ಪತಿ ಹತ್ಯೆ ಮಾಡಿದವರಿಗೆ 50,000 ರೂ ಬಹುಮಾನ, ವ್ಯಾಟ್ಸ್ಆ್ಯಪ್‌ನಲ್ಲಿ ಸ್ಟೇಟಸ್ ಹಾಕಿದ ಪತ್ನಿ!
ಈ ಕಾಲದಲ್ಲಿ ಸಂಬಂಧಗಳಿಗೆ ಬೆಲೆ ಇಲ್ಲ ಅನ್ನೋ ಆರೋಪ ಪದೇ ಪದೇ ಕೇಳಿಬರುತ್ತಿದೆ. ಇದಕ್ಕೆ ಪೂರಕ ಎಂಬಂತೆ ಪತಿಯನ್ನೇ ಹತ್ಯೆ ಮಾಡಲು 50 ಸಾವಿರ ರೂಪಾಯಿ ಬಹುಮಾನವನ್ನು ಪತ್ನಿ ಘೋಷಿಸಿದ್ದಾರೆ. ಅಚ್ಚರಿ ಎಂದರೆ ತನ್ನ ವ್ಯಾಟ್ಸ್ಆ್ಯಪ್ ಸ್ಟೇಟಸ್ ಹಾಕಿದ್ದಾಳೆ.
ಲಖನೌ(ಮಾ.31) ಪತಿಯಿಂದ ಪತ್ನಿ ಹತ್ಯೆ,ಹೆಂಡತಿಯಿಂದ ಗಂಡನ ಕೊಲೆ ಸೇರಿದಂತೆ ಹಲವು ಆಪ್ತ ಸಂಬಂಧಗಳೇ ಕೊಲೆಯಲ್ಲಿ ಅಂತ್ಯಗೊಂಡ ಹಲವು ಉದಾಹರಣೆಗಳಿವೆ. ಹಲವು ಬಾರಿ ಈ ಕೃತ್ಯಗಳು ಸೈಲೆಂಟ್ ಆಗಿ ನಡೆದು ಪೊಲೀಸರ ತನಿಖೆಯಿಂದ ಬಯಲಾಗುತ್ತದೆ. ಆದರೆ ಇಲ್ಲೊಬ್ಬ ಪತ್ನಿ ತನ್ನ ಪತಿಯನ್ನು ಹತ್ಯೆ ಮಾಡುವಂತೆ ವ್ಯಾಟ್ಸ್‌ಆ್ಯಪ್‌ನಲ್ಲಿ ಸ್ಟೇಟಸ್ ಹಾಕಿಕೊಂಡಿದ್ದಾರೆ. ಹತ್ಯೆ ಮಾಡಿದವರಿಗೆ 50,000 ರೂಪಾಯಿ ನಗದು ಬಹುಮಾನವನ್ನು ಘೋಷಿಸಿದ್ದಾಳೆ. ಪತ್ನಿಯ ಸ್ಟೇಟಸ್ ನೋಡಿ ಬೆಚ್ಚಿ ಬಿದ್ದ ಗಂಡ ಪೊಲೀಸರಿಗೆ ದೂರು ನೀಡಿದ ಘಟನೆ ಉತ್ತರ ಪ್ರದೇಶದ ಬಾಹ್ ಜಿಲ್ಲೆಯಲ್ಲಿ ನಡೆದಿದೆ.
ಜುಲೈ 9, 2022ರಲ್ಲಿ ಈ ಪತಿ ಹಾಗೂ ಪತ್ನಿಯ ಮದುವೆಯಾಗಿತ್ತು. ಮಧ್ಯಪ್ರದೇಶದ ಬಿಹಿಂದ್ ಗ್ರಾಮದ ಈಕೆ ಮದುವೆ ಬಳಿಕ ಗಂಡನ ಮನಗೆ ಆಗಮಿಸಿದ್ದಳು. ಆದರೆ ಡಿಸೆಂಬರ್ ಹೊತ್ತಿಗೆ ಈ ಸಂಸಾರದಲ್ಲಿ ಆಕ್ರೋಶದ ಕಿಡಿ ಹೊತ್ತಿತ್ತು. ಪ್ರತಿ ವಿಚಾರಕ್ಕೂ ಜಗಳ ನಡೆಯುತ್ತಿತ್ತು. ವಾದ ವಿವಾದ, ಕೋಪ ಸಿಟ್ಟುಗಳು ಸ್ಫೋಟಗೊಳ್ಳುತ್ತಿತ್ತು. ಹೀಗಾಗಿ 2022ರ ಡಿಸೆಂಬರ್ ಅಂತ್ಯಕ್ಕೆ ಈಕೆ ಕೋಪಗೊಂಡು ತವರಿಗೆ ತೆರಳಿದ್ದಳು.
