Asianet Suvarna News Asianet Suvarna News

Chikkamagaluru: ಮದ್ಯಪಾನಕ್ಕೆ ಹಣ ನೀಡದ ಪತ್ನಿ ಕೊಲೆ: ಹಂತಕ ಪತಿಗೆ ಜೀವಾವಧಿ ಸಜೆ

ಮದ್ಯ ಸೇವನೆಗೆ ಹಣ ನೀಡಲಿಲ್ಲ ಎಂಬ ಕಾರಣಕ್ಕೆ ಹತ್ಯೆ
ಚಿಕ್ಕಮಗಳೂರು ಜಿಲ್ಲಾ ನ್ಯಾಯಾಲಯದಿಂದ ಮಹತ್ವದ ತೀರ್ಪು
ಪಂಚನಹಳ್ಳಿ ಪೊಲೀಸ್‌ ಠಾಣೆ ವ್ಯಾಪ್ತಿಯ ಬಿ . ಕಾವಲುಹಟ್ಟಿ ಗ್ರಾಮಸ್ಥ
 

Wife has not given money for Alcohol Husband murdered his wife sat
Author
First Published Feb 9, 2023, 6:05 PM IST

ಚಿಕ್ಕಮಗಳೂರು (ಫೆ.09): ಮದ್ಯ ಸೇವಿಸಲು ಹಣ ನೀಡಲಿಲ್ಲ ಎಂಬ ಕಾರಣಕ್ಕೆ ಜೀವನಪೂರ್ತಿ ಜೊತೆಯಾಗಿರುವುದಾಗಿ ಹೇಳಿ ತಾಳಿ ಕಟ್ಟಿದ ಪತ್ನಿಯನ್ನೇ ಥಳಿಸಿ ಕೊಲೆ ಮಾಡಿದ್ದ ಆರೋಪಿಗೆ ಚಿಕ್ಕಮಗಳೂರು ಜಿಲ್ಲಾ ನ್ಯಾಯಾಲಯ ಜೀವಾವಧಿ ಸಜೆ ಮತ್ತು ದಂಡ ವಿಧಿಸಿ ತೀರ್ಪು ನೀಡಿದೆ. 

ಕಡೂರ ತಾಲ್ಲೂಕಿನ ಪಂಚನಹಳ್ಳಿ ಪೊಲೀಸ್‌ ಠಾಣೆ ವ್ಯಾಪ್ತಿಯ ಬಿ . ಕಾವಲುಹಟ್ಟಿಯ ಶೇಖರಪ್ಪ ಶಿಕ್ಷೆಗೆ ಗುರಿಯಾದ ಆರೋಪಿ. ಮದ್ಯ ಸೇವಿಸಲು ಹಣ ಕೊಡುವಂತೆ 2021ರ ಜುಲೈ 8ರಂದು ತನ್ನ ಪತ್ನಿ ಗೀತಾಳಿಗೆ ಪೀಡಿಸಿದ್ದನು. ಹಣ ನೀಡಲು ಆಕೆ ನಿರಾಕರಿಸಿದ್ದರಿಂದ ಜಗಳವಾಗಿ ಮಕ್ಕಳ ಮಧ್ಯಸ್ಥಿಕೆಯಲ್ಲಿ ಸಮಾಧಾನಪಡಿಸಲಾಗಿತ್ತು. ಸಂಜೆ ಮಕ್ಕಳಿಲ್ಲದ ವೇಳೆ ಮತ್ತೆ ಪತ್ನಿಯೊಂದಿಗೆ ಜಗಳ ತೆಗೆದ ಶೇಖರಪ್ಪ, ಕೋಲಿನಿಂದ ಮಾರಣಾಂತಿಕವಾಗಿ ಹಲ್ಲೆ ಮಾಡಿ ಪರಾರಿಯಾಗಿದ್ದನು. ರಾತ್ರಿ ವಾಹನದ ವ್ಯವಸ್ಥೆ ಇಲ್ಲದ್ದರಿಂದ ಮರುದಿನ ಆಸ್ಪತ್ರೆಗೆ ಕರೆದೊಯ್ಯಲು ನಿರ್ಧರಿಸಿ ಗೀತಾಳನ್ನು ಮನೆಯಲ್ಲೇ ಮಲಗಿಸಲಾಗಿತ್ತು. ಬೆಳಗ್ಗೆ ಆಸ್ಪತ್ರೆಗೆ ಕರೆದೊಯ್ಯಲು ಏಳಿಸುವ ವೇಳೆಗಾಗಲೇ ಆಕೆ ಮೃತಪಟ್ಟಿದ್ದರು.

