ಜಗತ್ತಿನ ಹೆಚ್ಚು ವಿದ್ಯಾವಂತ ದೇಶಗಳ ಪಟ್ಟಿ, ಭಾರತ ಯಾಕೆ ಇಷ್ಟೊಂದು ಹಿಂದೆ!

ವಿಶ್ವದ ವಿದ್ಯಾವಂತ ದೇಶಗಳ ಪಟ್ಟಿಯಲ್ಲಿ ಮೊದಲ ಸ್ಥಾನವನ್ನು ದಕ್ಷಿಣ ಕೊರಿಯಾ ಹೊಂದಿದೆ. ಮತ್ತು ಕೊನೆಯ ಸ್ಥಾನದಲ್ಲಿ ದಕ್ಷಿಣ ಆಫ್ರಿಕಾ ಇದೆ. ಒಟ್ಟು 46 ದೇಶಗಳ ಪಟ್ಟಿಯಲ್ಲಿ ಭಾರತದ ಸ್ಥಾನ ಎಷ್ಟಿದೆ ಎಂಬ ಸಂಪೂರ್ಣ ವಿವರ ಇಲ್ಲಿದೆ.

List of most educated countries in the world 2023 gow

ಒಂದು ರಾಷ್ಟ್ರದ ಅಭಿವೃದ್ಧಿಗೆ ಮುಖ್ಯ ಬುನಾದಿ ಎಂದರೆ ಅದು ಆ ದೇಶದ ಶಿಕ್ಷಣ ವ್ಯವಸ್ಥೆಯಾಗಿದೆ. ಅಭಿವೃದ್ಧಿ ಹೊಂದಿದ ರಾಷ್ಟ್ರಗಳಲ್ಲಿ, ಶೈಕ್ಷಣಿಕ ಅವಕಾಶಗಳು ಹೇರಳವಾಗಿವೆ ಮತ್ತು ಕೈಗೆಟುಕುವ ದರದಲ್ಲಿದೆ. ಮತ್ತು ಹೆಚ್ಚಿನ ವಯಸ್ಕರು ಸಾಕ್ಷರಸ್ಥರಾಗಿದ್ದಾರೆ.  ಅವರು ಕನಿಷ್ಠವೆಂದರೂ ಪ್ರಾಥಮಿಕ ಪ್ರೌಢಶಾಲಾ ಶಿಕ್ಷಣವನ್ನು ಹೊಂದಿದ್ದಾರೆ. ಇಂತಹ ದೇಶಗಳು ವಿಶ್ವದ ಅತ್ಯಂತ ಬುದ್ಧಿವಂತ ರಾಷ್ಟ್ರಗಳಲ್ಲಿ ಸ್ಥಾನ ಪಡೆಯುವ ಹೆಚ್ಚಿನ ಅವಕಾಶವನ್ನು ಹೊಂದಿವೆ.  

ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ, ಸಾಕ್ಷರತೆಯ ಪ್ರಮಾಣಗಳು ಮತ್ತು ಪ್ರೌಢಶಾಲೆಯನ್ನು ಪೂರ್ಣಗೊಳಿಸಿದ ಜನರ ಸಂಖ್ಯೆ ಎರಡೂ ಕಡಿಮೆ ಇರುತ್ತದೆ. ಅಭಿವೃದ್ಧಿಯಾಗದ ಮತ್ತು ಕಡಿಮೆ ಅಭಿವೃದ್ಧಿ ಹೊಂದಿದ ರಾಷ್ಟ್ರಗಳು ಸಾಮಾನ್ಯವಾಗಿ ಕಡಿಮೆ ಸಾಕ್ಷರತೆ ದರಗಳನ್ನು ಹೊಂದಿವೆ ಮತ್ತು ಕಡಿಮೆ ಗುಣಮಟ್ಟದ ಶಿಕ್ಷಣವನ್ನು ನೀಡುತ್ತದೆ. ಈ ರಾಷ್ಟ್ರಗಳಲ್ಲಿನ ಅನೇಕ ಜನರು ಶಿಕ್ಷಣಕ್ಕೆ ಪ್ರವೇಶವನ್ನೇ ಹೊಂದಿಲ್ಲದಿರಬಹುದು.

10 ನೇ ವಯಸ್ಸಿಗೆ ಯೂಟ್ಯೂಬ್ ತೆರೆದು ಯಶಸ್ವಿಯಾದ ಈ ಹುಡುಗನ ತಿಂಗಳ ಗಳಿಕೆ 25 ಲಕ್ಷ!

