1 ರಿಂದ 10ನೇ ತರಗತಿ ಮಕ್ಕಳಿಗೆ ಸಿಹಿ ಸುದ್ದಿ, ಶಾಲೆಗಳಲ್ಲಿ ಸೇತುಬಂಧ

ಶಾಲೆಗಳಲ್ಲಿ ಸೇತುಬಂಧ ಕಾರ್ಯಕ್ರಮ ನಡೆಸಲು ಸೂಚನೆ. 1-3 ತರಗತಿ ಮಕ್ಕಳಿಗೆ 1 ತಿಂಗಳು ಸೇತುಬಂಧ. 4-10ನೇ ತರಗತಿ ಮಕ್ಕಳಿಗೆ 15 ದಿನ ಕಾರ‍್ಯಕ್ರಮ

Good news for students of class 1 to 10th   Sethubandha Literature program in Karnataka school Kannada news gow

ಬೆಂಗಳೂರು (ಮೇ.30): ರಾಜ್ಯದಲ್ಲಿ ಮೇ 31ರಿಂದ ಶಾಲೆಗಳಲ್ಲಿ ತರಗತಿ ಚಟುವಟಿಕೆಗಳು ಶುರುವಾಗಲಿದ್ದು, ಈ ಅವಧಿಯಲ್ಲಿ 1ರಿಂದ 3ನೇ ತರಗತಿಗೆ ಆರಂಭದ 30 ದಿನಗಳು ಹಾಗೂ 4ರಿಂದ 10ನೇ ತರಗತಿ ಮಕ್ಕಳಿಗೆ 15 ದಿನಗಳ ಕಾಲ ‘ಸೇತುಬಂಧ’ಕಾರ್ಯಕ್ರಮ ನಡೆಸುವಂತೆ ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆ (ಡಿಎಸ್‌ಇಆರ್‌ಟಿ) ಸೂಚಿಸಿದೆ.

ಮಕ್ಕಳಲ್ಲಿನ ಕಲಿಕಾ ಅಂತರ ತಗ್ಗಿಸಲು ಸೇತುಬಂಧವನ್ನು ಸರ್ಕಾರ ಹಮ್ಮಿಕೊಳ್ಳುತ್ತದೆ. 1ರಿಂದ 10ನೇ ತರಗತಿಗಳಿಗೆ ಸೇತುಬಂಧ ಶಿಕ್ಷಣದ ಸಾಹಿತ್ಯ ಮತ್ತು ವಿನ್ಯಾಸವನ್ನು ಸಿದ್ಧಪಡಿಸಿ https://dsert.karnataka.gov.in/info-2/Sethubandha+Literature/kn ದಲ್ಲಿ ಅಪ್‌ಲೋಡ್‌ ಮಾಡಲಾಗಿದೆ.

ಶಾಲಾ ಹಂತದಲ್ಲಿ ಸೇತುಬಂಧ ಶಿಕ್ಷಣವನ್ನು (Sethubandha Education) ಅನುಷ್ಠಾನಗೊಳಿಸಲು ಸಹಕಾರಿಯಾಗುವಂತೆ ಹಾಗೂ ಶಿಕ್ಷಕರ ಸಾಮರ್ಥ್ಯ ಅಭಿವೃದ್ಧಿಗಾಗಿ ಈ ಸಾಹಿತ್ಯವನ್ನು ಸಿದ್ಧಪಡಿಸಿದೆ. ಮಕ್ಕಳ ವಯೋಮಾನ ಮತ್ತು ತರಗತಿಗೆ ಅನುಗುಣವಾಗಿ ಕಲಿಕಾ ಮಟ್ಟಹಾಗೂ ಸಾಮರ್ಥ್ಯಗಳನ್ನು ಗುರುತಿಸಿ ಮುಂದಿನ ಕಲಿಕೆಗೆ ಸಿದ್ಧಗೊಳಿಸಲು ಕಲಿತಿರುವ ಮತ್ತು ಕಲಿಯುತ್ತಿರುವ ಪರಿಕಲ್ಪನೆಗಳ ಅಂತರದ ನಡುವೆ ಸಂಬಂಧ ಕಲ್ಪಿಸುವುದು ಸೇತುಬಂಧ ಶಿಕ್ಷಣದ ಉದ್ದೇಶವಾಗಿದೆ. ಈ ಹಿನ್ನೆಲೆಯಲ್ಲಿ 1ರಿಂದ 10 ತರಗತಿಗೆ ಸೇತುಬಂಧ ಆಯೋಜಿಸಲಾಗಿದೆ.

