ಪಿಎಂ ಪರಿಹಾರ ನಿಧಿಯಿಂದ ಹಣ ಪಡೆಯಲು ಬಂದ ವಿಧವೆ ಮೇಲೆ ಗ್ಯಾಂಗ್ ರೇಪ್

ಪಿಎಂ ಪರಿಹಾರ ನಿಧಿಯಿಂದ ಪರಿಹಾರ ಕೇಳಲು ಬಂದ ವಿಧವೆ ಮೇಲೆ ಗ್ಯಾಂಗ್ ರೇಪ್/ ಉತ್ತರ ಪ್ರದೇಶದಿಂದ ಕರಾಳ ಘಟನೆ ವರದಿ/ ಮಹಿಳೆಯಿಂದ ಲಂಚವನ್ನೂ ಪಡೆದುಕೊಂಡಿದ್ದರು

Widow gang raped in Sambhal on pretext of financial help from PM relief fund UP mah

ಸಂಬಲ್(ಏ.  15)  ಉತ್ತರ ಪ್ರದೇಶದಿಂದ ಮಹಿಳೆಯರ ಮೇಲೆ ದೌರ್ಜನ್ಯ ಪ್ರಕರಣ ಮತ್ತೆ ಮತ್ತೆ ವರದಿಯಾಗುತ್ತಿದೆ.  ಪ್ರಧಾನಮಂತ್ರಿ ಪರಿಹಾರ ನಿಧಿಯಿಂದ ಸಹಾಯ ಪಡೆದುಕೊಳ್ಳಲು ಮುಂದಾಗಿದ್ದ ವಿಧವೆ ಮೇಲೆ ದೌರ್ಜನ್ಯ ಎಸಗಲಾಗಿದೆ.

ಸಂಭಾಲ್ ಜಿಲ್ಲೆಯ ಅಸ್ಮೋಲಿ ಪೊಲೀಸ್ ಠಾಣೆ ವ್ಯಾಪ್ತಿಯ ನಖಾಸಾ ಗ್ರಾಮದಲ್ಲಿ ಈ ಭೀಕರ ಘಟನೆ ನಡೆದಿದೆ. ಮಹಿಳೆ ಮಹಿಳೆ  ಮೇಲೆ ಸಾಮೂಹಿಕ ಅತ್ಯಾಚಾರವಾಗಿದೆ.

ನೈಟ್ ಶಿಫ್ಟ್ ಮುಗಿಸಿ ಬರ್ತಿದ್ದ ಯುವತಿಯ ಹೊತ್ತುಕೊಂಡು ಹೋದರು

ಪ್ರಧಾನ  ಮಂತ್ರಿ ನಿಧಿಯಿಂದ ಮಹಿಳೆಗೆ 5 ಲಕ್ಷ ರೂ. ಪರಿಹಾರ ಕೊಡಿಸುವುದಾಗಿ ಆರೋಪಿಗಳು ನಂಬಿಸಿದ್ದರು.  ಕಾಗದಪತ್ರ ಕೆಲಸಕ್ಕೆ ಬೇಕೆಂದು ಮಹಿಳೆಯ ಕಡೆಯಯಿಂದ  2 ಸಾವಿರ ರೂ.  ಲಂಚವನ್ನು ಪಡೆದುಕೊಂಡಿದ್ದರು. ವಿಧವಾ ವೇತನ ಪಡೆದುಕೊಳ್ಳಲು ಕಚೇರಿಗೆ ಹೋದ ಮಹಿಳೆಗೆ ಮೊದಲು 5,000 ರೂ.  ಕೇಳಲಾಗಿತ್ತು. ನಂತರ   2,000 ರೂ. ಗೆ ಮಾತುಕತೆಯಾಗಿತ್ತು.

ಅಧಿಕಾರಿಗಳೊಂದಿಗೆ ಸಭೆ ಇದೆ ಎಂದು ಮಾವಿನ ತೋಪೊಂದಕ್ಕೆ ಮಹಿಳೆಗೆ ಬರುವಂತೆ ಹೇಳಿದ್ದಾರೆ. ನಂಬಿ ಅಲ್ಲಿಗೆ ಹೋದ ಮಹಿಳೆ ಮೇಲೆ ಅತ್ಯಾಚಾರ ಎಸಗಲಾಗಿದೆ.

ಪಿಸ್ತೂಲ್ ತೋರಿಸಿ ಬೆದರಿಕೆ ಹಾಕಿದ್ದಾರೆ. ಅತ್ಯಾಚಾರ ಮಾಡಿ ಅದನ್ನು ವಿಡಿಯೋ ಮಾಡಿಕೊಂಡು ಬ್ಲಾಕ್ ಮೇಲ್ ಮಾಡಲು ಮುಂದಾಗಿದ್ದರು.  ಪೊಲೀಸರ ಬಳಿ ಹೋದರೂ ಮಹಿಳೆಗೆ ನೆರವು ಸಿಕ್ಕಿಲ್ಲ. ಅಂತಿಮವಾಗಿ ಮಹಿಳೆ ನ್ಯಾಯಾಲಯದ ಮೊರೆ ಹೋಗಿದ್ದಾರೆ. 

 

 

Latest Videos
Follow Us:
Download App:
  • android
  • ios