ಗುರುಗ್ರಾಮ್(ಎ.08): ಕೆಲಸ ಮುಗಿಸಿ ಮನೆಗೆ ಮರಳುತ್ತಿದ್ದ ಯುವತಿಯನ್ನು ಅಪಹರಿಸಿ ಐವರು ಅತ್ಯಾಚಾರ ಮಾಡಿರುವ ಘಟನೆ ಗುರುಗ್ರಾಮದಲ್ಲಿ ನಡೆದಿದೆ. ಹರಿಯಾಣದಿಂದ ವರದಿಯಾದ ಭೀಕರ ಘಟನೆಯೊಂದರಲ್ಲಿ, ದೆಹಲಿಯ ಮಹಿಳೆಯೊಬ್ಬರು ಕಳೆದ ಸೋಮವಾರ ಗುರುಗ್ರಾಮ್ ಜಿಲ್ಲೆಯಿಂದ ಅಪಹರಿಸಲ್ಪಟ್ಟಿದ್ದಾರೆ.

ಅಪಹರಣದ ನಂತರ ಮಹಿಳೆ ಐವರಿಂದ ಸಾಮೂಹಿಕ ಅತ್ಯಾಚಾರಕ್ಕೆ ಒಳಗಾಗಿದ್ದರು. 24 ವರ್ಷದ ಯುವತಿ ಗುರುಗ್ರಾಮ್ನಲ್ಲಿ ನೈಟ್ ಶಿಫ್ಟ್ ನಂತರ ಮನೆಗೆ ಮರಳುತ್ತಿದ್ದಾಗ ಘಟನೆ ನಡೆದಿದೆ.

ತಂದೆಗೆ ಚಾಡಿ ಹೇಳ್ತಾಳೆ ಅಂತ ಮೂರು ವರ್ಷದ ಮಗಳನ್ನೇ ಕೊಂದ ಕಿರಾತಕ ತಾಯಿ..!

ಯುವತಿ ಮುಂಜಾನೆ 3 ಗಂಟೆಗೆ ಇಫ್ಕೊ ಚೌಕ್‌ನಿಂದ ಕ್ಯಾಬ್ ಹತ್ತಿದಾಗ ಮೂವರು ಆಕೆಯನ್ನು ಅಪಹರಿಸಿ ಜಜ್ಜರ್ ಜಿಲ್ಲೆಯ ಜಮೀನೊಂದಕ್ಕೆ ಕರೆದೊಯ್ದು ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ.

ಕ್ಯಾಬ್ ಜಜ್ಜರ್‌ಗೆ ತಲುಪಿದಾಗ ಮೂವರು ಆರೋಪಿಗಳ ಜೊತೆ ಇನ್ನೂ ಇಬ್ಬರು ಸೇರಿಕೊಂಡಿದ್ದರು. ಸಾಮೂಹಿಕ ಅತ್ಯಾಚಾರಕ್ಕೆ ಮುನ್ನ ಮದ್ಯ ಸೇವಿಸಿದ ಆರೋಪಿಗಳು ಆಕೆಯನ್ನು ಕ್ಯಾಬ್‌ನಲ್ಲಿ ಲಾಕ್ ಮಾಡಿದ್ದರು.

ಬೆಂಗಳೂರು; ಶೀಲ ಶಂಕಿಸಿ ತಂಗಿಯನ್ನೇ ಹತ್ಯೆ ಮಾಡಿ ರೈಲ್ವೆ ಹಳಿ ಮೇಲೆ ಎಸೆದ ಅಣ್ಣ

ಬೆಳಗ್ಗೆ ತನಕ ಮಹಿಳೆಯ ಮೇಲೆ ಅತ್ಯಾಚಾರ ನಡೆಸಿ ನಂತರ ಫರುಖ್‌ನಗರ ಬಳಿ ಎಸೆದು ಹೋಗಿದ್ದಾರೆ. ಸೋಮವಾರ ಬೆಳಗ್ಗೆ 6.30 ರ ಸುಮಾರಿಗೆ ಯುವತಿ ಪೊಲೀಸರಿಗೆ ಕರೆ ಮಾಡಿದ ನಂತರ ಪ್ರಕರಣ ಬೆಳಕಿಗೆ ಬಂದಿದೆ.