ಮಕ್ಕಳ ಕಲಿಕಾ ಅನುಭವಗಳನ್ನು ಆಧರಿಸಿ ರಸಪ್ರಶ್ನೆ ಲಿಖಿತ ಅಥವಾ ಮೌಖಿಕ ಪ್ರಶ್ನೋತ್ತರ, ಸರಳ ಯೋಜನೆಗಳು, ಸಂಭಾಷಣೆ, ಸರಳ ಚಟುವಟಿಕೆಗಳು, ಅಭ್ಯಾಸ ಹಾಳೆಗಳನ್ನು ಪೂರ್ಣಗೊಳಿಸಿರುವುದು, ಮನೆಪಾಠ ಹಾಗೂ ಇನ್ನಿತರ ಚಟುವಟಿಕೆಗಳನ್ನು ಮೌಲ್ಯಮಾಪನ ಮಾಡುವುದು. ಸೇತುಬಂಧದ ಬಳಿಕವೂ ವಿದ್ಯಾರ್ಥಿಗಳಲ್ಲಿ ಸಾಮರ್ಥ್ಯ ಗಳಿಕೆ ಆಗಿರದಿದ್ದಲ್ಲಿ ಅಂತಹವರನ್ನು ಗಮನಿಸಿ ಆಯಾ ತರಗತಿ ಪಠ್ಯ ಬೋಧನಾ ಸಂದರ್ಭದಲ್ಲಿ ಪೂರ್ವ ಸಿದ್ಧತಾ ಚಟುವಟಿಕೆಗಳನ್ನು ನೀಡುವಾಗ ಸಾಮರ್ಥ್ಯಗಳಿಗೆ ವಿಶೇಷ ಆದ್ಯತೆ ನೀಡಿ ಕಲಿಕೆಗೆ ಅನುಕೂಲ ಕಲ್ಪಿಸುವಂತೆ ಸೂಚಿಸಿದೆ.

ಸೇತುಬಂಧ ಶಿಕ್ಷಣದ ಅನುಷ್ಠಾನ ಕಾರ್ಯತಂತ್ರಗಳು:

  • ಮಕ್ಕಳ ವಯೋಮಾನ ಮತ್ತು ತರಗತಿಗೆ ಅನುಗುಣವಾಗಿ ಕಲಿಕಾಮಟ್ಟ ಹಾಗೂ ಸಾಮರ್ಥ್ಯಗಳನ್ನು ಗುರುತಿಸಿ ಮುಂದಿನ ಕಲಿಕೆಗೆ ಸಿದ್ಧಗೊಳಿಸಲು ಕಲಿತಿರುವ ಮತ್ತು ಕಲಿಯುತ್ತಿರುವ ಪರಿಕಲ್ಪನೆಗಳ ಅಂತರದ ನಡುವೆ ಸಹಸಂಬಂಧ ಕಲ್ಪಿಸುವುದು ಸೇತುಬಂಧ ಶಿಕ್ಷಣದ ಮೂಲ ಉದ್ದೇಶ. ಈ ನಿಟ್ಟಿನಲ್ಲಿ ಹಿಂದಿನ ತರಗತಿ ಮತ್ತು ಆಯಾ ತರಗತಿಯ ಅಪೇಕ್ಷಿತ ಕಲಿಕಾಫಲಗಳನ್ನು ಪರಿಶೀಲಿಸಿ, ಪ್ರಸ್ತುತ ಸೇತುಬಂಧ ಶಿಕ್ಷಣಕ್ಕೆ ಅಪೇಕ್ಷಿತ ಕಲಿಕಾಫಲಗಳನ್ನು ಗುರುತಿಸಲಾಗಿದೆ. ಗುರುತಿಸಲಾದ ಅಪೇಕ್ಷಿತ ಕಲಿಕಾಫಲಗಳಿಗೆ ಕಲಿಕಾಂಶಗಳನ್ನು ಪಟ್ಟಿ ಮಾಡಲಾಗಿದೆ.
  • 1 ರಿಂದ 10ನೇ ತರಗತಿಗಳ ಕನ್ನಡ ಮಾಧ್ಯಮದ ಸೇತುಬಂಧ ಸಾಹಿತ್ಯವನ್ನು ಡಿ.ಎಸ್.ಇ.ಆರ್.ಟಿ ವೆಬ್ ಸೈಟ್‌ನಲ್ಲಿ ಪ್ರಕಟಿಸಲಾಗಿದ್ದು, ಸದರಿ ಸಾಹಿತ್ಯವನ್ನು ಶಿಕ್ಷಕರು ಕಡ್ಡಾಯವಾಗಿ ಓದುವುದು. ಆಂಗ್ಲಮಾಧ್ಯಮದ ಸೇತುಬಂಧ ಸಾಹಿತ್ಯ ಹಾಗೂ ಉರ್ದು, ಮರಾಠಿ, ತಮಿಳು ಮತ್ತು ತೆಲುಗು ಭಾಷೆಗಳ ಪುಥಮಭಾಷೆಗಳ ಸೇತುಬಂಧ ಸಾಹಿತ್ಯವನ್ನು ಅಪ್‌ಲೋಡ್ ಮಾಡಲಾಗುವುದು.
  • ಸಾಹಿತ್ಯದಲ್ಲಿ ನೀಡಿರುವ ಅಥವಾ ತಮ್ಮ ಹಂತದಲ್ಲಿ ಸ್ಥಳೀಯ ಸನ್ನಿವೇಶಕ್ಕೆ ಮತ್ತು ಅಪೇಕ್ಷಿತ ಕಲಿಕಾ ಫಲಗಳಿಗೆ ಅನುಗುಣವಾಗಿ ಚಟುವಟಿಕೆ ರೂಪಿಸಿಕೊಂಡು ಅನುಷ್ಕಾನಿಸಲು ಕ್ರಮವಹಿಸುವುದು.
  • ಚಟುವಟಿಕೆಗಳನ್ನು ರೂಪಿಸುವಾಗ ಬೋಧನಾ-ಕಲಿಕಾ ಪ್ರಕ್ರಿಯೆಯಲ್ಲಿ ಮೌಲ್ಯಮಾಪನವನ್ನು ಅಂತರ್ಗತಗೊಳಿಸಲಾಗಿದ್ದು, ಶಿಕ್ಷಕರು ಮಕ್ಕಳ ಕಲಿಕಾ ಪ್ರಗತಿಯನ್ನು ನಿಯಮಿತವಾಗಿ ಕೃತಿಸಂಪುಟದಲ್ಲಿ ದಾಖಲಿಸುವುದು. ವಿದ್ಯಾರ್ಥಿಗಳ ಕಲಿಕೆಗನುಗುಣವಾಗಿ ಪ್ರತಿ ವಿದ್ಯಾರ್ಥಿಗೆ ಕಲಿಕಾ ತಂತ್ರಗಳನ್ನು ರೂಪಿಸಿ ನಿರಂತರ ಕಲಿಕೆಯನ್ನು ಅನುಕೂಲಿಸಲು ಕ್ರಿಯಾ ಯೋಜನೆಯನ್ನು ರೂಪಿಸುವುದು ಅತ್ಯವಶ್ಯಕ.
