Asianet Suvarna News Asianet Suvarna News

Chikkamagaluru News: ಒಂದು ಕಡೆ ಹಸುವನ್ನು ಉಳಿಸಿದ ಗ್ರಾಮಸ್ಥರು; ಇನ್ನೊಂದಡೆ ಮಾಂಸಕ್ಕಾಗಿ ಹಸು ಹತ್ಯೆ ಮಾಡಿದ ಪಾಪಿಗಳು!

  • ಒಂದಡೆ ಹಸು ಉಳಿಸಿದ ಗ್ರಾಮಸ್ಥರು
  • ಮತ್ತೊಂದು ಕಡೆ ಮಾಂಸಕ್ಕಾಗಿ ಹಸುವನ್ನೇ ಹತ್ಯೆ ಮಾಡಿದ ದುರುಳರು
  • ಗಬ್ಬದ ಹಸು ಹತ್ಯೆ, ದೂರು ದಾಖಲು 
  • ಕಾಫಿನಾಡಿನಲ್ಲಿ ನಡೆದ ಮನಕಲಕುವ ಘಟನೆ
the villagers saved the cow Chikkamagaluru Coffee nadu rav
Author
First Published Aug 31, 2022, 4:58 PM IST

ವರದಿ : ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್ ಚಿಕ್ಕಮಗಳೂರು  

ಚಿಕ್ಕಮಗಳೂರು (ಆ.31): ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯಲ್ಲಿ ನಡೆದ ಎರಡು ಪ್ರತ್ಯೇಕ ಘಟನೆಗಳಲ್ಲಿ ಒಂದಡೆ ಹಸುವನ್ನು ರಕ್ಷಣೆ ಮಾಡಿದ್ರೆ ಮತ್ತೊಂದೆಡೆ ಮಾಂಸಕ್ಕಾಗಿ ಗಬ್ಬದ ಹಸುವನ್ನೇ  ಹತ್ಯೆ ಮಾಡಲಾಗಿದೆ. ಈ ಎರಡು ಪ್ರಕರಣಗಳು ನಡೆದಿರುವುದು ಮಲೆನಾಡಿನಲ್ಲಿ ಭಾಗದಲ್ಲಿ.ಒಂದು ಪ್ರೇರಣದಾಯಕ ಘಟನೆಯಾದ್ರೆ ಮತ್ತೊಂದು ಅತ್ಯಂತ ಅಮಾನುಷವಾದ ಘಟನೆಗೆ ಸಾಕ್ಷಿಯಾಗಿದೆ.

Udupi: ಕರಾವಳಿಯಲ್ಲಿ ಮತ್ತೆ ಮುಂದುವರಿದ ಗೋಕಳ್ಳರ ಅಟ್ಟಹಾಸ

ವೈದ್ಯರೇ ಉಳಿಯುವುದಿಲ್ಲ ಎಂದು ಹೇಳಿದ ಹಸುವನ್ನ ಉಳಿಸಿದ ಸ್ಥಳಿಯರು! 

ಅಪಘಾತ(Accident)ಕ್ಕೀಡಾದ ಹಸು(Cow)ವನ್ನ ಕಂಡು ವೈದ್ಯರೇ(Doctor) ಉಳಿಯುವುದಿಲ್ಲ ಎಂದು ಹೇಳಿದ ಹಸುವನ್ನ ಸ್ಥಳಿಯರು ಉಳಿಸಿರುವ ಪ್ರೇರಣದಾಯಕ ಘಟನೆ ಚಿಕ್ಕಮಗಳೂರು(Chikkamagaluru) ತಾಲೂಕಿನ ಕಣತಿ(Kanati) ಬಳಿ ನಡೆದಿದೆ. ರಸ್ತೆ ಬದಿ ಅಪಘಾತಕ್ಕೀಡಾಗಿ ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದ ಹಸುವನ್ನು ಪಶು ವೈದ್ಯರ ಸಹಕಾರದೊಂದಿಗೆ ಸ್ಥಳೀಯರೇ ರಕ್ಷಿಸಿದ್ದಾರೆ. ಚಿಕ್ಕಮಗಳೂರು-ಬಾಳೆಹೊನ್ನೂರು ಮಾರ್ಗದ ಕಣತಿ ಬಳಿ ವಾಹನ ಸವಾರರು ಹಸುವಿನ ಮೇಲೆ ವಾಹನ ಚಲಾಯಿಸಿ ಹೋಗಿದ್ದರು.‌ ಹೃದಯ ಭಾಗಕ್ಕೆ ಬಲವಾದ ಪೆಟ್ಟು ಬಿದ್ದು ತೀವ್ರ ರಕ್ತಸ್ರಾವದಿಂದ ನರಳಾಡುತ್ತಿದ್ದ ಹಸುವನ್ನ ಸ್ಥಳಿಯರು ಕೂಡ ಹೋರಾಡಿ ಉಳಿಸಿದ್ದಾರೆ. 