ಕುಡುಕ ಪತಿಗೆ ತಕ್ಕ ಪಾಠ ಕಲಿಸಿದ ಪತ್ನಿ: ಹೆಂಡತಿ ವೈಲೆಂಟ್‌ಗೆ ಗಂಡ ಸೈಲೆಂಟ್

ಪಂಚನಹಳ್ಳಿ ಪೊಲೀಸರು ಶೇಖರಪ್ಪ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ಆರೋಪ ಸಾಬೀತಾದ ಹಿನ್ನೆಲೆಯಲ್ಲಿ 2ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಬಿ.ಸಿ.ಭಾನುಮತಿ ಶೇಖರಪ್ಪನಿಗೆ ಅವರು ಜೀವಾವಧಿ ಸಜೆ ಮತ್ತು 10 ಸಾವಿರ ರೂ .ದಂಡ ವಿಧಿಸಿ ತೀರ್ಪು ನೀಡಿದ್ದಾರೆ. ಸರ್ಕಾರದ ಪರವಾಗಿ ಅಭಿಯೋಜಕಿ ಭಾವನ ವಾದ ಮಂಡಿಸಿದ್ದರು.

ದುಷ್ಕರ್ಮಿಗಳ ಗುಂಡೇಟಿಗೆ ಕಡವೆ ಬಲಿ:  ಚಾರ್ಮಾಡಿ ಘಾಟ್‌ನ ಭಾಗದಲ್ಲಿ ಮಲಯಮಾರುತ ಬಳಿಯ ಹೆದ್ದಾರಿ ಬದಿಯ ಚರಂಡಿಯಲ್ಲಿ ಸುಮಾರು ಮೂರು ವರ್ಷದ ಕಡವೆ ಮೃತದೇಹ ಪತ್ತೆಯಾಗಿದೆ.ಶಿಕಾರಿ ಮಾಡುವರ ಗುಂಡಿಗೆ ಕಡವೆ ಬಲಿಯಾಗಿರುವ ಸಾಧ್ಯತೆಯಿದ್ದು ಕಿವಿ, ತೊಡೆ, ಹೊಟ್ಟೆ ಭಾಗದಲ್ಲಿ ಗುಂಡು ತಗುಲಿರುವ ಗುರುತುಗಳಿವೆ.ಸ್ಥಳಕ್ಕೆ ಅರಣ್ಯಾಧಿಕಾರಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ‌.ಕೊಟ್ಟಿಗೆಹಾರ ಮಂಗಳೂರು ರಾಷ್ಟ್ರೀಯ ಹೆದ್ದಾರಿ ಮಾರ್ಗವಾಗಿ ಪ್ರಯಾಣಿಸುವ ವಾಹನ ಚಾಲಕರು ಕಡವೆ ಮೃತದೇಗ ಕಂಡು ಕೊಟ್ಟಿಗೆಹಾರ ಅರಣ್ಯ ಇಲಾಖೆಯ ಚೆಕ್ ಪೋಸ್ಟ್ ಗೆ ಮಾಹಿತಿ ನೀಡಿದ್ದರು.