  • ಕಲಿಕೆಯನ್ನು ಖಾತರಿಪಡಿಸಿಕೊಳ್ಳಲು ಉಲ್ಲೇಖಿತ ಸುತ್ತೋಲೆಯಲ್ಲಿ ಪೂರ್ವ ಪರೀಕ್ಷೆ ಹಾಗೂ ಸಾಫಲ್ಯ ಪರೀಕ್ಷೆಗಳನ್ನು ನಡೆಸಲು ತಿಳಿಸಿರುವ ಹಿನ್ನೆಲೆಯಲ್ಲಿ ಸದರಿ ಸಾಹಿತ್ಯದಲ್ಲಿ ಮಾದರಿ ಪ್ರಶ್ನೆಗಳನ್ನು ನೀಡಲಾಗಿದ್ದು, ತಮ್ಮ ಹಂತದಲ್ಲಿ ಪ್ರಶ್ನೆಪತ್ರಿಕೆಗಳನ್ನು ಸಿದ್ಧಪಡಿಸಿ, ಮೌಲ್ಯಮಾಪನ ಕೈಗೊಳ್ಳುವುದು ಮತ್ತು ಮಕ್ಕಳಲ್ಲಿ ಅಪೇಕ್ಷಿತ ಕಲಿಕೆಯ ಫಲಗಳ ಕಲಿಕೆಯಾಗಿದೆ ಎಂಬುದನ್ನು ಒಟ್ಟಾರೆಯಾಗಿ ಕೃತಿ ಸಂಪುಟದಲ್ಲಿ ದಾಖಲಿಸುವುದು.
  • ಲಭ್ಯವಿರುವ ಸಾಧನಗಳಿಗೆ ಅನುಗುಣವಾಗಿ ನಿರ್ವಹಿಸಬೇಕಾದ ಚಟುವಟಿಕೆಗಳನ್ನು/ಸಿದ್ಧತೆಗಳನ್ನು ನಡೆಸುವುದು. ಮಕ್ಕಳ ಕಲಿಕಾ ಅನುಭವಗಳನ್ನು ಆಧರಿಸಿ ರಸಪ್ರಶ್ನೆ, ಲಿಖಿತ ಅಥವಾ ಮೌಖಿಕ ಪ್ರಶೋತ್ತರ, ಸರಳ ಯೋಜನೆಗಳು, ಸಂಭಾಷಣೆ, ಸರಳ ಚಟುವಟಿಕೆಗಳು, ಅಭ್ಯಾಸ ಹಾಳೆಗಳನ್ನು ಪೂರ್ಣಗೊಳಿಸಿರುವುದು, ಗೃಹಪಾಠ ಹಾಗೂ ಇನ್ನಿತರ ಚಟುವಟಿಕೆಗಳನ್ನು ಮೌಲ್ಯಮಾಪನ ಮಾಡುವುದು.
  • ಸೇತುಬಂಧ ಶಿಕ್ಷಣ ಪೂರ್ಣಗೊಂಡ ನಂತರವು ವಿದ್ಯಾರ್ಥಿಗಳಲ್ಲಿ ಇನ್ನು ಕೆಲ ಸಾಮರ್ಥ್ಯಗಳು ಗಳಿಕ ಆಗಿರದಿದ್ದಲ್ಲಿ ಅಂತಹವರನ್ನು ಗಮನಿಸಿ ಆಯಾ ತರಗತಿ ಪಠ್ಯ ಬೋಧನಾ ಸಂದರ್ಭದಲ್ಲಿ ಪೂರ್ವ ಸಿದ್ಧತಾ ಚಟುವಟಿಕೆಗಳನ್ನು ನೀಡುವಾಗ ಸದರಿ ಸಾಮರ್ಥ್ಯಗಳಿಗೆ ವಿಶೇಷ ಆದ್ಯತೆ ನೀಡಿ ಕಲಿಕೆಯನ್ನು ಅನುಕೂಲಿಸುವುದು.