ವಿಶ್ವದ ವಿದ್ಯಾವಂತ ದೇಶಗಳ ಪಟ್ಟಿಯಲ್ಲಿ ಮೊದಲ ಸ್ಥಾನವನ್ನು ದಕ್ಷಿಣ ಕೊರಿಯಾ ಹೊಂದಿದೆ. ಮತ್ತು ಕೊನೆಯ ಸ್ಥಾನದಲ್ಲಿ ದಕ್ಷಿಣ ಆಫ್ರಿಕಾ ಇದೆ. ಒಟ್ಟು 46 ದೇಶಗಳ ಪಟ್ಟಿಯಲ್ಲಿ ಭಾರತ 43 ನೇ ಸ್ಥಾನದಲ್ಲಿದೆ.  ‘ವರ್ಲ್ಡ್ ಆಫ್ ಸ್ಟ್ಯಾಟಿಸ್ಟಿಕ್ಸ್’ನಡೆಸಿದ ಅಧ್ಯಯನದಲ್ಲಿ, 25 ರಿಂದ 34 ವರ್ಷ ವಯಸ್ಸಿನ 20 ಪ್ರತಿಶತ ಭಾರತೀಯ ನಾಗರಿಕರು ಮೂರನೇ ಹಂತದ ಶಿಕ್ಷಣವನ್ನು ಪೂರ್ಣಗೊಳಿಸಿದ್ದಾರೆ ಎಂದು ಕಂಡುಬಂದಿದೆ. ಇನ್ನು ಹೆಚ್ಚಾಗಿ ಶ್ರೀಮಂತ ಭಾರತೀಯರು ವಿದೇಶಗಳಲ್ಲಿ ಶಿಕ್ಷಣ ಪಡೆಯುತ್ತಾರೆ. ಜೊತೆಗೆ ಇದೊಂದು ಅಭಿವೃದ್ಧಿಯತ್ತ ಸಾಗುತ್ತಿರುವ ದೇಶವಾಗಿದೆ. ಇನ್ನು ದೇಶದ ಹಲವು ಭಾಗಗಳಲ್ಲಿ ಹೆಣ್ಣು ಮಕ್ಕಳ ಶಿಕ್ಷಣ ಪಡೆಯುವ ಹಕ್ಕಿಲ್ಲ ಎನ್ನುವ ಪದ್ದತಿಗಳಿವೆ. ಇದೆಲ್ಲ ಕಾರಣಗಳು ಶಿಕ್ಷಣದ ಮೇಲೆ ಪರಿಣಾಮ ಬೀರಿರಬಹುದು.

ಆ್ಯಪಲ್‌ ಐಫೋನ್ ಬಳಿಕ ಭಾರತದಲ್ಲಿ ಗೂಗಲ್‌ನಿಂದ ಪಿಕ್ಸೆಲ್‌

ದಕ್ಷಿಣ ಕೊರಿಯಾ : 69%
ಕೆನಡಾ : 67%
ಜಪಾನ್ : 65%
ಐರ್ಲೆಂಡ್ : 63%
ರಷ್ಯಾ : 62%
ಲಕ್ಸೆಂಬರ್ಗ್ : 60%
ಲಿಥುವೇನಿಯಾ : 58%
ಯುಕೆ : 57%
ನೆದರ್ಲ್ಯಾಂಡ್ಸ್ : 56%
ನಾರ್ವೆ: 56%
ಆಸ್ಟ್ರೇಲಿಯಾ: 56%
ಸ್ವೀಡನ್: 52%
ಬೆಲ್ಜಿಯಂ : 51%
ಸ್ವಿಟ್ಜರ್ಲೆಂಡ್: 51%
ಯುನೈಟೆಡ್ ಸ್ಟೇಟ್ಸ್: 51%
ಸ್ಪೇನ್ : 50%
ಫ್ರಾನ್ಸ್ : 50%
ಡೆನ್ಮಾರ್ಕ್: 49%
ಸ್ಲೊವೇನಿಯಾ : 47%
ಇಸ್ರೇಲ್ : 46%
ಲಾಟ್ವಿಯಾ : 45%
ಗ್ರೀಸ್ : 45%
ಪೋರ್ಚುಗಲ್: 44%
ನ್ಯೂಜಿಲೆಂಡ್ : 44%
ಎಸ್ಟೋನಿಯಾ : 44%
ಆಸ್ಟ್ರಿಯಾ : 43%
ಟರ್ಕಿ: 41%
ಐಸ್ಲ್ಯಾಂಡ್: 41%
ಫಿನ್ಲ್ಯಾಂಡ್: 40%
ಪೋಲೆಂಡ್: 40%
ಚಿಲಿ : 40%
ಸ್ಲೋವಾಕಿಯಾ : 39%
ಜರ್ಮನಿ : 37%
ಜೆಕಿಯಾ: 34%
ಕೊಲಂಬಿಯಾ: 34%
ಹಂಗೇರಿ : 32%
ಕೋಸ್ಟಾ ರಿಕಾ : 31%
ಇಟಲಿ: 29%
ಮೆಕ್ಸಿಕೋ : 27%
ಚೀನಾ : 27%
ಸೌದಿ ಅರೇಬಿಯಾ : 26%
ಬ್ರೆಜಿಲ್ : 23%
ಭಾರತ : 20%
ಅರ್ಜೆಂಟೀನಾ : 19%
ಇಂಡೋನೇಷ್ಯಾ: 18%
ದಕ್ಷಿಣ ಆಫ್ರಿಕಾ : 13%

Latest Videos
Follow Us:
Download App:
  • android
  • ios