Asianet Suvarna News Asianet Suvarna News

ಸೈಕಲ್ ಕೂಡ ಖರೀದಿಸಿಲ್ಲ, ಗಾಡಿಯ ಅನುಭವ ನನಗಿಲ್ಲ, ಮೋದಿ ಮಾತಿಗೆ ಆಟೋ ಉದ್ಯಮಿಗಳ ಚಪ್ಪಾಳೆ!

ದೆಹಲಿಯಲ್ಲಿ ನಡೆಯುತ್ತಿರುವ ಭಾರತ್ ಮೊಬಿಲಿಟಿ ಗ್ಲೋಬಲ್ ಎಕ್ಸ್‌ಪೋದಲ್ಲಿ ಪಾಲ್ಗೊಂಡ ಪ್ರಧಾನಿ ಮೋದಿ ಉದ್ಯಮಿಗಳನ್ನುದ್ದೇಶಿ ಮಾತನಾಡಿದ್ದಾರೆ. ನನಗೆ ವಾಹನ ಖರೀದಿಸಿದ ಅನುಭವವಿಲ್ಲ, ಸೈಕಲ್ ಕೂಡ ಖರೀದಿಸಿಲ್ಲ ಎಂದು ಮೋದಿ ಹೇಳಿದ್ದಾರೆ. ಮೋದಿ ಮಾತಿಗೆ ಉದ್ಯಮಿಗಳು, ತಜ್ಞರು ಚಪ್ಪಾಳೆ ಮೂಲಕ ಸಂತಸ ವ್ಯಕ್ತಪಡಿಸಿದ್ದಾರೆ. ಇದೇ ವೇಳೆ 3ನೇ ಬಾರಿ ಸರ್ಕಾರ ರಚನೆ ಕುರಿತು ಸೂಚನೆ ನೀಡಿದ್ದಾರೆ.
 

I Dont have any vehicle purchase experience not even bicycle say PM Modi in Bharat Mobility Global Expo ckm
Author
First Published Feb 2, 2024, 6:44 PM IST

ನವದೆಹಲಿ(ಫೆ.02) ಹೊಸ ಹೊಸ ವಾಹನಗಳು, ಕಾನ್ಸೆಪ್ಟ್ ಕಾರು, ಎಲೆಕ್ಟ್ರಿಕ್, ಅತ್ಯಾಧುನಿಕ ತಂತ್ರಜ್ಞಾನಗಳ ವಾಹನಗಳ ಪ್ರದರ್ಶನದ ಭಾರತ್ ಮೊಬಿಲಿಟಿ ಗ್ಲೋಬಲ್ ಎಕ್ಸ್‌ಪೋ ಪ್ರಧಾನಿ ಮೋದಿಯನ್ನು ಪ್ರಭಾವಿತಗೊಳಿಸಿದೆ. ದೇಶದಲ್ಲಿ ಈ ರೀತಿಯ ಎಕ್ಸ್‌ಪೋಗಳು ಆಯೋಜನೆಗೊಳ್ಳುತ್ತಿರುವುದನ್ನು ನೋಡಲು ಆನಂದವಾಗುತ್ತಿದೆ ಎಂದಿದ್ದಾರೆ. ಇದೇ ವೇಳೆ ನನಗೆ ವಾಹನ ಖರೀದಿಸಿದ ಯಾವುದೇ ಅನುಭವವಿಲ್ಲ. ಸೈಕಲ್ ಕೂಡ ಖರೀದಿಸಿಲ್ಲ ಎಂದು ಮೋದಿ ಹೇಳಿದ್ದಾರೆ. ಮೋದಿ ಮಾತಿಗೆ ಆಟೋ ಎಕ್ಸ್‌ಪೋದಲ್ಲಿನ ಉದ್ಯಮಿಗಳು, ತಜ್ಞರು ಚಪ್ಪಾಳೆ ತಟ್ಟಿಸಿದ್ದಾರೆ.  ಒಂದು ಬಾರಿ ಆಟೋ ಎಕ್ಸ್‌ಪೋಗೆ ಭೇಟಿ ನೀಡುವಂತೆ ನಾನು ದೆಹಲಿ ಜನತೆಗೆ ಮನವಿ ಮಾಡುತ್ತೇನೆ ಎಂದು ಮೋದಿ ಹೇಳಿದ್ದಾರೆ. 

ದೆಹಲಿಯಲ್ಲಿ ಆಯೋಜನೆಗೊಂಡಿರುವ ಭಾರತ್ ಮೊಬಿಲಿಟಿ ಗ್ಲೋಬಲ್ ಎಕ್ಸ್‌ಪೋದಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಭಾರತದ ಆಟೋ ಮೊಬಿಲಿಟಿ, ಸಪ್ಲೈ ಚೈನ್ ಸೇರಿದಂತೆ ಸಂಪೂರ್ಣ ಸಂಪರ್ಕಿತ ವ್ಯವಸ್ಥೆಯನ್ನು ಒಂದು ಮಂಟಪದೊಳಗೆ ತಂದು ಎಕ್ಸ್‌ಪೋ ಆಯೋಜಿಸಲಾಗಿದೆ. ಭಾರತ ಎಲೆಕ್ಟ್ರಿಕ್ ವಾಹನ ಉತ್ಪಾದನೆ ಹಾಗೂ ಮಾರಾಟಕ್ಕೆ ಹೆಚ್ಚಿನ ಉತ್ತೇಜನ ನೀಡಿದೆ. ಪ್ರಮುಖವಾಗಿ ಬ್ಯಾಟರಿ ಉತ್ಪಾದನೆ ಸರಿಯಾದ ಪ್ರಮಾಣದಲ್ಲಿ ನಾವು ಮಾಡಬೇಕಿದೆ. ಈ ಕುರಿತು ಇತ್ತೀಚೆಗೆ ಗ್ಲೋಬಲ್ ಸಮ್ಮಿಟ್‌ನಲ್ಲಿ ನಾನು ಪಾಲ್ಗೊಂಡಿದ್ದೆ. ಹಲವು ವಿಚಾರಗಳ ಕುರಿತು ಚರ್ಚೆ ನಡೆದಿತ್ತು. ಈ ವಿಚಾರಗಳನ್ನು ಮೂರನೇ ಅವಧಿ ಸರ್ಕಾರದಲ್ಲಿ ಜಾರಿಗೆ ತರಲಾಗುತ್ತದೆ ಎಂದು ಮೋದಿ ಹೇಳಿದ್ದಾರೆ.

