Asianet Suvarna News Asianet Suvarna News

ಮೈಸೂರು : ವಿಶ್ವವಿದ್ಯಾನಿಲಯದಲ್ಲಿ 382 ಬೋಧಕ ಹುದ್ದೆಗಳು ಖಾಲಿ

  • ಮೈಸೂರು ವಿಶ್ವವಿದ್ಯಾನಿಲಯದಲ್ಲಿ 664 ಬೋಧಕ ಹುದ್ದೆಗಳ ಪೈಕಿ 382 ಖಾಲಿ ಇವೆ 
  • ಇದರಿಂದಾಗಿಯೇ ಮೈಸೂರು ವಿಶ್ವವಿದ್ಯಾನಿಲಯಕ್ಕೆ ತಪ್ಪಿದ ನ್ಯಾಕ್‌ ಮಾನ್ಯತೆ 
382 Teaching Faculty Post Shortages  in Mysore University snr
Author
Bengaluru, First Published Nov 3, 2021, 1:40 PM IST

 ಮೈಸೂರು (ನ.03): ಮೈಸೂರು (Mysuru) ವಿಶ್ವವಿದ್ಯಾನಿಲಯದಲ್ಲಿ (University) 664 ಬೋಧಕ ಹುದ್ದೆಗಳ (Teaching Faculty) ಪೈಕಿ 382 ಖಾಲಿ ಇವೆ ಎಂದು ಕುಲಪತಿ ಪ್ರೊ.ಜಿ. ಹೇಮಂತಕುಮಾರ್‌ (Hemanth kumar) ಹೇಳಿದರು.

ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇದರಿಂದಾಗಿಯೇ ನಮಗೆ ನ್ಯಾಕ್‌ (National Assessment and Accreditation Council) ಮಾನ್ಯತೆ ಎ ಪ್ಲಸ್‌ ಸಿಗಲಿಲ್ಲ. ಎಲ್ಲಾ ಅಂಶಗಳಲ್ಲೂ ಉತ್ತಮ ಅಂಕಗಳು ಸಿಕ್ಕಿದ್ದವು. ಆದರೆ ಬೋಧನಾಂಗ ಮತ್ತು ಸಂಶೋಧನಾಂಗ ವಿಭಾಗದಲ್ಲಿ ಕೊರತೆಯಾಯಿತು ಎಂದರು.

ವಿಜ್ಞಾನ (Science) ವಿಭಾಗದಲ್ಲಿ ಶೇ.50 ರಷ್ಟು ಬೋಧಕರು ಇದ್ದಾರೆ. ಉರ್ದು(Urdu), ಸಂಸ್ಕೃತದಲ್ಲಿ(Sanskrit)  ಒಬ್ಬ ಪ್ರಾಧ್ಯಾಪಕರೂ ಇಲ್ಲ. 2007 ರಿಂದ ಕಾಯಂ ಬೋಧಕರ ನೇಮಕಾತಿ ನಡೆದಿಲ್ಲ. ಎಲ್ಲವನ್ನು 700 ಅತಿಥಿ ಉಪನ್ಯಾಸಕರ ಮೂಲಕ ಸರಿ ದೂಗಿಸಲಾಗುತ್ತಿದೆ. ಆದರೆ ಕಾಯಂ ಬೋಧಕರಿಲ್ಲದೇ ಸಂಶೋಧನೆಗೆ ತೊಂದರೆಯಾಗಿದೆ ಎಂದರು.

ಇದಲ್ಲದೇ ಕಳೆದ ನಾಲ್ಕು ವರ್ಷಗಳಿಂದ ಯುಜಿಸಿಯಿಂದ (UGC) ಯಾವುದೇ ಹೊಸ ಯೋಜನೆಗಳು ಸಿಗುತ್ತಿಲ್ಲ ಎಂದರು.

ಪದವಿಗೆ 22 ಸಾವಿರ ಮಂದಿ ಪ್ರವೇಶ:  ವಿವಿ ವ್ಯಾಪ್ತಿಯಲ್ಲಿ ಪದವಿ ತರಗತಿಗಳಿಗೆ 22 ಸಾವಿರ ವಿದ್ಯಾರ್ಥಿಗಳು (Students) ಪ್ರವೇಶ ಪಡೆದಿದ್ದಾರೆ. ಸ್ನಾತಕೋತ್ತರ ಪದವಿಗೆ 7000 ಅರ್ಜಿ ಬಂದಿದ್ದು, 3000 ಸೀಟುಗಳನ್ನು ಪ್ರವೇಶ ಪರೀಕ್ಷೆಯ (Exam) ಮೂಲಕ ಭರ್ತಿ ಮಾಡಲಾಗುವುದು ಎಂದರು.