ಕುಡುಕ ಗಂಡನಿಂದ ಪತ್ನಿ ಇಬ್ಬರು ಮಕ್ಕಳ ಕೊಲೆ: ಹುಬ್ಬಳ್ಳಿ: ಕುಡಿತದ ದಾಸನಾಗಿದ್ದ ವ್ಯಕ್ತಿಯೊಬ್ಬ ತನ್ನ ಪತ್ನಿ ಮತ್ತು ಇಬ್ಬರು ಮಕ್ಕಳ ಮೇಲೆ ಮಾರಕಾಸ್ತ್ರದಿಂದ ತೀವ್ರವಾಗಿ ದಾಳಿ ಮಾಡಿ ಕೊನೆಗೆ ತಾನೂ ಆತ್ಮಹತ್ಯೆ ಮಾಡಿಕೊಂಡಿರುವ ದುರ್ಘಟನೆ ಹುಬ್ಬಳ್ಳಿಯಲ್ಲಿ ತಾಲೂಕಿನಲ್ಲಿ ನಡೆದಿದೆ. ಕುಡಿತದ ಚಟಕ್ಕೆ ದಾಸನಾಗಿದ್ದ ಪತಿ ಫಕೀರಪ್ಪ ತನ್ನ ಪತ್ನಿ ಮತ್ತು ಮಕ್ಕಳ ಮೇಲೆ ದಾಳಿ ಮಾಡಿ ಆತ್ಮಹತ್ಯೆಗೆ ಶರಣಾದ ವ್ಯಕ್ತಿಯಾಗಿದ್ದಾನೆ. ಪತ್ನಿ ಮತ್ತು ಮಕ್ಕಳ ಮೇಲೆ ಮಾರಕಾಸ್ತ್ರದಿಂದ ದಾಳಿ ಮಾಡಿದ್ದನು. ಇನ್ನು ಈ ದುರ್ಘಟನೆಯಿಂದಾಗಿ ಮೃತರ ಸಂಖ್ಯೆ ಎರಡಕ್ಕೆ ಏರಿಕೆಯಾಗಿದೆ. ನೇಣು ಬೇಡಿಕೊಂಡ ಫಕೀರಪ್ಪ ಮನೆಯಲ್ಲಿ ಸಾವನ್ನಪ್ಪಿದ್ದನು. ನಂತರ ಪತ್ನಿ ಮತ್ತು ಇಬ್ಬರು ಮಕ್ಕಳನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಈ ವೇಳೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಆಸ್ಪತ್ರೆಯಲ್ಲಿ ಮಗು ಸಾವನ್ನಪ್ಪಿದೆ. ಶ್ರೇಯಸ್ (6) ಮೃತ ಮಗುವಾಗಿದೆ. 

ಕುಡುಕ ಗಂಡನಿಂದ ಪತ್ನಿ ಮತ್ತು ಇಬ್ಬರು ಮಕ್ಕಳ ಮೇಲೆ ಮಾರಣಾಂತಿಕ ಹಲ್ಲೆ: ಇಬ್ಬರು ಸಾವು

ಪಕ್ಕೀರಪ್ಪ ಹಲ್ಲೆ ಮಾಡಿದ ಘಟನೆ ನಂತರ ಇಬ್ಬರು ಮಕ್ಕಳು ಮತ್ತು ಪತ್ನಿಯನ್ನು ಕಿಮ್ಸ್‌ನಲ್ಲಿ ದಾಖಲಿಸಿ ಚಿಕಿತ್ಸೆ ಮುಂದುವರಿಸಲಾಗಿತ್ತು. ಆದರೆ, ಈಗ ಒಂದು ಮಗು ಸಾವನ್ನಪ್ಪಿದ್ದು, ಉಳಿದಂತೆ ಪತ್ನಿ ಮತ್ತು ಇಬ್ಬರು ಮಕ್ಕಳ ಸ್ಥಿತಿಯೂ ಚಿಂತಾಜನಕವಾಗಿದೆ. ಹುಬ್ಬಳ್ಳಿ ತಾಲೂಕಿನ ಸುಳ್ಳ ಗ್ರಾಮದಲ್ಲಿ ನಡೆದಿದ್ದ ಘಟನೆಯಾಗಿದ್ದು, ಕುಡಿದ ಮತ್ತಿನಲ್ಲಿಯೇ ಕೊಡಲಿಯಿಂದ ದಾಳಿ ಮಾಡಿ ಕೃತ್ಯ ಎಸಗಿದ್ದನು. ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಆಗಿದೆ.

Follow Us:
Download App:
  • android
  • ios