ರಾಜಕೀಯ ನಾಯಕನ ಹೆಂಡತಿಗೆ ಇಬ್ಬಿಬ್ಬರು ಬಾಯ್ ಫ್ರೆಂಡ್ಸ್; ಅನೈತಿಕ ಸಂಬಂಧಕ್ಕಾಗಿ ಗಂಡನನ್ನೇ ಕೊಂದುಬಿಟ್ಟಳು!
ಇದಾದ ಬಳಿಕ ಆಕೆಯನ್ನು ಮರಳಿ ಕರೆತರುವ ಪ್ರಯತ್ನವನ್ನು ಕುಟುಂಬಸ್ಥರು ಮಾಡಿದ್ದಾರೆ.ಆದರೆ ಪತಿ ಹಾಗೂ ಪತ್ನಿ ಇಬ್ಬರಿಗೂ ಸಂಬಂಧ ಮುಂದುವರಿಸಲು ಆಸಕ್ತಿ ಇರಲಿಲ್ಲ. ಇದರ ನಡುವೆಯೂ ಕೆಲ ಜಗಳಗಳು ನಡೆದಿದೆ. ಕೆಲ ದಿನಗಳಿಂದ ಪತಿಗೆ ತನ್ನ ಪತ್ನಿಯ ಸಂಬಂಧಿಕರಿಂದ ಬೆದರಿಕೆ ಕರೆಗಳು ಬಂದಿತ್ತು. ಮುಗಿಸಿಬಿಡುತ್ತೇನೆ ಎಂದು ಬೆದರಿಕೆ ಹಾಕಿದ್ದರು.
ಬೆದರಿಕೆ ಕರೆಗಳು ಹೆಚ್ಚಾಗತೊಡಗಿತು. ಇತ್ತ ಪತ್ನಿಯ ವ್ಯಾಟ್ಸ್ಆ್ಯಪ್ ಸ್ಟೇಟಸ್ ನೋಡಿದ ಪತಿಗೆ ಆಘಾತವಾಗಿದೆ. ಈಕೆ ತನ್ನ ಸ್ಟೇಟಸ್‌ನಲ್ಲಿ ಪತಿಯನ್ನು ಹತ್ಯೆ ಮಾಡಿದವರಿಗೆ 50,000 ರೂಪಾಯಿ ಬಹುಮಾನ ಘೋಷಿಸಿದ್ದಳು. ಜೊತೆಗೆ ಪತಿಯ ನಂಬರ್ ಕೂಡ ಹಾಕಿದ್ದಳು. ಸ್ಟೇಟಸ್ ನೋಡಿದ ಬೆಚ್ಚಿ ಬಿದ್ದ ಪತಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾನೆ.
ಧಾರವಾಡ: ಮಾಟ, ಮಂತ್ರ ಶಂಕೆ, ಮಲಗಿದ ಪತ್ನಿಯ ಕುತ್ತಿಗೆ ಕಡಿದ ಪತಿ
ದೂರಿನ ಬೆನ್ನಲ್ಲೇ ಪೊಲೀಸರು ಆಕೆಯ ಮನೆಗೆ ತೆರಳಿ ಆಕೆಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಇತ್ತ ಪತ್ನಿಯ ಬಾಯ್‌ಫ್ರೆಂಡ್ ಕೂಡ ಕರೆ ಮಾಡಿ ಬೆದರಿಕೆ ಹಾಕಿದ್ದಾನೆ ಎಂದು ಪತಿ ದೂರಿನಲ್ಲಿ ಉಲ್ಲೇಖಿಸಿದ್ದಾನೆ. ಇದೀಗ ಪ್ರಕರಣ ಮತ್ತೊಂದು ಹಂತಕ್ಕೆ ತಿರುವು ಪಡೆದಿದೆ.