ವಿವಾದಕ್ಕೆ ಕಾರಣವಾಯ್ತು ಕುವೆಂಪು ವಿಶ್ವವಿದ್ಯಾನಿಲಯದಿಂದ ಹೊರಬಿದ್ದ ಎಂದೂ

ಮೇಲ್ವಿಚಾರಣೆ ಮತ್ತು ಉಸ್ತುವಾರಿ:

  • ಎಲ್ಲಾ ಶಿಕ್ಷಕರು ಸೇತುಬಂಧ ಸಾಹಿತ್ಯ ಬಳಸುತ್ತಿರುವ ಬಗ್ಗೆ ಖಾತ್ರಿಪಡಿಸಿಕೊಳ್ಳುವುದು ಮತ್ತು ಶಿಕ್ಷಕರು ಕ್ರಿಯಾಯೋಜನೆ ರೂಪಿಸಲು ಅಗತ್ಯ ಮಾರ್ಗದರ್ಶನ ನೀಡುವುದು.
  • ಸೇತುಬಂಧ ಶಿಕ್ಷಣದಲ್ಲಿ ಮಕ್ಕಳ ಕಲಿಕಾ ಪ್ರಗತಿಯನ್ನು ಕೃತಿಸಂಪುಟದಲ್ಲಿ ಶಿಕ್ಷಕರು ದಾಖಲಿಸುತ್ತಿರುವ ಬಗ್ಗೆ ಮುಖ್ಯ ಶಿಕ್ಷಕರು ಖಾತ್ರಿಪಡಿಸಿಕೊಳ್ಳುವುದು.
  • ಜಿಲ್ಲಾ ನೋಡಲ್ ಅಧಿಕಾರಿಗಳು ಶಾಲಾ ಭೇಟಿ ಹಾಗೂ ಜಿಲ್ಲೆಯ ಪ್ರಗತಿ ಪರಿಶೀಲನಾ ಸಭೆಗಳಲ್ಲಿ ಸೇತುಬಂಧ ಶಿಕ್ಷಣ ಅನುಷ್ಠಾನದ ಪ್ರಗತಿ ಪರಿಶೀಲನೆ ಮಾಡುವುದು.

ಮಕ್ಕಳ ಮನಸ್ಸನ್ನು ಕಲುಷಿತಗೊಳಿಸುವ ಪಠ್ಯಪುಸ್ತಕಕ್ಕೆ ಅವಕಾಶವಿಲ್ಲ: ಸಿಎಂ

  • ತಾಲೂಕು ಮತ್ತು ಜಿಲ್ಲಾ ಹಂತದ ಕ್ಷೇತ್ರ ಉಸ್ತುವಾರಿ ಅಧಿಕಾರಿಗಳು ನಿಯಮಿತವಾಗಿ ಶಾಲಾ ಭೇಟಿ ಮಾಡಿ ಸೇತುಬಂಧ ಶಿಕ್ಷಣದ ಪುಗತಿ ಪರಿಶೀಲಿಸುವುದು ಮತ್ತು ಅಗತ್ಯ ಮಾರ್ಗದರ್ಶನ ನೀಡುವುದು.
  • ಉಪನಿರ್ದೇಶಕರು (ಆಡಳಿತ & ಅಭಿವೃದ್ಧಿ ಇವರು ತಮ್ಮ ಜಿಲ್ಲೆಯ ಯಾವುದೇ ಮಗು ಶಿಕ್ಷಣದಿಂದ ವಂಚಿತವಾಗದಂತೆ ಶಾಲಾ ಹಂತದಲ್ಲಿ ಕ್ರಮವಹಿಸಿರುವ ಬಗ್ಗೆ ಖಾತ್ರಿಪಡಿಸಿಕೊಳ್ಳುವುದು.
  • ಸೇತುಬಂಧ ಶಿಕ್ಷಣದ ಪ್ರಗತಿಯನ್ನು ಬ್ಲಾಕ್ ಹಂತ ಮತ್ತು ಜಿಲ್ಲಾ ಹಂತದಲ್ಲಿ ಪರಿಶೀಲಿಸಿ, ವರದಿಯನ್ನು ಡಿ.ಎಸ್.ಇ.ಆರ್.ಟಿ ಕಛೇರಿಗೆ ಸಲ್ಲಿಸುವುದು ಹಾಗೂ ಈ ವರದಿಯನ್ನು ಆಧರಿಸಿ ತಮ್ಮ ಜಿಲ್ಲೆ ಹಾಗೂ ತಾಲೂಕುಗಳ ಮುಂದಿನ ಶೈಕ್ಷಣಿಕ ಅಭಿವೃದ್ಧಿಗೆ ಕ್ರಮವಹಿಸುವುದು.

 

Latest Videos
Follow Us:
Download App:
  • android
  • ios