ಕಲಬುರಗಿ(ಮಾ.21): ಮದ್ಯ ಸೇವನೆಗೆ ಹಣ ಕೊಡಲಿಲ್ಲ ಎಂಬ ಕಾರಣಕ್ಕೆ ಮಗನೊಬ್ಬ ಹೆತ್ತ ತಾಯಿ ತಲೆ ಮೇಲೆ ಕಲ್ಲು ಎತ್ತಿಹಾಕಿ ಬರ್ಬರವಾಗಿ ಹತ್ಯೆ ಮಾಡಿರುವ ಹೃದಯ ವಿದ್ರಾವಕ ಘಟನೆ ಜಿಲ್ಲೆಯ ಜೇವರ್ಗಿ ತಾಲೂಕಿನ ನೆಲೋಗಿ ಪೊಲೀಸ್‌ ಠಾಣಾ ವ್ಯಾಪ್ತಿಯ ಕಲ್ಲೂರ (ಕೆ) ಗ್ರಾಮದಲ್ಲಿ ಶನಿವಾರ ನಡೆದಿದೆ.

ಭೀಮಬಾಯಿ ಪೂಜಾರಿ (75) ಕೊಲೆಯಾದ ತಾಯಿ. ಭೀಮಬಾಯಿಯ ಕಿರಿಯ ಪುತ್ರ ಯಲ್ಲಪ್ಪ ಪೂಜಾರಿ ಕೊಲೆ ಮಾಡಿದ ಆರೋಪಿ. ಶನಿವಾರ ನಸುಕಿನ ಜಾವ ಆರೋಪಿಯ ಹಿರಿಯ ಸಹೋದರ ಶರಣಪ್ಪ ಬಹಿರ್ದೆಸೆಗೆ ಹೋಗಿದ್ದಾಗ ಮನೆಯೊಳಗೆ ಚಿಲಕ ಹಾಕಿಕೊಂಡು ತಾಯಿ ಬಳಿ ಯಲ್ಲಪ್ಪ ಕುಡಿತಕ್ಕಾಗಿ ಹಣ ಕೊಡುವಂತೆ ಪೀಡಿಸಲು ಶುರು ಮಾಡಿದ್ದಾನೆ.

ಬಸ್‌ನಲ್ಲಿ ಪರಿಚಯ...ಹುಚ್ಚು ಪ್ರೀತಿ...ಹರೆಯದ ಹುಡುಗ-ಹುಡುಗಿಯ ಕಹಾನಿ..!

ಈ ವೇಳೆ ಭೀಮಬಾಯಿ, ಹಣ ಕೊಡಲು ನಿರಾಕರಿಸಿದ್ದಾಳೆ, ಇದರಿಂದ ವ್ಯಗ್ರನಾದ ಯಲ್ಲಪ್ಪ ಪಕ್ಕದಲ್ಲಿದ್ದ ಕಲ್ಲನ್ನು ತಾಯಿಯ ತಲೆ ಮೇಲೆ ಮೂರ್ನಾಲ್ಕು ಬಾರಿ ಎತ್ತಿ ಹಾಕಿ ಬರ್ಬರವಾಗಿ ಹತ್ಯೆ ಮಾಡಿದ್ದಾನೆ ಎಂದು ಗ್ರಾಮಸ್ಥರು ಹೇಳಿದ್ದಾರೆ.
ಕೊಲೆ ಮಾಡಿದ ಯಲ್ಲಪ್ಪ ವಿಶೇಷಚೇತನನಾಗಿದ್ದು, ಆತನನ್ನು ಗ್ರಾಮಸ್ಥರು ಕೂಡಿ ಹಾಕಿ ಪೊಲೀಸರ ವಶಕ್ಕೆ ನೀಡಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಘಟನಾ ಸ್ಥಳಕ್ಕೆ ಪಿಎಸ್‌ಐ ರಾಜಕುಮಾರ ಜಾಮಗೊಂಡ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.