ಕಡಿಮೆಯಾದ ವಿದೇಶಿ ವಿದ್ಯಾರ್ಥಿಗಳು

ಕೋವಿಡ್‌-19 (Covid 19) ಕಾರಣದಿಂದ ಸೆಮಿಸ್ಟರ್‌ ಮೂರು ತಿಂಗಳು ಮುಂದಕ್ಕೆ ಹೋಗಿದೆ. ಅಲ್ಲದೇ ಆನ್‌ಲೈನ್‌ (Online) ಮೂಲಕ 35 ವಿದೇಶಿ ವಿದ್ಯಾರ್ಥಿಗಳು (Students) ಮಾತ್ರ ಪ್ರವೇಶ ಪಡೆದಿದ್ದಾರೆ. ಕೇಂದ್ರ ಸರ್ಕಾರ (Central Govt) ಕೋವಿಡ್‌ ನಿರ್ಬಂಧ ಸಡಿಸಿದ ನಂತರ ಈ ಪ್ರಮಾಣ 800 ತಲುಪಬಹುದು ಎಂದು ಅಂದಾಜಿಸಲಾಗಿದೆ ಎಂದರು.

ಮೈಸೂರು ವಿವಿಗೆ 19 ನೇ ರ‍್ಯಾಂಕ್

ಮೈಸೂರು ವಿವಿಗೆ ಎನ್‌ಐಆರ್‌ಎಫ್‌ (NIRF) 19ನೇ ರ‍್ಯಾಂಕ್ ನೀಡಿರುವುದಕ್ಕೆ ವಿವಿಯ ಸಿಂಡಿಕೇಟ್‌ ಸದಸ್ಯ ಡಾ.ಈ.ಸಿ. ನಿಂಗರಾಜ್‌ಗೌಡ ಅಭಿನಂದನೆ ಸಲ್ಲಿಸಿದ್ದಾರೆ.

382 Teaching Faculty Post Shortages  in Mysore University snr

ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯದ ನ್ಯಾಷನಲ್‌ ಇನ್‌ಸ್ಟಿಟ್ಯೂಟ್‌ ರ‍್ಯಾಂಕಿಂಗ್‌ ( National Institute Ranking) ಫ್ರೇಂ ವರ್ಕ್ ವತಿಯಿಂದ ವಿವಿಗಳ ಕಾರ್ಯಪ್ರದರ್ಶನ ಗುರುತಿಸಿ ನೀಡುವ ರ‍್ಯಾಂಕಿಂಗ್‌ನಲ್ಲಿ ಮೈಸೂರು ವಿವಿಗೆ (Mysuru VV) 19ನೇ ರ‍್ಯಾಂಕ್ ಲಭಿಸಿದೆ. 

ಕುವೆಂಪು ವಿವಿಗೆ ದೇಶದಲ್ಲಿ 83 ರಾಜ್ಯದಲ್ಲಿ 3ನೇ ಸ್ಥಾನ

ಮೈಸೂರು ವಿಶ್ವವಿದ್ಯಾಲಯವು ಈ ಹಿಂದಿನ ವರ್ಷವೂ (2020ರಲ್ಲಿ), 27ನೇ ರ‍್ಯಾಂಕ್ (Rank) ಪಡೆದಿತ್ತು. ಈ ವರ್ಷ ಕಾಯಂ ಬೋಧಕರ ಸಂಖ್ಯೆಯಲ್ಲಿ ಇಳಿಕೆ ಹಾಗೂ ಇನ್ನಿತರೆ ವಿಷಯಗಳಲ್ಲಿ ಕೊರತೆ ಎದುರಾಗಿದ್ದರೂ ಮೈಸೂರು ವಿವಿಯೂ (Mysuru VV) ಅತ್ಯುತ್ತಮ ಸಾಧನೆ ಮಾಡಿದೆ ಎಂದು ಅವರು ತಿಳಿಸಿದ್ದಾರೆ.

ಆನ್‌ಲೈನ್‌ ಪಿಎಚ್‌ಡಿ ಕೋರ್ಸ್

 

ಈ ವರ್ಷ ಪಿಎಚ್‌.ಡಿ ಕೋರ್ಸ್‌ ವರ್ಕ್ ತರಗತಿಗಳನ್ನು ಆನ್‌ಲೈನ್‌ನಲ್ಲಿಯೇ ನಡೆಸಲು ಮೈಸೂರು ವಿಶ್ವವಿದ್ಯಾನಿಲಯ ನಿರ್ಧರಿಸಿದೆ.

