ಪಾಂಡವಪುರ: ಕಳ್ಳರ ಗುಂಪಿನಿಂದ ವ್ಯಕ್ತಿಯ ಹತ್ಯೆಗೆ ಯತ್ನ, ಬೆಚ್ಚಿಬಿದ್ದ ಜನತೆ!
ಮಧ್ಯರಾತ್ರಿ 1.30ರ ಸುಮಾರಿಗೆ ಬೀರಶೆಟ್ಟಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ ಪಕ್ಕದ ಗಲ್ಲಿಯಲ್ಲಿ ಧರ್ಮಣ್ಣರ ಮನೆ ಎದುರು ನಿಲ್ಲಿಸಿದ್ದ ಟಿವಿಎಸ್ ಎಕ್ಸೆಲ್ ಸೂಪರ್ ಸ್ಕೂಟರ್ ಕಳ್ಳತನ ಮಾಡಲು ಬಂದಿದ್ದ ಕಳ್ಳರು ಮಾಲೀಕರನ್ನು ಕಂಡು ಚಾಕುವಿನಿಂದ ಎದೆ ಮತ್ತು ಕೈಗೆ ಗಾಯಗೊಳಿಸಿ ತಳ್ಳಿ ಓಡಿ ಹೋಗಿದ್ದಾರೆ.
ಪಾಂಡವಪುರ(ಡಿ.24): ತಾಲೂಕಿನ ಕ್ಯಾತನಹಳ್ಳಿ ಬಳಿ ಶನಿವಾರವಷ್ಷೇ ಮನೆ ಮಾಲೀಕರೊಬ್ಬರ ಕತ್ತು ಕತ್ತರಿಸಿ ಹತ್ಯೆ ಮಾಡಿದ್ದ ಘಟನೆ ಮಾಸುವ ಮುನ್ನವೇ ಪಟ್ಟಣದ ಬೀರಶೆಟ್ಟಹಳ್ಳಿಯಲ್ಲಿ ಸ್ಕೂಟರ್ ಕದಿಯಲು ಬಂದ ಕಳ್ಳರ ಗುಂಪು ವ್ಯಕ್ತಿಗೆ ಚಾಕುವಿನಿಂದ ಎದೆ ಮತ್ತು ಕೈಗೆ ತಿವಿದು ಗಾಯಗೊಳಿಸಿರುವ ಘಟನೆ ಭಾನುವಾರ ನಡೆದಿದ್ದು ಪಟ್ಟಣದ ಜನತೆ ಬೆಚ್ಚಿ ಬಿದ್ದಿದ್ದಾರೆ.
ಮಧ್ಯರಾತ್ರಿ 1.30ರ ಸುಮಾರಿಗೆ ಬೀರಶೆಟ್ಟಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ ಪಕ್ಕದ ಗಲ್ಲಿಯಲ್ಲಿ ಧರ್ಮಣ್ಣರ ಮನೆ ಎದುರು ನಿಲ್ಲಿಸಿದ್ದ ಟಿವಿಎಸ್ ಎಕ್ಸೆಲ್ ಸೂಪರ್ ಸ್ಕೂಟರ್ ಕಳ್ಳತನ ಮಾಡಲು ಬಂದಿದ್ದ ಕಳ್ಳರು ಮಾಲೀಕರನ್ನು ಕಂಡು ಚಾಕುವಿನಿಂದ ಎದೆ ಮತ್ತು ಕೈಗೆ ಗಾಯಗೊಳಿಸಿ ತಳ್ಳಿ ಓಡಿ ಹೋಗಿದ್ದಾರೆ. ಗಾಯಾಳು ಧರ್ಮ ರಾತ್ರಿ ಪಾಂಡವಪುರ ಉಪವಿಭಾಗೀಯ ಆಸ್ಪತ್ರೆಗೆ ತೆರಳಿ ಪ್ರಥಮ ಚಿಕಿತ್ಸೆ ಪಡೆದು ಮನೆಗೆ ವಾಪಸ್ಸಾಗಿದ್ದಾರೆ.
ಮಟಮಟ ಮಧ್ಯಾಹ್ನವೇ ಓಲಾ ಕ್ಯಾಬ್‌ನಲ್ಲಾದ ಭಯಾನಕ ಅನುಭವ ಹಂಚಿಕೊಂಡ ಮಹಿಳೆ
ಶಾಸಕರ ಭೇಟಿ, ಪರಿಶೀಲನೆ:
ಸೋಮವಾರ ಬೆಳಗ್ಗೆ ವಿಷಯ ತಿಳಿದು ಶಾಸಕ ದರ್ಶನ್ ಪುಟ್ಟಣ್ಣಯ್ಯ ಹಾಗೂ ಪೊಲೀಸ್ ಇನ್ಸ್ ಪೆಕ್ಟರ್ ಎಚ್.ಆರ್. ವಿವೇಕಾನಂದ ಸ್ಥಳ ಪರಿಶೀಲನೆ ಮಾಡಿ ಶ್ರೀವೀರಾಂಜನೇಯ ದೇವಸ್ಥಾನದಲ್ಲಿನ ಸಿಸಿ ಕ್ಯಾಮೆರಾ ಪುಟೇಜ್ ಚೆಕ್ ಮಾಡಿದ್ದು ಕಳ್ಳರ ಚಲನ ವಲನ ಸೆರೆಯಾಗಿದೆ. ತನಿಖೆ ಮಾಡಿ ಕಳ್ಳರನ್ನು ಹಿಡಿಯುವ ಕೆಲಸ ಮಾಡುತ್ತೇವೆ ಎಂದು ಪೊಲೀಸರು ಶಾಸಕರಿಗೆ ತಿಳಿಸಿದರು.