ಹಸುವನ್ನ ಕಂಡ ಕೂಡಲೇ ಸ್ಥಳಿಯರು ಪಶು ವೈದ್ಯರಿಗೆ ಫೋನ್ ಮಾಡಿದ್ದಾರೆ. ಕೂಡಲೇ ಸ್ಥಳಕ್ಕೆ ಬಂದ ಪಶು ವೈದ್ಯರ ಸಹಾಯಕ ಸ್ಥಳಿಯರ ನೆರವಿನೊಂದಿಗೆ ಹಸುವಿಗೆ ಚಿಕಿತ್ಸೆ ನೀಡಿದ್ದಾರೆ. ಹಸುವಿಗೆ ಏಟು ಬಿದ್ದ ಜಾಗಕ್ಕೆ ಹೊಲಿಗೆ ಹಾಕಿ ಡ್ರಿಪ್ ಹಾಕಿದ್ದಾರೆ. ಆದರೆ, ಹಸು ಉಳಿಯುವುದು ಕಷ್ಟ, 9 ಗಂಟೆ ಉಳಿದರೆ ಬದುಕುತ್ತದೆ ಇಲ್ಲವಾದರೆ ಉಳಿಯುವುದಿಲ್ಲ ಎಂದು ಹೇಳಿದ್ದಾರೆ. ಸ್ಥಳಿಯರು ನಮ್ಮ ಪ್ರಯತ್ನ ಮಾಡೋಣ ಎಂದು ಚಿಕಿತ್ಸೆ ಬಳಿಕ ಹಸುವನ್ನ ಆಟೋದಲ್ಲಿ ಮನೆಗೆ ಕರೆದುಕೊಂಡು ಹೋಗಿ ಬಿಟ್ಟಿದ್ದಾರೆ. ಆದರೆ, ವೈದ್ಯರು ಹೇಳಿದ 9 ಗಂಟೆ ಬಳಿಕ ಹಸು ಎದ್ದು ಓಡಾಡುತ್ತಿದ್ದು ಬದುಕುಳಿದಿದೆ. ಹಸುವನ್ನ ಉಳಿಸಲು ಹೋರಾಡಿದವರಿಗೆ ಖುಷಿಯಾಗಿದೆ‌.

ಗಬ್ಬದ ಹಸು ಹತ್ಯೆ, ದೂರು ದಾಖಲು:

ಮಾಂಸಕ್ಕಾಗಿ ಹಸುವನ್ನ ಕೊಂದ ದುರುಳರು ಅದರ ಹೊಟ್ಟೆಯಲ್ಲಿದ್ದ ಕರುವನ್ನ ಕಾಡಿಗೆ ಬಿಸಾಡಿ ಹೋಗಿರುವ ಘಟನೆ ಚಿಕ್ಕಮಗಳೂರು ಜಿಲ್ಲೆ ಎನ್.ಆರ್.ಪುರ(N.R.Pura) ತಾಲೂಕಿನ ಹಳೆಕಡುಬಗೆರೆ(Halekadabagere) ಗ್ರಾಮದಲ್ಲಿ ನಡೆದಿದೆ. ಮೇವಿಗೆ ಹೋಗಿದ್ದ ಹಳೆಕಡುಬಗೆರೆ ಗ್ರಾಮದ ರವೀಂದ್ರ ಎಂಬುವರಿಗೆ ಸೇರಿದ ಹಸು ಮನೆಗೆ ಬಂದಿರಲಿಲ್ಲ. ಹಸು ಗಬ್ಬದ ಹಸುವಾಗಿದ್ದು, ಮನೆಗೆ ಬಾರದ ಕಾರಣ ರವೀಂದ್ರ ಹಸುವನ್ನ ಹುಡುಕಿಕೊಂಡು ಹೋಗಿದ್ದರು. ಈ ವೇಳೆ, ಕಾಡಿನಲ್ಲಿ ಹಸುವಿನ ತಲೆ ಪತ್ತೆಯಾಗಿದೆ. ಮಗುವಂತೆ ಸಾಕಿದ್ದ ಗಬ್ಬದ ಹಸುವಿನ ಸ್ಥಿತಿ ಕಂಡು ಕಣ್ಣೀರಿಟ್ಟಿದ್ದಾರೆ. ಮಾಂಸಕ್ಕಾಗಿ ಹಸುವನ್ನ ಕೊಂದ ಕಿಡಿಗೇಡಿಗಳು ಹಸುವಿನ ಹೊಟ್ಟೆಯಲ್ಲಿದ್ದ ಕರುವನ್ನ ಕಾಡಿಗೆ ಎಸೆದು ಹೋಗಿದ್ದಾರೆ. 

ಹೈಟೆಕ್ ಕಾರ್‌ನಲ್ಲಿ ಗೋ ಕಳ್ಳತನ! ಸಿಸಿಟಿವಿಯಲ್ಲಿ ಸೆರೆಯಾಯ್ತು ದೃಶ್ಯ

ಮೇಯುತ್ತಿದ್ದ ಹಸುವನ್ನ ಕದ್ದ ಗೋಕಳ್ಳರು ಹಸುವನ್ನ ಎಲೇಕಲ್ ಕಾಡಿನ ಬಳಿ ತಂದು ಹಸುವಿನ ತಲೆಕಡಿದು, ಕರುವನ್ನ ಕಾಡಿಗೆ ಎಸೆದು ಮಾಂಸವನ್ನ ಬೇರೆಡೆ ಸಾಗಿಸಿದ್ದಾರೆ. ಬಾಳೆಹೊನ್ನೂರು ಠಾಣೆ(Balehonnooru Police station)ಯಲ್ಲಿ ಪ್ರಕರಣ ದಾಖಲಿಸಿರೋ ರವೀಂದ್ರ ಈ ಕೃತ್ಯವನ್ನ ಯಾರೇ ಮಾಡಿದರೂ ಅವರನ್ನ ಬಂಧಿಸಿ ಕಠಿಣ ಶಿಕ್ಷೆ ನೀಡಬೇಕೆಂದು ಆಗ್ರಹಿಸಿದ್ದಾರೆ. ಬಾಳೆಹೊನ್ನೂರು ಪೊಲೀಸರು ಹಾಗೂ ಪಶುವೈದ್ಯರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಕರಣ ದಾಖಲುಮಾಡಿಕೊಂಡಿರುವ ಪೊಲೀಸ್ರು ತನಿಖೆ ಆರಂಭಿಸಿದ್ದಾರೆ.

Follow Us:
Download App:
  • android
  • ios