, ಅವರು ಎದುರಿಸುತ್ತಿರುವ ಸಮಸ್ಯೆಗಳನ್ನು ಎತ್ತಿ ತೋರಿಸಿದೆ ಅಂತಾರೆ ಹೈದರಾಬಾದ್ ಕೇಂದ್ರ ವಿಶ್ವವಿದ್ಯಾಲಯದ ವಿದ್ಯಾರ್ಥಿ ಸಂಘದ ಅಧ್ಯಕ್ಷ ಅಭಿಷೇಕ್ ನಂದನ್ .
ಕ್ಯಾಂಪಸ್‌ನಲ್ಲಿ ಶೇಕಡಾ 40ರಷ್ಟು ವಿದ್ಯಾರ್ಥಿಗಳ ಅಧ್ಯಯನ ಮತ್ತು ಶೇಕಡಾ 60ರಷ್ಟು ಆನ್‌ಲೈನ್ ಅಧ್ಯಯನ ಮಾಡುವ ಸಂಯೋಜಿತ ನೀತಿಯು ವಿದ್ಯಾರ್ಥಿಗಳಲ್ಲಿ ಡಿಜಿಟಲ್ ವಿಭಜನೆಯನ್ನು ಹೆಚ್ಚಿಸುತ್ತದೆ. ತರಗತಿಯಲ್ಲಿ, ವಿದ್ಯಾರ್ಥಿಗಳು ಒಂದೇ ವಾತಾವರಣದಲ್ಲಿದ್ದುಮ ಕಲಿಕೆಯ ಸಮಾನ ಅವಕಾಶವನ್ನು ಹೊಂದಿರುತ್ತಾರೆ. ಆದ್ರೆ ಇದು ಆನ್‌ಲೈನ್ ಶಿಕ್ಷಣದಲ್ಲಿ ಇರುವುದಿಲ್ಲ ಎಂಬುದು ಮುಂಬೈನ ಟಾಟಾ ಇನ್ಸ್ಟಿಟ್ಯೂಟ್‌ನ ವಿದ್ಯಾರ್ಥಿಯ ಅಭಿಪ್ರಾಯ.
ಅದೇನೆಯಿರಲಿ, ಸಂಯೋಜಿತ ಶಿಕ್ಷಣ ವಿಧಾನವನ್ನು ಕೈಬಿಡಲು ರಾಷ್ಟ್ರಪತ ಗಳು ಒಪ್ಪುತ್ತಾರಾ? ವಿದ್ಯಾರ್ಥಿಗಳ ಪ್ರಮುಖ 6 ಬೇಡಿಕೆಗಳನ್ನ ಈಡೇರುತ್ತಾ? 1800 ವಿದ್ಯಾರ್ಥಿಗಳ ಸಹಿ ಅಭಿಯಾನ ನಿಜಕ್ಕೂ ಯಶಸ್ವಿಯಾಗುತ್ತಾ ಅನ್ನೋ ಕುತೂಹಲ ಕೆರಳಿಸಿದ ಒಗ್ಗಟ್ಟಿನ ಹೋರಾಟದಿಂದಾಗಿ ಯುಜಿಸಿ ತನ್ನ ಪ್ರಸ್ತಾವನೆಯನ್ನ ಕೈಬಿಡುತ್ತಾ? ಎಂಬ ಪ್ರಶ್ನೆಗಳು ಗರಿಗೆದರಿವೆ, ಸದ್ದಿಲ್ಲದೇ ನಡೆದಿರೋ ಈ ಸಹಿ ಕ್ಯಾಂಪೇನ್ಎಷ್ಟರ ಮಟ್ಟಿಗೆ ಸದ್ದು ಮಾಡುತ್ತೆ ಅನ್ನೋದೀಗ ಯಕ್ಷ ಪ್ರಶ್ನೆಯಾಗಿ ಉಳಿದಿದೆ.
ಕೇರಳದ 5ನೇ ತರಗತಿ ಬಾಲಕಿಯ ಪತ್ರಕ್ಕೆ ಮಾರು ಹೋದ ಸಿಜೆಐ!