ಮಾನಸ ಗಂಗೋತ್ರಿಯ ವಿಜ್ಞಾನ ಭವನದಲ್ಲಿ ಮಂಗಳವಾರ ನಡೆದ ಶಿಕ್ಷಣ ಮಂಡಳಿಯ ಸಭೆಯಲ್ಲಿ ಕುಲಪತಿ ಪ್ರೊ.ಜಿ. ಹೇಮಂತಕುಮಾರ್‌ ಮಾತನಾಡಿ, 2020-21ನೇ ಸಾಲಿನಲ್ಲಿ ನಡೆಯಬೇಕಿದ್ದ ಪಿಎಚ್‌.ಡಿ ಕೋರ್ಸ್‌ ವರ್ಕ್ ತರಗತಿಗಳನ್ನು ಕೊರೋನಾ ಹಿನ್ನೆಲೆ ತಾತ್ಕಾಲಿಕವಾಗಿ ಮುಂದೂಡಲಾಗಿತ್ತು. ಆದರೆ, ತರಗತಿಗಳು ವಿಳಂಬವಾಗುತ್ತಿದ್ದ ಕಾರಣ ಕೆಲವು ಅಭ್ಯರ್ಥಿಗಳು ಆನ್‌ಲೈನ್‌ನಲ್ಲಿ ನಡೆಸಲು ಕೋರಿದ್ದರು. ಅಲ್ಲದೆ, ವಿದೇಶಿ ವಿದ್ಯಾರ್ಥಿಗಳು ಆಫ್‌ಲೈನ್‌ ತರಗತಿಗಳಿಗೆ ಹಾಜರಾಗಲು ಸಾಧ್ಯವಾಗಿಲ್ಲ. ಆದ್ದರಿಂದ ವಿಶೇಷ ಸಂದರ್ಭವೆಂದು ಪರಿಗಣಿಸಿ ಪ್ರಸಕ್ತ ವರ್ಷ ಮಾತ್ರ ಆನ್‌ಲೈನ್‌ನಲ್ಲಿ ಪಿಎಚ್‌.ಡಿ ಕೋರ್ಸ್‌ ನಡೆಸಲಾಗುತ್ತದೆ. ಇದೇ ವೇಳೆ ಆಫ್‌ಲೈನ್‌ ತರಗತಿಗಳು ಅಭ್ಯರ್ಥಿಗಳಿಗೆ ಲಭ್ಯವಿರಲಿವೆ ಎಂದರು.

ವಿಶೇಷ ಕೋರ್ಸ್‌ಗಳಿಗೆ ಅನುಮೋದನೆ

ಹೂಟಗಳ್ಳಿ ಕೈಗಾರಿಕಾ ವಲಯದಲ್ಲಿರುವ ಜಿಇಟಿಎಸ್‌ ಅಕಾಡೆಮಿಗೆ ವಿಶೇಷ  ಯೋಜನೆಗಳ ಅಡಿಯಲ್ಲಿ ಕೆಲವು ಕೋರ್ಸ್‌ಗಳನ್ನು ಆರಂಭಿಸಲು ಮೈಸೂರು ವಿವಿಯಿಂದ ಮಾನ್ಯತೆ ನೀಡಲು ಅಧಿಸೂಚನೆ ಹೊರಡಿಸಿದೆ. ಈ ಸಂಬಂಧ 2 ಅಧ್ಯಯನ ಮಂಡಳಿಗಳು ಶಿಫಾರಸ್ಸು ಮಂಡಿಸಿದ್ದು, ಬಿ.ಕಾಂನಿಂದ ಇ-ಕಾಮರ್ಸ್‌ ಅಂಡ್‌ ಡಿಜಿಟಲ್‌ ಮಾರ್ಕೆಟಿಂಗ್‌, ಫಿನಾನ್ಸ್‌ ಅಂಡ್‌ ಇನ್‌ವೆಸ್ಟ್‌ಮೆಂಟ್‌, ಇಂಟರ್‌ನ್ಯಾಷನಲ್‌ ಅಕೌಂಟಿಂಗ್‌ ಅಂಡ್‌ ಫಿನಾನ್ಸ್‌, ಬಿಬಿಎ ನಿಂದ ಬಿಜಿನೆಸ್‌ ಅನಾಲಿಟಿಕ್ಸ್‌, ಸಸ್ಟೈನಬಲ್‌ ಡೆವಲಪ್‌ಮೆಂಟ್‌ ಅಂಡ್‌ ಎನ್‌ವಿರಾನ್‌ಮೆಂಟ್‌ ಮ್ಯಾನೇಜ್‌ಮೆಂಟ್‌ ಹಾಗೂ ಇಂಟರ್‌ನ್ಯಾಷನಲ್‌ ಬಿಜಿನೆಸ್‌ ಕೋರ್ಸ್‌ಗಳ ರೆಗ್ಯುಲೇಶನ್‌ ಪಠ್ಯಕ್ರಮಗಳನ್ನು ಸಿಂಡಿಕೇಟ್‌ ಸದಸ್ಯರ ಅನುಮತಿಯೊಂದಿಗೆ ಅನುಮೋದಿಸಲಾಯಿತು.

Follow Us:
Download App:
  • android
  • ios