ವಿಕಸಿತ ಭಾರತಕ್ಕೆ ಮೋದಿ ದೂರದೃಷ್ಟಿ ಹೇಗಿದೆ..? ನೋ ಆಫರ್..ಬಟ್ ಬಂಪರ್..!

ಮೋದಿಯ 3ನೇ ಬಾರಿಗೆ ಸರ್ಕಾರ ರಚನೆ ಮಾತು ಹೇಳುತ್ತಿದ್ದಂತೆ ಇಡೀ ಸಭಾಂಗಣದಲ್ಲಿದ್ದ ಉದ್ಯಮಿಗಳು, ತಜ್ಞರು ಮೋದಿ ಮೋದಿ ಎಂದು ಘೋಷಣೆ ಕೂಗಿದ್ದಾರೆ. ಹಲವು ವೇದಿಕೆಯಲ್ಲಿ ಹೇಳಿದಂತೆ ಇದು ಸರಿಯಾದ ಸಮಯ, ಸೂಕ್ತ ಸಮಯ. ಭಾರತ ವಿಶ್ವದಲ್ಲೇ ಅಗ್ರಗಣ್ಯ ದೇಶವಾಗಲು ಎಲ್ಲರೂ ಒಗ್ಗಟ್ಟಿನಿಂದ ಮುನ್ನಡೆಯಬೇಕಿದೆ ಎಂದಿದ್ದಾರೆ.

 

 

ಚಾಲಕರಿಗಾಗಿ ಹೊಸ ಯೋಜನೆ ರೂಪಿಸಿದ್ದೇವೆ. ಬಿಡುವಿಲ್ಲದೆ ಪ್ರಯಾಣ ಮಾಡುವ ವಾಹನ ಚಾಲಕರಿಗೆ ಹೆದ್ದಾರಿಗಳಲ್ಲಿ ವಿಶ್ರಾಂತಿ ಪಡೆಯಲು, ಸ್ನಾನ, ಆಹಾರ, ಕುಡಿಯ ನೀರು, ವಾಹನ ಪಾರ್ಕಿಂಗ್ ಮಾಡಲು ಭವನ ನಿರ್ಮಾಣ ಮಾಡಲಾಗುತ್ತದೆ. ಈ ಮೂಲಕ ವಾಹನ ಚಾಲಕರ ಸುರಕ್ಷತೆಯಿಂದ ಚಾಲನೆಗೆ ಅವಕಾಶ ಮಾಡಿಕೊಡಲಾಗುತ್ತದೆ ಎಂದು ಮೋದಿ ಹೇಳಿದ್ದಾರೆ. 

 

ವಿಕಸಿತ ಭಾರತಕ್ಕೆ ಭದ್ರ ಬುನಾದಿ ಹಾಕಿದ ಬಜೆಟ್, ನಿರ್ಮಲಾ ಸೀತಾರಾಮನ್‌ಗೆ ಮೋದಿ ಅಭಿನಂದನೆ!

ಭಾರತದಲ್ಲಿ ರಬ್ಬರ್ ಕ್ಷೇತ್ರ ವಿಫುಲವಾಗಿದೆ. ನಾವು ಅತ್ಯುತ್ತಮ ಟೈಯರ್ ನಿರ್ಮಾಣ ಮಾಡುತ್ತಿದ್ದೇವೆ. ಆದರೆ ಜಾಗತಿಕ ಮಟ್ಟದಲ್ಲಿ ಭಾರತ ರಬ್ಬರ್ ಹಾಗೂ ಅದರ ಉತ್ಪನ್ನ ಕ್ಷೇತ್ರದಲ್ಲೂ ನಂಬರ್ 1 ಆಗಿ ಬೆಳೆಯಬೇಕು. ಇದಕ್ಕಾಗಿ ಉದ್ಯಮಿಗಳು, ರಬ್ಬರ್ ಉತ್ಪನ್ನಗಳ ಉದ್ಯಮಿಗಳು ರೈತರ ಜೊತೆ ಸೇರಿ ಮಾತುಕತೆ ನಡೆಸಿ ಅವರಿಂದ ನೇರವಾಗಿ ಉತ್ಪನ್ನ ಪಡೆದು ಉತ್ಪಾದನೆ ಮಾಡಲು ಪೂರಕ ವಾತವಾರಣ ಇದೀಗ ನಿರ್ಮಾಣವಾಗಿದೆ ಎಂದು ಮೋದಿ ಹೇಳಿದ್ದಾರೆ.  

Follow Us:
Download App:
  • android
  • ios