ಬೆಂಗಳೂರು(ಜ.  21) ಘೋರ ಕೃತ್ಯವೊಂದು ಬೆಳಕಿಗೆ ಬಂದಿದೆ. ಬೆಂಗಳೂರಲ್ಲಿ ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ನಡೆದ ಪ್ರಕರಣ ವರದಿಯಾಗಿದ್ದು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಇನ್ಸ್ಸಾಗ್ರಾಂ ಮೂಲಕ ಪರಿಚಯ ಮಾಡಿಕೊಂಡು ಬಾಲಕಿ ಮೇಲೆ ದೌರ್ಜನ್ಯ ಎಸಗಿದ್ದಾರೆ.   ಘಟನೆ ಸಂಬಂಧ ಐವರು ಆರೋಪಿಗಳನ್ನು ಬಂಧಿಸಲಾಗಿದೆ ಅಭಿ,ವೆಂಕಿ,ಲೇಖನ್ ,ಚೇತನ್,ರಕ್ಷತ್ ಬಂಧಿತ ಆರೋಪಿಗಳು.  ಮತ್ತೊಬ್ಬ ಆರೋಪಿ ಬಾಬು ತಲೆ‌ಮರೆಸಿಕೊಂಡಿದ್ದು ಬಂಧನಕ್ಕಾಗಿ ಬಲೆ ಬೀಸಲಾಗಿದೆ.

ಬಸ್‌ನಲ್ಲಿ ಕಿತಾಪತಿ ಮಾಡ್ತಿದ್ದ ಕಾಮಿಗೆ ಯುವತಿ  ಕೊಟ್ಟಿದ್ದು ಹೀಗೆ!

ಮೂವರು ಕಾಮುಕರು ಬಾಲಕಿ ಮೇಲೆ ಕ್ರೌರ್ಯ ಮೆರೆದಿದ್ದಾರೆ. ವೆಂಕಿ,ಅಭಿ,ಬಾಬು ಕಿರಾತಕರು. ನವಂಬರ್ ನಲ್ಲಿ ಇನ್ಸ್ಟಾಗ್ರಾಮ್ ಮೂಲಕ ಪರಿಚಯ ಮಾಡಿಕೊಂಡ ಕಾಮುಕರು ಹೊರ ಹೋಗೋಣ ಎಂದು ಬಾಲಕಿಯನ್ನು ಕರೆದುಕೊಂಡು ಹೋಗಿ ಅತ್ಯಾಚಾರ ಎಸಗಿದ್ದಾರೆ.

ಕಳೆದ ವರ್ಷ ನವೆಂಬರ್ 8 ರಂದು ಅತ್ಯಾಚಾರ ಎಸಗಿದ ಕಾಮುಕರು ಮತ್ತೆ ಜನವರಿ 17 ರಂದು ಮತ್ತೆ ಮಧ್ಯರಾತ್ರಿ 2 ಗಂಟೆಗೆ ಮನೆ ಹತ್ತಿರ ಬಂದಿದ್ದಾರೆ. ಜತಗೆ ಬರದಿದ್ರೆ  ಮಾನ ಮರ್ಯಾದೆ ತೆಗೆಯೋದಾಗಿ ಬೆದರಿಕೆ ಹಾಕಿದ್ದಾರೆ. ಒಂದು ರೌಂಡ್ ಹೋಗಿ ಬರೋಣ ಎಂದು ಪುಸಲಾಯಿಸಿ ಕರೆದುಕೊಂಡು ಹೋಗಿದ್ದಾರೆ.

ಮುಂಜಾನೆ 2 ಗಂಟೆಗೆ ಶ್ರೀನಿವಾಸನಗರದ ಬಾಲಕಿ ತಾತನ‌‌ ಮನೆಯಿಂದಲೇ ಆಕೆಯನ್ನು ಕರೆದುಕೊಂಡು ಹೋಗಿದ್ದಾರೆ. ಲೇಖನ್ ಮತ್ತು ವೆಂಕಿ ಬೈಕ್ ನಲ್ಲಿ‌ ಬಂದು ಕರೆದೊಯ್ದಿದ್ದಾರೆ.  ಗುಟ್ಟಳ್ಳಿಯಲ್ಲಿರುವ ಸ್ನೇಹಿತನ‌ ರೂಮ್ ಗೆ ಕರೆದುಕೊಂಡು ಹೋಗಿ ಅತ್ಯಾಚಾರ ಎಸಗಿದ್ದಾರೆ. ಸ್ನೇಹಿತನ ‌ಕೃತ್ಯಕ್ಕೆ ಸಹಕರಿಸಿದ ಹಿನ್ಲೆಲೆ ಲೇಖನ್,ಚೇತನ್,ರಕ್ಷತ್ ಎಂಬುವರನ್ನು ಬಂಧಿಸಲಾಗಿದೆ.