ಈ ವೇಳೆ ಸ್ಥಳದಲ್ಲಿ ಬೀರಶೆಟ್ಟಹಳ್ಳಿ ಯಜಮಾನರು ಗ್ರಾಮಸ್ಥರು ಎರಡನೇ ವಾರ್ಡ್ ಪುರಸಭೆ ಸದಸ್ಯ ಯಶ್ವಂತ್ ಇತರರು ಇದ್ದರು.
ಮೊನ್ನೆಯೂ ಎರಡು ಕಡೆ ಕಳ್ಳತನಕ್ಕೆ ಯತ್ನ:
ಪಟ್ಟಣದ ಬೀರಶೆಟ್ಟಹಳ್ಳಿ ಯಜಮಾನ್ ಸಿದ್ದೇಗೌಡರ ಪುತ್ರ ಶಿವಾನಂದರ ಮನೆ ಹಾಗೂ ತರಕಾರಿ ರಮೇಶ್ ಅವರ ಅಕ್ಕಪಕ್ಕದ ಮನೆ ಮೇಲೂ ದಾಳಿ ನಡೆಸಿ ಕಳ್ಳತನಕ್ಕೆ ಯತ್ನ ನಡೆಸಿದ್ದನ್ನು ಇಲ್ಲಿ ಸ್ಮರಿಸಬಹುದು.
ಬಸ್ನಲ್ಲೇ ವಸ್ತು ಬಿಟ್ಟು ಊಟ, ಬಾತ್ರೂಮ್ಗಂತ ಕೆಳಗೆ ಇಳಿತೀರಾ? ಶಾಕಿಂಗ್ ವಿಡಿಯೋ ವೈರಲ್
ಕಳ್ಳತನಕ್ಕೆ ಯತ್ನಿಸಿರುವ ಕಳ್ಳರು:
ಪಟ್ಟಣದ ಬೀರಶೆಟ್ಟಹಳ್ಳಿ ಹಾಗೂ ತಾಲೂಕಿನ ಕೆನ್ನಾಳು, ವಿಶ್ವೇಶ್ವರಯ್ಯ ನಗರ ಸೇರಿದಂತೆ ಇತರೆಡೆ ಕಳ್ಳರ ಗ್ಯಾಂಗ್ ಕಳ್ಳತನಕ್ಕೆ ಯತ್ನ ನಡೆಸಿದ್ದು, ಜೊತೆಗೆ ಕ್ಯಾತನಹಳ್ಳಿ ಬಳಿ ಮನೆ ಮಾಲೀಕನನ್ನು ಹತ್ಯೆಗೈದಿರುವ ಘಟನೆ ಪಟ್ಟಣ ಹಾಗೂ ತಾಲೂಕಿನ ಜನತೆ ಬೆಚ್ಚಿ ಬೀಳುವಂತೆ ಮಾಡಿದೆ. ಇದಕ್ಕೆ ಪೊಲೀಸರು ರಾತ್ರಿ ವೇಳೆ ನಡೆಸುತ್ತಿದ್ದ ಗಸ್ತು ಕಾರ್ಯವನ್ನು ನಿಲ್ಲಿಸಿರುವ ಹಿನ್ನೆಲೆಯಲ್ಲಿ ಇಂತಹ ಪ್ರಕರಣ ಹೆಚ್ಚಾಗಲು ಕಾರಣ ಎಂದು ಸಾರ್ವಜನಿಕರು ಪೊಲೀಸರ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪೊಲೀಸರು ರಾತ್ರಿ ಗಸ್ತು ನಿಲ್ಲಿಸಿರುವುದರಿಂದ ಜತೆಗೆ ಹಾಗೂ ಅವರ ನಿರ್ಲಕ್ಷ್ಯತನದಿಂದಾಗಿ ಆಗಾಗ್ಗೆ ಈ ರೀತಿ ಹತ್ಯೆ ಹಾಗೂ ಕಳ್ಳತನ ಹೆಚ್ಚಾಗುತ್ತಿದೆ. ಮುಂದಿನ ದಿನಗಳಲ್ಲಿ ರಾತ್ರಿ ಗಸ್ತು ಹೆಚ್ಚಿಸುವ ಮೂಲಕ ಕಳ್ಳರ ನಿಯಂತ್ರಣಕ್ಕೆ ಮುಂದಾಗದಿದ್ದರೆ ಪೊಲೀಸರು ಮುಂದಿನ ದಿನಗಳಲ್ಲಿ ನೇರ ಹೊಣೆ ಹೊರಬೇಕಾಗುತ್ತದೆ ಎಂದು ಬೀರಶೆಟ್ಟಹಳ್ಳಿ ಭಾಸ್ಕರ್, ರೋಹಿತ್ ಇತರರು ಎಚ್ಚರಿಸಿದ್ದಾರೆ.